ಸಾರ್ವಜನಿಕರ ಬಹು ಬೇಡಿಕೆಯ ರಸ್ತೆಯಾದ ಕುಳಾಯಿ ಕಾನ ಬ್ರಿಡ್ಜ್ ರಸ್ತೆಗೆ ಸುಮಾರು 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂಧರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ದಿನಕರ್ ಇಡ್ಯಾ, ಸುನಿಲ್ ಕುಳಾಯಿ, ಮಹಾ ಶಕ್ತಿಕೇಂದ್ರ ಸುರತ್ಕಲ್ 1 ಮತ್ತು 2ರ ಬಿಜೆಪಿಯ ನಿಕಟ ಪೂರ್ವ ಮನಪಾ ಸದಸ್ಯರು, ಬಿಜೆಪಿ ಮುಂಖಡರು, ವಾರ್ಡ್ ಅಧ್ಯಕ್ಷರು, ಕಾರ್ಯದರ್ಶಿ, ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪ್ರಮುಖ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.