ಫರಂಗಿಪೇಟೆ ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು ಇವರು ನಿಯುಕ್ತಿಗೊಂಡಿದ್ದಾರೆ. ಉದ್ಯಮಿಯಾಗಿರುವ ವಿಶ್ವನಾಥ ಶೆಟ್ಟಿಯವರು ಕ್ರಿಯಾಶೀಲತೆಯ ಬಹುಮುಖ ವ್ಯಕ್ತಿತ್ವದ ನಾಯಕತ್ವ ಗುಣಗಳನ್ನು ಹೊಂದಿರುವ ಸಂಘಟನಾ ಚತುರ. ಧಾರ್ಮಿಕ ಮುಖಂಡರಾಗಿಯೂ, ಸಮಾಜಸೇವಕರಾಗಿಯೂ ಪ್ರಸಿದ್ದಿ ಪಡೆದಿರುವ ಇವರು ಪ್ರತಿಷ್ಟಿತ ಬಂಟ್ವಾಳ ತಾಲೂಕಿನ ಕೊಟ್ಟಿಂಜ ಗುತ್ತು ಮನೆತನದವರು.
