Author: admin
ಮುಂಬಯಿಯ ಪ್ರಸಿದ್ಧ ಕಲಾ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಚಾಲಕತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಶ್ರಯದಲ್ಲಿ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಮಹಿಳಾ ಯಕ್ಷಗಾನ ತಾಳಮದ್ದಳೆ ತಂಡದ ಮುಂಬಯಿ ಪ್ರವಾಸದ ಸರಣಿ ಯಕ್ಷಗಾನ ತಾಳಮದ್ದಳೆಯ ಉದ್ಘಾಟನೆ ಕಾರ್ಯಕ್ರಮವು ಜುಲೈ 6 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸಂಕುಲದಲ್ಲಿರುವ ಶ್ರೀ ವಿಷ್ಣುಮೂರ್ತಿ ಜ್ಞಾನ ಮಂದಿರ ಸಭಾಂಗಣದಲ್ಲಿ ನಡೆಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಯುವ ಜನರು, ಮಹಿಳೆಯರು ಇಂದು ಯಕ್ಷಗಾನಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದರೊಂದಿಗೆ ಯಕ್ಷಗಾನ ಕಲಿತು ಯಕ್ಷಗಾನ ಪ್ರದರ್ಶಿಸಲು ಮುಂದಾಗಿರುವುದು ಯಕ್ಷಗಾನಕ್ಕೆ ಯಾವುದೇ ಸಂಕಷ್ಟವಿಲ್ಲ ಎಂಬುದನ್ನು ತೋರಿಸುತ್ತದೆ. ಕಲೆ, ಕಲಾವಿದರನ್ನು ಗೌರವಿಸಿ ಸಹಕರಿಸುವುದು ಮುಂಬಯಿ ತುಳು ಕನ್ನಡಿಗರ ಹೆಗ್ಗಳಿಕೆ ಎಂದರು. ಬಂಟರ ಸಂಘ ಮುಂಬಯಿ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನಾ…
ಕಾವೂರು ಬಂಟರ ಸಂಘದ 23 ನೇಯ ವಾರ್ಷಿಕ ಮಹಾಸಭೆಯು ಜುಲೈ 7 ರಂದು ಸಂಜೆ ಕಾವೂರು ಸಹಕಾರ ಭವನದಲ್ಲಿ ನಡೆಯಿತು. ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಡಾ ಕೆ ಪ್ರಕಾಶ್ ಶೆಟ್ಟಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ತ್ರಿಶೂಲ್ ಶೆಟ್ಟಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಾ ವೈ ಭರತ್ ಶೆಟ್ಟಿ, ಜೈರಾಜ್ ಬಿ ರೈ, ಟಿ ಪ್ರವೀಣ್ ಚಂದ್ರ ಆಳ್ವ, ಸಿಎ ರಾಮ್ ಮೋಹನ್ ರೈ, ವಸಂತ್ ಶೆಟ್ಟಿ, ರವಿರಾಜ್ ಶೆಟ್ಟಿ ನಿಟ್ಟೆ, ಡಾ ಪ್ರವೀಣ್ ಕುಮಾರ್ ರೈ ಉಪಸ್ಥಿತರಿದ್ದರು.
ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ V ರ ಪ್ರಾಂತೀಯ ಅಧ್ಯಕ್ಷರಾಗಿ, ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಅಡ್ವೋಕೇಟ್ ಬನ್ನಾಡಿ ಸೋಮನಾಥ ಹೆಗ್ಡೆ ಇವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್ ನಿಯುಕ್ತಿಗೊಳಿಸಿದ್ದಾರೆ. ಬನ್ನಾಡಿ ಸೋಮನಾಥ ಹೆಗ್ಡೆ ಅವರು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕಧ್ಯಕ್ಷರಾಗಿ, ಲಯನ್ಸ್ ರೀಜನ್ ಕೋ- ಆರ್ಡಿನೇಟರ್ ಆಗಿ, ಲಯನ್ಸ್ ವಲಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಪ್ರಾಂತೀಯ ಕಾರ್ಯದರ್ಶಿಯಾಗಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪೆನಿಯ ನಿವೃತ್ತ ಮ್ಯಾನೇಜರ್ ಹಾಗೂ ಬ್ರಹ್ಮಾವರ ಲಯನ್ಸ್ ಕ್ಲಬ್ ನ ಲಯನ್ ಆನಂದ ಶೆಟ್ಟಿ ಕಬ್ಬೈಲ್ ಇವರನ್ನು ನೇಮಿಸಲಾಗಿದೆ. ಪ್ರಾಂತ್ಯ V, ವಲಯ 1ರ ವಲಯಾಧ್ಯಕ್ಷರನ್ನಾಗಿ ತೆಕ್ಕಟ್ಟೆ ಲಯನ್ಸ್ ಕ್ಲಬ್ ನ ಲಯನ್ ಧರ್ಮರಾಜ್ ಮುದಲಿಯಾರ್ ಮತ್ತು ವಲಯ ಕಾರ್ಯದರ್ಶಿಯಾಗಿ ಲಯನ್ ಅರುಣ್ ಕುಮಾರ್ ಶೆಟ್ಟಿ, ವಲಯ 11 ರ ವಲಯಾಧ್ಯಕ್ಷರನ್ನಾಗಿ ಹಂಗಳೂರು ಲಯನ್ಸ್ ಕ್ಲಬ್ ನ ಲಯನ್ ಬಾಲಕೃಷ್ಣ ಶೆಟ್ಟಿ ಮತ್ತು ವಲಯ ಕಾರ್ಯದರ್ಶಿಯಾಗಿ ಲಯನ್ ವಿಲ್ಫ್ರೆಡ್ ಮೆನೆಜಸ್ ಹಾಗೂ…
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ೨೦೨೪-೨೫ ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರು ಆಯ್ಕೆ ಆಗಿದ್ದಾರೆ. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ನೂತನ ಕಾರ್ಯದರ್ಶಿಯಾಗಿ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ ಮತ್ತು ನೂತನ ಕೋಶಾಧಿಕಾರಿಯಾಗಿ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಪ್ರಥಮ ಉಪಾಧ್ಯಕ್ಷರಾಗಿ ಬನ್ನಾಡಿ ಪ್ರಭಾಕರ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಕ್ಲಬ್ ಗ್ಲೋಬಲ್ ಮೆಂಬರ್ ಶಿಪ್ ಟೀಮ್ ನ ಕೋ ಆರ್ಡಿನೇಟರ್ ಆಗಿ ಚಂದ್ರ ಶೆಟ್ಟಿ ಯಾಳಕ್ಲು ವಡ್ಡರ್ಸೆ, ಕ್ಲಬ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಆಫೀಸರ್ ಆಗಿ ಕರುಣಾಕರ ಶೆಟ್ಟಿ, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ರವಿರಾಜ್ ಶೆಟ್ಟಿ ವಡ್ಡರ್ಸೆ, ಕ್ಲಬ್ ಎಲ್.ಸಿ.ಐ.ಎಫ್. ಕೋ ಆರ್ಡಿನೇಟರ್ ಆಗಿ ಬನ್ನಾಡಿ ಸಂತೋಷ್ ಶೆಟ್ಟಿ, ಕ್ಲಬ್ ಮೆಂಬರ್ ಶಿಪ್ ಕಮಿಟಿ ಚೇರ್ ಮೆನ್ ಆಗಿ ಕೂರಾಡಿ ಸಂತೋಷ್ ಕುಮಾರ್ ಶೆಟ್ಟಿ, ಕ್ಲಬ್ ಸರ್ವೀಸ್ ಚೇರ್ ಪರ್ಸನ್ ಆಗಿ ಲಯನ್…
ಕದ್ರಿ ದೇವಸ್ಥಾನದ ಬಳಿ ಶ್ರೀವಾರಿ ಗ್ರಾಫಿಕ್ಸ್ ಮತ್ತು ಪ್ರಿಂಟಿಂಗ್ ಸಂಸ್ಥೆಯನ್ನು ಕಾರ್ಪೊರೇಟರ್ ಮನೋಹರ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದೈವಜ್ಞರಾದ ಶ್ರೀರಂಗ ಐತಾಳ್ ಶುಭಾಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ರಾಣೆಬೆನ್ನೂರಿನ ಪ್ರಕಾಶ್ ಆಲದ ಕಟ್ಟಿ ದಂಪತಿಗಳು, ಸಿಎ ಸುದೇಶ್ ರೈ, ಬಾಳ ಜಗನ್ನಾಥ ಶೆಟ್ಟಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಮೋಹನ್ ಕೊಪ್ಪಳ, ರವಿಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಪ್ರದೀಪ ಆಳ್ವ ಕದ್ರಿ ವಂದಿಸಿದರು.
