ಬೆಳ್ತಂಗಡಿ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ 2025-27 ಸಾಲಿನ ಪದಪ್ರದಾನ ಸಮಾರಂಭ ಉಜಿರೆ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆ. 7ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಲ್ಕಿ ಜೀವನ್ ಕೆ ಶೆಟ್ಟಿ ಮಾತನಾಡಿ, “ಬೆಳ್ತಂಗಡಿ ಇಂಜಿನಿಯರ್ ಅಸೋಸಿಯೇಷನ್ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಸಹಾಯ ಹಸ್ತದ ಮೂಲಕ ಉತ್ತಮ ಸಾಧನೆ ಮಾಡಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಿವಿಲ್ ಅಸೋಸಿಯೇಷನ್ ಸೆಂಟರ್ ಇದೆ. ವಿದ್ಯೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ, ಸಮಾಜಕ್ಕೆ ಕೊಡಬೇಕಾದ ಕೊಡುಗೆಯನ್ನು ನೀಡುತ್ತಾ ಬಂದರೆ ನಮ್ಮ ವಿದ್ಯೆಗೆ ಗೌರವ ಕೊಟ್ಟಂತಾಗುತ್ತದೆ. ಅಸೋಸಿಯೇಷನ್ ಸದಸ್ಯರು ಒಗ್ಗಟ್ಟಾದರೆ ಮಾತ್ರ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗಲು ಸಾಧ್ಯ. ಅಸೋಸಿಯೇಷನ್ ಸದಸ್ಯರು ಸುರೇಶ್ ಬಂಗೇರ ಅಧ್ಯಕ್ಷತೆಯಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ವತಿಯಿಂದ ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಶಾರದಾ ಅಸೋಸಿಯೇಟ್ಸ್ ನ ಮುಲ್ಕಿ ಜೀವನ್ ಕೆ ಶೆಟ್ಟಿಯವರನ್ನು ಗೌರವಿಸಲಾಯಿತು. ಎನ್ಐಟಿಕೆ ಕಾಲೇಜಿನ ನಿವೃತ್ತ ಪ್ರೊಫೆಸರ್ ಕೆಎಸ್ ಬಾಬು ನಾರಾಯಣ, ಬೆಳ್ತಂಗಡಿ ಇಂಜಿನಿಯರ್ ಅಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಜಗದೀಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.