Author: admin
05 ಅಕ್ಟೋಬರ್ 2025 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ಧೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ' ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ.
ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ವೇದಿಕೆ – ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಅತಿಥಿಗಳ ಸಂದೇಶ
ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ 'ನಶಾ ಮುಕ್ತ ಭಾರತ ಅಭಿಯಾನ' ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳದಲ್ಲಿ 07 ಅಕ್ಟೋಬರ್ 2025 ರಂದು ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಾರುತಿ, ಜಿಲ್ಲಾ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಇವರು ಮಾತನಾಡಿ 'ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳು ನೈಜ ಜೀವನದ ಪಾಠ ಕಲಿಸುವ ಪಾಠಶಾಲೆಯಂತಿವೆ. ಸಮಾಜ ಸೇವೆ ಎಂದರೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅದು ಜೀವನಪೂರ್ತಿ ಅಳವಡಿಸಿಕೊಳ್ಳಬೇಕಾದ ಮನೋಭಾವ' ಎಂದು ಕರೆ ನೀಡಿದರು. ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ 'ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ, ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ' ಎಂದು ಹೇಳಿದರು. ಮುಖ್ಯ ಅತಿಥಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್…
ಮುಂಬೈ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಂಗಣದಲ್ಲಿ ಕುಸುಮೋದರ ಶೆಟ್ಟಿಯವರಿಗೆ ಗೌರವ ಗ್ರಂಥ ಅರ್ಪಣೆಯ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಎಲ್ಲರ ಬಗ್ಗೆ ಗ್ರಂಥ ರಚನೆ ಆಗುವುದಿಲ್ಲ. ಸಮಾಜದಲ್ಲಿನ ಅರ್ಹ ವ್ಯಕ್ತಿಗಳಿಗೆ ಮಾತ್ರ ಇಂತಹ ಗ್ರಂಥ ರಚನೆಯಾಗಿ ಅರ್ಪಣೆಯಾಗುತ್ತದೆ. ಬಡತನದಿಂದ ಮೇಲೆದ್ದು ಕಠಿಣ ಪರಿಶ್ರಮದಿಂದ ತಮ್ಮ ಉದ್ಯಮದಲ್ಲಿ ಸಾಧನೆಯೊಂದಿಗೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಂಡಿರುವ ಶ್ರೇಷ್ಠ ವ್ಯಕ್ತಿತ್ವದ ಕುಸುಮೋದರ ಶೆಟ್ಟಿ ಅವರಿಗೆ ಗೌರವ ಗ್ರಂಥ ಅರ್ಪಣೆಯಾಗಿರುವುದು ತುಂಬಾ ಸಂತೋಷವಾಗಿದೆ. ಕುಸುಮೋದರ ಶೆಟ್ಟಿಯವರ ತಾಯಿ ಭವಾನಿ ಶೆಟ್ಟಿ ಅವರು ತಮ್ಮ ಸಂಸಾರಕ್ಕೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರವನ್ನು ನೀಡಿದ್ದಾರೆ. ಅದನ್ನು ಕುಸುಮೋದರ ಶೆಟ್ಟಿಯವರು ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಬೆಳೆದಿದ್ದರಿಂದ ಅವರು ಇಂದು ಈ ಗೌರವ ಗ್ರಂಥ ಸ್ವೀಕರಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮಹಾರಾಷ್ಟ್ರದ ನೆಲದಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಬಡವರ ಕಣ್ಣೀರು ಒರೆಸುವ ಕಾಯಕವನ್ನು ಕುಸುಮೋದರ ಶೆಟ್ಟಿ ಹಾಗೂ ಅವರ ಪರಿವಾರದವರು ಮಾಡುತ್ತಾ ಬಂದಿರುವುದು ಅಭಿನಂದನೀಯ. ದೇವರು ಕುಸುಮೋದರ ಶೆಟ್ಟಿ ಅವರಿಗೆ ದುಡ್ಡು ಸಂಪತ್ತಿನ…
ಪ್ರಾಚೀನ ತುಳುನಾಡಿನ ತುಳುವೇಶ್ವರ ದೇವಸ್ಥಾನ ಬಸ್ರೂರಿನಲ್ಲಿ ಅಕ್ಟೋಬರ್ 6 ರಿಂದ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ ಚಿಂತನೆ ವೇಳೆ ಅತ್ಯಂತ ಅದ್ಭುತ ಮತ್ತು ಮಹತ್ವದ ಆಧ್ಯಾತ್ಮಿಕ ಕುರುಹು ಪತ್ತೆ ಸಂಭವಿಸಿದೆ. ಪ್ರಶ್ನೆಯ ಸಂದರ್ಭದಲ್ಲಿ ದೇವತಾಪ್ರೇರಿತ ಸಂದೇಶದ ಮೂಲಕ ಮುಳಲದೇವಿ ತುಳುವೇಶ್ವರಿ ದೇವಾಲಯದ ಅಸ್ತಿತ್ವ ಮತ್ತು ಅದರ ತಾತ್ತ್ವಿಕ ಮಹತ್ವ ಬೆಳಕಿಗೆ ಬಂದಿದೆ. ಪುರಾಣೋಕ್ತ ಪ್ರಕಾರ, ಆದಿ ವಂದಿತ ಜಗದೀಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧಳಾದ ಈ ದೇವಿ, ತುಳುವೇಶ್ವರನ ಪ್ರಾಣಸಖಿ ಎಂದೂ ಗುರುತಿಸಲ್ಪಟ್ಟಿದ್ದಾಳೆ. ತುಳುವೇಶ್ವರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಈ ದೇವಾಲಯದ ಕುರುಹುಗಳು ಪತ್ತೆಯಾಗಿದ್ದು, ಆಕೆ ಪೂಜಿತಳಾದ ದೇವಾಲಯದಲ್ಲಿ ಅತ್ಯಂತ ರಹಸ್ಯಮಯ ತಾಂತ್ರಿಕ ಶಕ್ತಿಯ ಮೇರು ಶ್ರೀಚಕ್ರ ಸ್ಥಾಪಿತವಾಗಿದ್ದುದಾಗಿ ತಿಳಿದುಬಂದಿದೆ. ಈ ಶ್ರೀ ಚಕ್ರವು ಕಾಲಕ್ರಮೇಣ ನೇಪಾಳ ದೇಶಕ್ಕೆ ಹಸ್ತಾಂತರಗೊಂಡಿದೆ ಎಂಬ ಮಾಹಿತಿಯೂ ಪ್ರಶ್ನೆಯ ವೇಳೆ ಸ್ಪಷ್ಟವಾಯಿತು. ಈ ಸ್ಥಿಸ್ತ್ಯಂತಾರದಿಂದಾಗಿ ಈ ದೇವಾಲಯಗಳು ಸಂಪೂರ್ಣವಾಗಿ ಕ್ಷಯ ಸಂಭವಿಸಿದೆ ಎಂದು ತಿಳಿದುಬಂದಿದೆ. ಪ್ರಶ್ನೆಯ ಸಂದೇಶದ ಪ್ರಕಾರ, ಈ ದೇವಿಯ ಶ್ರೀ ಚಕ್ರವನ್ನು ಮರು ಹುಡುಕಿ, ಅದರ…
