Author: admin
ಜಡ್ಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ – 2025ರ ಅಂಗವಾಗಿ ಪ್ರತಿಭಾ ಸಿಂಚನ ಕಾರ್ಯಕ್ರಮ ಜರಗಿತು. ಬೆಳಗ್ಗೆ ಜಡ್ಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಜೆ ಶೆಟ್ಟಿ ಧ್ವಜಾರೋಹಣಗೈದರು. ಜಡ್ಕಲ್ ಸೈಂಟ್ ಜಾರ್ಜ್ ಚರ್ಚ್ ಧರ್ಮಗುರು ಮಾಣಿ ವಿದ್ಯಾರ್ಥಿಗಳ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಸಂಜೆ ಸಭಾ ಕಾರ್ಯಕ್ರಮವನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಬೆಳಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ದೇವದಾಸ್ ವಿಜೆ, ಲಕ್ಷ್ಮಿ ಚಂದನ್, ಬೆಂಗಳೂರಿನ ಸ್ವಯಂಸ್ಪೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ನಾಯಕ್, ಉಪಾಧ್ಯಕ್ಷ ರಾಘವೇಂದ್ರ ಬೆಳಾರಿ, ಸಂಘಟಕ ರಾಜೇಂದ್ರ ಶೆಟ್ಟಿ, ಕೊಲ್ಲೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶೈಲಜಾ, ವಿದ್ಯಾರ್ಥಿ ನಾಯಕ ಸುಧನ್ವ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೋಸಮ್ಮ ಸೆಬಾಸ್ಟಿಯನ್ ಸ್ವಾಗತಿಸಿದರು. ಶಿಕ್ಷಕಿ ಗೀತಾ ವರದಿ ವಾಚಿಸಿದರು. ಶಿಕ್ಷಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
ಗ್ಲೋಬಲ್ ಹೆಲ್ತ್ ಕೇರ್ ವೆಲ್ನೆಸ್ ಅವಾರ್ಡ್ಸ್ ಮತ್ತು ಸಮಿಟ್ -2025 ರಲ್ಲಿ ಕೊಡ ಮಾಡುವ ಮೆಡಿಕಲ್ ಎಂಟರ್ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗೆ ಜನ ವೈದ್ಯದ ಸಂಸ್ಥಾಪಕ ಡಾ. ಅಬಿತ್. ಬಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಜನವರಿ 26ರಂದು ಚೆನ್ನೈನ ಸಿಟಿ ಸೆಂಟರ್ ನ ರಾಡಿಸನ್ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಬೆಂಗಳೂರಿನಲ್ಲಿ ಮನೆ ಭೇಟಿ ಮಾಡಿ ಚಿಕಿತ್ಸೆ ನೀಡುವ “ಜನವೈದ್ಯ”ಎಂಬ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ತನ್ಮೂಲಕ ಕಳೆದ ಮೂರೂವರೆ ವರ್ಷಗಳಲ್ಲಿ 2500ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದ್ದಾರೆ. 