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಜರ್ನಿಯಿಸಂ’ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಕಲಿಕೆಯ ಕುರಿತು ಹುಮ್ಮಸ್ಸಿರಲಿ. ಆಲಸ್ಯ ಬೇಡ. ಶೈಕ್ಷಣಿಕವಾಗಿ ನೀವು ಮಾಡುವ ಕಾರ್ಯಗಳು ಕಲಿಕೆಗೆ ಸಹಕಾರಿಯೇ ಹೊರತು ಹೊರೆಯಲ್ಲ ಎಂದರು. ವ್ಯಕ್ತಿ ಎಂದಿಗೂ ಶಾಶ್ವತವಲ್ಲ ಬದಲಿಗೆ ವ್ಯಕ್ತಿತ್ವ ಮಾತ್ರ ಶಾಶ್ವತ ಆದ್ದರಿಂದ ವಿದ್ಯಾರ್ಥಿಗಳು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ತೇರ್ಗಡೆಯಾದ ಹಲವಾರು ವಿದ್ಯಾರ್ಥಿಗಳು ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸಮಾಜದಲ್ಲಿ ವೈದ್ಯರು ಜಾತಿ, ಧರ್ಮ, ಲಿಂಗ ಮತ್ತಿತರ ತಾರತಮ್ಯ ಇಲ್ಲದೆ ಕಾರ್ಯ ನಿರ್ವಹಿಸುವುದು ಹೇಗೆ ಅಗತ್ಯವೋ ಹಾಗೆ ಪತ್ರಕರ್ತರು ಕಾರ್ಯ…
ವಿದ್ಯಾಗಿರಿ: ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯನ್ನು ಆರಂಭಿಕ ಹಂತದಲ್ಲಿ ಮಟ್ಟ ಹಾಕಬೇಕು. ನಿರ್ಲಕ್ಷ್ಯ ವಹಿಸಿದರೆ ಬೃಹತ್ ಸಮಸ್ಯೆಯಾಗಿ ಕಾಡುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಪ್ರತಿಮಾ ಎಸ್. ಬಂಗೇರ ಹೇಳಿದರು.ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಹಿಳಾ ಸುರಕ್ಷಾ ಸಮಿತಿ ಹಮ್ಮಿಕೊಂಡ ‘ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ’ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ’ ಮಾಹಿತಿಯನ್ನು ಪ್ರತಿಯೊಬ್ಬರು ಹೊಂದಿರಬೇಕು. ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ಕಾಲೇಜಿನ ಆವರಣದಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ಉಪಪ್ರಾಂಶುಪಾಲರಾದ ಝಾನ್ಸಿ ಪಿ.ಎನ್., ಬೆಳಕು ಆಪ್ತ ಸಮಾಲೋಚನದ ರೆನಿಟಾ ಡಿಸೋಜ, ಮಕ್ಕಳ ಸುರಕ್ಷಾ ಸಮಿತಿಯ ರಕ್ಷಣಾಧಿಕಾರಿ ಮಲ್ಲಿಕಾ ಮತ್ತು ಇತರ ಸದಸ್ಯರು ಇದ್ದರು.
ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಖ್ಯಾತ ಮಕ್ಕಳ ತಜ್ಞ, ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಹಾಗೂ ಹೊರನಾಡ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸುಧಾಕರ ಶೆಟ್ಟಿ ಅವರಿಂದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರವು ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷಯಧಾಮದಲ್ಲಿ ನಾಳೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ12 ರ ವರೆಗೆ ನಡೆಯಲಿರುವ ಈ ಶಿಬಿರದ ಪ್ರಯೋಜನವನ್ನು ಕಲ್ಲಬೆಟ್ಟು ಮತ್ತು ಆಸುಪಾಸಿನ ಗ್ರಾಮಗಳ ಮಕ್ಕಳು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ಅವರು ತಿಳಿಸಿದ್ದಾರೆ.
