Author: admin

ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಸಮಿತಿಯ ವತಿಯಿಂದ ಇದೇ ಬರುವ ಆಗಸ್ಟ್ 15 ರಂದು ಶುಕ್ರವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಕಾಂದಿವಲಿ ಪಶ್ಚಿಮದ ಮಹಾವೀರ ನಗರದಲ್ಲಿರುವ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದ ಊರಿನ ಸುಪ್ರಸಿದ್ಧ ಆಟಕೂಟಗಳ ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರ ಸಮಾಗಮದೊಂದಿಗೆ “ಕೃಷ್ಣ ರಾಜಿ ಪ್ರಸಂಗೊ- ಅಂಕೊದ ಬೂಲ್ಯ” (ಕೃಷ್ಣ ಸಂಧಾನ – ಧುರ ವೀಳ್ಯ) ಎಂಬ ತುಳು ಯಕ್ಷಗಾನ ತಾಳಮದ್ದಳೆಯು ಸಂಪನ್ನಗೊಳ್ಳಲಿದೆ. ನಗರದಲ್ಲಿರುವ ಕನ್ನಡ ಭಾಷೆಯನ್ನರಿಯದ ತುಳುವರಿಗೆ ಯಕ್ಷಗಾನ ತಾಳಮದ್ದಳೆಯ ಸವಿಯನ್ನುಣ್ಣಿಸುವ ಉದ್ದೇಶದಿಂದಲೇ ಹಮ್ಮಿಕೊಂಡ ಈ ಕೂಟದಲ್ಲಿ ಊರಿನಿಂದ ಆಗಮಿಸಿದ ಆಟಕೂಟಗಳ ಬಹಳ ಬೇಡಿಕೆಯ ಕಲಾವಿದರುಗಳು ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸಲಿದ್ದಾರೆ. ಕಲಾವಿದರಾಗಿ ಭಾಗವತರು : ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆ: ಸುಬ್ರಮಣ್ಯ ಭಟ್ ದೇಲಂತಮಜಲು, ಮದ್ದಳೆ: ಪ್ರಶಾಂತ ಶೆಟ್ಟಿ ವಗೆನಾಡು, ಶ್ರೀ ಕೃಷ್ಣ: ಡಾ| ಎಂ. ಪ್ರಭಾಕರ ಜೋಶಿ, ಕೌರವ: ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಿದುರ: ಭಾಸ್ಕರ…

Read More

ಮುಂಬೈಯ ಹೋಟೆಲ್ ಉದ್ಯಮಿಗಳು ಒಟ್ಟು ಸೇರಿ ಜವಾಬ್ ಆಶ್ರಯದಲ್ಲಿ ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಅದು ನಮ್ಮ ಅಭಿರುಚಿಗೆ ಪೂರಕವಾಗಿ ಎಲ್ಲರನ್ನೂ ಆಕರ್ಷಿಸುತ್ತಿರುವುದರಿಂದ ಪ್ರತಿ ಬಾರಿಯೂ ಒಳ್ಳೆಯ ಪ್ರೇಕ್ಷಕ ವರ್ಗವನ್ನು ಸೆಳೆಯುತ್ತಿದೆ. ಯಕ್ಷಗಾನ ತಾಳಮದ್ದಳೆ ಪ್ರಕಾರದಲ್ಲಿ ಪುರಾಣ ಜ್ಞಾನದೊಂದಿಗೆ ಜೀವನಕ್ಕೆ ಸಂಸ್ಕಾರ ನೀಡುವಂತಹ ಹಲವು ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಜವಾಬ್ ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ರಘು ಎಲ್. ಶೆಟ್ಟಿ ಹೇಳಿದ್ದಾರೆ. ಮುಂಬೈ ಮಹಾನಗರದ ಹೋಟೆಲ್ ಉದ್ಯಮಿಗಳ ಬೃಹತ್ ಸಂಘಟನೆಯಾದ ಜವಾಬ್ ವತಿಯಿಂದ ಅಂಧೇರಿಯ ಹೋಟೆಲ್ ಪ್ಯಾಪಿಲೋನ್ ನಲ್ಲಿ ಆಗಸ್ಟ್ 11ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 24ನೇ ಸರಣಿಯ ಮೂರನೇ ದಿನದ ತಾಳಮದ್ದಳೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಜವಾಬ್ ಬಂಟ್ಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು ಮುಂಬೈ ಪ್ರೇಕ್ಷಕರ ಕಲಾಭಿಮಾನವನ್ನು…

