ಸಾಮಾಜಿಕ ಜವಾಬ್ದಾರಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ಕುಟುಂಬದಲ್ಲಿ ನೊಚ್ಚ ಮನೆತನ ಕೂಡ ಒಂದಾಗಿದೆ. ಇಂದಿನ ಕಾಲದಲ್ಲಿ ಸೆರಾಮಿಕ್ಸ್ ನ್ನು ಬೇರೆ ಊರಿನಿಂದ ತರಿಸಬೇಕಿತ್ತು. ಇಂದು ನಮ್ಮೂರಿನಲ್ಲಿ ಸೆರಾಮಿಕ್ಸ್ ಸಂಸ್ಥೆ ಪ್ರಾರಂಭಿಸುವ ಮೂಲಕ ನೊಚ್ಚ ಕುಟುಂಬ ಊರಿಗೆ ವಿಶೇಷ ಕೊಡುಗೆ ನೀಡಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಪ್ರತೀಕ್ ಶೆಟ್ಟಿ ನೊಚ್ಚ ಅವರ ಮಾಲಕತ್ವದ ‘ನೊಚ್ಚ ಸೆರಾಮಿಕ್ಸ್’ (ಪ್ರತಿಷ್ಠಿತ ಓರಿಯಂಟ್ ಬೆಲ್ಸ್ ನ ಅಧಿಕೃತ ಮಾರಾಟಗಾರರು) ಇದರ ಉದ್ಘಾಟನೆಯನ್ನು ಆಳದಂಗಡಿ ಶ್ರೀ ಲಕ್ಷ್ಮಿ ಕಟ್ಟಡದಲ್ಲಿ ಜುಲೈ 14ರಂದು ನೆರವೇರಿಸಿ ಮಾತನಾಡಿದರು. ನಾವು ಉದ್ಯೋಗಿಗಳಾಗಬಾರದು. ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು. ಪ್ರತೀಕ್ ಶೆಟ್ಟಿಯವರು ವಿವಿಧ ಉದ್ಯಮದೊಂದಿಗೆ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಉದ್ಯಮಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಅವರು ಮಾತನಾಡಿ, ಆಳದಂಗಡಿಯಲ್ಲಿ ಸೆರಾಮಿಕ್ಸ್ ಸಂಸ್ಥೆಯ ಅಗತ್ಯವಿತ್ತು. ಆ ಕೊರತೆಯನ್ನು ಪ್ರತೀಕ್ ಶೆಟ್ಟಿಯವರು ಪೂರ್ಣಗೊಳಿಸಿದರು. ದೈವ ದೇವರ ಅನುಗ್ರಹದಿಂದ ಸಂಸ್ಥೆಯು ಬೆಳಗಲಿ ಎಂದರು.
ಕಾರ್ಯಕ್ರಮದಲ್ಲಿ ಸಂಜೀವ ಪೂಜಾರಿ ಕೊಡಂಗೆ, ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ವಕೀಲರಾದ ಸಜಿತ್ ಕುಮಾರ್ ಜೈನ್, ಉದ್ಯಮಿ ಪುಷ್ಪರಾಜ್ ಶೆಟ್ಟಿ, ಸುಲ್ಕೇರಿ ಶ್ರೀರಾಮ ಶಾಲೆಯ ಮುಖ್ಯಸ್ಥರಾದ ರಾಜು, ಪ್ರಮುಖರಾದ ಸುಭಾಷ್ ಚಂದ್ರ ರೈ ಪಡ್ಯೋಡಿ, ಸಂಜೀವ ಶೆಟ್ಟಿ ಕುಂಟಠಿನಿ, ಜಯಂತ್ ಶೆಟ್ಟಿ ಕುಂಠಿನಿ, ದೇವದಾಸ್ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಪ್ರದೀಪ್ ಶೆಟ್ಟಿ ಪಿಲ್ಯ, ಪ್ರಶಾಂತ್ ಶೆಟ್ಟಿ ಆಳದಂಗಡಿ, ಜಗನ್ನಾಥ್ ಶೆಟ್ಟಿ ಆಳದಂಗಡಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಶುಭ ಕೋರಿದರು ಶ್ರೀಮತಿ ಮತ್ತು ಶ್ರೀ ನಿತ್ಯಾನಂದ ಶೆಟ್ಟಿ ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಸಹೋದರರು ಸಹೋದರಿಯರು ಮತ್ತು ಮಾಲಕ ಪ್ರತೀಕ್ ಶೆಟ್ಟಿ ನೊಚ್ಚ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.