Author: admin

ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್ ಜೊತೆಯಾಗಿ 76ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದವು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಉಮೇಶ್ ನಾಯಕ್‍ರವರು ಆಗಮಿಸಿದ್ದರು. ಅವರು ಮಾತನಾಡಿ ಇಂದಿನ ಮಕ್ಕಳು ಮುಂದಿನ ನಾಯಕರು. ಅವರು ಒಂದು ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಲು ಹಿಂಜರಿಯಬಾರದು. ಇಂದು ಭಾರತದಾದ್ಯಂತ ಸಂಭ್ರಮಿಸುವ, ಶೌರ್ಯವನ್ನು ಪ್ರದರ್ಶಿಸುವ ದಿನವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ದೇಶದಲ್ಲಿ ವಿವಿಧ ಧರ್ಮ, ಜಾತಿ, ಪಂಗಡಗಳಿದ್ದರೂ ನಾವೆಲ್ಲರೂ ಒಂದೇ ಗಡಿಯಲ್ಲಿ ದೇಶವನ್ನು ಕಾಯುವ ಎಲ್ಲಾ ಸೈನಿಕರಿಗೆ ಗೌರವವನ್ನು ಕೊಟ್ಟು ಸ್ಮರಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ ಗಣರಾಜ್ಯೋತ್ಸವದ ಶುಭ ಹಾರೈಸಿದರು. ನಂತರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್…

Read More

ಯುಎಇ ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ – 4 ಹಾಗೂ ದಿ. ದಿವೇಶ್ ಆಳ್ವ ಸ್ವರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ತಮ್ಮ ತಮ್ಮ ಗೆಲುವಿಗಾಗಿ ರಾತ್ರಿ ಹಗಲು ತಾಲೀಮು ನಡೆಸುತ್ತಿದೆ. ಜನವರಿ 26 ರಂದು ಶಾರ್ಜಾದ ಡಿಸಿಎಸ್ ಸೆಲೆಕ್ಟೆರೇನ ರಾಹ್ಮನಿಯಾದ ಮೈದಾನದಲ್ಲಿ ಬೆಳಿಗ್ಗೆ ಏಳರಿಂದ ಸಾಯಂಕಾಲದವರೆಗೆ ಪಂದ್ಯಾಟವು ನಡೆಯಲಿದ್ದು ಕ್ರಿಕೆಟ್ ಪಂದ್ಯಾಟದ ಸಂಘಟನಾ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಪಂದ್ಯಾಟ ಆರಂಭವಾಗಲಿದ್ದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಕರಾವಳಿಯ ಬಂಟ ಕುವರ ಗುರುಕಿರಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಯುಎಇ ಬಂಟ್ಸ್ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಯುಎಇ ಬಂಟ್ಸ್ ನ ಪೋಷಕರಾದ ಡಾ. ಬಿ.ಆರ್ ಶೆಟ್ಟಿ, ಯುಎಇ ಬಂಟ್ಸ್ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಹಾಗೂ ಯುಎಇ ಬಂಟ್ಸ್ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿರುವರು.ಗುಣಶೀಲ್ ಶೆಟ್ಟಿಯವರ ಎಸಿಇ ಅವೇಂಜರ್ಸ್, ರವಿ…

