Author: admin
‘ಯಕ್ಷಗಾನ ಕ್ಷೇತ್ರದ ಸುಧೀರ್ಘವಾದ ತನ್ನ ಯಾತ್ರೆಯಲ್ಲಿ ಸಾವಿರಾರು ಮಾನ ಸಮ್ಮಾನಗಳು ಲಭಿಸಿವೆ. ಇದು 1023ನೇ ಸನ್ಮಾನ. ದೇಹದ ಕಸುವು ಕಡಿಮೆಯಾದರೂ ರಂಗಸ್ಥಳದಲ್ಲಿ ಅದು ಅರಿವಿಗೆ ಬರುವುದಿಲ್ಲ. ಕಾರಣ ರಂಗದ ಒಳಗೂ ಹೊರಗೂ ನಮಗೆ ಅಭಿಮಾನಿಗಳ ರಕ್ಷೆ ಇದೆ’ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿರುವ 12ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಅಂಗವಾಗಿ ನ.12ರಂದು ಜರಗಿದ ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ‘ಬಾಳಪ್ಪ ಶೆಟ್ಟಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ‘ಕುಂಡಾವು ಮೇಳದಲ್ಲಿ ಬಾಳಪ್ಪ ಶೆಟ್ಟರು ಜೊತೆಗಿದ್ದಾಗ ಅವರ ಪ್ರಬುದ್ಧ ಹಾಸ್ಯವನ್ನು ಹತ್ತಿರದಿಂದ ಕಂಡಿದ್ದೆ. ಅವರು ಯಾವತ್ತೂ ರಂಗದಲ್ಲಿ ಅಸಂಬದ್ಧವಾಗಿ ಅಪಹಾಸ್ಯವಾಗುವ…
ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಲಾಭದಲ್ಲಿ ಒಂದಂಶವನ್ನು ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡಿ, ಜನರೊಡನೆ ನೇರ ಸಂಪರ್ಕ ಇಟ್ಟುಕೊಂಡಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಹೇಳಿದರು. ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಶ್ರೀ ಚಾಮುಂಡೇಶ್ವರಿ ಸಭಾಂಗಣದ ಶ್ರೀ ದುರ್ಗಾ ಸಹಕಾರ ಸೌಧದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಮಂದಾರ್ತಿ ಸೇವಾ ಸಹಕಾರಿ ಸಂಘ ನಿ., ಮಂದಾರ್ತಿ ಹಾಗೂ ಸಹಕಾರ ಇಲಾಖೆ ಉಡುಪಿ ಆಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಸಹಕಾರ ಕ್ಷೇತ್ರದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ವಿಶ್ವವಿದ್ಯಾಲಯಗಳಲ್ಲಿ ಸಹಕಾರಿ ಅಧ್ಯಯನ ವಿಷಯ ಕಡ್ಡಾಯ ಮಾಡಬೇಕು ಎಂದರು. ಜಯಕರ ಶೆಟ್ಟಿ ಇಂದ್ರಾಳಿ ಸಹಕಾರಿ ಧ್ವಜಾರೋಹಣ…
ಅದೊಂದು ಭಿನ್ನ ನಾಟಕ. ಶನಿಯ ಕಥೆಯಲ್ಲಿ ಎಷ್ಟೋ ನಾಟಕ, ಯಕ್ಷಗಾನಗಳು ಬಂದಿರಬಹುದು. ಆದರೆ ಲ|ಕಿಶೋರ್ ಡಿ. ಶೆಟ್ಟಿ ನೇತೃತ್ವದ ಶ್ರೀಲಲಿತೆ ತಂಡದವರು ಕದ್ರಿ ನವನೀತ ಶೆಟ್ಟಿ ರಚನೆಯಲ್ಲಿ ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ನ.10ರಂದು ಸುರತ್ಕಲ್ನಲ್ಲಿ ಚೊಚ್ಚಲ ಪ್ರದರ್ಶನ ನೀಡಿರುವ ಶನಿ ಮಹಾತ್ಮೆ ತುಳು ನಾಟಕವು ಈ ಹಿಂದಿನ ಶನಿ ಕಥೆಯಾಧಾರಿತ ಎಲ್ಲಾ ನಾಟಕ, ಯಕ್ಷಗಾನಗಳಿಗಿಂತಲೂ ಭಿನ್ನವಾಗಿದೆ. ರಂಗಚಾವಡಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದ್ದ ಸುರತ್ಕಲ್ನ ಬಂಟರ ಭವನದಲ್ಲಿ ನ. 10ರಂದು ಪ್ರದರ್ಶನಗೊಂಡ ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿರುವ ಹರಿಶ್ಚಂದ್ರ ಚಂದ್ರಮತಿಯ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಅಂಥಹ ಅಭಿನಯ ನೀಡಿರುವ ಚಂದ್ರಮತಿ ಮತ್ತು ಹರಿಶ್ಚಂದ್ರ ಪಾತ್ರಧಾರಿಗಳಿಗೆ ದೊಡ್ಡ ಶಹಬ್ಬಾಸ್ ಹೇಳಲೇಬೇಕಾಗಿದೆ. ಈ ನಾಟಕದಲ್ಲಿ ಶನಿ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಪುರಾಣ ಪುರುಷರ ಕಥೆಗಳನ್ನು ಒಪ್ಪ ಓರಣವಾಗಿ ಪ್ರೇಕ್ಷಕರ ಮುಂದೆ ಕಟ್ಟಿ ಕೊಡಲಾಗಿದೆ. ಕದ್ರಿ ನವನೀತ್ ಶೆಟ್ಟಿ ರಚನೆಯ ಈ ನಾಟಕದಲ್ಲಿ ಸೂರ್ಯದೇವ,…
