Author: admin
ಕಾಲ್ತೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಾಡಿ, ಮೂರೂರುವಿನಲ್ಲಿ ಸ್ವಯಂಸ್ಪೂರ್ತಿ ಫೌಂಡೆಶನ್ ಬೆಂಗಳೂರು, ಇವರು ಸಮೃದ್ಧ ಬೈಂದೂರು-300 ಟ್ರೀಸ್ ಯೋಜನೆಯಡಿ ನಿರ್ಮಿಸಿರುವ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಬೈಂದೂರು ಶಾಸಕರ ಪ್ರತಿನಿಧಿಯಾಗಿ ಉದ್ಯಮಿ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಕಾಲ್ತೋಡು ಪಂಚಾಯತ್ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ, ಪ್ರಮುಖರಾದ ಆದಿರಾಜ್ ಜೈನ್, ಗೋಪಾಲ್ ಶೆಟ್ಟಿ ಮೂರೂರು ದೊಡ್ಮನೆ, ಚಂದ್ರಶೇಖರ್ ಶೆಟ್ಟಿ ಹೊರ್ಲೆಮನೆ, ಅಣ್ಣಪ್ಪ ಪೂಜಾರಿ ಕಮ್ತಾಡಿಮನೆ, CRP ರಾಮನಾಥ್ ಮೇಸ್ತ, ಪ್ರದೀಪ್ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹೆರಿಯಣ್ಣ ಮಡಿವಾಳ, ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಜಾ, ಸಮೃದ್ಧ ಬೈಂದೂರು ತಂಡದ ಸದಸ್ಯರಾದ ಶೋಧನ್ ಮಲ್ಪೆ ಉಪಸ್ಥಿತರಿದ್ದರು. ಕಪ್ಪಾಡಿ ಅಂಗನವಾಡಿ ಕೇಂದ್ರಕ್ಕೆ ಕ್ರೀಡಾ ಸಾಮಾಗ್ರಿಗಳನ್ನು ಸ್ವಯಂಸ್ಪೂರ್ತಿ ಫೌಂಡೆಶನ್ ವತಿಯಿಂದ ವಿತರಿಸಲಾಯಿತು. ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ತಂದೆಯವರು ಓದಿದ ಶಾಲೆ ಜೊತೆಗೆ ಗ್ರಾಮೀಣ ಪ್ರದೇಶವಾದ ಕಪ್ಪಾಡಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್…
ವಿದ್ಯಾಗಿರಿ: ‘ಸ್ವಾಯತ್ತ ಎಂಬುದು ಶಿಕ್ಷಣ ಸಂಸ್ಥೆಯ ಸ್ವಯಂ ಪರಿಕಲ್ಪನೆಗಳ ಸಾಕಾರಕ್ಕೆ ದೊರೆತ ಮಹತ್ತರ ಜವಾಬ್ದಾರಿ. ಇಲ್ಲಿ ಬೋಧಕರು ನಿರಂತರ ವಿದ್ಯಾರ್ಥಿಗಳಾಗಬೇಕು’ ಎಂದು ಮಂಗಳೂರಿನ ಡಾ.ಶಿವರಾಮ ಕಾರಂತ ನಿಸರ್ಗ ಧಾಮದ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ (ಸ್ವಾಯತ್ತ) ಶುಕ್ರವಾರ ನಡೆದ ಆಂತರಿಕ ಮೌಲ್ಯ ಖಾತರಿ ಕೋಶ (ಐಕ್ಯುಎಸಿ)ದ ಸಭೆಯಲ್ಲಿ ಅವರು ಮಾತನಾಡಿದರು. ‘ಸಂಸ್ಥೆಗಳು ತಮ್ಮ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಹಾಗೂ ಅಪಾಯದ (ಸ್ವೊಟ್) ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಂಡಾಗ ಪ್ರಗತಿ ಕಾಣಲು ಸಾಧ್ಯ. ದೂರದೃಷ್ಟಿ, ಸಮಯ ನಿರ್ಬಂಧಿತ ಗುರಿ, ನಿರಂತರ ಕಲಿಕೆ ಇರಬೇಕು’ ಎಂದ ಅವರು, ‘ಕಾಲೇಜು ಎಂದರೆ ಕೇವಲ ಕಟ್ಟಡವಲ್ಲ. ಅದೊಂದು ಜೀವಂತಿಕೆಯ ಅಸ್ತಿತ್ವ’ ಎಂದರು. ‘ಕೈಗಾರಿಕೆಗಳ ಜೊತೆ ಸಂಬAಧ, ಔದ್ಯೋಗಿಕ ತರಬೇತಿ, ಕೌಶಲ ವೃದ್ಧಿ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ಪಕ್ವತೆಯಲ್ಲಿ ಆಳ್ವಾಸ್ ಯಾವಾಗಲೂ ಮಾದರಿ’ ಎಂದು ಬಣ್ಣಿಸಿದರು. ಯೆನೆಪೋಯಾ ಪರಿಗಣಿತ ವಿಶ್ವವಿದ್ಯಾಲಯ ಆಯುಷ್ ಸಂಶೋಧನಾ ಕೇಂದ್ರದ ವಿಜ್ಞಾನಿ ಹಾಗೂ…
