ಪ್ರತಿಷ್ಠಿತ ಬಾಂಬೆ ಬಂಟ್ಸ್ ಅಸೋಸಿಯೇಶನ್ 1982ರಲ್ಲಿ ಸಮಾನ ಮನಸ್ಕರಿಂದ, ಸ್ವಜಾತಿ ಬಾಂಧವರನ್ನು ಒಗ್ಗೂಡಿಸಿ, ಮೈತ್ರಿ ಒಗ್ಗಟ್ಟನ್ನು ಬೆಳೆಸಿ, ಸಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಧಾರ್ಮಿಕ ಬೆಳವಣಿಗೆಯ ಉದ್ದೇಶವನ್ನೇ ಮುಖ್ಯ ಧ್ಯೇಯವನ್ನಾಗಿ ಹುಟ್ಟು ಹಾಕಿದ ಸಂಸ್ಥೆ. ಇಂದಿಗೂ ಅದೇ ರೀತಿಯಲ್ಲಿ ವರ್ಷಂಪ್ರತಿ ಸಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಧಾರ್ಮಿಕ ವಿಚಾರವಾಗಿ ಬೇರೆ ಬೇರೆ ಸಾಮಾಜಿಕ ಕೆಲಸ ಕಾರ್ಯಗಳನ್ನು, ಶೈಕ್ಷಣಿಕ ನೆರವು, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಅದಲ್ಲದೇ ಧಾರ್ಮಿಕ ಜಾಗ್ರತಿಯನ್ನು ಮೂಡಿಸುವ ಉದ್ದೇಶದಿಂದ ಭಜನೆ, ಕುಣಿತ ಭಜನೆ, ಲಲಿತ ಸಹಸ್ರನಾಮಾರ್ಚನೆ, ಗುರುಪೂರ್ಣಿಮೆ ಮುಂತಾದ ಧಾರ್ಮಿಕತೆಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ಆಚರಿಸುತ್ತದೆ.

ಆ ಧಾರ್ಮಿಕ ಬೆಳವಣಿಗೆಯ ನಿಟ್ಟಿನಿಂದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಅದರ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜಯ ಸಿ ಶೆಟ್ಟಿ ಮತ್ತು ಶಶಿಧರ ಶೆಟ್ಟಿಯವರ ಮುತುವರ್ಜಿಯಿಂದ ಮತ್ತು ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ ಹಾಗೂ ಎಲ್ಲಾ ಪಧಾದಿಕಾರಿಗಳ ಬೆಂಬಲದೊಂದಿಗೆ ಈ ಬಾರಿ ಸೆಪ್ಟೆಂಬರ್ 21 ರಿಂದ ಸೆಪ್ಟೆಂಬರ್ 24 ರವರೆಗೆ ಉತ್ತರ ಪ್ರದೇಶದಲ್ಲಿರುವ ಪುಣ್ಯಕ್ಷೇತ್ರಗಳಾದ ಪ್ರಯಾಗ್ರಾಜ್, ತ್ರಿವೇಣಿ ಸಂಗಮ (ಗಂಗಾ ಯಮುನ ಸರಸ್ವತಿ) ಅಯೋದ್ಯೆ ರಾಮಮಂದಿರ, ವಾರಣಾಸಿ, ಕಾಶಿ ವಿಶ್ವನಾಥ, ಗಂಗಾ ಆರತಿ ಅಲ್ಲದೇ ಹಲವಾರು ದೇವಸ್ಥಾನ, ಮಂದಿರ, ಐತಿಹಾಸಿಕ ತೀರ್ಥ ಸ್ನಾನ ಮತ್ತು ಪುಣ್ಯಕ್ಷೇತ್ರಗಳ ದರ್ಶನಗೈಯುವ ಯೋಚನೆಯಿಂದ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಯಾತ್ರಾ ಪಯಣದಲ್ಲಿ ಅಸೋಸಿಯೇಷನ್ ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ಎನ್ ಶೆಟ್ಟಿ, ಉಪಾಧ್ಯಕ್ಷೆ ಸಹಾನಿ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷರುಗಳು, ಕಾರ್ಯಾಧ್ಯಕ್ಷೆಯರು ಹಾಗೂ ಕೆಲವು ಹಿರಿಯ ವಯಸ್ಕರು ಸೇರಿ ಸುಮಾರು 52 ಸದಸ್ಯರು ಕುಟುಂಬ ಸಮೇತರಾಗಿ ಭಾಗಿಯಾಗಲಿದ್ದಾರೆ. ಇದು ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಸದಸ್ಯರ ಧಾರ್ಮಿಕತೆಯ ಮೇಲಿನ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.ನಮ್ಮ ಪೂರ್ವಿಕರ ಮಾತಿನಂತೆ ವಾರಣಾಸಿಯು ಗಂಗಾ ತೀರದಲ್ಲಿದ್ದು, ಹಿಂದೂ ಧರ್ಮದ ಅತ್ಯಂತ ಪವಿತ್ರ ನಗರ. ಗಂಗಾ ಸ್ನಾನ ಮನುಷ್ಯರ ಸಂಕಷ್ಟಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಇದ್ದು, ಎಲ್ಲಾ ಸದಸ್ಯರು ಅದರಲ್ಲಿಯೂ ಕೆಲವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಆಸಕ್ತಿಯಿಂದ ಈ ಪುಣ್ಯ ಯಾತ್ರೆಗೆ ಉತ್ಸುಕರಾಗಿದ್ದಾರೆ. ಒಟ್ಟಿನಲ್ಲಿ ಈ ಯಾತ್ರೆಯಲ್ಲಿ ಒಂದಿಷ್ಟೂ ವಿಘ್ನಗಳು ಬಾರದೆ, ಒಂದೊಳ್ಳೆಯ ಕಾರ್ಯಕ್ರಮವಾಗಲಿ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಅಧ್ಯಕ್ಷರು, ಸದಸ್ಯರು, ಯಾತ್ರಾರ್ಥಿಗಳು ಭಗವಂತನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.