ಜೀವನದ ಕರ್ಮಯೋಗದ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಭಗವದ್ಗೀತೆಯ ಸಾರ ಮಹತ್ತರ ಪಾತ್ರವನ್ನು ವಹಿಸುತ್ತದೆ. ಭಗವದ್ಗೀತೆ ಸಾಮಾನ್ಯ ಮನುಷ್ಯನಿಗೆ ಜೀವನದ ಸೂತ್ರ, ಮಾರ್ಗದರ್ಶನ ಹಾಗೂ ನೀತಿ ಭೋಧನೆಯನ್ನು ಸಾರುತ್ತಿದೆ ಎಂದು ವಿಧ್ವಾನ್ ರಾಧಾಕೃಷ್ಣ ಭಟ್ ರವರು ವ್ಯಾಖ್ಯಾನಿಸಿದರು. ಅವರು ವೀರಕೇಸರಿ ಸಂಘದವರು ದ್ವಿತೀಯ ವರ್ಷದಲ್ಲಿ ಭಯಂದರ್ ಸೈಂಟ್ ಅಗ್ನೇಸಿಯಸ್ ಸ್ಕೂಲ್ ಸಭಾಗೃಹದಲ್ಲಿ ಜುಲೈ 20 ರಂದು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಆಯೋಜಿಸಿದ ಭಗವದ್ಗೀತಾ ಪರೀಕ್ಷಾ ಸ್ಪರ್ಧೆಗೆ ಚಾಲನೆ ನೀಡಿ ನುಡಿದರು.

ಹಲವಾರು ಅವತಾರವೆತ್ತ ಶ್ರೀಕೃಷ್ಣ, ಮಹಾಭಾರತದಲ್ಲಿ ಅರ್ಜುನನಿಗೆ ಭೋಧಿಸಿದ ಹಾಗೂ ಮಾನವನ ಜೀವನಕ್ಕೆ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆಯ ಅನುಕರಣೆಯಿಂದ ಜೀವನ ಸಾರ್ಥಕವಾಗಬಹುದು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ, ಸುಭಾಸ್ ಚಂದ್ರಭೋಸ್ ರಂತಹ ಮಹಾನ್ ಮತ್ತು ಆದ್ಯಾತ್ಮಿಕ ಗುರುಗಳು ಭಗವದ್ಗೀತೆಯ ಸಾರವನ್ನು ಪಠಿಸಿದ್ದಾರೆ. ಇದು ಹಿಂದೂ ಧರ್ಮದರಿಗೆ ಮಾತ್ರ ಸೀಮಿತವಲ್ಲ. ಜಗತ್ತಿನ ಎಲ್ಲಾ ಧರ್ಮದವರಿಗೂ ಅನ್ವಯವಾಗಬಹುದು ಎಂದು ಅವರು ತಿಳಿಸಿದರು.
ಸಮಾರಂಭಕ್ಕೆ ಅತಿಥಿಯಾಗಿ ಅಗಮಿಸಿದ ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಸಾಮಾಜಿಕ ಹಾಗೂ ಶೈಕ್ಷಣಿಕ ವಿಭಾಗದ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ತನ್ನ ಅನಿಸಿಕೆಯಲ್ಲಿ, ಸನಾತನ ಧರ್ಮದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ರಾಮಾಯಣ ಮಹಾಭಾರತದ ತತ್ವಗಳನ್ನು ನಾವು ತಿಳಿಯಬೇಕಾಗಿದೆ. ಪಾಲಕರು ತಮ್ಮ ಪೀಳಿಗೆಗಳಲ್ಲಿ ಇಂತಹ ಧರ್ಮ ವ್ಯಾಖ್ಯಾಯನದ ಭೋಧನೆಯನ್ನು ಮಾಡಬೇಕಾಗಿದೆ. ವೀರ ಕೇಸರಿ ಸಂಘದ ಅಧ್ಯಕ್ಷ ಹರೀಶ್ ರೈ ಮತ್ತು ಅವರ ಸಂಘದವರೆಲ್ಲಾ ಆಯೋಜಿಸಿದ ಭಗವದ್ಗೀತಾ ಸ್ಪರ್ಧೆಗಳಂತಹ ಯೋಜನೆಗಳಿಗೆ ನಮ್ಮ ಪೀಳಿಗೆಗಳಲ್ಲಿ ಮನಮುಟ್ಟುವಂತೆ ಪ್ರೋತ್ಸಾಹಿಸುವಲ್ಲಿ ಹಿರಿಯರಾದ ನಾವೆಲ್ಲಾ ಶ್ರಮಿಸೋಣವೆಂದರು. ವೀರ ಕೇಸರಿ ಸಂಘದವರ ಧರ್ಮ ಭೋಧನೆಯ ಇಂತಹ ಪರಿಕ್ರಮ ರಾಜ್ಯ ಹಾಗೂ ದೇಶಾವಾರುಗಳಲ್ಲಿ ಮೂಡಿಬರಲಿ ಎಂದು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರು ನುಡಿದರುವೀರ ಕೇಸರಿ ಸಂಘದ ಅಧ್ಯಕ್ಷ ಹರೀಶ್ ರೈಯವರು ಅತಿಥಿಗಳನ್ನು ಹಾಗೂ ಪರೀಕ್ಷಾ ಸ್ಪರ್ಧಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ವಸಂತಿ ಎಸ್ ಶೆಟ್ಟಿಯವರು ಪ್ರಾರ್ಥನೆಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರನಟ ಜಿ.ಕೆ ಕೆಂಚನಕೆರೆ ನಿರೂಪಿಸಿದರು. ವೇದಿಕೆಯಲ್ಲಿ ವಿಧ್ವಾನ್ ರಾಧಾಕೃಷ್ಣ ಭಟ್, ರಾಧಾಕೃಷ್ಣ ನೃತ್ಯ ಅಕಾಡೆಮಿಯ ವಿಧುಷಿ ಸುಕನ್ಯಾ ಭಟ್, ಸಂಪತ್ ಶೆಟ್ಟಿ ಪಂಜದಗುತ್ತು, ಬಿಜೆಪಿ ನೇತಾರ ಮಹೇಶ್ ಮ್ಹಾತ್ರೆ, ಮೀರಾ ದಹಾಣೂ ಬಂಟ್ಸ್ ನ ಮುಖೇಶ್ ಶೆಟ್ಟಿ ಹಾಗೂ ಸುಜಾತ ಜಿ ಶೆಟ್ಟಿ, ವಸಂತಿ ಎಸ್ ಶೆಟ್ಟಿ, ಸುಧಾಕರ್ ಶೆಟ್ಟಿ ಮಂದಾರ್ತಿ, ಸತೀಶ್ ಪೂಜಾರಿ, ಸುನಿತಾ ಪೂಜಾರಿ, ಭಾರತಿ ಅಂಚನ್, ವಿಶಾಲಾಕ್ಷಿ ಶೆಟ್ಟಿ ಮೊದಲಾದವರಿದ್ದರು.
ಸಾಣೂರು ಸಾಂತಿಂಜ ಜನಾರ್ಧನ್ ಭಟ್, ಡಾ| ಅರುಣೋದಯ ರೈ ಬಿಳಿಯೂರು ಗುತ್ತು, ಯೊಗೇಂದ್ರ ಗಾಣಿಗ, ರಾಜೇಶ್ ಕುಂದರ್, ಅರುಣ್ ಶೆಟ್ಟಿ ಪಣಿಯೂರು, ಚೇತನ್ ಶೆಟ್ಟಿ ಮೂಡಬಿದ್ರೆ, ಸೀತಾರಾಮ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದ ಯಶಸ್ವಿಯಲ್ಲಿ ರಾಜೇಶ್ ಶೆಟ್ಟಿ ಕಾಪು, ದಿನೇಶ್ ಶೆಟ್ಟಿ, ಶೈಲೇಶ್ ಶೆಟ್ಟಿ ಸೂಡಾ, ಜಗದೀಶ್ ಶೆಟ್ಟಿ ಕೆಂಚನಕೆರೆ, ಸುರೇಶ್ ಕೋಟ್ಯಾನ್, ಗೀತಾ ಶೆಟ್ಟಿ, ಶಾಂತಾ ಆಚಾರ್ಯ, ಯಜತ್ ಕೋಟ್ಯಾನ್, ಜಯೇಶ್ ಶೆಟ್ಟಿ, ರಮಾನಂದ ಶೆಟ್ಟಿ, ರೂಪಾ ಭಟ್ಕಳ್, ಉಷಾ ಶೆಟ್ಟಿ, ಸುಜಾತ ಕೋಟ್ಯಾನ್, ಪ್ರತಿಮಾ ಬಂಗೇರ, ರೇಖಾ ಬಂಜನ್, ದಿವ್ಯಾ ಶೆಟ್ಟಿ, ವಂದನಾ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಸಹಕರಿಸಿದರು.