Author: admin

ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ವತಿಯಿಂದ ‘ನಂದಾದೀಪ ಸಂದೀಪ’ ವಿಶೇಷ ಕಾರ್ಯಕ್ರಮವು ಜುಲೈ 14 ರಂದು ಬೆಳಗ್ಗೆ 10 ರಿಂದ ಅಪರಾಹ್ನ 1 ರ ವರೆಗೆ ಬೆಂಗಳೂರಿನಲ್ಲಿರುವ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮನೆಯಲ್ಲಿ ನಡೆಯಲಿದೆ. ದೇಶಕ್ಕೋಸ್ಕರ ಬಲಿದಾನಗೈದವರನ್ನು ಸ್ಮರಿಸುವ ಉದ್ದೇಶದಿಂದ ಸಂದೀಪ ನೀನು ನಮ್ಮ ಆತ್ಮಸ್ಥೈರ್ಯದ ನಂದಾದೀಪ ಎಂದು ಆ ಧೀರನ ಮನೆಯಲ್ಲಿ ಹೆತ್ತವರ ಧ್ವನಿಗೆ ನಮ್ಮ ಧ್ವನಿ ಬೆಸೆಯುವ ಕಾರ್ಯಕ್ರಮವನ್ನು ಐಲೇಸಾ ಹಮ್ಮಿಕೊಳ್ಳಲು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳಾದ ಅತ್ರಾಡಿ ಸುರೇಶ್ ಹೆಗ್ಡೆ ಮತ್ತು ರಮೇಶ್ ಬಿ. ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಹಿತಿಗಳು, ಮಿಲಿಟರಿಯವರು, ಶ್ರೇಷ್ಠ ಹಾಡುಗಾರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅನಂತ್ ರಾವ್ (9686321393), ಸೂರಿ ಮಾರ್ನಾಡ್ (9324280156), ಶಾಂತಾರಾಮ್ ಶೆಟ್ಟಿ (9916129570) ಅವರನ್ನು ಸಂಪರ್ಕಿಸುವಂತೆ ಟೀಮ್ ಐಲೇಸಾ ವಕ್ತಾರ ಸುರೇಂದ್ರ ಶೆಟ್ಟಿ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಇಡ್ಯಾ ಗೋವಿಂದ ದಾಸ್ ಕಾಲೇಜ್ ಬಳಿಯ ಕೇಶವ ಚೌಟ ಕಂಪೌಂಡ್ ನಿವಾಸಿ ಡಾ. ಜಿ ಮಂಜಯ್ಯ ಶೆಟ್ಟಿ (76) ಅವರು ಜುಲೈ 11 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ‌. ಮೃತರು ಕೃಷಿಕರಾಗಿದ್ದು, ವೈದ್ಯಕೀಯ ಸೇವೆ, ರಾಜಕೀಯ ಸೇವೆ ಮತ್ತು ಇನ್ನಿತರ ಸೇವಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಕರ್ನಾಟಕ ಸೇವಾ ವೃಂದದಲ್ಲಿ ಉಪಾಧ್ಯಕ್ಷರಾಗಿ, ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಜನತಾದಳದಲ್ಲಿ ಪಕ್ಷ ಸಂಘಟಿಸಿ ಡಾ. ಜೀವರಾಜ ಆಳ್ಚ, ರಾಮಕೃಷ್ಣ ಹೆಗಡೆ, ರಾಮಯ್ಯ ನಾಯ್ಕ್, ಎಂ ಲೋಕಯ್ಯ ಶೆಟ್ಟಿ ಮೊದಲಾದವರೊಡನೆ ಒಡನಾಟ ಇರಿಸಿಕೊಂಡವರು. ತನ್ನ ತತ್ವ ಸಿದ್ದಾಂತದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಪ್ರಸ್ತುತ ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿ ಸಂಘದ ಚಟುವಟಿಕೆಗಳಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿದ್ದರು. ಡಾ. ಮಂಜಯ್ಯ ಶೆಟ್ಟಿ ಶ್ರೀ ಮಲರಾಯ ಜುಮಾದಿ ಬಂಟ ದೈವಸ್ಥಾನ ಮಲ್ಲೂರು ಇದರ ಒಂದನೇ ಗುತ್ತಿನವರು. ಶ್ರೀ ಈಶ್ವರ ದೇವಸ್ಥಾನ ಮಲ್ಲೂರು ಇದರ…