ವಿದ್ಯಾಗಿರಿ: ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ.ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು. ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ…
ವಿದ್ಯಾಗಿರಿ: 21ನೇ ಶತಮಾನದಲ್ಲಿ ಜನರಿಗೆ ಆಯುರ್ವೇದದ ಮಹತ್ವ ತಿಳಿಯುತ್ತಿರುವುದು ಸಂತಸದ ಬೆಳವಣಿಗೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್ನ ಸ್ತ್ರೀ ರೋಗ ತಜ್ಞೆ ಡಾ. ರೇವತಿ ಭಟ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗದ ವತಿಯಿಂದ ಪ್ರಾಜ್ಞಾ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಎಂಡೊಮೆಟ್ರಿಯೊಸಿಸ್- ಒಂದು ಸಂಯೋಜಿತ ವಿಧಾನ’ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಗಾರ ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ಪಡೆದ ಜ್ಞಾನವನ್ನು ನಾವು ಇತರರಿಗೆ ತಿಳಿಸುವ ಅವಶ್ಯಕತೆ ಇದೆ. ಪ್ರಸ್ತುತ ವರ್ತಮಾನದಲ್ಲಿ ಜನರು ಸಾಕ್ಷಿಗಳನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು ಎಂದು ಹೇಳಿದರು. ನಮ್ಮ ಹಿಂದಿನ ತಲೆಮಾರಿನ ಜನರಿಗೆ ಪ್ರಕೃತಿಯಲ್ಲಿ ದೊರೆಯುವ ಔಷಧಿಗಳ ಬಗ್ಗೆ ಅಪಾರ ಜ್ಞಾನವಿದ್ದರೂ ಅವರು ಆ ಜ್ಞಾನವನ್ನು ಮುಂದಿನ ತಲೆಮಾರಿಗೆ ಪಸರಿಸಿಲ್ಲ. ಆದರೆ ಈ…
ಸರ್ಕಾರಿ ಶಾಲೆ ಉಳಿದ ಮಾತ್ರ ನಮ್ಮ ಖುಷಿ, ನೆನಪು ಹಾಗೂ ಸುಮಧುರ ಬಾಂಧವ್ಯ ಶಾಶ್ವತವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಹೀಗಾಗಿಯೇ 300 ಟ್ರಿಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಇದಕ್ಕೆ ದಾನಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ ಮತ್ತು ಕ್ರೀಡಾ ಸಾಮಗ್ರಿಗಳನ್ನೊಳಗೊಂಡ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಸ್ಥಾಪಿಸಲು ಸ್ವಯಂ ಸ್ಫೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರೇರಕವಾಗಿ ನಿಂತಿದ್ದಾರೆ ಎಂದು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಹೇರೂರು ಗ್ರಾಮದ ಉಳ್ಳೂರು-11 ಸರ್ಕಾರಿ ಶಾಲೆಯ ಶ್ರೇಯೋಭಿವೃದ್ಧಿಗಾಗಿ ರೂಪಿಸಿರುವ ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಸ್ಥಾಪಿಸಿರುವ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ…