Read More

ತಾಯ್ನಾಡಿನ ಸಂಸ್ಕೃತಿ ಮತ್ತು ಧರ್ಮವನ್ನು ಪ್ರೋತ್ಸಾಹಿಸುತ್ತಿರುವ ಕಲೆಗೆ ಸದಾ ನಾವು ಪ್ರೋತ್ಸಾಹಿಸಬೇಕು. ನಮ್ಮ ತಾಯ್ನಾಡಿನ ಮಣ್ಣಿನ ಪರಂಪರೆ ಅಗಾಧವಾದುದು. ದೈವ ದೇವರುಗಳ ಪ್ರತೀಕಗಳು ನಮ್ಮ ಮುಂದಿನ ಪೀಳಿಗೆಗಳಲ್ಲೂ ಜಾಗೃತವಾಗಿರಿಸುವಂತಹ ಕಾಲವಿದು. ಧರ್ಮ ಜಾಗೃತಿಯ ಕಲೆಗಳಿಗೆ ನಮ್ಮೂರವರ ಬೆಂಬಲ ಅತ್ಯಗತ್ಯ ಎಂದು ಬಂಟ್ಸ್ ಪೋರಂ ಮೀರಾ ಭಯಂದರ್ ಇದರ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಜಯಪ್ರಕಾಶ್ ಭಂಡಾರಿಯವರು ನುಡಿದರು. ಅವರು ಆಗಸ್ಟ್ 10 ರಂದು ಮ್ಯಾಕ್ಸಸ್ ಮಾಲ್ ಸಿನೇಮಾ ಮಂದಿರದಲ್ಲಿ ದ್ವಿತೀಯ ಬಾರಿಗೆ ಹೌಸ್ ಫುಲ್ ಪ್ರದರ್ಶನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಚಾವಡಿ ತುಳು ಚಲನಚಿತ್ರದ ಪ್ರಾರಂಭದಲ್ಲಿ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೈದು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ಸ್ ಪೋರಂ ಮೀರಾ ಭಯಂದರ್ ನ ಅಧ್ಯಕ್ಷ ಮಲಾರಬೀಡು ಉದಯ ಎಂ. ಶೆಟ್ಟಿಯವರು ಧರ್ಮ ಜಾಗೃತಿಯ ಬಗ್ಗೆ ಉತ್ತಮ ಸಂದೇಶವುಳ್ಳ ಇಂತಹ ಕಲಾಪ್ರರ್ಶನಗಳು ಸದಾ ಮೂಡಿಬರಲಿ ಎಂದು ಹಾರೈಸಿದರು. ಉದ್ಘಾಟನಾ ಸಮಾರಭದಲ್ಲಿ ಜಯ ಪ್ರಕಾಶ್ ಭಂಡಾರಿ (ಮಾಜಿ ಅಧ್ಯಕ್ಷರು: ಬಂಟ್ಸ್ ಪೋರಮ್ ಮೀರಾ – ಭಯಂದರ್), ಉದಯ…