Read More

ಬಂಟ ಸಮಾಜದ ಋಣ ನನ್ನ ಮೇಲಿದೆ. ಈ ನಿಟ್ಟಿನಲ್ಲಿ ನಾನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಹ ಸೇವಾ ಕಾರ್ಯಗಳನ್ನು ಮುಂದುರಿಸಿದ್ದೇನೆ. ಪಡುಬಿದ್ರಿ ಬಂಟರ ಸಂಘವು ನನ್ನಲ್ಲಿ ಆದರಾಭಿಮಾನವನ್ನು ಇರಿಸಿರುವುದು ಸಂತಸವನ್ನು ಉಂಟು ಮಾಡಿದೆ ಎಂದು ಬೆಂಗಳೂರಿನ ಎಂಆರ್ ಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಆಡಳಿತ ನಿರ್ದೇಶಕ ಡಾ.ಕೆ ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಜುಲೈ 7 ರಂದು ಮಂಗಳೂರು ವಿವಿ ಪ್ರದಾನಿಸಿದ ಗೌರವ ಡಾಕ್ಟರೇಟ್ ಗಾಗಿ ಡಾ| ಕೆ ಪ್ರಕಾಶ್ ಶೆಟ್ಟಿ ದಂಪತಿಯನ್ನು ಅಭಿನಂದಿಸಲು ಪಡುಬಿದ್ರಿಯಲ್ಲಿ ಆಯೋಜಿಸಲಾಗಿದ್ದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಸಂಘದ ಸಭಾಂಗಣಕ್ಕೆ ಹಾಗೂ ಭೋಜನ ಗೃಹಕ್ಕೆ ಹವಾನಿಯಂತ್ರಿತ ವಾತಾಯನ ವ್ಯವಸ್ಥೆಯನ್ನು ಭರಿಸಿ ಸದಾ ಸಮಾಜದ ಅಭ್ಯುದಯದ ಕುರಿತಾಗಿ ಚಿಂತನಾ ಶೀಲರಾಗಿರುವ ಡಾ| ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪ್ರದಾನಿಸಿರುವುದು ಬಂಟ ಸಮಾಜ ಬಾಂಧವರೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಬಂಟ್ಸ್…

Read More

ತುಳುಕೂಟ ಉಡುಪಿ ವತಿಯಿಂದ ತುಳು ಭಾಷೆಯ ಪ್ರಪಥಮ ಕಾದಂಬರಿಕಾರ ದಿ. ಎಸ್ ಯು ಪಣಿಯಾಡಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಈ ಸಾಲಿನಲ್ಲಿ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ “ಪಮ್ಮಕ್ಕೆನ‌ ಪೊರುಂಬಾಟ” ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 10 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಬಾರಿ ಸ್ಪರ್ಧೆಗೆ ಬಂದ ಹಸ್ತ ಪ್ರತಿಗಳನ್ನು ತೀರ್ಪುಗಾರರಾದ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡಕ, ಸಕು ಪಾಂಗಾಳ ಹಾಗೂ ಪುತ್ತಿಗೆ ಪದ್ಮನಾಭ ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ಪರಿಶೀಲಿಸಿ, ಈ ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಪ್ರಶಸ್ತಿಯ ಸಂಚಾಲಕಿ ತಾರಾ ಆಚಾರ್ಯ ಹಾಗೂ ತುಳುಕೂಟದ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Read More