2024ರ ನವೆಂಬರ್ ನಿಂದ ಕಾರ್ಕಳದಲ್ಲೂ ಜನವೈದ್ಯ ಸೇವೆಯನ್ನು ಪ್ರಾರಂಭಿಸಿದ್ದಾರೆ. ಇವರು ಮೂಲತಃ ಕಾರ್ಕಳ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು, ಭಾಸ್ಕರ ಶೆಟ್ಟಿ ಮತ್ತು ಅಮೃತ ಶೆಟ್ಟಿ ದಂಪತಿ ಪುತ್ರ, ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದು, ಸೇಥ್ ಜಿಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಎಂಡಿ ಸಮುದಾಯ ವೈದ್ಯಕೀಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಬಂಟರ ಸಂಘ ಬೆಂಗಳೂರು ಈ ಬಾರಿ ಯುವ ಬಂಟರ ಸಮಿತಿ ಬಂಟರನ್ನು ಒಗ್ಗೂಡಿಸಿ ಅದ್ದೂರಿಯಾಗಿ 31ನೇ ಡಿಸೆಂಬರ್ 2024 ರಂದು ಸಂಘದ ಆವರಣದಲ್ಲಿ ಹೊಸ ವರ್ಷಾಚರಣೆಯನ್ನು ಹಮ್ಮಿಕೊಂಡಿತ್ತು. ನವೆಂಬರ್ 22ರಂದು ಗಣ್ಯರ ಸಮ್ಮುಖದಲ್ಲಿ ಪೋಸ್ಟರ್ ಲೋಕಾರ್ಪಣೆ ಮಾಡಿ ಸಮಾಜದ ಜನರ ಜೊತೆ ಕಾರ್ಯಕ್ರಮ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದ ತಂಡ ಜನರ ಮನ ಮುಟ್ಟಲು ಎಲ್ಲಾ ತರದಲ್ಲೂ ಪ್ರಯತ್ನಿಸಿತ್ತು.31ರ ಸಂಜೆ ಕಿಕ್ಕಿರಿದು ತುಂಬಿದ್ದ ಬಂಟರ ಬಳಗ, ದೀಪಾಲಂಕಾರಗೊಂಡು ಮಿರುಗುತ್ತಿದ್ದ ಬಂಟರ ಸಂಘದ ಆವರಣದಲ್ಲಿ ಸಂಜೆ 7 ರಿಂದಲೇ ಕಾರ್ಯಕ್ರಮಗಳು ಪ್ರಾರಂಭವಾದವು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಯುವ ಸಮಿತಿ ಅಧ್ಯಕ್ಷ ಅಜಿತ್ ವಿ ಶೆಟ್ಟಿ ಹಾಗೂ ಸಂಚಾಲಕ ಪ್ರಸಾದ್ ಶೆಟ್ಟಿ ಅರೆಹೊಳೆ ಸಮೇತರಾಗಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವೇದಿಕೆ ಅಲಂಕರಿಸಿ ನೆರೆದ ಬಂಟ ಬಂಧುಗಳಿಗೆ ಸ್ವಾಗತಿಸಿ ಕಾರ್ಯಕ್ರಮಕ್ಕೆ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘಕ್ಕೆ ಒಂದು ಲಕ್ಷ ರೂಪಾಯಿ ಧನಸಹಾಯ ನೀಡಿದರು. ದೇಣಿಗೆಯ ಚೆಕ್ಕನ್ನು ನೀಡಿ ಸಮಾಜಮುಖಿ ಕೆಲಸ ಕಾರ್ಯ ನಿರ್ವಹಿಸುವಂತೆ ಹೇಳಿ ಶುಭ ಹಾರೈಸಿದರು. ಈ ಸಂಧರ್ಭ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪುತ್ತೂರು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷ ಕುಮಾರ್ ರೈ, ಕಾರ್ಯದರ್ಶಿ ಪ್ರಜ್ವಲ್ ರೈ ಸೊರಕೆ, ಪುತ್ತೂರು ಬಂಟರ ಸಂಘದ ಮಾಜಿ ಕಾರ್ಯದರ್ಶಿ ಮೊಹನ ರೈ ನರಿಮೊಗರು, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಉಪಸ್ಥಿತರಿದ್ದರು.