Read More

ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ಸಮಿತಿಯು ಬುಧವಾರ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ‘ನಿತ್ಯ ಜೀವನದಲ್ಲಿ ಕಾನೂನು’ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಬಂಟ್ವಾಳದ ಹಿರಿಯ ನ್ಯಾಯವಾದಿ ಶೈಲಜಾ ರಾಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಕಾನೂನಿನ ಮಹತ್ವ ಹಾಗೂ ಜೀವನದಲ್ಲಿನ ಅದರ ಅನ್ವಯ ಕುರಿತು ಮಾರ್ಗದರ್ಶನ ನೀಡಿದರು. ಮನುಷ್ಯನ ಬದುಕಿನ ಪ್ರತಿಯೊಂದು ಹಂತವೂ ಕಾನೂನಿನ ನಿಯಮಗಳು, ಹಕ್ಕುಗಳು ಮತ್ತು ಕರ್ತವ್ಯಗಳಿಂದ ಕೂಡಿರುತ್ತದೆ. ಜನನದಿಂದ ಆರಂಭಿಸಿ ಸಾವಿನವರೆಗಿನ ಪ್ರತಿಯೊಂದು ಪ್ರಕ್ರಿಯೆಯು ಕಾನೂನು ನಿರ್ದಿಷ್ಟಗೊಳಿಸಿದ ವ್ಯವಸ್ಥೆಯೊಳಗೆ ನಡೆಯುತ್ತದೆ. ಕಾನೂನಿನ ಈ ಚೌಕಟ್ಟಿನ ಅರಿವಿದ್ದಾಗ ನಾವೂ ಜವಾಬ್ದಾರಿಯಿಂದ ಸಮಾಜದಲ್ಲಿ ಬದುಕಲು ಸಾಧ್ಯ ಎಂದರು. ಮಹಿಳೆಯರು ಸಮಾಜದಲ್ಲಿ ಅನೇಕ ಬಾರಿ ವಂಚನೆಗೆ ಒಳಗಾಗುತ್ತಾರೆ ಎಂಬುದು ಸತ್ಯ. ಆದರೆ ಕೆಲವರು ಅದೇ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಉದಾಹರಣೆಗಳಿವೆ ಎಂದರು. ನಾವೆಲ್ಲ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ, ಆದರೆ ಕರ್ತವ್ಯಗಳಿಂದ ದೂರವಾಗುತ್ತಿರುವುದು ದುಂಖಕರ. ಮಕ್ಕಳು ಸುಖ ಜೀವನದಲ್ಲೇ ಬೆಳೆದರೆ ಕಷ್ಟದ ಮೌಲ್ಯ ಅರಿಯಲಾರರು. ಶ್ರೀಮಂತಿಕೆ ಹಣದಿಂದಲ್ಲ, ಪ್ರೀತಿ, ಮಮತೆ, ಗುಣ…

Read More

ಜಾತಿ, ಮತ, ಧರ್ಮಗಳನ್ನು ಮರೆತು ನಾವು ನೀಡುವ ರಕ್ತದಿಂದ ಎಷ್ಟೋ ಜೀವಗಳನ್ನು ಉಳಿಸಬಹುದಾಗಿದೆ ಎಂದು ಸುರತ್ಕಲ್ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ನುಡಿದರು. ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ಹಾಗೂ ಲಯನ್ಸ್ ಕ್ಲಬ್ ಸುರತ್ಕಲ್ ಇವರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಅಸ್ಪತ್ರೆ ಮಂಗಳೂರು ಮತ್ತು ಎ.ಜೆ ಹಾಸ್ಪಿಟಲ್ ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಯೋಗದೊಂದಿಗೆ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣದಲ್ಲಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ನವರು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದು ಅದರ ಜೊತೆಗೆ ರಕ್ತದಾನದಂತಹ ಶಿಬಿರವನ್ನು ಇತರ ಸಂಸ್ಥೆಗಳ ಜೊತೆ ಅಯೋಜನೆ ಮಾಡಿರುವುದು ಶ್ಲಾಘನೀಯ ಮುಂದೆಯೂ ಇಂತಹ ಸೇವೆಗಳು ಮುಂದುವರಿಯಲಿ ಎಂದರು. ವೇದಿಕೆಯಲ್ಲಿ ಮುಕ್ಕ ಮೆಡಿಸಿನ್ ಪ್ರೊಪೆಸರ್ ಡಾ. ಸುನೀಲ್ ಕುಮಾರ್, ಬಾಳ…

