Author: admin
ಮಂಗಳೂರು : ಅಗಲಿದ ಹಿರಿಯ ಯಕ್ಷಗಾನ ಕಲಾವಿದ, ಐತಿಹಾಸಿಕ ಕರ್ನಾಟಕ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ `ಪುಳಿಂಚ ಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರು ಆಯ್ಕೆಯಾಗಿದ್ದಾರೆ. ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರುಗಳನ್ನು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು ಇದರ ಅಧ್ಯಕ್ಷರಾದ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ. ಬೋಳಾರ ಸುಬ್ಬಯ್ಯ ಶೆಟ್ಟಿ ಕಾಸರಗೋಡು ಜಿಲ್ಲೆಯ ಮೂಡಂಬೈಲಿನಲ್ಲಿ ದಿ. ತ್ಯಾಂಪಣ್ಣ ಶೆಟ್ಟಿ ಮತ್ತು ಮಾನಕ್ಕೆ ದಂಪತಿಗೆ 1940ರಲ್ಲಿ ಜನಿಸಿದ ಸುಬ್ಬಯ್ಯ ಶೆಟ್ಟರು ಮುಂದೆ ಹೊಟೇಲ್ ವ್ಯಾಪಾರಕ್ಕಾಗಿ ಮಂಗಳೂರಿನ ಬೋಳಾರದಲ್ಲಿ ನೆಲೆಸಿ ಬೋಳಾರ ತಿಮ್ಮಯ್ಯ…
ಹಿರಿಯ ಹೃದಯ ಶಸ್ತ್ರಚಿಕಿತ್ಸಕ, ಪುತ್ತೂರಿನ ಬೆಳ್ಳಿಪಾಡಿ ಮನೆತನದ ಡಾ. ಬೆಳ್ಳಿಪಾಡಿ ಶ್ಯಾಮಪ್ರಸಾದ್ ಶೆಟ್ಟಿ ಅವರು ಮೈಸೂರಿನಲ್ಲಿ ನೂತನವಾಗಿ ಆರಂಭವಾಗಿರುವ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಶನ್, ಹಾಸ್ಪಿಟಲ್ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ಫೇಮ್)ನ ಮೆಡಿಕಲ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಮೈಸೂರಿನ ಜೆ.ಎಸ್.ಎಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ನಿರ್ದೇಶಕ ಹಾಗೂ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಪುತ್ತೂರಿನ ಸೈಂಟ್ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಸಂತ ಫಿಲೋಮಿನಾ ಹೈಸ್ಕೂಲ್ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿ. ಅವಿಭಜಿತ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿ. ಕೆ.ಎನ್. ಮಹಾಬಲ ಶೆಟ್ಟಿ ಅವರ ಪುತ್ರ.
ಉಡುಪಿ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಶೇ.93.90ರ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ಸಾಧನೆಗೆ ಜಿಲ್ಲಾಡಳಿತದ ಮಾರ್ಗದರ್ಶನ, ಉಪನಿರ್ದೇಶಕರ ನಿರ್ದೇಶನ, ಕಾಲೇಜು ಆಡಳಿತ ಮಂಡಳಿಗಳ ಹಾಗೂ ಪೋಷಕರ ಸಹಕಾರ ಮತ್ತು ಪ್ರಾಂಶುಪಾಲರ ಸಂಘದ ಕಾರ್ಯವೈಖರಿಯು ಕಾರಣೀಭೂತವಾಗಿದೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ (596), ವಾಣಿಜ್ಯ ವಿಭಾಗದಲ್ಲಿ ಕ್ರೈಸ್ಟ್‍ಕಿಂಗ್ ಕಾಲೇಜಿನ ಸುಧೀಕ್ಷಾ ಶೆಟ್ಟಿ ಮತ್ತು ವಿದ್ಯೋದಯ ಕಾಲೇಜಿನ ಪ್ರಣವಿ ಎಚ್ ಸುವರ್ಣ(595) ಹಾಗೂ ಕಲಾ ವಿಭಾಗದಲ್ಲಿ ಎಂ.