ಭರತನಾಟ್ಯ ಕಲಾವಿದೆ, ರಂಗಭೂಮಿ ಕಲಾವಿದೆ, ಚಿತ್ರನಟಿ, ಕುಂಚ ಕಲಾವಿದೆ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ, ನೃತ್ಯ ಸಂಯೋಜಕಿ, ಚಿಣ್ಣರ ಶಿಬಿರ ಸಂಘಟಕಿ ತೃಶಾ ಶೆಟ್ಟಿ ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ತೃಶಾ ಶೆಟ್ಟಿಯವರು ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲಾ ಅವರ ಪುತ್ರಿ. ಬಂಟ್ವಾಳದ ಹೋಲಿ ಫ್ಯಾಮಿಲಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ತೃಶಾ ಅವರು, ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಭರತನಾಟ್ಯ ಕಲೆಯಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದಿರುವ ಅವರು ಜನಪದ ನೃತ್ಯ ಹಾಗೂ ಸಮಕಾಲೀನ ನೃತ್ಯ ಪ್ರಕಾರಗಳಲ್ಲಿ ಪ್ರಭುತ್ವ ಹೊಂದಿದ್ದಾರೆ. ಕರಾವಳಿಯ ಸಮೃದ್ಧ ಗಂಡು ಕಲೆಯಾದ ಯಕ್ಷಗಾನದಲ್ಲೂ ತಮ್ಮ ಕಲಾಸಕ್ತಿಯನ್ನು ವಿಸ್ತರಿಸಿದ್ದಾರೆ. ರಂಗಾಯಣ ಮೈಸೂರು, ರಂಗ ಶಂಕರ ಬೆಂಗಳೂರು, ಶಂಕರ್‌ನಾಗ್ ಉತ್ಸವ, ವಿದ್ಯಾವರ್ಧಕ ಸಂಘ ಧಾರವಾಡ ಸೇರಿದಂತೆ ಕರ್ನಾಟಕ ವಿವಿಧ ಭಾಗಗಳಲ್ಲಿ ನಡೆದಿರುವ ರಾಷ್ಟ್ರೀಯ ರಂಗೋತ್ಸವಗಳಲ್ಲಿ ಅವರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ. ‘ವಿಕಾಸ 2022’,…

Read More

ಮುದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಡ್ಡಿನಗುಳಿ, ಮುದೂರುನಲ್ಲಿ ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು, ಇವರು ಸಮೃದ್ಧ ಬೈಂದೂರು-300 ಟ್ರೀಸ್ ಯೋಜನೆಯಡಿ ನಿರ್ಮಿಸಿರುವ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರ ವನ್ನು ಸ್ವಯಂಸ್ಪೂರ್ತಿ ಫೌಂಡೇಶನ್ ಸ್ಥಾಪಕರಾದ ಜಡ್ಕಲ್ ನಾಗರಾಜ ಶೆಟ್ಟಿಯವರು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ, CRP ನಾಗರಾಜ ಶೆಟ್ಟಿ, ಗ್ರಾಮ ಪಂಚಾಯತ್ ನ ಸದಸ್ಯರಾದ ಲಕ್ಷ್ಮಣ್ ಶೆಟ್ಟಿ ಸುಲ್ಯ ಭೋವಿ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ್ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ನಾಯಕ್, ಶಾಲಾ ಹಳೆ ವಿದ್ಯಾರ್ಥಿಯಾದ ಸಂದೀಪ್ ಮುದೂರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ, ಸಮೃದ್ಧ ಬೈಂದೂರು ತಂಡದ ಸಂಯೋಜಕ ಶೋಧನ್ ಮಲ್ಪೆ ಉಪಸ್ಥಿತರಿದ್ದರು. ರಾಮ ಅತ್ತಿಕಾರು ನಿರೂಪಿಸಿದರು. ಮುದೂರು ಅಂಗನವಾಡಿ ಕೇಂದ್ರಕ್ಕೆ ಕ್ರೀಡಾ ಸಾಮಾಗ್ರಿಗಳನ್ನು ಸ್ವಯಂಸ್ಪೂರ್ತಿ ಫೌಂಡೇಶನ್ ವತಿಯಿಂದ ವಿತರಿಸಲಾಯಿತು. ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ ಶೆಟ್ಟಿ ಜಡ್ಕಲ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಉತ್ತಮ ಮಕ್ಕಳ ಸಂಖ್ಯೆ ಇರುವ ಕಡು ಗ್ರಾಮೀಣ…

