Author: admin

ನಾಡಿನೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಕಳೆಗಟ್ಟಿರುವ ಸಂದರ್ಭದಲ್ಲಿ, ಅಕ್ಟೋಬರ್ 2ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಶಾರದ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾ ನಗರ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ನ ವಿದ್ಯಾರ್ಥಿಗಳು ಭಕ್ತಿ ಸುಧೆಯ ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ರವಿ ಜಿ, ಹೇಮಂತ್ , ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಮತ್ತು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಂಗ್ಲ ಭಾಷೆ ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

Read More

ನಿಟ್ಟೆ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿದ್ಯಾರ್ಥಿಗಳು ನಿಟ್ಟೆಯ ಪರ್ಪಲೆಯಲ್ಲಿರುವ ಕ್ರಿಸ್ತ ಸೇವಕೀ ಆಶ್ರಮವನ್ನು ಸಂದರ್ಶಿಸಿದರು. ಅಲ್ಲಿನ ನಿವಾಸಿಗಳಿಗೆ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಬೆರೆತರು. ಇದೇ ಸಂದರ್ಭ ಆಶ್ರಮದ ನಿವಾಸಿಗಳಿಗೆ ವಿದ್ಯಾರ್ಥಿಗಳು ತಂದ ದಿನಸಿ ಸಾಮಾಗ್ರಿಗಳನ್ನು ಹಂಚಿ ಖುಷಿಪಟ್ಟರು. ಇದೇ ಸಂದರ್ಭ ಸಂಸ್ಥೆಯ ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಘಟಕಾಧಿಕಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಶೈಲೇಶ್, ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಕೀರ್ತಿ ಆಚಾರ್ಯ, ಹಿಂದಿ ಉಪನ್ಯಾಸಕಿ ಶ್ರೀಮತಿ ಅಶ್ವಿನಿ, ಕ್ಷೇಮಪಾಲಕರಾದ ಸುಕೇಶ್, ಮಂಜುನಾಥ್, ಚಾಲಕರಾದ ಚಂದ್ರಶೇಖರ್ ಮತ್ತು ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು.

Read More

ದುಷ್ಟ ಸಂಹಾರಕ್ಕಾಗಿಯೇ ಅವತರಿಸಿದ ದುರ್ಗಾ ಮಾತೆಯ ಪೂಜನೀಯ ಪುಣ್ಯ ಪರ್ವವಿದು. ನವರಾತ್ರಿ ಉತ್ಸವದಲ್ಲಿ ಭಕ್ತರು ಒಂಬತ್ತು ರೂಪಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಲೋಕ ಕಲ್ಯಾಣಾರ್ಥವಾಗಿ ಕೂಡಾ ಇದು ಮಹತ್ವದ್ದು. ವಿಶೇಷವಾಗಿ ನವರಾತ್ರಿ ಈ ಸುಸಂದರ್ಭದಲ್ಲಿ ಪುಣೆ ಬಂಟರ ಸಂಘದ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ವಿಶೇಷ ರೀತಿಯ ಸಂಪ್ರದಾಯದ ಪ್ರಕಾರ ಇಲ್ಲಿ ದುರ್ಗಾ ಪೂಜೆ, ಮತ್ತು ತಮ್ಮ ಪ್ರಕೃತಿಯೊಂದಿಗಿನ ಬಾಂಧವ್ಯದ ಆಚರಣೆಯನ್ನು ನೋಡುವ ಭಾಗ್ಯ ಸಿಕ್ಕಿದೆ. ಅದೇ ರೀತಿ ನನ್ನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ನೀಡಿದ ನವದುರ್ಗಾ ಪ್ರಶಸ್ತಿಗೆ ಋಣಿಯಾಗಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ಸೇವಾ ಸಂಸ್ಥೆಯ ಅನಾಥ ಮಕ್ಕಳಿಗೆ ಅರ್ಪಣೆ ಮಾಡುತಿದ್ದೇನೆ. ಅನಾಥ ಮತ್ತು ಅಂಗವಿಕಲ ಮಕ್ಕಳನ್ನು ಮಾನಸಿಕ ಸಮತೋಲನಕ್ಕೆ ತಂದು, ಸಾಮಾಜಿಕ ಚಿಂತನೆಯನ್ನು ತಿಳಿ ಹೇಳುವ ಮೂಲಕ ಅಜ್ಞಾನದಿಂದ ಜ್ಞಾನದೆಡೆಗೆ ಪರಿವರ್ತಿಸಿ, ಸ್ವಪರಿಶ್ರಮದಿಂದ ಸಬಲೀಕರಣಗೊಳಿಸಿ ಸ್ವಾವಲಂಭಿಗಳಾಗಿ ಮಾಡುವುದರಲ್ಲಿ ನಮಗೆ ಆತ್ಮ ತೃಪ್ತಿ ಇದೆ. ಇದು ನಮಗೆ ಸವಾಲಿನ ಪ್ರಶ್ನೆಯಾದರೂ ಹಲವಾರು ವರ್ಷಗಳಿಂದ ಈ ಅನಿಕೇತ್ ಸೇವಾಭಾವಿ ಸಂಸ್ಥೆ…