ಜಿ.ಎಂ ಕಾಲೇಜಿನ ದಿವ್ಯ (586) ಅಂಕ ಪಡೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ 595 ಅಂಕಗಳೊಂದಿಗೆ ಎಂ.ಜಿ.ಎಂ ಕಾಲೇಜಿನ ಭೂಮಿಕಾ ಆರ್ ಹೆಗ್ಡೆ, ಕಾರ್ಕಳ ಜ್ಞಾನಸುಧಾದ ಶ್ರೀ ರಕ್ಷಾ ಬಿ. ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಮತ್ತು ಉಡುಪಿ ಜ್ಞಾನಸುಧಾದ ಅಪೂರ್ವ್ ವಿ ಕುಮಾರ್ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ, ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ಕಾರ್ಕಳ ಜ್ಞಾನಸುಧಾ ಕಾಲೇಜಿನ ಸಹನಾ…
ಕಾರ್ಕಳ/ಉಡುಪಿ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜುಗಳ 2024- 25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದಲ್ಲಿ 10ರೊಳಗಿನ ರ್ಯಾಂಕ್ ಗಳಿಸಿದ ಸಂಸ್ಥೆಯ ಒಟ್ಟು 29 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ 4ನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ, 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 5ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ತಾನಿಗಳಾದ ಕಾರ್ಕಳ ಜ್ಞಾನಸುಧಾಧದ ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ ಮತ್ತು ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾದ ಕಾರ್ಕಳ ಜ್ಞಾನಸುಧಾದ ಕು.ಸಹನಾ ನಾಯಕ್ ಮತ್ತು ತನ್ವಿ ರಾವ್ ಇವರೊಂದಿಗೆ…
ಶತಾಯುಷಿ ಪರೀಕ ಚೆನ್ನಿಬೆಟ್ಟು ಸರಸ್ವತಿ ಸೂರಪ್ಪ ಹೆಗ್ಡೆ ಅವರಿಗೆ ಆತ್ರಾಡಿ ಪರೀಕ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನುಡಿನಮನ ಕಾರ್ಯಕ್ರಮ ನಡೆಸಲಾಯಿತು. ಕಲ್ಲಾಡಿ ಶಂಕರ ಟಿ. ಶೆಟ್ಟಿ ಓಂತಿಬೆಟ್ಟು ಅವರು, ಸರಸ್ವತಿಯವರ ಪ್ರೀತಿ, ಮಮತೆ, ಅತಿಥಿ ಸತ್ಕಾರ, ದಾನ, ಧರ್ಮ ಹಾಗೂ ಅವರ ಸದ್ಗುಣಗಳ ಬಗ್ಗೆ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಸರಸ್ವತಿಯವರ ಪುತ್ರ ಸರ್ವೋತ್ತಮ ಶೆಟ್ಟಿ ಅಬುಧಾಬಿ ನುಡಿನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಂಜಾರು ತೆಂಕಬಿಲ್ ಭಾರತಿ ಹೆಗಡೆ ಸ್ವಾಗತಿಸಿದರು.
