ಶಿಕ್ಷಕ, ಸಂಘಟಕ ಹಾಗೂ ಪ್ರಗತಿಪರ ಕೃಷಿಕ ಕೆ. ರವೀಂದ್ರ ರೈ ಕಲ್ಲಿಮಾರ್ ಅವರು ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ೩೪ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು. ಕೊಳ್ನಾಡು ಗ್ರಾಮದ ಸಾಲೆತ್ತೂರು ಕುಳಾಲು ದಿ. ವಿಠಲ್ ರೈ ಮತ್ತು ದಿ. ಸುಂದರಿ ರೈ ದಂಪತಿಯ ಹಿರಿಯ ಪುತ್ರನಾಗಿರುವ ರವೀಂದ್ರ ರೈ ಕನ್ಯಾನ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಮಂಗಳೂರು ಕೆನರಾ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ಪೂರೈಸಿ, ಸರಕಾರಿ ಕಾಲೇಜಿನಲ್ಲಿ ಬಿ.ಎಡ್. ಪದವಿ ಪಡೆದರು. ಬಳಿಕ ಮೈಸೂರು ವಿ.ವಿ.ಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು. ತನ್ನ ಅಜ್ಜ ವಿದ್ವಾನ್ ಕೆ. ಕಾಂತ ರೈ ಅವರು ಅಧ್ಯಾಪಕರಾಗಿದ್ದ ಮೂಡಬಿದ್ರೆ ಜೈನ್ ಹೈಸ್ಕೂಲಿನಲ್ಲಿ ಒಂದು ವರ್ಷ ಉಚಿತ ಸೇವೆ ಸಲ್ಲಿಸಿದರು. ಅಜ್ಜನ ಮಾರ್ಗದರ್ಶನದಲ್ಲಿ ಶಿಕ್ಷಕ ವೃತ್ತಿ ಪ್ರವೇಶಿಸಿ ೧೯೮೩ ರಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಸೇರಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೇಸೀ, ಲಯನ್ಸ್ ಮುಂತಾದ ವಿವಿಧ ಸಂಘ ಸಂಸ್ಥೆಗಳಲ್ಲಿದ್ದು ತರಬೇತಿ, ಕಾರ್ಯಕ್ರಮ ನಿರೂಪಣೆ, ಆಕಾಶವಾಣಿ ಕಾರ್ಯಕ್ರಮದ ಜೊತೆಗೆ ದೈವ ದೇವಸ್ಥಾನ ಮತ್ತಿತರ ಧಾರ್ಮಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಅಲ್ಲದೆ ಜಿಲ್ಲೆ, ತಾಲೂಕು, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದಾರೆ.

ನಿವೃತ್ತಿಯ ಬಳಿಕ ಕೃಷಿಯಲ್ಲಿ ಆಸಕ್ತಿ ಹೊಂದಿ ಅಡಿಕೆ, ಬಾಳೆತೋಟ, ಹಣ್ಣುಹಂಪಲು, ಅನಾನಸು ಬೆಳೆಸುವ ಕಾಯಕದಲ್ಲಿ ವ್ಯಸ್ತರಾಗಿರುವ ರವೀಂದ್ರ ರೈ ಕೊರೊನಾ ಸಮಯದಲ್ಲಿ ಆ ತೋಟದ ಒಡನಾಟದಲ್ಲೇ ಕಾಲಯಾಪನೆ ಮಾಡಿದ್ದಾರೆ. ಅರುವ ಆಳದಂಗಡಿ ಗುತ್ತು ಸ್ವರ್ಣಲತಾ ರೈಯವರನ್ನು ವಿವಾಹವಾಗಿದ್ದು, ಈ ದಂಪತಿಯ ಏಕಮಾತ್ರ ಪುತ್ರಿ ಸ್ವಸ್ತಿಕಾ ರೈ ಐಬಿಎಂ ಉದ್ಯೋಗಿ. ಇತ್ತೀಚೆಗೆ ಉಡುಪಿಯಲ್ಲಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವ ವಿದ್ಯಾ ಕುಮಾರಿ ಸೇರಿದಂತೆ ಹಲವು ಮಂದಿ ಸಾಧಕರು ತನ್ನ ಶಿಷ್ಯರೆಂದು ಹೇಳಿಕೊಳ್ಳಲು ಹೆಮ್ಮೆ ಪಡುವ ರವೀಂದ್ರ ರೈ ‘ಮೇಲೋಗರ’ ಎಂಬ ಚಿಂತನ ಬರಹಗಳ ಸಂಕಲನವನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ. ಇದೀಗ ಅವರ ನೇತೃತ್ವದಲ್ಲಿರುವ ಉಳ್ಳಾಲ ವಲಯ ಬಂಟರ ಸಂಘದಲ್ಲಿ ಕ್ರಿಯಾಶೀಲರಾದ ಹಲವು ಮಂದಿ ಉತ್ಸಾಹಿ ಕಾರ್ಯಕರ್ತರಿದ್ದಾರೆ.