Read More

ಒಳ್ಳೆಯತನ ಎಂದರೆ ಮಾನವೀಯ ಗುಣಗಳನ್ನು ಹೊಂದಿರುತ್ತದೆ. ಅಂತಹ ಮಾನವೀಯ ಗುಣಗಳೆಂದರೆ ಸಹಕಾರ, ಸಹಾಯ, ದಯೆ, ಕರುಣೆ, ಸಹಾನುಭೂತಿ, ಸಾಮಾಜಿಕ ಪ್ರಜ್ಞೆ, ಭಾತೃತ್ವ, ಪ್ರೀತಿ, ಸೇವಾ ಮನೋಭಾವನೆ, ಹೃದಯ ವೈಶಾಲ್ಯತೆ. ಇಂತಹ ಎಲ್ಲಾ ಗುಣಗಳನ್ನು ಹೊಂದಿರುವ ನಮ್ಮ ಬಂಟ ಸಮಾಜದ ಮುಂದಿನ ಯುವ ಪೀಳಿಗೆಯ ಅಭಿವೃದ್ದಿ ಹೇಗೆ ಎಂಬದನ್ನು ಅರಿತು ಮುನ್ನಡೆಯಬೇಕಾದ ಸವಾಲು ನಮ್ಮ ಸಮಾಜದ ಮುಂದಿದೆ. ಸನಾತನ ಭಾರತೀಯ ಸಂಸ್ಕ್ರತಿ, ಹಿಂದುತ್ವದ ತತ್ವದ ಮೇಲೆ ನಿಂತಿದೆ. ಧಾರ್ಮಿಕ ಆಚರಣೆಗಳ ಮಹತ್ವ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮಕ್ಕಳಿಗೆ ಮೂಡಿಸುವ ಕಾರ್ಯ ಕೂಡಾ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಸಂಘ ಸಂಸ್ಥೆಗಳ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ನಮ್ಮಬಂಟರ ಸಾಂಘಿಕ ಶಕ್ತಿಯಿಂದ ಇದು ಸಾಧ್ಯ ಎಂಬುದನ್ನು ಅರಿತಿದ್ದೇವೆ. ಈ ಬಗ್ಗೆ ನಾವು ಬಂಟರ ಸಂಘ ಮುಂಬಯಿ ಮತ್ತು ನನ್ನ ಸೇವಾ ಸಂಸ್ಥೆ ಸಂಜೀವಿನಿ ಟ್ರಸ್ಟ್ ಮೂಲಕ ಬಹಳಷ್ಟು ಕಾರ್ಯಗಳನ್ನು ಮಾಡುತ್ತಿದ್ದೇವೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಕೂಡಾ ಈ ಕಾರ್ಯ ಮಾಡುತ್ತಿದೆ ಎಂದು…