ಆಜ್ರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡಿಗೆ- ಕೊಡ್ಲಾಡಿಯಲ್ಲಿ ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು, ಇವರು ಸಮೃದ್ಧ ಬೈಂದೂರು 300 ಟ್ರೀಸ್ ಯೋಜನೆಯಡಿ ನಿರ್ಮಿಸಿರುವ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಸ್ವಯಂಸ್ಪೂರ್ತಿ ಫೌಂಡೇಶನ್ ಸ್ಥಾಪಕರಾದ ಜಡ್ಕಲ್ ನಾಗರಾಜ ಶೆಟ್ಟಿಯವರು ಉದ್ಘಾಟಿಸಿದರು. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಅಡಿಗ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಸಂತೋಷ್ ಕುಮಾರ್, ಶಾಸಕರ ಪ್ರತಿನಿಧಿಯಾಗಿ ಸಮೃದ್ಧ ಬೈಂದೂರು ತಂಡದ ಸಂಯೋಜಕ ಶೋಧನ್ ಮಲ್ಪೆ ಅವರು ಉಪಸ್ಥಿತರಿದ್ದರು. ಕೊಡ್ಲಾಡಿ ಅಂಗನವಾಡಿ ಕೇಂದ್ರಕ್ಕೆ ಕ್ರೀಡಾ ಸಾಮಾಗ್ರಿಗಳನ್ನು ಸ್ವಯಂಸ್ಪೂರ್ತಿ ಫೌಂಡೇಶನ್ ವತಿಯಿಂದ ವಿತರಿಸಲಾಯಿತು. ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶವಾದ ಕೊಡ್ಲಾಡಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್ ಶಿಕ್ಷಣ ಒದಗಿಸಲು ಕಂಪ್ಯೂಟರ್ ಮತ್ತು ಪೀಠೋಪಕರಣಗಳು, ಗ್ರಂಥಾಲಯದ ವ್ಯವಸ್ಥೆ, ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಗಿದೆ.…
ದೇಶದ ವಿವಿಧ ಔಷಧ ತಯಾರಕ ಕಂಪೆನಿಗಳಿಂದ ಉತ್ಪಾದಿಸಲ್ಪಡುತ್ತಿರುವ ಸುಮಾರು 52 ಔಷಧಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ವರದಿ ನೀಡಿದೆ. ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಕಂಪೆನಿಗಳ ಔಷಧ ತಯಾರಿಕ ಘಟಕಗಳಲ್ಲಿ ಉತ್ಪಾದಿಸಲಾಗುತ್ತಿರುವ ಈ ಔಷಧಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದು ಸಂಸ್ಥೆ ನಡೆಸಿದ ಈ ಔಷಧಗಳ ಮಾದರಿಯ ಪರೀಕ್ಷೆ ವೇಳೆ ದೃಢಪಟ್ಟಿದೆ. ದೇಶದಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಪದೇ ಪದೆ ವಿವಿಧ ಔಷಧಗಳ ಗುಣಮಟ್ಟ, ಅವುಗಳಲ್ಲಿ ಬಳಸಲಾಗುವ ರಾಸಾಯನಿಕಗಳ ಬಗೆಗೆ ಔಷಧ ನಿಯಂತ್ರಣ ಸಂಸ್ಥೆ ಆದಿಯಾಗಿ ವಿವಿಧ ಔಷಧ ತಜ್ಞರು ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಹೊರತಾಗಿಯೂ ಇಂತಹ ಕಳಪೆ ಗುಣಮಟ್ಟದ, ಅಸುರಕ್ಷಿತ ಔಷಧಗಳನ್ನು ಕಂಪೆನಿಗಳು ಉತ್ಪಾದಿಸುತ್ತಲೇ ಬಂದಿವೆ. ಅವು ಮಾರುಕಟ್ಟೆಗೆ ಬಿಡುಗಡೆಯಾಗಿ ಜನರ ಕೈಸೇರುತ್ತಲೇ ಇವೆ. ಔಷಧಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಹಲವಾರು ಮಾನದಂಡಗಳನ್ನು ಪೂರೈಸಬೇಕಾಗಿರುತ್ತದೆ. ಇದರ ಹೊರತಾಗಿಯೂ ಇಂತಹ ಕಳಪೆ ಗುಣಮಟ್ಟದ ಔಷಧಗಳು ಸರಾಗವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ ಎಂದಾದಲ್ಲಿ…
ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಣೆಯ ಖ್ಯಾತ ಮಕ್ಕಳ ವೈದ್ಯ ಡಾ. ಸುಧಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಜುಲೈ 14ರಂದು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷಯಧಾಮದಲ್ಲಿ ಮಕ್ಕಳ ಉಚಿತ ಅರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರ ನಡೆಯಲಿದೆ. ಇದಕ್ಕೆ ಡಾ. ಮೋಹನ್ ಆಳ್ವರ ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದ್ರಿ ಇವರ ಸಹಕಾರವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಹಾಗೂ ಕಲಾವಿದರ ತುರ್ತು ಆರೋಗ್ಯ ಚಿಕಿತ್ಸಾ ವೆಚ್ಚಕ್ಕೆ ಸುಮಾರು 20 ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನು ವಿತರಿಸಲಾಯಿತು. ಎಂಪಾಯರ್ ಮಾಲ್ ನಲ್ಲಿರುವ ಸಿಎ ಸುದೇಶ್ ಕುಮಾರ್ ರೈ ಇವರ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಒಟ್ಟು 15 ಮಂದಿ ಕಲಾವಿದರಿಗೆ, ಬಡಗುತಿಟ್ಟು 9 ಮಂದಿ ಕಲಾವಿದರು, ತೆಂಕುತಿಟ್ಟಿನ 5 ಮಂದಿ ಕಲಾವಿದರು ಹಾಗೂ ಓರ್ವ ದೈವಾರಾಧನ ಕಲಾವಿದನಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ವಿತರಿಸಿದರು. ಈ ಸಂದರ್ಭದಲ್ಲಿ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಸಿಎ ಸುದೇಶ್ ಕುಮಾರ್ ರೈ, ಪುರುಷೋತ್ತಮ ಭಂಡಾರಿ ಅಡ್ಯಾರ್, ಕದ್ರಿ ನವನೀತ ಶೆಟ್ಟಿ, ಪ್ರದೀಪ ಆಳ್ವ ಕದ್ರಿ, ರವಿ ಶೆಟ್ಟಿ ಅಶೋಕನಗರ, ಬಾಳ ಜಗನ್ನಾಥ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ, ಸಿಎ ವೃಂದಾ ಕೊನ್ನಾರ್ ಉಪಸ್ಥಿತರಿದ್ದರು.
ವಿದ್ಯಾಗಿರಿ: ಪರಿಸರ ಮಾಲಿನ್ಯಕ್ಕೆ ನಾವೇ ಕಾರಣೀಕರ್ತರು, ಇದರ ಪರಿಣಾಮವನ್ನು ನಾವೇ ಎದುರಿಸಬೇಕು ಎಂದು ಆಳ್ವಾಸ್ಕಾ ಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್)ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ನಾವು ತಿನ್ನುವ ಆಹಾರವೂ ಕಲುಷಿತಗೊಂಡಿದೆ. ಇದರಿಂದಾಗಿ ಅನಾರೋಗ್ಯದ ಸಮಸ್ಯೆಯೂ ಹೆಚ್ಚಿದೆ ಎಂದರು. ಭಾರತದಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗಿದೆ. ನಮ್ಮ ದೇಶದ ಸಮತೋಲನಕ್ಕೆ ಕನಿಷ್ಠ ಶೇಕಡ 20ರಷ್ಟು ಕಾಡಿನ ಅವಶ್ಯಕತೆ ಇದೆ. ಆದರೆ ಪ್ರಸ್ತುತವಾಗಿ ಕೇವಲ ಶೇ.8 ರಿಂದ 9 ಮಾತ್ರ ಕಾಡಿನ ಪ್ರಮಾಣವಿರುವುದು ಅಪಾಯದ ಸಂಕೇತ ಎಂದರು. ಪರಿಸರ ದಿನವಾದರೂ ಒಬ್ಬ ವ್ಯಕ್ತಿ ಒಂದು ಗಿಡವನ್ನು ಬೆಳೆಸುವುದರಿಂದ ಪರಿಸರಕ್ಕೆ ಆತ ನೀಡುವ ಕೊಡುಗೆ ಅಪಾರವಾಗಿರುತ್ತದೆ. ನೀರನ್ನು ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪಡೆಯುವ ಸಮಯ ದೂರ ಇಲ್ಲ.. ಇನ್ನಾದರೂ ಜನತೆ ಎಚ್ಚರರಾಗಿ ನೀರನ್ನು ಮಿತವಾಗಿ ಬಳಸ ಬೇಕು ಎಂದರು. ಆಳ್ವಾಸ್ ಕಾಲೇಜಿನ…