ಕಿಡ್ನಿ ಪೈಲೂರ್ ಪ್ರಕರಣದಲ್ಲಿ ಈಗ ಮೊವ್ವತ್ತರೊಳಗಿನ ಮಕ್ಕಳೂ ಜಾಸ್ತಿಯಾಗಿ ಸಿಲುಕುತ್ತಿದ್ದಾರೆ. ಕಿಡ್ನಿ ಡಯಾಲಿಸೀಸ್ ವಾರ್ಡಿಗೊಮ್ಮೆ ನೀವು ಎಂಟ್ರಿ ಕೊಟ್ಟರೆ ಈ ಕರಾಳ ಸತ್ಯ ನಿಮಗೂ ಅರ್ಥವಾದೀತು. ಸ್ಟಿಂಗ್ ಎನ್ನುವ ಹೆಸರಿನ ಬಣ್ಣ ಬಣ್ಣದ ಪೇಯವೊಂದು ಮಕ್ಕಳ ಕೈಗೆ ಬಹಳ ಸುಲಭವಾಗಿ ಸಿಗುತ್ತಿದೆ, ಕೇವಲ ಮೂರೇ ಮೂರು ದಿವಸ ಯಾವುದೇ ಮಗು ಸ್ಟಿಂಗ್ ಕುಡಿದರೆ ಅದರ ಅಡಿಕ್ಷನ್ ಶುರುವಾಗುತ್ತದೆ ಮತ್ತು ಆ ಮಗುವಿನ ಕರಾಳ ಅಂತ್ಯವೂ ಸಮೀಪಿಸುತ್ತದೆ! ಅಂಗಡಿ, ಬೇಕರಿಗಳ ಮತ್ತು ಮಾಲ್ ಗಳಲ್ಲಿ ಇದನ್ನ ಮಾರಾಟಕ್ಕಿಟ್ಟವರಿಗೆ ಮನೆಯಲ್ಲಿ ಮಕ್ಕಳಿದ್ದರೆ, ಕನಿಷ್ಠ ಪಾಪ ಪ್ರಜ್ಜೆ ಇದ್ದರೆ ದಯವಿಟ್ಟು ಸ್ಟಿಂಗ್ ಎನ್ನುವ ವಿಷವನ್ನ ಮಾರಾಟ ಮಾಡಿ ಪಾಪವನ್ನು ಕೊಳ್ಳಬೇಡಿ! ಯಾರದೋ ಮನೆಯ ಬೆಳಕು ಆರಲಿಕ್ಕೆ ನೀವೂ ಕಾರಣರಾಗುತ್ತೀರಿ ಎನ್ನುವುದನ್ನ ಮರೆಯಬೇಡಿ. ನಮ್ಮ ಟೀಮ್ ಅಭಿಮತ ಇದನ್ನ ಯಾವುದೇ ಅಂಗಡಿಯಲ್ಲಿ ಮಾರಾಟ ಮಾಡುವುದನ್ನ ಗಮನಿಸಿದರೂ ಅವರಿಗೆ ಮನವರಿಕೆ ಮಾಡಿ ಇನ್ನುಮುಂದೆ ಮಾರಾಟ ಮಾಡದಂತೆ ಒತ್ತಾಯಿಸುತ್ತದೆ. ನಾನೂ ರೆಡ್ ಬುಲ್ ಕುಡಿಯುತ್ತೇನೆ! ರಾತ್ರಿ ಪ್ರಯಾಣದ ವೇಳೆಯಲ್ಲಿ ನಿದ್ದೆ…
‘ಗ್ರಹ ಪಂಕ್ತಿಯಲ್ಲಿ ಅತ್ಯಂತ ಪ್ರಭಾವಶಾಲಿಯಾದ ಶನಿ ಗ್ರಹದ ಕಾರಣದಿಂದ ವಿವಿಧ ಬಗೆಯ ಜಾತಕ ದೋಷಗಳು ಸಂಭವಿಸುತ್ತವೆ. ಅದರ ನಿವಾರಣೆಗಾಗಿ ಉಳ್ಳವರು ದುಬಾರಿ ಶನಿ ಶಾಂತಿ ಪೂಜೆಗಳನ್ನು ಮಾಡಿಸುವುದು ವಾಡಿಕೆಯಾಗಿದೆ. ಆದರೆ ಶನಿಕಥಾ ಪ್ರವಚನ, ಪಠಣ, ಕೀರ್ತನ ಮತ್ತು ಅವುಗಳನ್ನು ಭಕ್ತಿಪೂರ್ವಕ ಶ್ರವಣ ಮಾಡುವುದರಿಂದ ಜನಸಾಮಾನ್ಯರೂ ಬಹು ಸುಲಭವಾಗಿ ಶನಿದೋಷ ಮುಕ್ತರಾಗಲು ಸಾಧ್ಯ’ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ‘ಶ್ರೀ ಶನೈಶ್ಚರ ಮಹಾತ್ಮೆ – ಯಕ್ಷ ಕಾವ್ಯ ಕಥನ’ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಅವರು ಮಾತನಾಡಿದರು. ಖ್ಯಾತ ಹರಿದಾಸ ಮತ್ತು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ ಕಾವ್ಯ ಗಾಯನ ಮಾಡಿದರು. ವರುಣ್ ಆಚಾರ್ಯ ಮತ್ತು ಸಮರ್ಥ್ ಉಡುಪ ಚೆಂಡೆ ಮದ್ದಲೆಗಳಲ್ಲಿ ಸಹಕರಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು.ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.…