ಇಂದಿನ ಪೋಷಕರ ಕನಸುಗಳು ಎಲ್ಲವೂ ಒಂದೇ ಗುರಿಯತ್ತ ಕೇಂದ್ರೀಕರಿಸಿರುವಂತೆ ಕಾಣುತ್ತಿವೆ. ನಮ್ಮ ಮಗು ಇಂಗ್ಲಿಷ್‌ನಲ್ಲಿ ಓದಬೇಕು. ಈ ಭಾವನೆ ಎಷ್ಟೇ ಪ್ರೀತಿಯಿಂದ ಹುಟ್ಟಿದರೂ, ಅದರ ಪರಿಣಾಮಗಳು ಎಷ್ಟೋ ಬಾರಿ ನೋವಿನ ಕಥೆಯಾಗುತ್ತವೆ. ಮಗುವಿನ ಭವಿಷ್ಯ ಹೊಳೆಯಬೇಕೆಂಬ ಆಶೆಯ ಹಿಂದೆ, ಅನೇಕ ಪೋಷಕರು ಸಾಲದ ಬಲೆಗೆ ಸಿಲುಕಿದ್ದಾರೆ. ಖಾಸಗಿ ಶಾಲೆಗಳ ಬಾಗಿಲು ತೆರೆಯುತ್ತಿದ್ದಂತೆ ಶುರುವಾಗುತ್ತದೆ ಹಣದ ಪಟ್ಟಿ ಪ್ರವೇಶ ಶುಲ್ಕ, ತಿಂಗಳ ಫೀ, ಬಸ್ ಶುಲ್ಕ, ಪುಸ್ತಕ, ಯೂನಿಫಾರ್ಮ್ ಮತ್ತು ಅನೇಕ ಅತಿರೇಕದ ‘ಅಕಾಡೆಮಿ’ ಖರ್ಚುಗಳು. ಪ್ರತಿ ತಿಂಗಳು ಪೋಷಕರು ಕೈಯಲ್ಲಿ ಬರುವ ವೇತನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಈ ಖರ್ಚಿಗೆ ಕಳೆದುಕೊಳ್ಳುತ್ತಾರೆ. ಕೆಲವರು ಸಾಲ ಮಾಡುತ್ತಾರೆ. ಕೆಲವರು ಚಿನ್ನದ ಉಂಗುರ, ಭೂಮಿ ಅಥವಾ ಬಾಡಿಗೆಯ ಮನೆಯ ಹಣವನ್ನೇ ಶಿಕ್ಷಣದ ಹೆಸರಲ್ಲಿ ತ್ಯಜಿಸುತ್ತಾರೆ. ಆದರೆ ಈ ಸಾಲದ ಹೊರೆ ಪೋಷಕರಿಗೆ ಮಾತ್ರವಲ್ಲ, ಮಕ್ಕಳಿಗೂ ಕಾಡುತ್ತದೆ. ಪೋಷಕರು ದಿನಪೂರ್ತಿ ಚಿಂತೆಯಿಂದ ತುಂಬಿರುವಾಗ, ಮಗುವು ಮನೆಯಲ್ಲಿ ನೆಮ್ಮದಿಯಿಂದ ಕಲಿಯುವುದು ಹೇಗೆ ಸಾಧ್ಯ? ನಾವು ನಿನ್ನ ಶಿಕ್ಷಣಕ್ಕೆ…
ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಏನು..? ಕಾಂತಾರ ಕೊಟ್ಟಿರುವ ಮೆಸೇಜ್ ನೋಡಿದರೆ.. ಪ್ಯಾನ್ ಇಂಡಿಯಾ ಕಲ್ಪನೆಯ ಮೂಲವನ್ನೇ ಗುಡಿಸಿ ಹಾಕಿದೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಎಂದರೆ ಒಂದು ವಿಚಿತ್ರ ನಂಬಿಕೆ ಇದೆ. ಒಂದೊಂದು ಚಿತ್ರರಂಗದಿಂದ ಒಬ್ಬೊಬ್ಬ ಸ್ಟಾರ್ ಬಂದ್ರೆ ಸಾಕು, ಪ್ಯಾನ್ ಇಂಡಿಯಾ ಆಗಿಬಿಡುತ್ತೆ ಎನ್ನುವ ನಂಬಿಕೆ. ಆ ನಂಬಿಕೆಯೇ ಸುಳ್ಳು ಎನ್ನುವ ಸಂದೇಶ ಕೊಟ್ಟಿದ್ದು ಕಾಂತಾರ. ಆಕ್ಚುವಲಿ, ಇಂತಹ ಒಂದು ಕೆಟ್ಟ ನಂಬಿಕೆ ಶುರುವಾಗಿದ್ದು ಕೂಡಾ ಹಿಂದಿ ಚಿತ್ರರಂಗದಿಂದಲೇ. ಸೋತು ಸುಣ್ಣವಾಗಿದ್ದ ಶಾರುಕ್ ಖಾನ್, ತಮ್ಮ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ಪುಟ್ಟ ಪಾತ್ರ ಕೊಟ್ಟರು. ರಜನಿಕಾಂತ್ ಇದ್ದಾರೆ ಎಂಬ ಕಾರಣಕ್ಕೆ ಸಿನಿಮಾಗೆ ದೊಡ್ಡ ಹೈಪ್ ಸಿಕ್ಕಿತು. ಆ ಹೈಪ್ ಸೃಷ್ಟಿಸಿ ನಿರ್ಮಾಪಕ ಲಾಭ ಮಾಡಿಕೊಂಡರು. ಆದರೆ.. ಇಂಡಸ್ಟ್ರಿಗೆ ಲಾಭವಾಗಲಿಲ್ಲ. ಸಿನಿಮಾ ನೆನಪಾಯ್ತಾ.. ರಾ ಒನ್. ಆದರೆ ಆ ಕಾನ್ಸೆಪ್ಟ್ ವರ್ಕೌಟ್ ಆಗಿದ್ದು ಕೆಜಿಎಫ್ ಚಿತ್ರದಲ್ಲಿ. ಕೆಜಿಎಫ್ ಚಿತ್ರದಲ್ಲಿ ಕಥೆಗಿಂತ ಪ್ರೆಸೆಂಟೇಷನ್ ವಿಭಿನ್ನವಾಗಿತ್ತು. ಕಥೆಗಿಂತ ಪಾತ್ರಗಳ ನಿರೂಪಣೆ ವಿಶೇಷವಾಗಿತ್ತು. ಅದಕ್ಕೆ ತಕ್ಕಂತೆ…