ವಿದ್ಯಾಭ್ಯಾಸ ಮೆಕ್ಯಾನಿಕಲ್ ಎಂಜಿನಿಯರಿಂಗ್. ವೃತ್ತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಂಪನೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್. ಆದರೆ ತುಡಿತ ಕರಾವಳಿಯ ಗಂಡು ಕಲೆ ಖ್ಯಾತಿಯ ಯಕ್ಷಗಾನದಲ್ಲಿ ಸುಸ್ಥಿರತೆ. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿರುವವರು ಬೆಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಬಾರ್ಕೂರು ದೀಪಕ್ ಶೆಟ್ಟಿ. ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗತಿಗಳ ಮೌಲ್ಯೀಕರಣ ಎನ್ನುವ ವಿಷಯದ ಕುರಿತು ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. ಪಿ.ಎಚ್‌ಡಿ ಪದವಿ ನೀಡಿದೆ. ಇದಕ್ಕಾಗಿ ಯಕ್ಷಗಾನದ ಇತಿಹಾಸ, ಪೌರಾಣಿಕೆ ಹಿನ್ನಲೆ, ರೂಪಾಂತರವನ್ನು ಅಭ್ಯಸಿಸಿ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಹತ್ತಾರು ಹಿರಿಯ ಕಲಾವಿದರನ್ನು ಸಂದರ್ಶಿಸಿ, ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಸುಮಾರು 3 ತಲೆಮಾರಿನ ಅನುಭವವನ್ನು ಸಂಗ್ರಹಿಸಿದ್ದಾರೆ.ಮುಖ್ಯ ಉದ್ದೇಶ: ಆರ್ಥಿಕವಾಗಿ ಸದೃಢವಿದ್ದಾಗ ಕಲಾವಿದರು ಉಳಿಯುತ್ತಾರೆ. ಕಲಾ ಪ್ರಕಾರ ಉಳಿಯುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವ ಮುಖ್ಯ ಉದ್ದೇಶದಿಂದ ವಿಚಾರ ಮಂಡಿಸಿದ್ದಾರೆ. ಈ ಸುಸ್ಥಿರತೆಯಲ್ಲಿ ಕಲಾವಿದರು, ಮೇಳದ ಯಜಮಾನರು, ಸಂಘಟಕರು, ಪ್ರೇಕ್ಷಕರು ಹಾಗೂ…
ಬೆಂಗಳೂರು ಬಂಟರ ಸಂಘಕ್ಕೆ ಜುಲೈ 28 ರಂದು ನಡೆಯುವ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ ಜಪ್ತಿ ಸ್ಪರ್ಧೆ ಮಾಡುತ್ತಿದ್ದಾರೆ. ಬೆಂಗಳೂರು ಬಂಟರ ಸಂಘದಲ್ಲಿ 1994 ರಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿರುವ ಇವರು ಸಮರ್ಥ ಸಂಘಟರಾಗಿ ಗುರುತಿಸಿಕೊಂಡವರು. ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದು ಔದ್ಯೋಗಿಕ ಜೀವನಕ್ಕೆ ಕಾಲಿಟ್ಟು ಕಳೆದ 30 ವರ್ಷಗಳ ಸೇವಾ ಅನುಭವ ಇವರದ್ದಾಗಿದೆ. 1994 ರಲ್ಲಿ ಯುವ ವಿಭಾಗದ ಸದಸ್ಯನಾಗಿ ಸಂಘದ ಚಟುವಟಿಕೆಗಳಲ್ಲಿ ಸೇರ್ಪಡೆಯಾದ ಇವರು ಸಕ್ರೀಯ ಸದಸ್ಯರಾಗಿ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದರು. 2001-04ರಲ್ಲಿ ಯುವ ವಿಭಾಗದ ಕಾರ್ಯದರ್ಶಿಯಾಗಿ, 2004-06 ರಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ, 2006-08 ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2008-10 ರ ವಿದ್ಯಾರ್ಥಿವೇತನ ಸಮಿತಿ ಸಂಚಾಲಕ, ಕ್ರೀಡಾ ಸಮಿತಿ ಸದಸ್ಯ ಮತ್ತು ಡೈರೆಕ್ಟರಿ ಸಮಿತಿ ಸಂಚಾಲಕರಾಗಿ ಸಂಘದಲ್ಲಿ…