ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಬೆಳ್ಮಣ್ ಸೂರಜ್ ಹಿಲ್ಸ್ ವನದುರ್ಗ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜುಲೈ 13ನೇ ಆದಿತ್ಯವಾರದಂದು ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ವಿಘ್ನೇಶ್ ಭಟ್ ಅವರು ಉದ್ಘಾಟಿಸಿದರು. ಮುಂಬಯಿ ಕೃಷ್ಣ ಪ್ಯಾಲೇಸ್ ಹೋಟೆಲ್ ನ ಆಡಳಿತ ನಿರ್ದೇಶಕ ಕೃಷ್ಣ ವೈ ಶೆಟ್ಟಿ ಹಾಗೂ ವಿ.ಕೆ ಗ್ರೂಪ್ ನ ಸಿಎಂಡಿ ಕರುಣಾಕರ ಎಂ ಶೆಟ್ಟಿಯವರು ದೀಪ ಬೆಳಗಿಸಿ ನೂತನ ಶಾಖೆಗೆ ಶುಭ ಕೋರಿದರು.

ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಹಾಗೂ ಬೆಳ್ಮಣ್ ಚರ್ಚಿನ ಧರ್ಮ ಗುರುಗಳಾದ ರೇ ಫಾ. ಫೆಡರಿಕ್ ಮಸ್ಕರೇನಸ್ ಆಶೀರ್ವಚನ ನೀಡಿದರು. ಸೊಸೈಟಿಯ ಅಧ್ಯಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಬಿ ಜಯಕರ ಶೆಟ್ಟಿ ಇಂದ್ರಾಳಿ ಅವರು ಭದ್ರತಾ ಕೊಠಡಿಯ ಉದ್ಘಾಟನೆ ಹಾಗೂ ಸುಹಾಸ್ ಹೆಗ್ಡೆ ನಂದಳಿಕೆ ಅವರು ಗಣಕಯಂತ್ರ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಯಾಗಿ ಹೋಟೆಲ್ ರಾಮ್ ದೇವ್ ನ ಆಡಳಿತ ನಿರ್ದೇಶಕ ರಘುರಾಮ್ ಶೆಟ್ಟಿ ಬೋಳ, ಬೆಳಪು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿ, ಪ್ರಗತಿಪರ ಕೃಷಿಕ ಅಶೋಕ್ ಅಡ್ಯಾಂತಾಯ ನಿಟ್ಟೆ, ಸೊಸೈಟಿ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ಬೈಲೂರು, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಕಾಬೆಟ್ಟು, ಉದ್ಯಮಿ ಶೋಧನ್ ಕುಮಾರ್ ಶೆಟ್ಟಿ ಬೆಳ್ಮಣ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಕೃಷ್ಣ ಎಂ ಶೆಟ್ಟಿ, ನಿರ್ದೇಶಕರುಗಳು ಹಾಗೂ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು. ಸಾಯಿನಾಥ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರ್ವಹಿಸಿದರು.