Read More

ಜನ್ಮ ಕ್ರಿಯೇಷನ್ ಪುತ್ತೂರು ಅರ್ಪಿಸುವ ಉದ್ಯಮಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಹರ್ಷಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿ ಬಂದಿರುವ ಇರ್ದೆ ಶ್ರೀ ವಿಷ್ಣುಮೂರ್ತಿ ದೇವರ ಕುರಿತಾದ ಮೊಟ್ಟ ಮೊದಲ ತುಳು ಭಕ್ತಿಗೀತೆ ‘ಇರ್ದೆ ವಿಷ್ಣುಮೂರ್ತಿ’ ಇದರ ಪೋಸ್ಟರನ್ನು ಶಾಸಕ ಅಶೋಕ್ ಕುಮಾರ್ ರೈ ಮತ್ತು ಸುಮಾ ಅಶೋಕ್ ರೈಯವರು ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಡಾ| ಹರ್ಷಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ರೈ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಾಶಿವ ರೈ ಮಠಂತಬೆಟ್ಟು, ದೇವಸ್ಥಾನದ ವ್ಯವಸ್ಥಾಪಕ ಸಂತೋಷ್ ಕುಮಾರ್ ರೈ ಕೆದಿಕಂಡೆ ಗುತ್ತು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಅಕ್ಟೋಬರ್ 2ರಂದು ಇರ್ದೆಯಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಅನು ಆಡಿಯೋಸ್ ಯೌಟ್ಯೂಬ್ ಚಾನೆಲ್ ನಲ್ಲಿ ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ. ಚರಣ್ ಉಪ್ಪಳಿಗೆ, ಸಾರಥ್ಯ ಶೆಟ್ಟಿ, ಅಜಯ್ ರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿರುವ…

Read More

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಸೆಪ್ಟೆಂಬರ್ 27 ರಂದು ಯಕ್ಷಕಲಾ ಪೊಳಲಿ ಇದರ 30 ನೇ ವರ್ಷದ ಪ್ರಯುಕ್ತ ತ್ರಿಂಶತಿ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಯಕ್ಷಕಲಾ ಪೋಷಕ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಲ್ಲದೇ ಯಕ್ಷಗಾನ ರಂಗದ ವಿಶಿಷ್ಟ ಸಾಧನೆಗಾಗಿ ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಹಾಗೂ ಲೇಖಕ ಡಾ. ವಸಂತಕುಮಾರ ಪೆರ್ಲ…

Read More

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗಿದ ಸೌಹಾರ್ದ ಸಹಕಾರಿಗಳ ರಜತ ಮಹೋತ್ಸವ ಸಮಾವೇಶ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತ ಆರ್‌ಬಿಐನ ಮಾಜಿ ನಿರ್ದೇಶಕರೂ ಆಗಿರುವ ಪುತ್ತೂರಿನ ಡಾ| ಅಗರಿ ನವೀನ್ ಭಂಡಾರಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಅನೇಕ ಗಣ್ಯರು ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಚಿತ್ರ, ವರದಿ : ಉಮಾಪ್ರಸಾದ್ ರೈ

Read More

ಮುಂಬೈ: ಮುಂಬೈ ವಿದ್ಯಾಲಯ, ಕನ್ನಡ ವಿಭಾಗವು ಶೈಕ್ಷಣಿಕ ಸೇವೆಯೊಂದಿಗೆ ಮುಂಬಯಿನ ಅನೇಕ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ ಎನ್ನಲು ಸಂತೋಷವಾಗುತ್ತದೆ. ವಿಭಾಗವು ಎಲ್ಲರ ಜೊತೆ ಸೇರಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಮುಂಬೈಯಲ್ಲಿರುವ ಸಂಘ -ಸಂಸ್ಥೆಗಳು ತಮ್ಮನ್ನು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇಶದ ಯಾವುದೇ ಭಾಗದಲ್ಲಿ ಈ ಪ್ರಕ್ರಿಯೆ ಇಲ್ಲ. ಮುಂಬೈಯ ಸಂಘ –ಸಂಸ್ಥೆಗಳು ಮಾಡುತ್ತಿರುವ ಕಾರ್ಯಗಳು ಅಪೂರ್ವವಾದುದು. ಮುಂಬೈಯಲ್ಲಿ ಈಗ ಶತಕೋತ್ತರ ಸಂಭ್ರಮದಲ್ಲಿರುವ ಸಂಸ್ಥೆಗಳನ್ನು ಗೌರವಿಸಲು ಸಂತೋಷವಾಗುತ್ತದೆ. ಸುಮಾರು 147 ವರ್ಷಗಳಷ್ಟು ಹಳೆಯದಾದ ಶ್ರೀಮದ್ಭಾರತ ಮಂಡಳಿ, ಶತ ಸಂಭ್ರಮದಲ್ಲಿರುವ ಬಿ. ಎಸ್. ಕೆ .ಬಿ ಅಸೋಸಿಯೇಷನ್, ದೇವಾಡಿಗ ಸಂಘ, ಮೈಸೂರು ಅಸೋಸಿಯೇಷನ್, ಬಂಟರ ಸಂಘ ಈ ಸಂಸ್ಥೆಗಳನ್ನು ಗೌರವಿಸುವುದು ಸಂತೋಷವನ್ನು ನೀಡಿದೆ. ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಪ್ರಕ್ರಿಯೆಯನ್ನು ವಿಭಾಗ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇಂದು ಈ‌ ಕಾರ್ಯಕ್ರಮವನ್ನು ಅಸೀಮ ಸಾಧಕ, ತಾರಾ…

