Author: admin
ಪುತ್ತೂರು ಮಹಿಳಾ ಬಂಟರ ಸಂಘದ ಮಹಾಸಭೆ ನಡೆದಿದ್ದು, ಮುಂದಿನ 2 ವರ್ಷಗಳ ಕಾಲ ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಗೀತಾ ಮೋಹನ್ ರೈ, ಕಾರ್ಯದರ್ಶಿಯಾಗಿ ಕುಸುಮಾ ಪಿ. ಶೆಟ್ಟಿ, ಖಜಾಂಚಿಯಾಗಿ ವಕೀಲರಾದ ಅರುಣಾ ಡಿ ರೈ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾದ ಗೀತಾ ಮೋಹನ್ ರೈ ಅವರು ಬಂಟರ ಸಂಘದ ಹಿರಿಯ ನಿರ್ದೇಶಕ, ಸಹಕಾರಿ, ರಾಜಕೀಯ ಧುರೀಣ ಎಂ. ಮೋಹನ್ ರೈ ಅವರ ಪತ್ನಿ. ಇವರ ಮಗ ಮನು ಎಂ. ರೈ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರಾಗಿದ್ದು, ಹಲವು ಸಮಾಜಮುಖಿ ಕಾರ್ಯಗಳ ಮುಂದಾಳುವಾಗಿದ್ದರೆ. ಕಾರ್ಯದರ್ಶಿಯಾದ ಕುಸುಮಾ ಪಿ. ಶೆಟ್ಟಿಯವರು ಸವಣೂರು ಪದ್ಮನಾಭ ಶೆಟ್ಟಿಯವರ ಪತ್ನಿ, ಸವಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಖಜಾಂಚಿ ಅರುಣಾ ಡಿ ರೈ ವಕೀಲರಾಗಿದ್ದು, ಖ್ಯಾತ ವಕೀಲರಾದ ದಿವಾಕರ ರೈ ಅವರ ಪತ್ನಿ. ಈ ವೇಳೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತುಳುನಾಡಿನಾದ್ಯಂತ ಕಾರಣಿಕದ ಶಕ್ತಿ ಸ್ವರೂಪನಾಗಿ ನಂಬಿದ ಭಕ್ತರ ಕೈ ಹಿಡಿದು ಪೊರೆವ ದೈವವಾಗಿ, ಭಕ್ತ ಕುಲ ಕೋಟಿ ಜನರನ್ನೂ ಉದ್ದರಿಸುತ್ತಾ, ಇಷ್ಟ ಕಷ್ಟಗಳಿಗೆ ಜೊತೆ ನಿಂತು ರಕ್ಷಾ ಕವಚವಾಗಿ ಕೊರಗಜ್ಜ ದೈವ ಪೊರೆಯುತ್ತಿರುವಾಗ, ಮುಂಬಯಿಯಂತಹ ಮಹಾನಗರವನ್ನು ನಂಬಿ ಅದನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ದುಡಿಯುತ್ತಿರುವ ಅದೆಷ್ಟೋ ತುಳುನಾಡ ಭಕ್ತ ಜನರ ಆರಾಧ್ಯ ದೈವವಾಗಿ ಇಂದಿಗೂ ನಂಬಿಕೆಯನ್ನು ಮತ್ತಷ್ಟು ಬಲವಾಗಿಸಿಕೊಳ್ಳುತ್ತಿರುವ ಸ್ವಾಮಿ ಕೊರಗಜ್ಜನ ಕುರಿತಾದ ತಾಳಮದ್ದಳೆಯ ಕಾರ್ಯಕ್ರಮ ಆಯೋಜನೆಗೊಳಿಸಿದ ಉದ್ದೇಶ ನಿಜವಾಗಿಯೂ ಭಕ್ತರ ಭಕ್ತಿಗೆ ಪುಷ್ಟಿ ನೀಡಿದಂತಾಗಿದೆ ಎಂದು ರೀಜೆನ್ಸಿ ಬ್ಯಾಂಕ್ವೆಟ್ ಹಾಲ್ ನಾಲಾಸೋಪಾರದಲ್ಲಿ ನಡೆದ ಸ್ವಾಮಿ ಕೊರಗಜ್ಜನ ತಾಳಮದ್ದಳೆ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನೆರವೇರಿಸುತ್ತಾ ಶಶಿಧರ್ ಕೆ ಶೆಟ್ಟಿ ಇನ್ನಂಜೆಯವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಂಕರ್ ಆಳ್ವ ಅವರು ಮಾತನಾಡುತ್ತಾ, ಕಥೆ ಸಂಭಾಷಣೆ ಎಲ್ಲವೂ ಕೂಡಾ ಅರ್ಥಪೂರ್ಣವಾಗಿದ್ದು ತಾಳಮದ್ದಳೆ ವೀಕ್ಷಕರಿಗೆ ಹೊಸ ಅನುಭವದೊಂದಿಗೆ ಕೊರಗಜ್ಜನ ಬಗೆಗಿದ್ದ ಭಕ್ತಿ ಭಾವ ಖಂಡಿತವಾಗಿಯೂ ಮತ್ತಷ್ಟು ವೃದ್ಧಿಯಾಗುತ್ತದೆ. ತಾಳಮದ್ದಳೆಯ ಆಯೋಜನೆಯ ಪಾತ್ರಧಾರಿಗಳಿಗೂ ಸೂತ್ರಧಾರಿಗಳಿಗೂ ನೆರೆದ ಸರ್ವರಿಗೂ…
