‘ಸು ಫ್ರಮ್ ಸೋ’ ಚಿತ್ರದ ಮೂಲಕ ಯಶಸ್ವಿ ಉದ್ಯಮಿ ಬರೋಡ ಶಶಿಧರ್ ಶೆಟ್ಟಿಯವರು ನಿರ್ಮಾಪಕರ ಪಾಲಿಗೆ ಬಂದು ಕುಳಿತಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರ ಕೂಡಾ ಹೌದು. ತಮ್ಮ ನೂರೆಂಟು ವ್ಯವಹಾರಗಳ ಮಧ್ಯೆಯು ಶಶಿಧರ ಶೆಟ್ಟಿಯವರು ಸಾರ್ವಜನಿಕ ವ್ಯಕ್ತಿತ್ವ ರೂಪಿಸಿಕೊಂಡವರು. ಇವತ್ತಿಗೂ ಅವರು ಸಾವಿರಾರು ಜನಕ್ಕೆ ಬೇಕಾದ ವ್ಯಕ್ತಿ. ಅನೇಕರಿಗೆ ಕಷ್ಟಕಾಲದಲ್ಲಿ ನೆನಪಾಗುವ ಮನುಷ್ಯ. ಹಾಗಾಗಿಯೂ ಏನೋ ಕೊಡುವ ವಿಷಯದಲ್ಲಿ ಬದುಕು ಇವರಿಗೆ ಯಾವತ್ತೂ ಮೋಸ ಮಾಡಿಲ್ಲ.

ಇಂಡಸ್ಟ್ರಿಯಲ್ ಕ್ಯಾಂಟೀನ್, ಹೋಟೆಲ್ ಉದ್ಯಮ, ವಿವಿಧ ಕಂಪನಿಗಳ ಡೀಲರ್ ಶಿಪ್, ಗುತ್ತಿಗೆ ವ್ಯವಹಾರ, ಡಿಜಿಟಲ್ ಮಾರ್ಕೆಟಿಂಗ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇವರು ಬಂಡವಾಳ ಹೂಡಿದ್ದಾರೆ. ಉದ್ಯಮದ ಲಾಭಾಂಶದ ಬಹುಪಾಲನ್ನು ಸಮಾಜ ಸೇವೆಗೆ ವಿನಯೋಗಿಸುತ್ತಿದ್ದಾರೆ. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೀಗ ಕಳಸ ರವಿ ರೈ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಸ್ನೇಹಕ್ಕಾಗಿ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಜೆಪಿ ತೂಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಕನ್ನಡ ಚಲನಚಿತ್ರವು ಜುಲೈ 25 ರಂದು ಬಿಡುಗಡೆಯಾಗುತ್ತಿದೆ. ಬರೋಡ ಶಶಿಧರ್ ಶೆಟ್ಟಿಯವರೊಂದಿಗೆ ರವಿ ರೈ ಕಳಸ ಹಾಗೂ ರಾಜ್ ಬಿ ಶೆಟ್ಟಿಯವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.