ವಲಯ ಪದಾಧಿಕಾರಿಗಳು : ಬಿ ಮೋಹನ್ ದಾಸ್ ಗಾಂಭೀರ (ಉಪಾಧ್ಯಕ್ಷ ), ಮಲ್ಲಿಕಾ ಸತೀಶ್ ಭಂಡಾರಿ (ಉಪಾಧ್ಯಕ್ಷೆ), ಆನಂದ ಶೆಟ್ಟಿ (ಪ್ರಧಾನ ಕಾರ್ಯದರ್ಶಿ), ಯಶವಂತ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ (ಜೊತೆ ಕಾರ್ಯದರ್ಶಿಗಳು), ಪ್ರವೀಣ್ ರೈ ಎಲಿಯಾರ್ (ಸಂಘಟನಾ ಕಾರ್ಯದರ್ಶಿ), ಗ್ರಾಮ ಸಮಿತಿ ಸದಸ್ಯರು : ಹರೀಶ್ ಆಳ್ವ (ಉಳ್ಳಾಲ), ಸುರೇಂದ್ರ ಶೆಟ್ಟಿ (ಪೆರ್ಮನ್ನೂರು), ಪುರುಷೋತ್ತಮ ಶೆಟ್ಟಿ (ಸೋಮೇಶ್ವರ), ಪ್ರವೀಣ್ ಶೆಟ್ಟಿ (ಕೋಟೆಕಾರು), ರಮೇಶ್ ಆಳ್ವ (ತಲಪಾಡಿ), ಗಣೇಶ್ ಶೆಟ್ಟಿ (ಕಿನ್ಯಾ), ಪ್ರಕಾಶ್ ಮಲ್ಲಿ (ಮಂಜನಾಡಿ), ರಮಾನಾಥ ಶೆಟ್ಟಿ (ಕೊಣಾಜೆ), ಶಬರೀಶ್ ಶೆಟ್ಟಿ (ಮುನ್ನೂರು), ವಿಶ್ವನಾಥ ಶೆಟ್ಟಿ (ಬೆಳ್ಮ), ಮೋಹನ್ ದಾಸ್ ಶೆಟ್ಟಿ (ಹರೇಕಳ), ಯೋಗೀಶ್ ಹೆಗ್ಡೆ (ಕಾವೂರು), ಭಾಸ್ಕರ ಶೆಟ್ಟಿ (ಬೊಳಿಯಾರು), ಸಂದೀಪ್ ಶೆಟ್ಟಿ (ಅಂಬ್ಲಮೊಗರು).
ಉಪ ಸಮಿತಿಗಳ ಪದಾಧಿಕಾರಿಗಳು : ಅರುಂಧತಿ ಶೆಟ್ಟಿ (ಮಹಿಳಾ ವಿಭಾಗ), ನಿಶಾಂತ್ ಶೆಟ್ಟಿ (ಯುವ ವಿಭಾಗ), ಚೈತ್ರಾ ಅಡ್ಯಂತಾಯ (ಸಿರಿ ಮಹಿಳಾ ಒಕ್ಕೂಟ), ಆಕಾಶ್ ಶೆಟ್ಟಿ (ಕ್ರೀಡಾ ವಿಭಾಗ), ಭಾಗ್ಯರಾಜ್ ಶೆಟ್ಟಿ (ಸಾಂಸ್ಕೃತಿಕ ವಿಭಾಗ).