ಇದೇ ಮೊದಲ ಬಾರಿಗೆ ಯಕ್ಷಗಾನದ ಕಥೆಯನ್ನು ಇಟ್ಟುಕೊಂಡು ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ರವಿ ಬಸ್ರೂರು ನಿರ್ದೇಶನದ ಈ ಸಿನಿಮಾದಲ್ಲಿ ನಿಜವಾದ ಯಕ್ಷಗಾನ ಕಲಾವಿದರು ನಟಿಸಿದ್ದಾರೆ. 50 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 18ರಂದು ಈ ಸಿನಿಮಾ ತೆರೆಕಾಣಲಿದೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಅವರು ಸಿನಿಮಾ ನಿರ್ದೇಶನದಲ್ಲೂ ಆಸಕ್ತಿ ಹೊಂದಿದ್ದಾರೆ. ಈಗ ಅವರು ‘ವೀರ ಚಂದ್ರಹಾಸ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಈ ಸಿನಿಮಾ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ ಆಧಾರಿತವಾಗಿ ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ಎನ್.ಎಸ್. ರಾಜ್ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಹೊಂಬಾಳೆ ಫಿಲಂಸ್ ಮೂಲಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ‘ವೀರ ಚಂದ್ರಹಾಸ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಈ ವೇಳೆ ಯಕ್ಷಗಾನ ಕಲಾವಿದರನ್ನು ಗೌರವಿಸಲಾಯಿತು. ಈ ವೇಳೆ ರವಿ ಬಸ್ರೂರು ಅವರು…
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇವರಿಂದ ಪ್ರೊ. ಎಂ. ಎಲ್. ಸಾಮಗರು ದಾನವಾಗಿ ನೀಡಿರುವ ನಿವೇಶನದಲ್ಲಿ ಯಕ್ಷಗಾನ ಕಲಾವಿದರಿಗೋಸ್ಕರ ನಿರ್ಮಾಣಗೊಳ್ಳಲಿರುವ ಗೃಹ ಸಮುಚ್ಚಯ “ಯಕ್ಷಧ್ರುವ ಪಟ್ಲಾಶ್ರಯ” ಇದರ ಭೂಮಿ ಪೂಜೆಯು ಏಪ್ರಿಲ್ 19 ರಂದು (ಶನಿವಾರ) ಬೆಳಗ್ಗೆ 10 ಘಂಟೆಗೆ ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ಅಮೃತ ಹಸ್ತದಿಂದ ಉಡುಪಿ ಕೊಡವೂರಿನ ಲಕ್ಷ್ಮೀ ನಗರ ಗರ್ಡೆಯಲ್ಲಿ ಸಂಪನ್ನಗೊಳ್ಳಲಿದೆ. ಆ ಪ್ರಯುಕ್ತ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಪಟ್ಲ ಸತೀಶ ಶೆಟ್ಟಿ, ತೋಟದಮನೆ ದಿವಾಕರ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿದ್ವಾನ್ ದಾಮೋದರ ಶರ್ಮ ಬಾರ್ಕೂರು, ಭುವನಪ್ರಸಾದ ಹೆಗ್ಡೆ, ಸುಧಾಕರ ಆಚಾರ್ಯ, ಹರೀಶ ಜೋಷಿ, ತ್ರಿಲೋಚನ ಶಾಸ್ತ್ರೀ, ವಿಶ್ವನಾಥ ಶ್ಯಾನುಭಾಗ್, ಆನಂದ ಶೆಟ್ಟಿ, ರತನ್ ರಾಜ್ ರೈ, ಇಂಜಿನಿಯರ್ ನಾಗರಾಜ ಐತಾಳ್ ಹಾಗೂ ರೋಶನ್ ಉಪಸ್ಥಿತರಿದ್ದರು.
ಲಕ್ಷ್ಮಣ ಫಲವು ಸೀತಾಫಲದ ಜಾತಿಗೆ ಸೇರಿದೆ. ಮಳೆಗಾಲದಲ್ಲಿ ಲಕ್ಷ್ಮಣ ಫಲ ಹೇರಳವಾಗಿ ಬೆಳೆಯುತ್ತದೆ. ಹಣ್ಣು ದುಂಡಗೆ ಅಥವಾ ಹೃದಯದ ಆಕಾರದಲ್ಲಿದ್ದು, ದೀವಿ ಹಲಸಿನ ಗಾತ್ರದಷ್ಟಿರುತ್ತದೆ. ಮೈಮೇಲೆ ಮುಳ್ಳಿನಂಥ ರಚನೆಯನ್ನು ಹೊಂದಿದೆ. ಒಳಭಾಗ ಬಿಳಿ. ಲಕ್ಷ್ಮಣ ಫಲದ ಸೇವನೆ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ದೇಹ ಪೋಷಣೆಗೆ ಬೇಕಾದಂತಹ ಪ್ರೊಟೀನ್, ವಿಟಮಿನ್‌ಗಳು ಲಭ್ಯವಿರುತ್ತವೆ. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುವುದು. ಹಣ್ಣನ್ನು ತಿನ್ನುತ್ತಾರೆ. ಬಲಿತ ಕಾಯಿಯನ್ನು ತರಕಾರಿಯಾಗಿ ಬಳಸಬಹುದು. ಇದು ವಿಶಿಷ್ಟವಾದ, ಕೆನೆ ವಿನ್ಯಾಸ ಮತ್ತು ಉಷ್ಣವಲಯದ ಸುವಾಸನೆಗಾಗಿ ಮಾತ್ರವಲ್ಲದೆ ಅದರ ಐತಿಹಾಸಿಕ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೂ ಗಮನಾರ್ಹವಾದ ಹಣ್ಣಾಗಿದೆ. ದಕ್ಷಿಣ ಅಮೇರಿಕಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಮಳೆಕಾಡುಗಳಿಂದ ಹುಟ್ಟಿಕೊಂಡ ಈ ಹಸಿರು, ಮುಳ್ಳು ಹಣ್ಣನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಇದರ ಬಳಕೆಯು ನಿದ್ರೆಗೆ ಸಹಾಯ ಮಾಡುವುದರಿಂದ ಹಿಡಿದು ಸೋಂಕುಗಳ ವಿರುದ್ಧ ಹೋರಾಡುವವರೆಗೆ ಇರುತ್ತದೆ. ⚫ ಆರೋಗ್ಯ ಉಪಯೋಗಗಳು ಲಕ್ಷ್ಮಣಫಲ ಕ್ಯಾನ್ಸರಿಗೆ ರಾಮಬಾಣವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಲಕ್ಷ್ಮಣಫಲದ…
ಕೈಯೂರು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಎ.ಕೆ. ಜಯರಾಮ ರೈಯವರಿಗೆ ಅಣಿಲೆ ತರವಾಡು ಕುಟುಂಬದ ವತಿಯಿಂದ ಏಪ್ರಿಲ್ 6 ರಂದು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಎ.ಕೆ. ಜಯರಾಮ ರೈಯವರು ಮಾತನಾಡಿ, ಅಣಿಲೆ ತರವಾಡು ಕುಟುಂಬ ಸಣ್ಣ ಕುಟುಂಬವಾಗಿದ್ದು, ಈ ತರವಾಡು ಕುಟುಂಬದ ಎಲ್ಲಾ ಸದಸ್ಯರು ಒಗ್ಗೂಡಿ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಮುಂದೆ ಅಣಿಲೆ ತರವಾಡು ಕುಟುಂಬದ ವತಿಯಿಂದ ಅನೇಕ ಅಭಿವೃದ್ಧಿ ಕೆಲಸಗಳು ಆಗಲಿದ್ದು, ಎಲ್ಲರೂ ಸಹಕಾರವನ್ನು ನೀಡಬೇಕಾಗಿ ವಿನಂತಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂಧರ್ಭ ಅಣಿಲೆ ತರವಾಡು ಕುಟುಂಬದ ಯಜಮಾನ ಅಣಿಲೆ ಕರ್ಪುಡಿಕಾನ ರಾಮಕೃಷ್ಣ ರೈ, ಅಣಿಲೆ ತರವಾಡು ಧರ್ಮ ದೈವ ಸೇವಾ ಸಮಿತಿ ಟ್ರಸ್ಟ್ ನ ಕೋಶಾಧಿಕಾರಿ ಶಶಿಧರ್ ಅಣಿಲೆ, ಮಾಜಿ ಸೈನಿಕ ಅಮ್ಮಣ್ಣ ರೈ ದೇರ್ಲ, ಭಾರತಿ ರೈ, ಅಮೂಲ್ಯ ರೈ, ಪಿ.ಬಿ. ಅಮ್ಮಣ್ಣ ರೈ ಪಾಪೆಮಜಲು, ಪದ್ಮನಾಭ ಆಳ್ವ ಅಣಿಲೆ, ಎ.ಕೆ. ತಿಮ್ಮಪ್ಪ…
ವಿಜ್ಞಾನ ವಿಭಾಗ : ಆಸ್ತಿ ಎಸ್ ರಾಜ್ಯಕ್ಕೆ 4ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ವಾಣಿಜ್ಯ ವಿಭಾಗ : ಸಹನಾ ಮತ್ತು ತನ್ವಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ 2ನೇ ಸ್ಥಾನ ಜ್ಞಾನಸುಧಾದ 722 ವಿಶಿಷ್ಟ ಶ್ರೇಣಿ ಗಣಿತನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್ 596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ 595 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ. ಕಾರ್ಕಳ ಜ್ಞಾನಸುಧಾದ ಮಯೂರ್ ಗೌಡ, ಭಾರ್ಗವ್ ಎಚ್ ನಾಯಕ್, ವಿಷ್ಣು ಜಿ…