ಕ್ರಿಯೇಟಿವ್ ಪ.ಪೂ. ಕಾಲೇಜು, ಕಾರ್ಕಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಿದ್ಧಾಪುರ, ಶೈಕ್ಷಣಿಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಸನಿವಾಸ ಪ್ರೇರಣಾ ಶಿಬಿರ – 2025 ಉದ್ಘಾಟನೆಗೊಳಿಸಲಾಯಿತು. ಶಿರಸಿಯ ಸಿದ್ಧಾಪುರ ಕಾನಸೂರಿನಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ಮಾತನಾಡಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏನಾಗಬೇಕೆಂದು ಕನಸು ಕಾಣುತ್ತಾರೋ ಅದನ್ನು ನನಸು ಮಾಡಲು ಮುಂದಿನ ಪಿ.ಯು.ಸಿ ಶಿಕ್ಷಣ ಅತ್ಯಂತ ಪ್ರಮುಖವಾದದ್ದು. ದೂರದರ್ಶಿತ್ವದೊಂದಿಗೆ ಮುಂದಿನ ಹೆಜ್ಜೆ ಇರಿಸಿ, ಉತ್ತಮ ಫಲಿತಾಂಶವೂ ಇಂತಹ ಶಿಬಿರಗಳಿಂದ ದೊರಕುತ್ತದೆ. ಶಿರಸಿ – ಸಿದ್ಧಾಪುರದ ಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ನಾಯ್ಕ ಅವರು ಮುಂದಿನ ಶೈಕ್ಷಣಿಕ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನಿಯಾಗಿ ಮೂಡಿಬರುವಂತೆ ಪ್ರಯತ್ನ…
ಮೂಡುಬಿದಿರೆ: ಹೊರಗಿನ ಪ್ರಪಂಚವನ್ನು ತೆರೆದ ಕಣ್ಣುಗಳಿಂದ ಕಂಡಾಗ ಅನೇಕ ಸಂಗತಿಗಳು ನಮ್ಮ ಮನಸ್ಸನ್ನು ತಟ್ಟಿ ಯೋಚನೆಗೀಡು ಮಾಡಿದಾಗ ಅಂತಹ ಸಂಗತಿಗಳೇ ನಮ್ಮನ್ನು ಕವಿತ್ವದೆಡೆಗೆ ಸೆಳೆಯುತ್ತವೆ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನುಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀ ಮಹಾವೀರ ಪ.ಪೂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಕಾವ್ಯ ಮತ್ತು ಜೀವನಪ್ರೀತಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಭಾವನಾತ್ಮಕ ಸಂಗತಿಗಳಿರಬಹುದು, ನೋವಿನ ಘಟನೆಗಳೇ ಇರಬಹುದು, ಸಂತೋಷದ ಕ್ಷಣಗಳೇ ಇರಬಹುದು ಆ ಸಂದರ್ಭಗಳಲ್ಲಿ ನಮ್ಮನ್ನು ಕಾಡುವ ಸಂವೇದನೆ, ಜೀವನಪ್ರೀತಿ ಕವಿಮನಸ್ಸಿಗೆ ಮೂಲ. ಒಳ್ಳೆಯ ಬರಹವೂ ಕಾವ್ಯವಾಗಬಲ್ಲುದು ಮತ್ತು ಕಾವ್ಯ ರಚಿಸದಿದ್ದರೂ ಜೀವನ ಪ್ರೀತಿಯ ಸಂವೇದನೆ ಇರುವವರೆಲ್ಲರೂ ಕವಿಗಳೇ ಆಗಿರುತ್ತಾರೆ ಎಂದರು. ಸಭಾಧ್ಯಕ್ಷತೆಯನ್ನುವಹಿಸಿದ್ದ ಕ.ಸಾ.ಪ. ಮೂಡುಬಿದಿರೆತಾಲೂಕು ಘಟಕದ ಅಧ್ಯಕ್ಷ ಪ್ರೊ. ಕೆ.ವೇಣುಗೋಪಾಲ ಶೆಟ್ಟಿಯವರು ಮಾತನಾಡಿ, ಇಂದಿನ ಯುವಜನತೆಯಲ್ಲಿ ಭಾವನಾತ್ಮಕ ಸಂಬಂಧಗಳು…
