ಜುಲೈ 26 ಶನಿವಾರ ಹಾಗೂ ಜುಲೈ 27 ಭಾನುವಾರ ಬೆಂಗಳೂರಿನ ಹೊಸಕೆರೆಹಳ್ಳಿ ನಂದಿ ಲಿಂಕ್ ಗ್ರೌಂಡ್ ನಲ್ಲಿ ಕುಂದಾಪ್ರ ಕನ್ನಡ ಹಬ್ಬ – 2025 ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿ ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲರೂ ಬಂದು ಸಡಗರ, ಸಂಭ್ರಮವನ್ನು ಹೆಚ್ಚಿಸಬೇಕು. ಬದುಕು ಕಟ್ಟಿ ಕೊಟ್ಟ ಕರ್ಮ ಭೂಮಿ ಬೆಂಗಳೂರಿನಲ್ಲಿ ಕುಂದಾಪುರದವರು ಎಲ್ಲರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮವಾಗಿದ್ದು ನಿಮ್ಮದೊಂದು ಶುಭ ಹಾರೈಕೆ ಕನ್ನಡ ತಾಯಿಯ ಕುಂದಾಪ್ರದ ಮಗಳ ಮೇಲೆ ಇರಲಿ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ| ದೀಪಕ್ ಶೆಟ್ಟಿ ಬಾರ್ಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನುಂಟು, ಏನಿಲ್ಲ ಹೇಳುವ ಹಾಗಿಲ್ಲ. ಆಟ, ಊಟ, ಸಂತಿ, ಪುಸ್ತಕ, ಜಾತ್ರೆ, ಮೆರವಣಿಗೆ, ರಾಜಕೀಯದವರು, ಪಿಕ್ಚರ್ ಆಕ್ಟರ್, ಒಟ್ಟಾರೆ ಊರ್ ಬದಿಯ ಹಬ್ಬ, ಎಲ್ಲರೂ ಬನ್ನಿ, ಮಸ್ತ್ ಮಜಾ ಮಾಡುವ.