ಮೀರಾ ಭಾಯಂದರ್ ಪರಿಸರದ ಜನಪ್ರಿಯ ಸಂಘಟಕ, ಸಮಾಜ ಸೇವಕ, ಬಂಟ್ಸ್ ಫೋರಂ ಮೀರಾ ಭಾಯಂದರ್ ಸಮಿತಿಯ ಸಕ್ರಿಯ ಸದಸ್ಯ, ಭಗವಾನ್ ನಿತ್ಯಾನಂದ ಸೇವಾ ಟ್ರಸ್ಟ್ ಇದರ ಪದಾಧಿಕಾರಿ, ಭಾಜಪ ದಕ್ಷಿಣ ಭಾರತೀಯ ಘಟಕದ ಸದಸ್ಯ, ದಹಿಸರ್ ವೈಶಾಲಿ ನಗರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ಇದರ ಅಧ್ಯಕ್ಷ, ತನ್ನ ಸ್ನೇಹ ಪರ ವ್ಯಕ್ತಿತ್ವದಿಂದ ಜನಾನುರಾಗಿ ಆಗಿದ್ದ ಹೊಟೇಲ್ ಉದ್ಯಮಿ ಚಿರಂಜೀವಿ ಸುರೇಶ್ ಶೆಟ್ಟಿಯವರು ನಿಧನರಾಗಿದ್ದಾರೆ.

ಸುರೇಶ್ ಶೆಟ್ಟಿಯವರ ನಿಧನಕ್ಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಗೌರವ ಸಂಪಾದಕರಾದ ಅರುಣ್ ಶೆಟ್ಟಿ ಎರ್ಮಾಳ್, ವ್ಯವಸ್ಥಾಪಕ ಸಂಪಾದಕ ಕೆ ಆರ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಹೋಟೆಲು ಉದ್ಯಮಿ ಗಣೇಶ್ ಶೆಟ್ಟಿ ತನಿಷ್ಕ, ಬಂಟ್ಸ್ ಫೋರಂ ಅಧ್ಯಕ್ಷ ಉದಯ ಶೆಟ್ಟಿ ಮಲಾರಬೀಡು ತೀವ್ರ ಸಂತಾಪ ಸೂಚಿಸಿದ್ದಾರೆ.





































































































