ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಜುಲೈ ಒಂದರ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗೇಶ್ ಪುತ್ರನ್ ಅವರನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಲಬ್ ನ ನೂತನ ಅಧ್ಯಕ್ಷರಾದ ಲ. ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರುಮಾಜಿ ಜಿಲ್ಲಾ ಗವರ್ನರ್ ಲ. ಎಂಜೆಎಫ್ ದಿವಾಕರ ಶೆಟ್ಟಿ, ಪಿಎಂಜೆಎಫ್ ಲ. ರಂಜನ್ ಕಲ್ಕೂರ, ಪ್ರಾಂತಿಯ ಅಧ್ಯಕ್ಷರಾದ ಲ. ರಜತ ಹೆಗ್ಡೆ, ವಲಯ ಅಧ್ಯಕ್ಷರಾದ ಲ. ವಸಂತರಾಜ್ ಶೆಟ್ಟಿ, ಎಕ್ಸ್ಟೆಂಶನ್ ಚೇರ್ಮನ್ ಲ. ಅರುಣ್ ಕುಮಾರ್ ಹೆಗ್ಡೆಯವರ ಸಮಕ್ಷಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ಪ್ರಾಂತೀಯ ಕಾರ್ಯದರ್ಶಿ ಲ. ಏಕನಾಥ ಬೋಳಾರ್, ಸ್ಥಾಪಕ ಅಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ, ಮಾಜಿ ಅಧ್ಯಕ್ಷರಾದ ಲ. ಉದಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಲ. ವೆಂಕಟರಮಣ ನಾಯಕ್, ಕೋಶಾಧಿಕಾರಿ ಲ. ಅರುಣ್ ಕುಮಾರ್ ಶೆಟ್ಟಿ, ನೂತನ ಕಾರ್ಯದರ್ಶಿ ಲ.ಭುಜಂಗ ಶೆಟ್ಟಿ ರಟ್ಟಾಡಿ, ಕೋಶಾಧಿಕಾರಿ ಲ. ಅಣ್ಣಪ್ಪ ಶೆಟ್ಟಿ ಯರುಕೋಣೆ ಉಪಸ್ಥಿತರಿದ್ದರು.