Read More

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಪೋಷಕರು, ಗೋವಾ ಬಂಟರ ಸಂಘದ ರಜತ ಸಂಭ್ರಮದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿ ದಂಪತಿಯವರನ್ನು ಕುಂದಾಪುರ ಯುವ ಬಂಟರ ಸಂಘದ ಪರವಾಗಿ ಸಂಘದ ಮಹಾ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಮೈಸೂರಿನ ಜ್ಞಾನ ಸರೋವರ ರೆಸಿಡೆನ್ಸಿಯಲ್ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಸುಧಾಕರ ಶೆಟ್ಟಿ, ಡಾ| ಗಣನಾಥ ಶೆಟ್ಟಿ ಎಕ್ಕಾರು, ಉಳ್ತೂರು ಮೋಹನದಾಸ್ ಶೆಟ್ಟಿ, ಯುವ ಬಂಟರ ಸಂಘದ ಪೋಷಕರಾದ ಗಿಳಿಯಾರು ಬಡಾಮನೆ ರತ್ನಾಕರ ಜಿ ಶೆಟ್ಟಿ, ಚಲನಚಿತ್ರ ನಟರಾದ ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು, ಉಪಾಧ್ಯಕ್ಷರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಮಾಜಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಕಂದಾವರ ರತ್ನಾಕರ ಶೆಟ್ಟಿ, ಹರ್ಷ ಶೆಟ್ಟಿ, ಕಾವಡಿ, ಪ್ರವೀಣ್ ಶೆಟ್ಟಿ ಕಾವಡಿ, ಪ್ರಕಾಶ್ ಶೆಟ್ಟಿ ಆನಗಳ್ಳಿ, ಶರತ್…

Read More

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಅತ್ಯದ್ಭುತವೆಂಬಂತೆ ಬಾಗಲಕೋಟೆಯ ಇಳಕಲ್ ಶಿಲೆಯಲ್ಲಿ ನವ ನಿರ್ಮಾಣಗೊಳ್ಳುತ್ತಿದ್ದು ದೇಶ ವಿದೇಶಗಳಲ್ಲಿ ನೆಲೆಸಿರುವ ಭಕ್ತರ ಕೂಡುವಿಕೆಯಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ. ಫೆಬ್ರವರಿ 25 ರಿಂದ ಮೊದಲ್ಗೊಂಡು ಮಾರ್ಚ್ 5 ರವರೆಗೆ ನವ ದಿನಗಳ ಪರ್ಯಂತ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನವದುರ್ಗಾ ಲೇಖನ ಮತ್ತು ನವ ಚಂಡೀಯಾಗದ ಕುರಿತು ಮಾಹಿತಿ ನೀಡಲು ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ, ರಜತ ರಥ ಸಮರ್ಪಣೆ, ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸ್ವರ್ಣ ಮುಖ ಹಾಗೂ ಹಸಿರು ಹೊರೆ ಕಾಣಿಕೆ ಮತ್ತು ಪ್ರತಿಷ್ಠಾದಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲು 18 ದೇಶಗಳ ವಿಶೇಷ ಸಭೆಯನ್ನು ಜೂಮ್ ಮೀಟಿಂಗ್ ನಲ್ಲಿ ಆಯೋಜಿಸಲಾಗಿತ್ತು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಂತರಾಷ್ಟ್ರೀಯ ಸೇವಾ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ, ಕಾರ್ಯಾಧ್ಯಕ್ಷ ಶಶಿಧರ್ ಶೆಟ್ಟಿ…

Read More

ತುಳನಾಡ ಬಂಟ ಕುವರ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ಟೈಟಲ್ ಹಾಗೂ ಸ್ಯಾಂಪಲ್ಸ್ ಮೂಲಕ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಕರಾವಳಿಯ ಸಂಸ್ಕೃತಿಯಾದ ಹುಲಿ ಕುಣಿತ, ಯಕ್ಷಗಾನ, ದೈವರಾಧನೆ ಹಾಗೂ ಆಟಿ ಕಳಂಜ ಸೇರಿದಂತೆ ಹಲವು ವಿಚಾರಗಳುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರೂಪೇಶ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ಫೆಬ್ರವರಿ 7ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ಇಡೀ ಚಿತ್ರತಂಡ ಹಾಜರಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, ಅಧಿಪತ್ರ ಸಿನಿಮಾ ಫೆಬ್ರವರಿ 7ರಂದು ತೆರೆಗೆ ಬರ್ತಿದೆ. ಈ ಸಿನಿಮಾ ಒಂದೊಳ್ಳೆ ಕಂಟೆಂಟ್ ಆಗಲಿದೆ ಎಂಬ ನಂಬಿಕೆ ಇದೆ. ಈ ಒಳ್ಳೆ ಕಂಟೆಂಟ್ ಆಗಲು ನಮ್ಮ ಟೆಕ್ನಿಷಿಯಲ್ ಟೀಂ, ನಿರ್ಮಾಪಕರು, ಇಡೀ ತಾರಾಬಳಗದ ಬೆಂಬಲ ತುಂಬಾನೇ ಇದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇದರ ಜೊತೆಗೆ ಕರಾವಳಿ ಭಾಗದ ಆಟಿ ಕಳಂಜ ಸಂಸ್ಕೃತಿಯನ್ನು ಅಧಿಪತ್ರ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.…

