ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ದೇವಸ್ಥಾನದ ನೇತೃತ್ವದಲ್ಲಿ ನಮ್ಮ ಫ್ರೆಂಡ್ಸ್ ಸಹಕಾರದೊಂದಿಗೆ ಮುದ್ದುಕೃಷ್ಣ ಸ್ಪರ್ಧೆ ನೆರವೇರಿತು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಮುದ್ದುಕೃಷ್ಣ ಸ್ಪರ್ಧೆಯಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಹಾಗೂ ಮುದ್ದು ಮಕ್ಕಳಲ್ಲಿ ದೇವರನ್ನು ಕಾಣುವ ಕಾರಣದಿಂದ ಮುದ್ದುಕೃಷ್ಣ ಸ್ಪರ್ಧೆ ಅರ್ಥಪೂರ್ಣ ಎಂದು ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಲ್ಲಡ್ಕ ಕೋರಿಬೆಟ್ಟು ಗುತ್ತು ಸುರೇಂದ್ರ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೃಷ್ಣ ಪೂಜಾರಿ ಬಂಡ್ರೊಟ್ಟು, ಸುಜಾತ ಸಬೋಧ ಶೆಟ್ಟಿ, ನಲಿನಾಕ್ಷಿ ಸಪಲಿಗ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸಾಯಿನಾಥ ಶೆಟ್ಟಿ, ನಮ್ಮ ಫ್ರೆಂಡ್ಸ್ ನ ಗೌರವ ಸಲಹೆಗಾರರಾದ ಉದಯ ಮುಂಡ್ಕೂರು, ಶರತ್ ಶೆಟ್ಟಿ, ಆನಂದ ಸಾಲಿಯಾನ್, ಮುಂಡ್ಕೂರು ಭಾರ್ಗವ ಜೆಸಿಐ ನ ಅಧ್ಯಕ್ಷ ವಸಂತ, ತೀರ್ಪುಗಾರರಾದ ನೇಹ, ಪಾವನ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.