Read More

ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಡುಪಿಯ ವಿ-ರೀಚ್ ಅಕಾಡೆಮಿಯ ಮುಖ್ಯಸ್ಥ ಸಿ.ಎಸ್ ಸಂತೋಷ್ ಪ್ರಭು ಇವರಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು. ಪ್ರಸ್ತುತ ವಾಣಿಜ್ಯ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ತಿಳಿಸುತ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಟ್ಟರು. ಇದೇ ಸಂದರ್ಭ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಸಾಹಿತ್ಯ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಶೈಲೇಶ್ ಉಪಸ್ಥಿತರಿದ್ದರು.

Read More

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವತಿಯಿಂದ 5ನೇ ವರ್ಷದ ಶ್ರೀ ಶಾರದಾ ಪೂಜೆಯು ಕಾಲೇಜಿನ ಜಸ್ಟಿಸ್ ಕೆ. ಎಸ್. ಹೆಗ್ಡೆ ಕೇಂದ್ರ ಗ್ರಂಥಾಲಯದಲ್ಲಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಗ್ರಂಥಾಲಯವನ್ನು ಮೈಸೂರು ದಸರಾ ಶೈಲಿಯ ಗೊಂಬೆಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ದೀಪಗಳು, ಆಯುರ್ವೇದ ಗ್ರಂಥಗಳು, ಫಲಪುಷ್ಪ ಹಾಗೂ ರಂಗೋಲಿಗಳಿಂದ ಇಡೀ ವಾತವರಣವನ್ನು ಹಬ್ಬದ ಆಚರಣೆಗಾಗಿ ಸಜ್ಜುಗೊಳಿಸಲಾಗಿತ್ತು. ಮುದ್ದು ಮಕ್ಕಳ ಕಲರವ ಮತ್ತು ವಿದ್ಯಾರ್ಥಿಗಳ ಸಾಂಪ್ರದಾಯಿಕ ವೇಷಭೂಷಣವು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು. ಪೂಜಾ ವಿಧಿಯಲ್ಲಿ ದೇವಿ ಸ್ತೋತ್ರ ಪಾರಾಯಣ, ಭಜನೆ, ಕುಂಕುಮಾರ್ಚನೆ, ಶಾರದಾ ಪೂಜೆ, ವಾಚನ-ಪ್ರವಚನ, ರಸಪ್ರಶ್ನೆ, ಸಂಖ್ಯಾ ಬಂಧ (ಸುಡೋಕು), ಅಷ್ಟಾವಧಾನ ಸೇವೆ ಹಾಗೂ ಪ್ರಸಾದ ವಿತರಣೆ, ವಂದೇ ಮಾತರಂ ನಡೆಯಿತು. ಆಳ್ವಾಸ್ ಪದವಿ ಕಾಲೇಜು, ಅಂತೆಯೇ ಆಳ್ವಾಸ್ ಪದವಿ ಕಾಲೇಜಿನ ಗ್ರಂಥಾಲಯದಲ್ಲಿ ನೂತನ ಶಾರದಾ ಬಿಂಬದ ಪ್ರತಿಷ್ಠಾಪನೆಯೊಂದಿಗೆ ಶಾರದಾ ಪೂಜೆ ನಡೆಯಿತು. ಅನಂತ ಪದ್ಮನಾಭ ಅಸ್ರಣ್ಣರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.…

Read More