Read More

ಮೂಡುಬಿದಿರೆ: ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ನಿಸರ್ಗ ಎಸ್. 21ನೇ ರ‍್ಯಾಂಕ್, ಮೃಣಾಲಿನಿ ಎಸ್. ಪೂಜಾರಿ 29ನೇ ರ‍್ಯಾಂಕ್, ಪಾಹಿಮಾ ಹೇಮಚಂದ್ರ 38ನೇ ರ‍್ಯಾಂಕ್, ಎಮ್. ರಾಮ್‌ಪ್ರಸಾದ್ ಮಲ್ಯ 266ನೇ ರ‍್ಯಾಂಕ್, ಎಮ್.ವಿ. ಚಿರಾಂತ್ 290ನೇ ರ‍್ಯಾಂಕ್, ಆಕಾಶ್ ಬಸವರಾಜ್ ಬಚಲಾಪುರ 298ನೇ ರ‍್ಯಾಂಕ್, ಜೈ ಅಶೋಕ್ ರಾಚನ್ನವರ್ 402ನೇ ರ‍್ಯಾಂಕ್‌ನೊAದಿಗೆ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಪ್ರಾಚರ‍್ಯ ಮೊಹಮ್ಮದ್ ಸದಾಕತ್ ಅಭಿನಂದಿಸಿದ್ದಾರೆ.

Read More

ಅರಿ ಆಪಿನ ಮರ ಒವ್ವು ಪಂದ್ ಕೇಂದೆರ್ ಗೆ ಬೆದ್ರದ ಪೊಂಜೋವು. ಬೆದ್ರದ ಅರಂತಾಡೆದ ಪೊಂಜೋವು, ಸುಕತ ಬದ್ ಕ್, ಕೈಕೊಂಜಿ ಕಾರ್ ಗೊಂಜಿ ಜನ, ಕಷ್ಟ ಗೊತ್ತು ಇಜ್ಜಿ. ಇಲ್ಲ್ ಜತ್ತ್ ಪೋದು ಪಾಡಿ ಗುಡ್ಡೆ ತಿರ್ಗ್ ದ್ ತಪ್ಪು ಕನಕ್ ಕನಪಿನ, ಕಂಡ, ನಟ್ಟಿ, ಕೆಯಿ, ಬಯಿ ದಾದೈತಲಾ ಪಿಂದನಿಗೆ ಇಜ್ಜಿ. ಅಂಚಿತ್ತಿನ ಬೆದ್ರದ ಪೊಂಜೋವು ಒರ ಮುಗಂಟೆಡ್ ಕುದೊಂದು ಪಟ್ಟಾಂಗ ಪಾತೆರೊಂದು ಇಪ್ಪುನಗ, ಕಟ್ಟ ಪುನಿಟೆ ಸಾಲ್ ಡ್ ನಾಲಾಜಿ ಅಂಜೋವು ಅರಿತ ಮುಡಿ ತುಂಬೊಂದು ಬರ್ಪಿನ ತೂಯೆರ್. ಒಕ್ಕೆಲ್ದಗುಲು ಗೇನಿದ ಅರಿ ಕನವೊಂದು ಇತ್ತೆರ್. ಈ ಪೊಂಜೋವುಲು ಏಪಲಾ ಅರಿತ ಮುಡಿ ತೂತುಜೆರ್, ಅಲ್ಪನೆ ಇತಿನ ಸಗ್ಮಲ್ ಪೊನ್ನಡ ಕೇಂಡೆರ್ ಗೆ, “ಅವು ದಾದ ಆತ್ ಮಲ್ಲ ಉರುಂಟುದ?” ಪಂದ್ ಐಕ್ ಪೊನ್ನ್ ಪಂಡ್ “ಅವು ಅರಿತ ಮುಡಿ” ಪಂದ್. ಪೊಂಜೇವೆಗ್ ಬಾರಿ ಸೋದ್ಯ ಆಂಡ್ ಗೆ. “ಮುಡಿಯೇ ಆತ್ ಮಲ್ಲ ಇಪ್ಪೊಡ್ಡ, ನನ ಅರಿ…

