ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಬೆರಳಚ್ಚುಗಾರ, ಹೆಜಮಾಡಿ ಕಣ್ಣಂಗಾರು ಕಮಲಾ ನಿವಾಸದ ಭಾಸ್ಕರ್ ಟಿ ಶೆಟ್ಟಿ ಹೆಜಮಾಡಿಯವರು (69) ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಹರಿಣಿ, ಪುತ್ರ ಹಿತೇಶ್ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಮರವಂತೆ, ಪುತ್ರಿ ಭವ್ಯ ಶಿಕ್ಷಕಿ ಕ್ರಿಶ್ಚಿಯನ್ ಪ್ರೌಢ ಶಾಲೆ ಉಡುಪಿ ಹಾಗೂ ತಮ್ಮ ಮುಂಬಯಿಯ ಪತ್ರಕರ್ತ ವೈ. ಟಿ. ಶೆಟ್ಟಿ ಹೆಜಮಾಡಿ ಮತ್ತು ಅಪಾರ ವರ್ಗದ ಬಂಧು ಮಿತ್ರರನ್ನು ಅಗಲಿರುತ್ತಾರೆ.
