ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಮೂಲ್ಕಿ ಮೂಡುಬಿದ್ರೆ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಇಂದು ಮೂಡುಬಿದಿರೆಯ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ, ಮಾಸ್ಟರ್ ಟ್ರೈನರ್ ಎ.ಜಿ. ಸೋನ್ಸ್ ಐಟಿಐ ಇದರ ತರಬೇತಿ ಅಧಿಕಾರಿ ಕೆ. ಶಿವಪ್ರಸಾದ್ ಹೆಗ್ಡೆ ಮತ್ತು ಮೂಡುಬಿದಿರೆ ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ| ಹರೀಶ್ ಎಚ್, ಚುನಾವಣಾ ಶಾಖೆಯ ಕೇಶವ ಹಾಗೂ ಮಲ್ಲೇಶ್ ಉಪಸ್ಥಿತರಿದ್ದರು.201 ಮೂಡುಬಿದಿರೆ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಮೇಲ್ವಿಚಾರಕರು, ಬೂತ್ ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಹಾಜರಿದ್ದರು. ಈ ವಿಶೇಷ ಸಮಗ್ರ ಪರಿಷ್ಕರಣೆಯು ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002 ರಲ್ಲಿ ನಡೆದಿದ್ದು, 23 ವರ್ಷಗಳ ಬಳಿಕ ಈ ಪ್ರಕ್ರಿಯೆ ಮತ್ತೆ ನಡೆಯುತ್ತಿದೆ. ಇದು ಮತದಾರರ ಪಟ್ಟಿಯಲ್ಲಿನ ಎಲ್ಲಾ ಲೋಪದೋಷಗಳನ್ನು ದೂರೀಕರಿಸಲು ಸಹಕಾರಿಯಾಗಲಿದೆ.