ಫಾರ್ಮಾಸಿಸ್ಟ್ ಗಳು ಸಮಾಜದ ಆರೋಗ್ಯದ ರಕ್ಷಕರು ಹಾಗೂ ವೈದ್ಯಕೀಯ ವ್ಯವಸ್ಥೆಯ ಶ್ರದ್ಧಾವಂತ ಯೋಧರು ಎಂದು ಮಾಹೆ ಮಣಿಪಾಲ ಫಾರ್ಮಸೂಟಿಕಲ್ ಸೈನ್ಸ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮುತಾಲಿಕ್ ನುಡಿದರು. ಅವರು ಆಳ್ವಾಸ್ ಫಾರ್ಮಾಸಿ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ಔಷಧೋದ್ಯಮ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಔಷಧ ತಯಾರಿಕೆ, ಗುಣಮಟ್ಟದ ಪರಿಶೀಲನೆ, ಸಂಶೋಧನೆ, ಲಸಿಕಾ ಅಭಿವೃದ್ಧಿ ಮತ್ತು ಕ್ಲಿನಿಕಲ್ ರಿಸರ್ಚ್ನಲ್ಲಿ ಫಾರ್ಮಾಸಿಸ್ಟ್ ಗಳ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು, ಫಾರ್ಮಾಸಿಸ್ಟ್ ಗಳು ಅತ್ಯಂತ ಅಗತ್ಯರಾಗಿದ್ದಾರೆ. ಫಾರ್ಮಾಸಿಸ್ಟ್ ಗಳು ವೈದ್ಯರು ಮತ್ತು ರೋಗಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಬದ್ಧತೆ, ಶಿಸ್ತು ಮತ್ತು ಸೇವಾ ಮನೋಭಾವ ಈ ವೃತ್ತಿಗೆ ಅವಶ್ಯಕವಾಗಿದ್ದು, ಫಾರ್ಮಸಿ ಶಿಕ್ಷಣವು ಮಾನವ ಸೇವೆಯ ಅತಿ ಶ್ರೇಷ್ಠ ವೃತ್ತಿಯಲ್ಲೊಂದಾಗಿದೆ ಎಂದರು. ಬೆಂಗಳೂರಿನ ಐ ಡ್ರೀಮ್ಸ್ ಹೆಲ್ತ್ ಕೇರ್ ನ ಮುಖ್ಯ ಕಾರ‍್ಯನಿರ್ವಾಹಣಾಧಿಕಾರಿ ಎಂ ಎಸ್ ಕಿರಣ್ ಕುಮಾರ್ ಮಾತನಾಡಿ,…
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಗ್ರಾಮಾಂತರ ಹಾಗೂ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಜಾಲಹಳ್ಳಿ ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಕು.ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಮುಂಬರುವ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ಸತೀಶ್ ಹಾಗೂ ಶ್ರೀಮತಿ ಚೈತ್ರಾ ದಂಪತಿಗಳ ಸುಪುತ್ರಿಯಾಗಿರುತ್ತಾರೆ ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು, ಟ್ರಸ್ಟಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದ್ದಿ ವರ್ಗದವರು ಹರ್ಷವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.
ಯುಎಇ ಬಂಟ್ಸ್ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಗರದ ಜೆ.ಎಸ್.ಎಸ್ ಶಾಲೆಯಲ್ಲಿ ಭಕ್ತಿ ಭಾವದೊಂದಿಗೆ ಅಕ್ಟೋಬರ್ 5 ರಂದು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಯುಎಇ ರಾಜ್ಯದ ಎಲ್ಲಾ ಬಂಟ ಬಾಂಧವರು ಹಾಗೂ ಯುಎಇಯ ಎಲ್ಲಾ ಸಮುದಾಯದ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು. ಶ್ರೀ ರಘು ಭಟ್ ಮತ್ತು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ವೈದಿಕ ವಿಧಿ ವಿಧಾನಗಳು ನೆರವೇರಿತು. ಪೂಜೆಯ ಪ್ರತಿನಿಧಿಯಾಗಿ ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮತ್ತು ಶ್ರೀಮತಿ ರೂಪಾಲಿ ಶೆಟ್ಟಿ, ಸಾಯಿನಾಥ್ ವಿಠಲ ಶೆಟ್ಟಿ ಮತ್ತು ಪ್ರತಿಮಾ ಸಾಯಿನಾಥ್ ಶೆಟ್ಟಿ, ಪೆರ್ಲಗುತ್ತು ಗೋಕುಲ್ ದಾಸ್ ರೈ ಮತ್ತು ನಿಶ್ಮಿತಾ ಗೋಕುಲ್ ದಾಸ್ ರೈ ದಂಪತಿಗಳು ಕುಳಿತರು. ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪೂಜೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಸ್ವಾಗತಿಸಿದರು.…
ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗ : ಅದ್ದೂರಿಯಾಗಿ ನಡೆದ ದಾಂಡಿಯಾ ರಾಸ್ ಮತ್ತು ಗರ್ಬಾ ನೈಟ್ ಕಾರ್ಯಕ್ರಮ
ಮನುಷ್ಯನ ಅಸ್ತಿತ್ವ ಇರುವುದೇ ಭಗವಂತನ ಕೈಯಲ್ಲಿ. ದೇವರ ಅನುಗ್ರಹದಿಂದ ನಮ್ಮ ಜೀವನ ಸಾರ್ಥಕ ಬದುಕನ್ನು ಕಾಣಬಹುದು. ಶರವನ್ನರಾತ್ರಿಯ ವಿಜಯ ದಶಮಿಯ ಪಾವಿತ್ರತೆಯ ಈ ಶುಭ ಅವಸರದ ಸಂದರ್ಭದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದವರು ಆಯೋಜಿಸಿದ ಈ ಕಾರ್ಯಕ್ರಮ ಶ್ಲಾಘನೀಯ. ಮುಂಬಯಿ ಬಂಟರ ಸಂಘ ಹಾಗೂ ಅದರ ಪ್ರಾದೇಶಿಕ ಸಮಿತಿಗಳಲ್ಲಿ ಅದೆಷ್ಟೋ ಉತ್ತಮ ಕೆಲಸ ಕಾರ್ಯಗಳು ಸಮಾಜದ ಪರವಾಗಿ ನಡೆಯುತ್ತಿದೆ. ನಮ್ಮ ಸಮಾಜ ಬಾಂಧವರಲ್ಲಿ ಸಂಘದ ಆಗು ಹೋಗುಗಳ ಬಗ್ಗೆ ಅರಿವು ಮೂಡಬೇಕಾದರೆ ಕೆಲವಾದರೂ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿ ಅತ್ಯಗತ್ಯ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಕರೆಯಿತ್ತರು. ಅವರು ಅಕ್ಟೋಬರ್ 2 ರಂದು ಭಯಂದರ್ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ದಿ ಕ್ರೌನ್ ಬ್ಯುಸಿನೆಸ್ ಹೊಟೇಲ್ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರ ನೇತೃತ್ವದಲ್ಲಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಭ್ ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಆಯೋಜಿಸಿದ ದಾಂಡಿಯಾ…