ಮೂಡುಬಿದಿರೆ: ಕಾಲ ಕಾಲಕ್ಕೆ ಸರಿಯಾದ ವಿದ್ಯೆ ಬುದ್ಧಿಯ ಜೊತೆಗೆ ಹೃದಯಕ್ಕೆ ಸಂಸ್ಕಾರವನ್ನು ಒದಗಿಸುವ ಕೆಲಸ ಈ ಪ್ರತಿಭಾ ಕಲೋತ್ಸವದ ಮೂಲಕ ಸಹಕಾರಗೊಳ್ಳಲಿದೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ನುಡಿದರು. ಭಾರತ್ ಸ್ಕೌಟ್ಸ್ ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ‘ಪ್ರತಿಭಾ ಕಲೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರತಿಭಾ ಕಲೋತ್ಸವ ಹಮ್ಮಿಕೊಂಡಿರುವುದು ಖುಷಿ ನೀಡಿದೆ. ಪಠ್ಯೇತರವಾಗಿ ಮನಸ್ಸನ್ನು ಕಟ್ಟುವ ಇಂತಹ ಕರ‍್ಯಕ್ರಮಗಳು ಎಲ್ಲಾ ಭಾಗಗಳಲ್ಲೂ ನಡೆಯಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಕುರಿತು ಇನ್ನಷ್ಟು ಜಾಗೃತಿ ಮೂಡಿ, ಸ್ಕೌಟ್ಸ್ ಗೈಡ್ಸ್ ಆಂದೋಲನ ದೇಶದಾದ್ಯಂತ ಮುಂಚೂಣಿಯಲ್ಲಿ ನಿಲ್ಲಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು…
ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉದ್ಯೋಗ ಕೌಶಲ್ಯ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ 2025 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಹೊಸ ಬ್ಯಾಚ್ ಗಳನ್ನು ಲಯನ್ಸ್ ವಲಯ-1 ರ ವಲಯ ಅಧ್ಯಕ್ಷ ಹಾಗೂ ದುರ್ಗಾಂಬಾ ವಿದ್ಯಾ ಸಂಸ್ಥೆ ಅಲಂಕಾರು ಇದರ ಸಂಚಾಲಕರಾದ ದಯಾನಂದ ರೈ ಮನವಳಿಕೆ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತರಬೇತಿಗೆ ಸೇರಿದ ವಿದ್ಯಾರ್ಥಿಗಳಿಗೆ ಅವರು ಶುಭ ಹಾರೈಸಿ ವಿದ್ಯಾಮಾತಾ ಅಕಾಡೆಮಿಯು ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರು ಈಗಾಗಲೇ ತರಬೇತಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಯಾನಂದ ರೈ ಮನವಳಿಕೆಯವರು ಬಹುಮಾನವನ್ನು ವಿತರಿಸಿದರು. ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ವಿದ್ಯಾಮಾತಾ ಅಕಾಡೆಮಿಯಲ್ಲಿ ಎಫ್.ಡಿ.ಎ., ಎಸ್.ಡಿ.ಎ., ಪಿ.ಡಿ.ಓ., ವಿ.ಎ.ಓ., ಬ್ಯಾಂಕಿಂಗ್ ಕಾರ್ಪೊರೇಟಿವ್, ರೈಲ್ವೆ…