Read More

ಕಲಾ ಸಾಧನ ಸಂಸ್ಥೆ ಮಂಗಳೂರು ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಸ್ವರ ಧಾರಾ ಸಂಗೀತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಹಾಗೂ ಕ್ಯಾರ್ದೋ ಲೈಟ್ ಸಂಸ್ಥೆ ಮಹಾ ಪ್ರಬಂಧಕ ಕೆ. ದಿವಾಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಸಂಗೀತ ಮನರಂಜಿಸುವುದಲ್ಲದೇ ಅದರಿಂದ ಆರೋಗ್ಯಕ್ಕೆ ಕೂಡಾ ಉತ್ತಮ ಔಷಧಿ ಇದ್ದಂತೆ, ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಇದು ನಿರಂತರವಾಗಿ ನಡೆಯಲಿ ಎಂದರು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮಹಾಪ್ರ ಬಂಧಕ ಅರುಣ ಪ್ರಭಾ, ಕುವೈಟ್ ನ ಇಂಜಿನಿಯರ್ ಮಂಜೇಶ್ವರ ಮೋಹನ್ ದಾಸ್ ಕಾಮತ್, ಅನಘಾ ರಿಫೈನರಿಯ ಆಡಳಿತ ನಿರ್ದೇಶಕ ಸಾಂಬಾ ಶಿವರಾವ್ ನಡೆಲ್ಲಾ, ಭಾರತ್…

Read More

ಬಂಟರ ಸಂಘ ಅಶೋಕನಗರ ಉರ್ವಾ ಇದರ ಆಶ್ರಯದಲ್ಲಿ ಮರಿಯಾಲಡೊಂಜಿ ಐತಾರ, ಆಟಿದ ಕೂಟ ಕಾರ್ಯಕ್ರಮ ಉರ್ವಾಸ್ಟೋರ್ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇತ್ತೀಚಿಗೆ ಜರಗಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಹಕ್ಲಾಡಿ ಅವರು ಮಾತನಾಡಿ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅನುಕರಣೆಯ ಎಂದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಆಟಿ ಕೂಟದಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಕೆಎಂಸಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಆಶ್ನಾ ಶೆಟ್ಟಿ, ಉದ್ಯಮಿಗಳಾದ ನಿತ್ಯಾನಂದ ಶೆಟ್ಟಿ, ವಿಜಯಲಕ್ಷ್ಮಿ ಮಲ್ಲಿ, ಶೇಖರ ಶೆಟ್ಟಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ದೇವದಾಸ್ ಹೆಗ್ಡೆ, ನಿಕಟಪೂರ್ವ ಕಾರ್ಪೊರೇಟರ್ ಜಯಲಕ್ಷ್ಮಿ ಶೆಟ್ಟಿ, ಬಂಟರ ಸಂಘದ ಗೌರವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ…

Read More

ರಾಮಾಯಣದ ಅಡಿ ಚೆಂದ, ಭಾಗವತದ ಮುಡಿ ಚೆಂದ, ಮಹಾಭಾರತದ ನಡು ಚೆಂದ. ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಕೃಷ್ಣಸಂಧಾನವು ದೇಶ ವಿದೇಶಗಳಲ್ಲೂ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತ. ಅದು ಎಲ್ಲಾ ಸಮುದಾಯಗಳೂ ಆನಂದಿಸಬಹುದಾದ ಒಂದು ಪ್ರಸಂಗ. ಅದರಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಂಸಾರಿಕ ಆಯಾಮಗಳಿವೆ. ಅಲ್ಲದೇ ಜಗಳವನ್ನು ಶಮನಗೊಳಿಸಬೇಕೆಂಬ ಸಾರ್ವತ್ರಿಕ ಸಂದೇಶವಿದೆ.‌ ಮೂಲ ಭಾರತದಲ್ಲಿ ಸಂಧಾನ ಆಗಬೇಕೆಂದು ಕೃಷ್ಣನು ಹಾರ್ಧಿಕವಾಗಿ ಬಯಸಿದ್ದಾನೆ. ಅವನು ನರರಿಗೆ ಸಾರಥಿಯಾಗ ಬಯಸುವನು. ವ್ಯಾಸರ ಕೃಷ್ಣ ಸಂಧಿಪ್ರಿಯನಾದರೆ ಪ್ರಸಂಗದ ಕೃಷ್ಣ ಯುದ್ಧಪ್ರಿಯ. ದುರ್ಯೋಧನ ಛಲದೊಳ್ ಅಲ್ಲ; ಹಠದೊಳ್ ಕೌರವ. ಕೃಷ್ಣ ಸಂಧಾನ ಪ್ರಸಂಗವು ಬಹಳ ಆಸಕ್ತಿಕರವಾದುದು. ಹಾಗಾಗಿ ಶಾಶ್ವತವಾಗಿ ಉಳಿದಿದೆ ಎಂದು ವಿಶ್ರಾಂತ ಪ್ರಾಚಾರ್ಯ, ಹಿರಿಯ ಯಕ್ಷಗಾನ ಅರ್ಥಧಾರಿ, ಸಂಶೋಧಕ ಮತ್ತು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ನುಡಿದರು. ಆಗಸ್ಟ್ 12ರಂದು ಮಂಗಳವಾರ ಕಲೀನಾ ಕ್ಯಾಂಪಸ್ ನ ಜೆ. ಪಿ. ನಾಯಕ್ ಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ದತ್ತಿ…