Read More

ಅನಾದಿ ಕಾಲದಿಂದಲೂ ನಾಯಿ ಮನುಷ್ಯನ ಸಂಗಾತಿ ಎಂದು ಹೇಳಲಾಗುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ, ಅಲ್ಲಲ್ಲಿ ನಾಯಿಯ ಪ್ರಸ್ತಾಪವಿದೆ. ಕಾಲಭೈರವನ ಸುತ್ತ ನಾಯಿಗಳಿರುವ ಚಿತ್ರ ನೋಡಿದ್ದೇವೆ. ದತ್ತಾತ್ರೇಯನ ಸುತ್ತಲೂ ನಾಲ್ಕು ನಾಯಿಗಳಿರುತ್ತವೆ. ಮಹಾಭಾರತದಲ್ಲಿ ಯುಧಿಷ್ಠಿರನನ್ನು ಹಿಂಬಾಲಿಸಿ ಸ್ವರ್ಗದ ಬಾಗಿಲಿನವರೆಗೂ ಬರುವ ನಾಯಿಯ ಬಗ್ಗೆ ನಾವು ಓದಿದ್ದೇವೆ. ಆದರೆ, ಅದಕ್ಕೂ ಮುಂಚೆ, ವೇದಸಾಹಿತ್ಯದಲ್ಲೂ ನಾಯಿಯೊಂದು ಮುಖ್ಯ ಪಾತ್ರಧಾರಿಯಾಗಿದ್ದ ಕಥೆ ಇದು. ಸರಮೆ, ದೇವಲೋಕದಲ್ಲಿ ವಾಸವಿದ್ದ ಹೆಣ್ಣು ನಾಯಿ. ಆದುದರಿಂದಲೇ ನಾಯಿ ಜಾತಿಗೆ ‘ಸಾರಮೇಯ’ ಎಂಬ ಹೆಸರು ಬಂದಿರುವುದು. ಋಗ್ವೇದವು ಸರಮೆಯನ್ನು ಸುಪಾದ, ಸುಭಗಾ ಎಂದೂ ಕರೆದಿದೆ. ಋಗ್ವೇದದ ಒಂದು, ಮೂರು, ನಾಲ್ಕು ಮತ್ತು ಐದನೇ ಮಂಡಲಗಳಲ್ಲಿ ಸರಮೆಯ ಉಲ್ಲೇಖವಿದೆ. ಒಮ್ಮೆ ಅಸುರರ ಒಂದು ಗುಂಪು ಅಂಗೀರಸ ಋಷಿಗೆ ಸೇರಿದ ಹಸುಗಳನ್ನು ಆಶ್ರಮದಿಂದ ಅಪಹರಿಸಿ ಕೊಂಡು ಹೋಗಿ, ಗುಹೆಯಲ್ಲಿ ಬಚ್ಚಿಡುತ್ತಾರೆ. ಅಂಗೀರಸರು ಇಂದ್ರನ ಬಳಿ ಬಂದು ಗೋವುಗಳನ್ನು ಹುಡುಕಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ, ಆ ಹಸುಗಳನ್ನು ಹುಡುಕಲು ಇಂದ್ರನಿಗೆ ಸಹಾಯ ಮಾಡುವುದು ಈ ಸರಮೆ ಎಂಬ ಶ್ವಾನ.…

Read More

ಅವರು ಸ್ಟಂಟ್ ಮಾಡುವಾಗ ಹಲವು ಮೂಳೆಗಳು ಮುರಿದಿದ್ದವು. ಆದ್ರೂ ಮುರಿದ ಕಾಲಿನ ಮೂಳೆಗಳಿಗಿಂತಲೂ ಮುರಿದ ಹೃದಯದ (Broken Heart) ಕಾರಣಕ್ಕಾಗಿ ಫೈಟರ್ ಶೆಟ್ಟಿ ಕುಸಿದು ಬಿದ್ದರು. ಸತತ ಎಂಟು ಬಾರಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗುದ್ದಾಡಿ ಗೆದ್ದ ಶೆಟ್ಟಿ ಜೀವನದ ಹೋರಾಟದಲ್ಲಿ ಫೈಟ್ ಮಾಡದೇ ಕುಡಿದು, ಕುಡಿದೇ ಸೋಲೊಪ್ಪಿಕೊಂಡರು! ಇದು ಬೋಳು ತಲೆಯ ವಿಶಿಷ್ಟ ಖಳನಾಯಕ ಫೈಟರ್ ಶೆಟ್ಟಿಯವರ ಕೊನೆಗಾಲವನ್ನು ನೆನೆಪಿಸಿಕೊಂಡು ಅವರ ಆತ್ಮೀಯರು ಹೇಳುವ ದುಃಖದ ಮಾತುಗಳು. ಮುದ್ದಣ್ಣ ಬಾಬು ಶೆಟ್ಟಿ ಬಡತನದ ಬೇಗೆಯೊಂದಿಗೆ ಎಲ್ಲರಂತೆ ಉಡುಪಿ ಬಿಟ್ಟು ಅಂದಿನ ಬೊಂಬಾಯಿಗೆ ಕಾಲಿಟ್ಟಾಗ ಅವರಿಗೆ ಆಟವಾಡುವ ವಯಸ್ಸು. ಅಂದರೆ ಬರಿಯ ಒಂಬತ್ತು ವರ್ಷ. ಟಾಟಾ ಕ್ಯಾಂಟೀನ್ ನಲ್ಲಿ ಒರೆಸುವ, ತೊಳೆಯುವ, ಸಪ್ಲೈ ಕೆಲಸ ಮಾಡುವಾಗಲೆಲ್ಲಾ ಈ ಬಾಲಕನ ಮನಸಲ್ಲಿ ಇದ್ದುದ್ದೇ ಬೇರೆ ಕಡೆ. ವಯಸ್ಸು ಬೆಳೆಯುತ್ತಿದ್ದಂತೆ ದಷ್ಟಪುಷ್ಟವಾಗಿ ಬೆಳೆದ ಮುದ್ದಣ್ಣನನ್ನು ಮೊದಲು ಗುರುತಿಸಿದವರು ಮುಂಬೈಯ ಖ್ಯಾತ ಬಾಕ್ಸಿಂಗ್ ತರಬೇತುದಾರ ಕೆ ಎನ್ ಮೆಂಡನ್. ತನ್ನ ಗರಡಿಯಲ್ಲಿ ಪಳಗಿಸಿ ಬೆಳಗಿಸಿದ ಶಿಷ್ಯ ಗುರುವಿಗೆ…