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ಮತ್ತು ತಾಂತ್ರಿಕ ಕಾಲೇಜು ಮಿಜಾರು ಇವರ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾಢ್ಯ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿತು. ವೇಯ್ಟ್ ಲಿಫ್ಟಿಂಗ್ ನಲ್ಲಿ ದ್ವಿತೀಯ ಸ್ಥಾನವನ್ನು ಎನ್ಎಮ್ಎಎಮ್ಐಟಿ ನಿಟ್ಟೆ, ತೃತೀಯ ಸ್ಥಾನವನ್ನು ಯೆನಪೋಯ ಮೂಡುಬಿದಿರೆ ಇವರು ಪಡೆದುಕೊಂಡರು. ಬಾಲಕಿಯರ ವೇಯ್ಟ್ ಲಿಫ್ಟಿಂಗ್ವಿ ಭಾಗದಲ್ಲಿ ಪ್ರಥಮ ಸ್ಥಾನವನ್ನು ಯೆನೆಪೋಯ ಇಂಜಿನಿಯರಿಂಗ್ಮತ್ತು ತಾಂತ್ರಿಕ ಕಾಲೇಜು ಮೂಡುಬಿದಿರೆ, ದ್ವಿತೀಯ ಸ್ಥಾನವನ್ನು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರು, ತೃತೀಯ ಸ್ಥಾನವನ್ನು ಎನ್ಐಇ ಮೈಸೂರು ಪ್ರಶಸ್ತಿಯನ್ನು ಪಡೆಯಿತು. ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜು ಬೆಳಗಾವಿ, ತೃತೀಯ ಸ್ಥಾನವನ್ನು ಜಿಎಮ್ ತಾಂತ್ರಿಕ ಕಾಲೇಜು, ದಾವಣಗೆರೆ ಪಡೆದುಕೊಂಡಿತು. ಬೆಸ್ಟ್ ಲಿಫ್ಟರ್ ಬಾಲಕರ ವಿಭಾಗದಲ್ಲಿ ಆಕಾಶ್ ಎಜೆಇಐಟಿ ಮಂಗಳೂರು, ಬೆಸ್ಟ್ ಲಿಫ್ಟರ್ ಬಾಲಕಿಯರ ವಿಭಾಗದಲ್ಲಿ ರಿಕ್ತಕಿರಣ್ ಶ್ರೀನಿವಾಸ ಕಾಲೇಜು ಮಂಗಳೂರು. ಮಿಸ್ಟರ್ ವಿಟಿಯು ಆಳ್ವಾಸಿನ ಭರತ್ ಪ್ರಶಸ್ತಿಯನ್ನು ಪಡೆದರು. ಬಹುಮಾನ ವಿತರಣಾ…
ಉದ್ಯಮಿ, ಸಮಾಜ ಸೇವಕ, ಸಜ್ಜನಿಕೆಯ ಸರದಾರ ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳಿಗೆ ಪುಣೆ ತುಳುಕೂಟದಿಂದ ಸನ್ಮಾನ
ಪುಣೆ ಬಂಟರ ಸಂಘದ ಉಪಾಧ್ಯಕ್ಷ, ತುಳುಕೂಟ ಪುಣೆಯ ಬೆಳ್ಳಿ ಹಬ್ಬ ಸಂಭ್ರಮದ ಗೌರವಾಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 2024 ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುಣೆಯ ಉದ್ಯಮಿ ಸಮಾಜಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳನ್ನು ತುಳುಕೂಟ ಪುಣೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಇವರುಗಳು ಗೌರವಿಸಿ ಸನ್ಮಾನಿಸಿದರು. ಈ ಸಂಧರ್ಭ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ದ.ಕ ಸಂಸದ ಬ್ರಜೇಶ್ ಚೌಟ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ಪುತ್ತೂರು ಇವರ…
ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ಯಕ್ಷಗಾನ ಮೇಳದ ಐದನೇ ವರ್ಷದ ತಿರುಗಾಟವು ಕ್ಷೇತ್ರದಲ್ಲಿ ಕಲಾವಿದರಿಗೆ ಗೆಜ್ಜೆ ಪ್ರಧಾನ ಕಾರ್ಯದೊಂದಿಗೆ ಆರಂಭಗೊಂಡಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಶಶೀಂಧರ ಕುಮಾರ್, ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್ ಅವರು ಗೆಜ್ಜೆ ಪ್ರಧಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಮೇಳದ ಚೌಕಿಯಲ್ಲಿ ದೇವರಿಗೆ ಮಹಾಪೂಜೆ ನೆರವೇರಿತು. ವರ್ಷದ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧವು ದೇಗುಲದ ಆವರಣದಲ್ಲಿ ಹಾಕಲಾಗಿದ್ದ ರಂಗಸ್ಥಳದಲ್ಲಿ ನಡೆಯಿತು. ಎಂ. ಶಶಿಂದ್ರ ಕುಮಾರ್, ಡಾ. ಯಾಜಿ ಎಚ್. ನಿರಂಜನ ಭಟ್, ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪಟ್ಲ ಮಹಾಬಲ ಶೆಟ್ಟಿ, ಮೇಳದ ಪ್ರಬಂಧಕ ಮಾಧವ ಬಂಗೇರ ಕೊಳತ್ತಮಜಲು, ವಿವಿಧ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ…
ಬ್ರಹ್ಮಾವರ ನ. 14: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಚಿಣ್ಣರ ಹಬ್ಬಕ್ಕೆ ಕೆ ಎಮ್ ಸಿ ಮಣಿಪಾಲದ ಶಿಶು ವೈದ್ಯಕೀಯ ವಿಭಾಗದ ಪೆÇ್ರಫೆಸರ್ ಡಾ. ಸುನೀಲ್ ಸಿ ಮುಂಡ್ಕೂರ್ರವರು ಆಗಮಿಸಿದ್ದರು. ಅವರು ಮಕ್ಕಳಿಗೆ ಶುಭಹಾರೈಸಿ ಮಾತನಾಡಿ ಜೀವನದಲ್ಲಿ ಸಂತೋಷವಾಗಿರಬೇಕಾದರೆ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾದಕ ವಸ್ತು, ಜಂಕ್ ಫುಡ್ನಿಂದ ದೂರವಿದ್ದು ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಏಕಾಂಗಿಯಾಗಿದ್ದರೂ ಸಾಧಿಸುವ ಛಲ ಹೊಂದಿರಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ದಾಶ್ರಮಕ್ಕೆ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೊಂದು ದುರಂತ. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳು ಮೌಲ್ಯ ನೀತಿ ಪಾಠವಿರುವ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಮಗೆ ಪ್ರತಿದಿನವೂ ವಿಶೇಷವಾಗಿದ್ದು ನಮ್ಮ ಗುರಿಯತ್ತ ನಿತ್ಯವೂ ಗಮನವನ್ನು ಕೇಂದ್ರೀಕರಿಸಬೇಕು. ಸುಖ ದುಖಃಗಳು ಎದುರಾದಾಗ ಭಾವನೆಗಳ ಅಭಿವ್ಯಕ್ತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕೆಂದರು.…
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ತಂಡವನ್ನು 35-20, 35-5 ಅಂಕಗಳಿAದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ತಂಡವನ್ನು 35-12, 35-10 ಅಂಕಗಳಿAದ ಸೋಲಿಸಿ 19ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ಬಾಲಕರ ವಿಭಾಗದಲ್ಲಿ ಆಕಾಶ್ ಉತ್ತಮ ರಕ್ಷಣಾಕಾರ, ಲಿಖಿತ್ಉ ತ್ತಮ ಆಕ್ರಮಣಕಾರ ಹಾಗೂ ಬಾಲಕಿಯರ ವಿಭಾಗದಲ್ಲಿ ಲಾಂಛನ ಉತ್ತಮ ರಕ್ಷಣಾಕರ್ತಿ, ಶಾಲಿನಿ ಉತ್ತಮ ಆಕ್ರಮಣಕಾರ್ತಿ ಪ್ರಶಸ್ತಿ ಪಡೆದರು. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.