Read More

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 13ರಂದು ಕ್ರಿಯೇಟಿವ್ ಪುಸ್ತಕ ಧಾರೆ – 2025 ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ  ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ರವರು ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ ಎಂದರು. ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಸ್ವಾಗತಗೈಯುತ್ತಾ ತಮ್ಮ ಪ್ರಾಸ್ತಾವಿಕ…

Read More

ಏನಿದು ಹೊಸ ಪದ್ಯ ಎಂದು ಆಶ್ಚರ್ಯವಾಗುತ್ತಿದೆಯೇ? ಅದನ್ನು ತಣಿಸಲು ನೀವು ಮುಂದೆ ಓದಬೇಕಾಗುತ್ತದೆ. ಅದೃಷ್ಟ ಹೇಗೆ ಒಲಿಯುತ್ತದೆ ಎಂಬುದನ್ನು ಯಾರೂ ಊಹಿಸಲಾಗದು. ಜತೆಗೆ ದೂರಗಾಮಿ ಚಿಂತನೆ, ಹೊಸತನ ಮತ್ತು ಪ್ರತಿಭೆಗಳು ಕೂಡ ಸೇರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಉದಾಹರಣೆಯಾಗಿ ನಮ್ಮೆದುರು ನಿಲ್ಲುವವರು ಉದ್ಯಮಿ ಬರೋಡ ಶಶಿಧರ ಶೆಟ್ಟಿ. ಇಂಡಸ್ಟ್ರೀಯಲ್ ಕ್ಯಾಟರಿಂಗ್, ಡಿಜಿಟಲ್ ಮಾರ್ಕೆಟಿಂಗ್, ಗುತ್ತಿಗೆ ಸಹಿತ ವಿವಿಧ ರೀತಿಯ ಉದ್ಯಮ ರಂಗದಲ್ಲಿ ಯಶಸ್ಸು ಸಾಧಿಸಿರುವ ಬರೋಡ ಶಶಿಧರ ಶೆಟ್ಟಿ ಅವರು ಈಗ ತನ್ನ ಚೊಚ್ಚಲ ಸಿನಿಮಾದಲ್ಲಿ ಭರ್ಜರಿ ಖ್ಯಾತಿ ಗಳಿಸಿದ್ದಾರೆ. ಈ ಮೂಲಕ ಇವರು ಮುಟ್ಟಿದೆಲ್ಲವೂ ಚಿನ್ನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಅದಕ್ಕೆ ಕಾರಣವೇ ಕರಾವಳಿ ಪ್ರತಿಭೆಗಳ ‘ಸು ಫ್ರಂ ಸೋ’ ಸಿನಿಮಾ. ಇದೇ ಮೊದಲ ಬಾರಿಗೆ ಬರೋಡ ಶಶಿಧರ ಶೆಟ್ಟಿ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ‘ಸು ಫ್ರಂ ಸೋ’ ಸಿನಿಮಾದ ಓರ್ವ ನಿರ್ಮಾಪಕರಾಗಿರುವ ಇವರು ಅದೃಷ್ಟವಂತ ಹಾಗೂ ಯಶಸ್ವಿ ಸಾಧಕ ಎಂಬುದು ಈಗಾಗಲೇ ಸಾಬೀತಾದ ಸತ್ಯ.…

Read More