Read More

ಸನಕಾದಿಗಳು ಬ್ರಹ್ಮನ ಮಾನಸ ಪುತ್ರರು. ನಾರಾಯಣನು ಪ್ರಜಾವೃದ್ಧಿ ಮಾಡಿಸಲು ಬ್ರಹ್ಮನಿಗೆ ತಿಳಿಸಿದಾಗ ಬ್ರಹ್ಮದೇವನು ಮೊದಲಿಗೆ ಸೃಷ್ಟಿಸಿದ್ದು ಸನಕ, ಸನಂದನ, ಸನಾತನ, ಸನತ್ಸುಜಾತ ಎಂಬ ನಾಲ್ಕು ಜನ ಸನಕಾದಿಗಳು. ಬ್ರಹ್ಮನು ಇವರಿಗೆ ಪ್ರಜಾವೃದ್ಧಿ ಮಾಡಲು ತಿಳಿಸಿದಾಗ ಸನಕಾದಿಗಳು ನಮಗೆ ಅದರ ವಿಷಯವೇ ಬೇಡ ನಾವು ದೇವ ಸ್ಮರಣೆ ಮಾಡುತ್ತಾ ಹರಿನಾಮವೊಂದೇ ಸಾಕೆಮಗೆ ಎಂದು ಅಲ್ಲಿಂದ ಹೊರಡುತ್ತಾರೆ. ಬ್ರಹ್ಮನು ಇರಿಸು ಮುರುಸಾಗಿ ತಾನು ಸೃಷ್ಟಿಸಿದ ಮಕ್ಕಳೇ ತನ್ನ ಮಾತನ್ನ ಕೇಳಲ್ವಲ್ಲ ಎಂದು ಬೇಸರಪಟ್ಟ. ನಂತರ ಈ ಸನಕಾದಿಗಳು ಹರಿನಾಮ ಸ್ಮರಣೆ ಮಾಡುತ್ತಾ ಎಲ್ಲಾ ಲೋಕಗಳನ್ನು ಸುತ್ತುತ್ತಿರುತ್ತಾರೆ. ಇವರು ಅರಿಷಡ್ವರ್ಗಗಳನ್ನು ತಮ್ಮ ಬಳಿಗೆ ಸುಳಿಯಲು ಅವಕಾಶ ಕೊಡದೇ ಐದು ವರ್ಷದ ಬಾಲಕರಿದ್ದಾಲೇ ದೇವರ ಸ್ಮರಣೆ ಮಾಡುತ್ತಿರುತ್ತಾರೆ. ಹೀಗೇ ಸ್ಮರಣೆ ಮಾಡುತ್ತಾ ಸಕಲ ಲೋಕಗಳನ್ನು ಸುತ್ತಿ ದೇವರನ್ನು ಕಾಣಲು ವೈಕುಂಠದ ಆರು ಬಾಗಿಲುಗಳನ್ನ ದಾಟಿ ಏಳನೇ ಬಾಗಿಲಿನ ಬಳಿ ಬಂದಾಗ ಅಲ್ಲಿ ಈ ಸನಕಾದಿಗಳನ್ನು ಒಳಗೆ ಹೋಗಲು ಬಿಡದೆ ತಡೆದವರು ಜಯ ವಿಜಯರು. ಈ ಜಯ ವಿಜಯರು…

Read More

ವಿದ್ಯಾಗಿರಿ: ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ. ಅವಕಾಶಗಳ ಸದುಪಯೋಗ ಹಾಗೂ ಸಂಸ್ಕಾರದ ಗುಣವನ್ನು ಬೆಳೆಸಿಕೊಳ್ಳಿ.ದೇಶಪ್ರೇಮ, ರಾಷ್ಟ್ರ ಪ್ರೇಮದೊಂದಿಗೆ ಬದುಕೋಣ, ಆದರೆ ಅನ್ಯ ದೇಶದ ನಡುವೆ ಸಂಘರ್ಷ ಬೇಡ ಎಂದರು. ದೇಶಪ್ರೇಮದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ. ಮನುಷ್ಯ ಬದುಕಲು ನೀರು,ಮಣ್ಣು,ಗಾಳಿ ಅತಿ…

Read More

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನ ಎಲ್ಲಾ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12ರಲ್ಲೂ ಬಿಜೆಪಿ ಸಹಕಾರಿ ಪ್ರಕೋಷ್ಟದ ಬೆಂಬಲಿತ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ.ಉದ್ಯಮಿ, ಸಮಾಜಸೇವಕ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬರವರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಭರ್ಜರಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಯುವ ನಾಯಕರಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಸಂದೇಶ್ ಶೆಟ್ಟಿಯವರು ಸಹೋದರ ಸಿದ್ದಕಟ್ಟೆ ಕೊಡಂಗೆ ವೀರ ವಿಕ್ರಮ ಜೋಡುಕೆರೆ ಕಂಬಳದ ರೂವಾರಿ ಸಂದೀಪ್ ಶೆಟ್ಟಿ ಪೊಡುಂಬರೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

Read More