Author: admin
ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ.ಎಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ನೆತ್ತರೆಕೆರೆ’ ತುಳು ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ನೆತ್ತರಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದ್ದು ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ. ಹೀಗಾಗಿ ಸಿನಿಮಾವನ್ನು ಜೂನ್ ಕೊನೆಯ ವಾರದಲ್ಲಿ ತೆರೆ ಕಾಣಿಸಲು ಚಿತ್ರ ತಂಡ ಸಿದ್ದತೆ ಮಾಡಿಕೊಂಡಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾಕ್ಕೆ ಚೇಳಾರ್, ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ , ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸುಮನ್ ತಲ್ವಾರ್, ಲಂಚುಲಾಲ್ ಕೆ.ಎಸ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಪೃಥ್ವಿನ್ ಪೊಳಲಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳಾರು, ವಿಜಯ ಮಯ್ಯ, ನೀತ್ ಪೂಜಾರಿ, ಉತ್ಸವ್ ವಾಮಂಜೂರು, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ, ಭವ್ಯಾ ಪೂಜಾರಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು,…
ಶಿಕ್ಷಣ ನಿಂತ ನೀರಲ್ಲ. ಪ್ರತೀ ದಿನವೂ ಹೊಸ ಹೊಸ ಬದಲಾವಣೆಯೊಂದಿಗೆ ನವೀನ ಚಿಂತನೆಗಳೊಂದಿಗೆ ಸಾಗುತ್ತಿದೆ. ಒಂದು ಸುಭದ್ರವಾದ ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಉತ್ತಮವಾದ ಶಿಕ್ಷಕ ಮಾತ್ರ ಅತ್ಯುತ್ತಮವಾದ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸಾಧ್ಯವಾದ್ದರಿಂದ ಈ ಸಮಾಜವು ಯಾವಾಗಲೂ ಸಮರ್ಥವಾದ ಶಿಕ್ಷಕ ವರ್ಗವನ್ನು ಸದಾ ನಿರೀಕ್ಷಿಸುತ್ತದೆ. ಹಾಗಾಗಿ ಶಿಕ್ಷಕರಿಗೆ ಕಾಲ ಕಾಲಕ್ಕೆ ಅಗತ್ಯವಾದ ತರಬೇತಿಗಳನ್ನು ನೀಡಿದಾಗ ಶಿಕ್ಷಕರು ಬೋಧನೆಗೆ ಸಂಬಂಧಿಸಿದ ಹಲವಾರು ಕೌಶಲಗಳನ್ನು ಪಡೆದು ಉತ್ತಮ ಗುಣಮಟ್ಟದ ಬೋಧನೆ ಮಾಡಲು ಸಾಧ್ಯವಾಗಿ ಮಕ್ಕಳು ಕಲಿಕೆಯಲ್ಲಿ ಸರ್ವಾಂಗೀಣ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಹೇಳಿದರು. ಇವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರು ದಿನಗಳು ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇ 26 ,27 ಮತ್ತು 28ರಂದು ನಡೆದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಬೋಧನೆಗೆ ಅಗತ್ಯವಾದ ಕೌಶಲಗಳನ್ನು ಕಲಿಸಲಾಯಿತು. ಮೊದಲ ದಿನದ…
ಬೆಂಗಳೂರಿನ ಎಂ.ವಿ ಆಡಿಟೋರಿಯಂನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ 70 ನೇ ವಾರ್ಷಿಕೋತ್ಸವದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಪುಣೆಗಳಲ್ಲಿ ಹೋಟೆಲ್ ಉದ್ಯಮ ಸ್ಥಾಪಿಸಿರುವ ಶ್ರೀ ಪಂಜುರ್ಲಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಜೇಂದ್ರ ವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ಹೋಟೆಲ್ ಉದ್ಯಮದ ಶ್ರೇಷ್ಠ ಪ್ರಶಸ್ತಿಯಾದ ಆತಿಥ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ| ನಿರ್ಮಲಾನಂದನಾಥ ಶ್ರೀ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಶಾಸಕ ಡಾ. ಅಶ್ವಥ್ ನಾರಾಯಣ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ, ಮಧುಕರ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಎಸ್.ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ತಯಾರಾದ ಬಹು ನಿರೀಕ್ಷಿತ ‘ಪಿಲಿಪಂಜ’ ತುಳು ಸಿನೆಮಾದ ಟೀಸರನ್ನು ನಟ, ನಿರ್ದೇಶಕ ಡಾ|ದೇವದಾಸ್ ಕಾಪಿಕಾಡ್ ಬಿಡುಗಡೆಗೊಳಿಸಿದರು. ಟೀಸರನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನೆಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ. ಟೀಸರ್ ನಮ್ಮನ್ನು ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ಸಿನೆಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ತುಳು ಕಲಾಭಿಮಾನಿಗಳು ಈ ಸಿನೆಮಾವನ್ನು ನೋಡಿ ಚಿತ್ರ ತಂಡವನ್ನು ಬೆಂಬಲಿಸಬೇಕೆಂದು ಚಿತ್ರತಂಡ ವಿನಂತಿಸಿದೆ. ನಿರ್ಮಾಪಕ ಪ್ರತೀಕ್ ಯು. ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಹಾಗೂ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಈ ಸಂಧರ್ಭ ಉಪಸ್ಥಿತರಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಕುಂದಾಪುರದ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾಳೆ. ಬೈಂದೂರು ತಾಲೂಕಿನ ಗುಡ್ಡೆಯಂಗಡಿ ಆಲೂರು ಶ್ರೀ ಮೂಕಾಂಬಿಕ ಹಳ್ಳಿ ಜನ್ಮನೆ ನಿವಾಸಿ ಹಾಗೂ ಅಮವಾಸ್ಯೆಬೈಲಿನ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿಯ ಪುತ್ರಿಯಾದ ಪ್ರಸ್ತುತಿ ಶೆಟ್ಟಿಯ ಸಾಧನೆಗೆ ಎಕ್ಸಲೆಂಟ್ ಪಿ.ಯು ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿ ಕಾಲೇಜಿನಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಂ.ಎಂ ಹೆಗ್ಡೆ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಳಹಳ್ಳಿ ಮಹೇಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸನ್ ಮ್ಯಾಟ್ರಿಕ್ಸ್ ಸಿನಿಮಾಸ್ ಮತ್ತು ಫಿಲ್ಮ್ ವೀಲ್ ಸ್ಟುಡಿಯೋಸ್ ಅರ್ಪಿಸುವ “ಸ್ಕೂಲ್ ಲೀಡರ್” ಸಿನಿಮಾ ನಗರದ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಸಿಎ ಎಸ್ ಎಸ್ ನಾಯಕ್ ಅವರು, ಇದು ನಿರ್ಮಾಪಕ ಸತ್ಯೇಂದ್ರ ಪೈ ಅವರ ಮೂರನೇ ಸಿನಿಮಾ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಒತ್ತಡದಿಂದ ಹೊರಬಂದು ಹೇಗೆ ಜೀವನದಲ್ಲಿ ಸಾಧನೆ ಮಾಡಬಹುದು ಅನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕನ್ನಡ ಶಾಲೆಗಳ ಇಂದಿನ ಪರಿಸ್ಥಿತಿಯನ್ನು ಮನ ಮುಟ್ಟುವಂತೆ ಚಿತ್ರಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು. ಬಳಿಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ಸ್ಕೂಲ್ ಲೀಡರ್ ಹೈಸ್ಕೂಲ್ ಜೀವನದ ಕಥೆ ಎಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ, ಎಲ್ಲರೂ ಸಿನಿಮಾ ನೋಡಿ ಎಂದು ಶುಭ ಹಾರೈಸಿದರು.ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಪೆನ್ಸಿಲ್ ಬಾಕ್ಸ್ ಕೊಟ್ಟಿದ್ದ ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ಈಗ ಸ್ಕೂಲ್ ಲೀಡರ್ ನಂತಹ ಉತ್ತಮ…
