ಜುಲೈ 20 ರಂದು ಬೈಂದೂರು ಬಂಟರ ಸಂಘದ ಮೂವತ್ತರ ಸಂಭ್ರಮದ ಪೂರ್ವಸಿದ್ಧತೆಯ ಸಭೆ ಜಯಶ್ರೀ ಸಭಾಭವನ ಹೆಮ್ಮಾಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮದ ಪಕ್ಷಿ ನೋಟವನ್ನು ನೀಡಿದರು. 30ರ ಸಂಭ್ರಮದ ಎಲ್ಲಾ ಸಂಚಾಲಕರು ಭಾಗವಹಿಸಿ ತಮ್ಮ ಸಿದ್ಧತೆಯ ಪೂರ್ವ ತಯಾರಿಯನ್ನು ಸಭೆಗೆ ತಿಳಿಸಿದರು.

ವಿಶೇಷವಾಗಿ ಆರ್ಥಿಕ ಕ್ರೋಡೀಕರಣ ವಿವಿಧ ಕೌಂಟರ್ಗಳ ಸಿದ್ಧತೆ, ವಸತಿ ಆಹಾರದ ವ್ಯವಸ್ಥೆ, ಕಚೇರಿ ನಿರ್ವಹಣೆ, ಸ್ವಯಂಸೇವಕ ವ್ಯವಸ್ಥೆ, ವೇದಿಕೆ ವ್ಯವಸ್ಥೆ, ಉಟೋಪಚಾರ ಕುರಿತು ಸಮಗ್ರ ಚರ್ಚೆ ನಡೆಯಿತು.