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ನೂತನ ಸಂಚಾಲಕರಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಸಹ ಸಂಚಾಲಕರಾಗಿ ಸಾಜ ರಾಧಾಕೃಷ್ಣ ಆಳ್ವ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ನೂತನ ಸಂಚಾಲಕರಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಸಹ ಸಂಚಾಲಕರಾಗಿ ಮಾಜಿ ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಜುಲೈ 16 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿಯಲ್ಲಿ ನೂತನ ಆಯ್ಕೆ ನಡೆಯಿತು. ನೂತನ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರ ಹೆಸರನ್ನು ಮಾತೃ ಸಂಘದ ಪುತ್ತೂರು ಘಟಕದ ನಿಕಟಪೂರ್ವ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು ಮತ್ತು ನೂತನ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವರವರ ಹೆಸರನ್ನು ಮಾತೃ ಸಂಘದ ಪುತ್ತೂರು ಘಟಕದ ನಿಕಟಪೂರ್ವ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲುರವರು ಸೂಚಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ…
ಸವಾಲುಗಳು ಜೀವನದ ಅವಿಭಾಜ್ಯ ಅಂಗ. ಸವಾಲುಗಳನ್ನು ಸ್ವೀಕರಿಸುವ ಕಲೆಯನ್ನು ಕಲಿಯುವುದು ಕಷ್ಟ. ಆದರೆ ಅವುಗಳನ್ನು ಸ್ವೀಕರಿಸುತ್ತ ಹಲವು ಸಲ ನಾವು ಯಶಸ್ಸನ್ನು ಕಾಣುವೆವು ಎಂಬ ಭರವಸೆಯಲ್ಲಿ ಮತ್ತು ಕೆಲವು ಸಲ ನಿರೀಕ್ಷಿತ ಯಶಸ್ಸು ದೊರಕದಿದ್ದರೂ ಜೀವನವನ್ನು ಧನಾತ್ಮಕ ಚಿಂತನೆಯಲ್ಲಿ ಸಾಗಿಸಿದರೆ ನಾವು ಉತ್ತಮ ಮಾನವರಾಗುವ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ. ಸವಾಲುಗಳನ್ನು ಎದುರಿಸುವಾಗ ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳು, ಆತಂಕಗಳು ಅನಿರೀಕ್ಷಿತವಾಗಿ ಕಾಣಿಸಿದರೂ ಅವುಗಳು ಸಹಜ. ಆದರೆ ಎಲ್ಲೋ ಓದಿದಂತೆ ‘ಹೊಸ ಸಾಗರಗಳನ್ನು ಅನ್ವೇಷಣೆ ಮಾಡಬೇಕಾದರೆ ದೃಷ್ಟಿಯಲ್ಲಿ ತೀರವನ್ನು, ಕಾಣದೆ ದೂರಕ್ಕೆ ಹೋಗಬೇಕಾದ ಧೈರ್ಯ ನಮ್ಮಲಿರಬೇಕು’ ಇಂಥ ಧೈರ್ಯದಿಂದಲೇ ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಇವರ ಜೀವನ ದಂತಕಥೆಗಳಾದವು. ಕ್ರಿಕೆಟಿನ ದಂತಕಥೆ ಸುನಿಲ್ ಗಾವಸ್ಕರ್ ರವರ ಸಾಧನೆಯನ್ನು ಮೆಲುಕು ಹಾಕುವಾಗ ಹಿಂದಿನ ಪ್ರಸಿದ್ಧ ವಾಕ್ಯದ ನೆನಪಾಗುತ್ತದೆ. ‘ಎಲ್ಲಾ ಅಮೋಘ ಸಾಧನೆಗಳು ಒಂದೊಮ್ಮೆ ಅಸಾಧ್ಯವೆಂದು ಪರಿಗಣಿಸಲ್ಪಡುತ್ತಿತ್ತು. ಡಾನ್ ಬ್ರಾಡ್ಮನ್ ನ ವಿಶ್ವದಾಖಲೆಯನ್ನು ಒಂದು ದಿನ ಯಾರಾದರೂ ಮುರಿಯುವರೆಂದು…
ದೈವ ಎಂದರೇನು? ಅದರ ಆರಾಧನೆ ಹೇಗೆ? ಅದರ ಕಟ್ಟು ಪಾಡು ಯಾವುದು? ದೈವದ ಚಾಕಿರಿ ಹೇಗೆ? ಆ ದೈವದ ವಿಚಾರ ಹೇಗೆ?ಇದ್ಯಾವುದು ತಿಳಿಯದೇ ಮ್ಯಾಚಿಂಗ್ ಶಾಲು-ಮುಂಡು ಹಾಕಿ, ಯಾರೋ ಹೇಳಿದ ಮದಿಪು ರೆಕಾರ್ಡ್ ಮಾಡಿ, ಪುಸ್ತಕ ಓದಿ, ಯೂಟ್ಯೂಬ್ ನಿಂದ ಹುಡುಕಿ ಬಾಯಿ ಪಾಠ ಮಾಡಿ ದೈವದ ಎದುರು ಸರಾಗವಾಗಿ ಹೇಳುವ ನೀವುಗಳು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ? ನೀವು ಇಂದು ದೈವರಾಧನೆಗೆ ಮಾಡುವ ಅವಹೇಳನ ಅಲ್ಲವೇ? ಈ ರೀತಿ ಮಾಡುವ ನಿಮಗೆ ಸ್ವಂತಿಕೆ ಅನ್ನುವುದು ಇಲ್ಲವೇ? ಒಂದು ಅಕ್ಷರ ಸ್ವಂತ ಬಳಸದೇ ಅನ್ಯರ ಮದಿಪು ಅನುಕರಣೆ ಮಾಡುವ ನೀವು ದೈವರಾಧನೆಗೆ ಮಾಡುವ ಅಪಚಾರ ಅಲ್ಲವೇ? ಇನ್ನೊಬ್ಬರು ಮಾಡುವ, ಬಾಯಿ ಪಾಠ ಮಾಡಿ ಹೇಳುವ ನೀವು, ಯಾವುದನ್ನು ಎಲ್ಲಿ ಹೇಳಬೇಕು, ಹೇಗೆ ಹೇಳಬೇಕು ಅನ್ನುವ ಪರಿಜ್ಞಾನ ನಿಮಗೆ ಇಲ್ಲವೇ? ಈ ರೀತಿ ಮಾಡಿ ನೀವು ಹೇಳುವ ಆ ಮದಿಪು ದೈವಗಳಿಗೆ ಅರ್ಪಣೆ ಆದೀತೇ? ದೈವಾರಾಧನೆ ಬಗ್ಗೆ ಸಂಪೂರ್ಣ ತಿಳಿದವರು ಯಾರೂ ಇಲ್ಲ. ಆದರೆ…
ಅಗ್ನಿವೀರ್ ನಂತಹ ಯೋಜನೆಗಳಲ್ಲಿ ಯುವ ಜನರು ಸೇರಿಕೊಂಡು ಸೇವೆಯಲ್ಲಿ ಸ್ವಲ್ಪ ವರ್ಷ ಸೇವೆ ಮಾಡಿ ಬಂದರೆ ಆತನ ಜೀವನ ಪೂರ್ತಿ ಶಿಸ್ತಿನಲ್ಲಿ ಬದುಕುತ್ತಾನೆ. ಎಲ್ಲಾ ಪ್ರಜೆಗಳು ಸೇನೆಯ ತರಬೇತಿ ಪಡೆದಾಗ ಶಿಸ್ತಿನ ಸ್ವಸ್ಥ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಐಲೇಸಾ ಸಂಸ್ಥೆ ಸಂದೀಪ ನಂದಾದೀಪದಂತೆ ಕಾರ್ಯಕ್ರಮ ಮೂಲಕ ಸೈನಿಕರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡಿರುವುದು ಅನುಕರಣೀಯ ಎಂದು ವಾಯುಸೇನೆಯ ಮಾಜಿ ವಾರಂಟ್ ಆಫೀಸರ್ ಆತ್ರಾಡಿ ಸುರೇಶ ಹೆಗ್ಡೆ ಅಭಿಪ್ರಾಯಪಟ್ಟರು. ಬೆಂಗಳೂರಿನ ಐಲೇಸಾ ದಿ ವಾಯ್ಸ್ ಆಫ್ ಒಶಿಯನ್ ಸಂಸ್ಥೆ ಜುಲೈ 14ರಂದು ಹುತಾತ್ಮ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ರಿಗೆ ಸಮರ್ಪಿಸಿದ ‘ನಂದಾದೀಪ ಸಂದೀಪ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿ, ಐಲೇಸಾ ಹೆಸರು ಕೇಳಿದ್ದೆ ಆದರೆ ಅವರ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ಆದರೆ ಈ ಕಾರ್ಯಕ್ರಮ ನೋಡಿ ಸದಾ ನಿಮ್ಮ ಜತೆಗೆ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಇಂತಹ ಕಾರ್ಯಕ್ರಮಗಳು ಸೈನಿಕರ ಮತ್ತು ಅವರ ಮನೆಯವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಶಂಸಿದರು.…
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ವತಿಯಿಂದ ಜುಲೈ 17 ರಂದು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಂಗಣದ ವಠಾರದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರ ನೇತೃತ್ವದಲ್ಲಿ “ವನಮಹೋತ್ಸವ” ಆಚರಿಸಲಾಯಿತು.ಈ ಸಂದರ್ಭ ಕ್ಲಬ್ಬಿನ ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಲಯನ್ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಅಚ್ಲಾಡಿ, ಮಾಜಿ ಅಧ್ಯಕ್ಷರಾದ ಲಯನ್ ಅಡ್ವೋಕೇಟ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಹಾಗೂ ಲಯನ್ ಪ್ರೊ| ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿ, ಲಯನ್ ಎಮ್ ಜೆ ಎಫ್ ವಸಂತ ಶೆಟ್ಟಿ ಅಚ್ಲಾಡಿ, ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ, ಲಯನ್ ಕೆ ಸುಭಾಶ್ಚಂದ್ರ ಶೆಟ್ಟಿ, ಲಯನ್ ಸುಗುಣಾಕರ್ ಶೆಟ್ಟಿ, ಲಯನ್ ರಾಜೀವ ಶೆಟ್ಟಿ ಅಚ್ಲಾಡಿ, ಲಯನ್ ಕೂರಾಡಿ ಸಂತೋಷ್ ಶೆಟ್ಟಿ, ಲಯನ್ ಅಚ್ಲಾಡಿ ಸುಧಾಕರ್ ಶೆಟ್ಟಿ, ಲಯನ್ ಗುಂಡು ಶೆಟ್ಟಿ ಮಾನಂಬಳ್ಳಿ, ಲಯನ್ ಉಲ್ಲಾಸ್ ಶೆಟ್ಟಿ ಕಾವಡಿ, ಲಯನ್…
ರಾಜ್ಯದ ರಾಜಧಾನಿ ಬೆಂಗಳೂರು ವಲಯದ ಬಲು ಪ್ರತಿಷ್ಠಿತ ಬಂಟರ ಸಂಘದ ವಿವಿಧ ಸ್ಥಾನಗಳಿಗೆ ಘಟಾನುಘಟಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದು, ಸಂಘದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹೆಸರಾಂತ ವಾಸ್ತು ವಿಶೇಷ ತಜ್ಞ ಅಶೋಕ್ ಕುಮಾರ್ ಶೆಟ್ಟಿ ಎಚ್ ಅವರೂ ಒಬ್ಬರು. ಸುಮಾರು ಮೂರು ದಶಕಗಳಿಂದ ಸಂಘದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ಕೋಶಾಧಿಕಾರಿ ಪದಕ್ಕೆ ಸಮರ್ಥ ಅಭ್ಯರ್ಥಿ ಎಂದು ಬೆಂಗಳೂರು ಬಂಟ ಸಮುದಾಯದ ಜನರು ಆಡಿ ಕೊಳ್ಳುತ್ತಿದ್ದಾರೆ. ದಿವಂಗತ ಮಹಾಬಲ ಶೆಟ್ಟಿ ಮಾಲಾಡಿ ಹಾಗೂ ಹೆಗ್ಗುಂಜೆ ಶ್ರೀಮತಿ ಜಲಜಾಕ್ಷಿ ಎಂ ಶೆಟ್ಟಿ ದಂಪತಿಯ ಸುಪುತ್ರರಾದ ಶೆಟ್ಟರು ಬಂಟರ ಸಮುದಾಯಕ್ಕೆ ಮಾತ್ರವಲ್ಲದೇ ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಗುರುತಿಸಿ ಕೊಂಡವರು. ಸಂಘಟನೆ, ಸಮಾಜ ಸೇವೆಗೆ ಹೆಸರು ಗಳಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ತನ್ನ ಪ್ರಾಥಮಿಕ, ಫ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕ್ರಮವಾಗಿ ಮಂದಾರ್ತಿ, ತೆಕ್ಕಟ್ಟೆ ಮತ್ತು ಉಡುಪಿಯಲ್ಲಿ ಪೂರೈಸಿ ಮುಂದೆ ವಾಸ್ತು ಶಾಸ್ತ್ರ ಸಂಬಂಧಿ ಆಧುನಿಕ ವಿಧಾನ ಶಿಕ್ಷಣವನ್ನು ಪ್ರತಿಷ್ಠಿತ…
ವಿದ್ಯಾರ್ಥಿ ವೇತನ ನೀಡುವ ಉದ್ದೇಶ ಶಿಕ್ಷಣಕ್ಕೆ ಸ್ಫೂರ್ತಿ ನೀಡುವುದು, ಇದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಕಾರ್ಯವಾಗಬೇಕು. ಸಮಾಜ ಸುಧಾರಣೆ ಮಾಡುವ ಒಳ್ಳೆಯ ಕಾರ್ಯವನ್ನು ಗುರುಪುರ ಬಂಟರ ಮಾತೃ ಸಂಘ ಮಾಡುತ್ತಿದೆ. ನಕಾರಾತ್ಮಕ ಚಿಂತನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕೃತಿಯ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು. ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ವಾಮಂಜೂರು ಚರ್ಚ್ ಹಾಲ್ ನಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ, ಬಂಟ ಯುವತಿಯರ ಸಮಾವೇಶ- ಯುವ ಸಂಗಮ, 2024-27 ರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ,…
ಯಕ್ಷಧ್ರುವ ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ “ಪಟ್ಲ ಯಕ್ಷಾಶ್ರಯ” ಯೋಜನೆಯ 30 ನೇ ಮನೆಯನ್ನು ಫಲಾನುಭವಿ ಶ್ರೀ ಕಟೀಲು ಮೇಳದ ಒಂದನೇ ಮೇಳದ ಕಲಾವಿದ ಪ್ರಶಾಂತ್ ಕಲ್ಲಡ್ಕರವರಿಗೆ ಹಸ್ತಾಂತರಿಸಲಾಯಿತು. ಯಕ್ಷಧ್ರುವ ಪಟ್ಲ ಟ್ರಸ್ಟಿನ ಮಹಾದಾನಿ, ಪ್ರತಿಷ್ಠಿತ ಎಂ ಆರ್ ಜಿ ಸಮೂಹ ಸಂಸ್ಥೆಗಳ ಸಿಎಂಡಿ ಡಾ| ಕೊರಂಗ್ರಪಾಡಿ ಪ್ರಕಾಶ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಈ ಮನೆಯ ಕೀಲಿ ಕೈ ಹಸ್ತಾಂತರ ಸಂದರ್ಭದಲ್ಲಿ ಟ್ರಸ್ಟಿನ ಬಂಟ್ವಾಳ ಘಟಕದ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ಅಡ್ಯಾರ್ ಹಾಗೂ ಶ್ರೀಕಾಂತ್ ಅರಳ ಉಪಸ್ದಿತರಿದ್ದರು.