ಗಣಿತನಗರ : ಡಾ.ಸುಧಾಕರ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಜ್ಞಾನಸುಧಾ ಸಂಸ್ಥೆಯು ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ. ಉತ್ತಮ ಫಲಿತಾಂಶದ ಮೂಲಕ ರಾಜ್ಯದ ಮಾದರಿ ಸಂಸ್ಥೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ ಕುಮಾರ್‍ರವರು ಮೌಲ್ಯಗಳನ್ನು ಕೊಡುವಲ್ಲಿ ಮತ್ತು ಸಂಸ್ಕಾರ ಕೊಡುವಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿಯ ಉಪಕುಲಪತಿಗಳಾದ ಪ್ರೊ.ಫೆಸರ್ ಡಾ| ಪಿ.ಎಲ್.ಧರ್ಮ ಮಾತನಾಡಿ ಯುವಮನಸುಗಳಲ್ಲಿ ದೇಶಪ್ರೇಮವನ್ನು ತುಂಬುವ ಕಾರ್ಯದ ಜೊತೆಗೆ, ಜ್ಞಾನಸುಧಾ ಪರಿವಾರ ಅತ್ಯುತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾರ್ಯದಲ್ಲಿ…
ಕುತ್ಯಾರು ಅಂಜಾರು ಮನೆ ದಿ. ಅಕ್ಕಣಿ ಶೆಡ್ತಿ ಹಾಗೂ ತಾಳಿಪಾಡಿ ದಿ. ಚಂದಯ್ಯ ಶೆಟ್ಟಿಯವರ 7 ಮಕ್ಕಳಲ್ಲಿ ಕೊನೆಯವರಾದ ಶಕುಂತಳಾ ಕೆ ಚೌಟ (77) ರವರು ಅಸೌಖ್ಯದ ಕಾರಣ ಮೇ 28 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಕೊರಂಗ್ರಪಾಡಿ ದೊಡ್ಡಮನೆ ಕುಮಾರ್ ಎನ್. ಚೌಟ, ಮಕ್ಕಳಾದ ಉದಯ ಕೆ ಚೌಟ, ಉಲ್ಲಾಸ್ ಕೆ ಚೌಟ ಹಾಗೂ ಮಗಳು ಉಷಾ ಡಿ ಶೆಟ್ಟಿ, ಅಳಿಯ ದಾಮೋದರ್ ಎನ್. ಶೆಟ್ಟಿ ಮತ್ತು ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗದವರನ್ನು ಅಗಲಿದ್ದಾರೆ.ಮೃತರ ನಿಧನಕ್ಕೆ ಕರ್ನಾಟಕ ಸಂಘ ಮೀರಾರೋಡ್, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ ಮತ್ತು ಮೀರಾ ಭಯಂದರ್ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷ ಪ್ರಮೋದ್ ಸಾಮಂತ್ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಕಳ ಎಸ್.ಕೆ.ಎಸ್ ಸಂಸ್ಥೆಯ ಸುಜಯ್ ಕುಮಾರ್ ಶೆಟ್ಟಿ ಮತ್ತು ಅಮೃತಾ ದಂಪತಿಯ ಪುತ್ರಿ ಸಚಿ ಶೆಟ್ಟಿಯವರು ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ 3 ನೇ ಸ್ಥಾನ ಗಳಿಸಿದ್ದಾರೆ. ತಂದೆ ಸುಜಯ್ ಶೆಟ್ಟಿಯವರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಣಿ ಸಾಧನೆ ಪ್ರತೀಕವಾಗಿ ಅಲ್ಲಲ್ಲಿ ಅದ್ಭುತ ಕಟ್ಟಡಗಳು ಎದ್ದು ನಿಂತಿವೆ. ಕಾರ್ಕಳ ಮಾರಿಗುಡಿ, ಕಾಪು ಹೊಸ ಮಾರಿಗುಡಿ, ದಿಲ್ಲಿಯಲ್ಲಿ ಅದ್ಭುತ ಕರ್ನಾಟಕ ಭವನ ಮೊದಲಾದ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಅಪೂರ್ವ ವಾಸ್ತುಶಿಲ್ಪದೊಂದಿಗೆ ನಿರ್ಮಿಸಿದವರು. ಸುಜಯ್ ಶೆಟ್ಟಿಯವರ ಎಸ್.ಕೆ.ಎಸ್ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನುರಿತ ಕೆಲಸಗಾರರು ಇದ್ದಾರೆ. ನೌಕರರ, ಕಾರ್ಮಿಕರ ಮಕ್ಕಳ ಶಾಲೆ ಫೀಸ್, ಆರೋಗ್ಯ ರಕ್ಷಣೆ ಹೊಣೆ ಹೊತ್ತಿದ್ದಾರೆ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಚಿ ಶೆಟ್ಟಿಯವರಿಗೆ ಅಭಿನಂದನೆಗಳು.
ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟೋ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮತ್ತು ಅಶಕ್ತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಖ್ಯಾತ ಉದ್ಯಮಿ ಮೆರಿಟ್ & ಅರ್ಜುನ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಬೆಳ್ಳಾಡಿ ಅಶೋಕ್ ಶೆಟ್ಟಿಯವರು ಪಟ್ಲ ದಶಮ ಸಂಭ್ರಮಕ್ಕೆ 25 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಅಶೋಕ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಕೆ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮತ್ತು ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಸಂಭ್ರಮ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.