‘ನಾವಾಡುವ ಭಾಷೆಯ ಶುದ್ಧ ಸ್ವರೂಪವನ್ನು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ ಕಾಣಲು ಸಾಧ್ಯ. ಅದರಲ್ಲೂ ತಾಳಮದ್ದಳೆಯಲ್ಲಿ ಕನ್ನಡ ಭಾಷೆಯ ಸಿರಿವಂತಿಕೆ ಇದೆ. ತಾನು ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿಯ ಕನ್ನಡಿಗರು ವಾರಾಂತ್ಯದಲ್ಲಿ ತಮ್ಮ ವಸತಿ ಸಂಕೀರ್ಣ ಮಧ್ಯೆ ದೊಡ್ಡ ಪರದೆಯ ಮೇಲೆ ತಾಳಮದ್ದಳೆಯನ್ನು ಹಾಕಿ ಸಂಭ್ರಮಿಸುವುದನ್ನು ಕಂಡಿದ್ದೇನೆ’ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆರಂಭಗೊಂಡಿರುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2024’ 12ನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರವನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ‘ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ಸಂಕಲ್ಪ ಸಾಕಾರ ಆಗಬೇಕಿದ್ದರೆ ರಥವೂ ಬೇಡ, ರಾಜಕಾರಣಿಗಳು ಮತ್ತು ರಾಜಕೀಯ ಸೋಂಕಿತ ಸಾಂಸ್ಕೃತಿಕ ಕಾರ್ಯಕರ್ತರು ಕನ್ನಡಕ್ಕಾಗಿ ಕರೆ ಕೊಡುವುದೂ ಬೇಡ. ಬದಲು ಪ್ರಾಥಮಿಕ…
ಕಡಲ ತಡಿಯ ನಮ್ಮ ತಾಯಿ ಭಾಷೆ, ಕಲೆ ಸಂಸ್ಕ್ರತಿಯ ತವರೂರು ತುಳುನಾಡಿನಲ್ಲಿ ವ್ಯವಹಾರಿಕ ಬಾಷೆಯಾದ ನಮ್ಮ ತುಳು ಎಲ್ಲರೂ ಸೇರಿಕೊಳ್ಳಲು ಒಂದು ದೊಡ್ಡ ಅಸ್ತ್ರವಾಗಿದೆ. ತುಳು ಬಾಷೆ ಎಂದರೆ ನಮಗೆ ಹೃದಯ ತುಂಬಿ ಬರುತ್ತದೆ. ಇಂತಹ ಸಮೃದ್ದ ಕಲೆ ಸಂಸ್ಕ್ರತಿ ಬಾಷೆಯನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು ಎಂಬುದನ್ನು ಮೊದಲಾಗಿ ತುಳುವರಾದ ನಾವೆಲ್ಲರೂ ತಿಳಿದುಕೊಳ್ಳಬೇಕು. ತನ್ನ ಕಾರ್ಯ ಕ್ಷೇತ್ರದಲ್ಲಿರುವ ಎಲ್ಲರೂ ಮೌಲ್ಯಾದಾರಿತ ನಮ್ಮ ಜೀವನ ಹೇಗೆಯೇ ಇರಲಿ ಆದರೆ ಮಾತೃ ಬಾಷೆಯ ಪ್ರೀತಿ ನಮ್ಮಲ್ಲಿರಲಿ. ಅದರ ಜೊತೆಯಲ್ಲಿ ರಾಷ್ಟ್ರ ಪ್ರೀತಿ ಕೂಡಾ ತುಂಬಿಕೊಂಡಿರಲಿ. ನಮಗೆ ಜೀವನದಲ್ಲಿ ಹಲವಾರು ರೀತಿಯಲ್ಲಿ ಸೇವಾ ಕಾರ್ಯ ಮಾಡುವ ಭಾಗ್ಯ ಬರಬಹುದು. ಬಂದ ಭಾಗ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಚಾತುರ್ಯಯತೆ ನಮ್ಮಲ್ಲಿರಲಿ ಎಂದು ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಪುಣೆ ತುಳುಕೂಟದ ರಜತ ಮಹೋತ್ಸವ ಮತ್ತು ತುಳುನಾಡ ಜಾತ್ರೆ ನವೆಂಬರ್ 10ರಂದು ಬಾಣೇರ್ ಬಂಟರ ಸಂಘದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಗುಂಡುರಾಜ್ ಶೆಟ್ಟಿ…