Read More

ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿ ಜತೆಗೂಡಿ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ವಹಿಸಿದ್ದ ಸೂರ್ಯಕುಮಾರ್ ಯಾದವ್ ಇದೀಗ ಉಡುಪಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್‌, ಇಲ್ಲಿನ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆಹೌದು, ಸೂರ್ಯಕುಮಾರ್ ಯಾದವ್ ಮಂಗಳೂರು ಮೂಲದ ದೇವಿಶಾ ಶೆಟ್ಟಿಯನ್ನು ಮದುವೆಯಾಗಿದ್ದು, ಇದೀಗ ಟಿ20 ವಿಶ್ವಕಪ್ ಗೆಲುವಿನ ಬಳಿಕ ರಾಜ್ಯದ ಉಡುಪಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ಕಾಪು ಹೊಸ ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜತೆ ಆಗಮಿಸಿ, ಕಾಪು ಮಾರಿಯಮ್ಮನ ದರ್ಶನ ಪಡೆದರು. ಸೂರ್ಯಕುಮಾರ್ ಯಾದವ್ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡುವಾಗ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಉಡುಪಿಯ ಕಾಪು…

Read More

ಭಾರತೀಯ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಗಳು ಅಳಿವಿನಂಚಿನಲ್ಲಿ ಸಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಾಷ್ಟ್ರ ವ್ಯಾಪಿಯಾಗಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಕೈಗೊಂಡಾಗ ಖಂಡಿತ ಮುಂದಿನ ದಿನಗಳಲ್ಲಿ ಕನಿಷ್ಠ ಪಕ್ಷ ನಮ್ಮ ನಮ್ಮ ಪೀಳಿಗೆಗಳು ಕೈ ಜೋಡಿಸಬಲ್ಲರು. ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ವ್ಯಾಖ್ಯಾನದಂತೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸಿಕೊಟ್ಟಾಗ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆ, ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕ ಚಿಂತನೆ, ಆಚಾರ ವಿಚಾರಗಳ ಜ್ಞಾನ ವೃದ್ಧಿಯಾಗಲು ಅವಕಾಶವಾಗಬಹುದು ಎಂದು ಶ್ರೀ ದೇವಿ ಯಕ್ಷಕಲಾ ನಿಲಯ ನಾಲಾಸೋಪಾರ ವಿರಾರ್ ಇದರ ಅಧ್ಯಕ್ಷರಾದ ಇನ್ನಂಜೆ ಶಶಿಧರ್ ಕೆ ಶೆಟ್ಟಿ ಅವರು “ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಮುಹೂರ್ತ, ಭರತನಾಟ್ಯ, ಕನ್ನಡ ಕಲಿಕಾ ಕೇಂದ್ರ, ಪುಟ್ಬಾಲ್ ಮೊದಲಾದ ತರಬೇತಿ ಕೇಂದ್ರಗಳನ್ನು “ರಿಜೆನ್ಸಿ ಬ್ಯಾಂಕ್ವಿಟ್ ಹಾಲ್ ನಾಲಾಸೋಪಾರ” ಇಲ್ಲಿ 2024 -25 ಸಾಲಿನ ತರಬೇತಿಗಳ ಪ್ರಾರಂಭಿಸುತ್ತಾ ನುಡಿಗಳನ್ನಾಡಿದರು. ಯಕ್ಷಗಾನ ಗುರುಗಳಾದ ನಾಗೇಶ್ ಪೊಳಲಿಯವರು ಮಾತನಾಡುತ್ತಾ, ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ಪ್ರೀತಿ ಸಿಗುವುದು ಮನಃಪೂರ್ವಕವಾಗಿ…

Read More