Author: admin
ಅಮ್ಮನ ನೆರವು ಟ್ರಸ್ಟ್(ರಿ) ಸಂಸ್ಥೆಯಿಂದ ಬೈಲೂರು ಮತ್ತು ಸುತ್ತಮುತ್ತಲ ಶಾಲೆಗಳ ಪ್ರತಿಭಾವಂತ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮವು ಬೈಲೂರು ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಜೂನ್ 26 ರಂದು ನಡೆಯಿತು. ಕಾರ್ಕಳದ ಶಾಸಕರಾದ ವಿ.ಸುನೀಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅವರು ಮಾತನಾಡಿ ಅಕ್ಷರ ಕ್ರಾಂತಿಯಿಂದ ಸಮಗ್ರ ಸಮಾಜದ ಅಭಿವೃದ್ಧಿ ಆಗುತ್ತದೆ. ಅಮ್ಮನ ನೆರವು ಟ್ರಸ್ಟ್ ಸರಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದರು. ಟ್ರಸ್ಟ್ ನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯಂತಹ ಯುವಕರು ಈ ಟ್ರಸ್ಟ್ ಸ್ಥಾಪನೆ ಮಾಡಿದ್ದು ತಾಲೂಕಿನಾದ್ಯಂತ ನೂರಾರು ವಿದ್ಯಾರ್ಥಿಗಳಿಗೆ ಅಂದಾಜು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದವರು ಹೇಳಿದರು. ತಾಲೂಕಿನ ಏಳು ಕೇಂದ್ರಗಳಲ್ಲಿ ಈ ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮಗಳು ನಡೆಯಲಿದ್ದು, ಅದರ ಮೊದಲ ಹಂತದ…
ಜೂ. 28ರಂದು ಕುರ್ಲಾ ಬಂಟರ ಭವನದಲ್ಲಿ ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ದೇಶನದ ಕನ್ನಡ ಸಂಗೀತ ನಾಟಕ ‘ಚೋಖಾ ಮೇಳ’
ಮುಂಬೈ ಕಲಾಜಗತ್ತು ಕ್ರಿಯೇಷನ್ಸ್ ವತಿಯಿಂದ ಶ್ರೀ ಕ್ಷೇತ್ರ ವಜ್ರೇಶ್ವರೀ ಪರಶುರಾಮ ಕುಂಡ, ತುಂಗರೇಶ್ವರ ಬಾಲಯೋಗಿ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿಯವರ ಗುರುವಂದನಾ ಸಮಾರಂಭ ಹಾಗೂ ಡಾ| ಜಿ.ಪಿ ಕುಸುಮಾರವರು ಭಾಷಾಂತರಗೊಳಿಸಿದ ಸ್ವಾಮೀಜಿಯವರ ಐತಿಹಾಸಿಕ ಸಂಗೀತ ನಾಟಕ ‘ಚೋಖಾ ಮೇಳ’ ಕನ್ನಡ ನಾಡಿನ ನಾಮಾಂಕಿತ ಸಂಗೀತ ಕಲಾವಿದರ ಸಮಾಗಮದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗಭೂಮಿಯಲ್ಲಿ ಲಿಮ್ಕಾ ಬುಕ್ ರಾಷ್ಟ್ರೀಯ ದಾಖಲೆ ಮಾಡಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ದೇಶನದ ಕನ್ನಡ ಸಂಗೀತ ನಾಟಕ ‘ಚೋಖಾ ಮೇಳ’ ಅದ್ಬುತ ಸಂಯೋಜನೆಯಲ್ಲಿ ಸಂಗೀತ ನಾಟಕದ ಪ್ರಥಮ ಪ್ರದರ್ಶನಗೊಳ್ಳಲಿದೆ. ಶತಕಗಳ ಹಿಂದೆ ಮಹಾರಾಷ್ಟ್ರದಲ್ಲಿ ಪಂಡರಪುರದ ವಿಠ್ಟೋಭ ದೇವರ ಮಹಿಮೆಯನ್ನು ತನ್ನ ಅಭಂಗ ಹಾಡುಗಳ ಮೂಲಕ ಹಾಡಿ ಹೊಗಳುತ್ತಿದ್ದ ಸಂತ ಚೋಖಾನ ಕಥೆಯಿದು. ಈ ಕಥೆಯನ್ನು ಅವಧೂತ ಭಗವಾನ್ ಶ್ರೀ ನಿತ್ಯಾನಂದರ ಅನುಯಾಯಿ ಸ್ವಾಮಿ ಸದಾನಂದ ಮಹಾರಾಜ ಮರಾಠಿಯಲ್ಲಿ ಬರೆದ ‘ಚೋಖಾ ಮೇಳ’ ಎಂಬ ಸಂಗೀತ ನಾಟಕವನ್ನು ಡಾ| ಜಿ.ಪಿ ಕುಸುಮಾ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇದು ರಂಗ…
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಂಗಳೂರು ತಾಲೂಕು ವ್ಯಾಪ್ತಿಯ ಬಂಟ ಸಮಾಜದ 2024-25ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡ 95 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಸ್ವಯಂ ಲಿಖಿತ ಅರ್ಜಿಯ ಜೊತೆ ಆಧಾರ್ ಕಾರ್ಡಿನ ಪ್ರತಿ ಮತ್ತು ಅಂಕಪಟ್ಟಿಯ ಪ್ರತಿ, ಒಂದು ಪಾಸ್ಪೋರ್ಟ್ ಸೈಜ್ ಪೊಟೋವನ್ನು ಜುಲೈ 10 ರ ಒಳಗೆ ಬಂಟರ ಯಾನೆ ನಾಡವರ ಮಾತೃಸಂಘ ಕಛೇರಿ, ಅಮೃತೋತ್ಸವ ಕಟ್ಟಡ, ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9343562173, 9448858292, 9480015895 ಸಂಪರ್ಕಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಹೈನಾ ಚಿತ್ರದ ಮೂಲಕ ಬಾಂಗ್ಲಾದೇಶದಿಂದ ನಡೆಯುವ ಗಡಿ ಮೀರಿ ಅಕ್ರಮ ಪ್ರವೇಶದಂತಹ ಗಂಭೀರ ವಿಷಯವನ್ನ ಎತ್ತಿಹಿಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇದೀಗ ಹೇ ಪ್ರಭು ಚಿತ್ರದ ಮೂಲಕ ಮತ್ತೊಂದು ಸಮಾಜಮುಖಿ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ವಿಷಯವನ್ನು ಓಲೈಸಿದ್ದಾರೆ. ಈ ಬಾರಿ ಅವರು ಸ್ಪರ್ಶಿಸಿರುವ ವಿಷಯ ಫಾರ್ಮ ಲಾಬಿ ಮತ್ತು ವೈದ್ಯರ ಜೀವನ. ಹೇ ಪ್ರಭು ಎಂಬ ಚಿತ್ರವು ನಮ್ಮ ಗ್ರಾಮಗಳು ಮತ್ತು ಗ್ರಾಮಸ್ಥರು ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲವನ್ನು ಮತ್ತು ಅವರ ಮಹತ್ವವನ್ನ ತೀವ್ರವಾಗಿ ಒತ್ತಿಹೇಳುತ್ತದೆ. ಹೇ ಪ್ರಭು ಚಿತ್ರ ವೀಕ್ಷಕರನ್ನು ನಗೆಯ ಕಡಲಲ್ಲಿ ಮುಳುಗಿಸುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ . ಪ್ರಚಲಿತ ಸೋಶಿಯಲ್ ಮೀಡಿಯಾ ಎಂಬ ಮಾಯೆಯ ಅಲೆಯಲ್ಲಿ ಮೇಲೆದ್ದು ಹೆಸರು ಮಾಡಿರುವ ವ್ಯಕ್ತಿಗಳ ಪರಿಚಯ ಸಿನಿಮಾದಲ್ಲಿ ತೋರಿಸಲಾಗಿದೆ. “from scratch to success” ಎಂಬಂತೆ ಕೆಲವು ನಿಜ ಘಟನೆ ಸಾರಾಂಶವನ್ನು ಇಲ್ಲಿ ಹೇ ಪ್ರಭು ಹೇಳುತ್ತಾನೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ “ಹೇ…
ಕಾರ್ಕಳ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್ನಲ್ಲಿ ಸಾವಿರದೊಳಗಿನ ರ್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ. 1. ಸರ್ವಜಿತ್ ಕೆ.ಆರ್ 90ನೇ ರ್ಯಾಂಕ್, 2. ಆಕಾಶ್ ಎಚ್. ಪ್ರಭು 312ನೇ ರ್ಯಾಂಕ್ (ಕೆಟಗರಿಯಲ್ಲಿ 42ನೇ ರ್ಯಾಂಕ್), 3. ತನ್ಮಯ್ ಜಿ.ಎಸ್ 383ನೇ ರ್ಯಾಂಕ್, 4. ಆಕಾಶ್ ಡಿ 480ನೇ ರ್ಯಾಂಕ್ (ಕೆಟಗರಿಯಲ್ಲಿ 17ನೇ ರ್ಯಾಂಕ್), 5. ಸಿದ್ದಾರ್ಥ್ ಎ. 754ನೇ ರ್ಯಾಂಕ್ (ಕೆಟಗರಿಯಲ್ಲಿ 120ನೇ ರ್ಯಾಂಕ್), 6. ಸತೀಶ್ ಶ್ರೀಶೈಲ ಕರಗನ್ನಿ 931ನೇ ರ್ಯಾಂಕ್ (ಕೆಟಗರಿಯಲ್ಲಿ 159ನೇ ರ್ಯಾಂಕ್), 7. ವಿಶ್ವಾಸ್ ಆರ್ ಆತ್ರೇಯಾಸ್ 986ನೇ ರ್ಯಾಂಕ್, 8. ಮನೋಜ್ ಎಸ್ ಎ 1408ನೇ ರ್ಯಾಂಕ್, 9. ಅಭಿರಾಮ್ ತೇಜ ಪೆರಾ 1489ನೇ ರ್ಯಾಂಕ್, 10. ಚಿಂತನ್…
ಮಧ್ಯ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ 2025 – 26 ನೇ ಸಾಲಿನ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿಯನ್ನು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉದ್ಘಾಟಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ, ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾ, ಸುರತ್ಕಲ್ ಘಟಕದ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ , ಯಕ್ಷ ಗುರು ಪೂರ್ಣಿಮ ಯತೀಶ್ ರೈ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಕಾವ್ಯ, ಸದಸ್ಯರಾದ ಅನಿಲ್ ಸೂರಿಂಜೆ, ಶಶಿಕಲಾ, ಪರಮೇಶ್ವರ, ರಿತೇಶ್ ಶೆಟ್ಟಿ, ಕೇಶವ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಘಟಕದ ಪಟ್ಲ ಫೌಂಡೇಶನ್ ಉಪಾಧ್ಯಕ್ಷ ಲೀಲಾಧರ ಶೆಟ್ಟಿ ಕಟ್ಲ ಇವರು ವಹಿಸಿದ್ದರು. ಶಿಕ್ಷಕಿ ಸುಜಯ ಧನ್ಯವಾದ ಸಮರ್ಪಿಸಿ, ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ಹೌದು, ಕನ್ಸ್ಟ್ರಕ್ಷನ್ಸ್ ಕ್ಷೇತ್ರದಲ್ಲೀಗ ದೊಡ್ಡ ಹೆಸರೇ ರುದ್ರಾಂಶ ಕನ್ಸ್ಟ್ರಕ್ಷನ್ಸ್. ಹೆಸರು ಹೇಗೆ ವಿಶಿಷ್ಟವಾಗಿ ಕಾಣುತ್ತದೋ ಅಷ್ಟೇ ವಿಶಿಷ್ಟವಾಗಿ ಕಟ್ಟಡ ಕಾಮಗಾರಿಗಳು ಈ ಹೆಸರಿನ ಕನ್ಸ್ಟ್ರಕ್ಷನ್ ನಡಿ ನಡೆಯುತ್ತಿದೆ. ಮೂಡುಬಿದಿರೆ ಮಾರ್ಪಾಡಿ ಬಳಿ ಅಜಯ್ ಶೆಟ್ಟಿ ಎನ್ನುವ ಯುವಕನ ಕಲ್ಪನೆಯಲ್ಲಿ ಮೂಡಿಬಂದು, ಅದು ಕಾರ್ಯರೂಪಕ್ಕಿಳಿದು ಕೇವಲ ಮೂರೇ ವರ್ಷಗಳಲ್ಲಿ ಉಭಯ ಜಿಲ್ಲೆಯಾದ್ಯಂತ ಬಹಳಷ್ಟು ಜನಪ್ರಿಯತೆ ಗಳಿಸುತ್ತಿದೆ. ಪ್ರತಿಯೊಬ್ಬರಿಗೂ ಒಂದು ಸುಂದರವಾದ ಮನೆ ನಿರ್ಮಾಣದ ಕನಸ್ಸು ಇರುತ್ತದೆ. ಬೇರೆ ಬೇರೆ ರೀತಿಯ ಐಡಿಯಾಗಳೂ ಇರುತ್ತದೆ. ಇದೆಲ್ಲವನ್ನೂ ಮನಗಂಡು ಅತಿ ಕಡಿಮೆ ವೆಚ್ಚದಲ್ಲಿ ಅತೀ ವೇಗದಲ್ಲಿ ಜನರ ಆಶಯಗಳಿಗೆ ಪೂರಕವಾಗಿ, ಅವರ ಕನಸುಗಳಿಗನುಗುಣವಾಗಿ ಪೂರ್ಣಗೊಳಿಸಿ ಸಂತೃಪ್ತಿ ಪಡಿಸಿದ ಹೆಗ್ಗಳಿಕೆ ರುದ್ರಾಂಶ ಕನ್ಸ್ಟ್ರಕ್ಷನ್ಸ್ ಗಿದೆ. ವಿನ್ಯಾಸ, ಗುಣಮಟ್ಟ, ಸಾಮಾಗ್ರಿಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಈ ಸಂಸ್ಥೆಯಲ್ಲಿ ನುರಿತ ಇಂಜಿನಿಯರ್ಸ್, ಅನುಭವಿ ಸಿಬ್ಬಂದಿಗಳಿದ್ದಾರೆ. ಈಗಾಗಲೇ ದ.ಕ, ಉಡುಪಿ ಜಿಲ್ಲೆಗಳಲ್ಲಿ ತನ್ನದೇ ಆದ ಛಾಪನ್ನೊತ್ತಿರುವ ರುದ್ರಾಂಶ ಕನ್ಸ್ಟ್ರಕ್ಷನ್ಸ್ ಅತಿವೇಗವಾಗಿ ಬೆಳೆದ ಸಂಸ್ಥೆ ಎನ್ನುವ ಪ್ರಶಂಸೆಯನ್ನೂ ಪಡೆದಿದೆ. ನಿರ್ದಿಷ್ಟ ವೆಚ್ಚದಲ್ಲಿ,…
ಯಕ್ಷಗಾನ ಕ್ಷೇತ್ರದ ಹಿರಿಯ ಪೌರಾಣಿಕ ಯಕ್ಷಗಾನ ಪ್ರಸಂಗಕರ್ತರು ಹಾಗೂ ವಿಶ್ರಾಂತ ಶಿಕ್ಷಕರು, ಯಕ್ಷ ಸಾಹಿತಿ, ಅರ್ಥದಾರಿಗಳು, ಯಕ್ಷಗಾನ ಕ್ಷೇತ್ರದ ದಿಗ್ಗಜರಾದ ಕಂದಾವರ ರಘುರಾಮ ಶೆಟ್ಟಿಯವರಿಗೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಕೆಂಪೇಗೌಡ ರಾಜ್ಯ ಪ್ರಶಸ್ತಿಯನ್ನು ಪರಮ ಪೂಜ್ಯ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ್ ರವರ ನೇತೃತ್ವದಲ್ಲಿ ಗಣ್ಯ ಮಾನ್ಯರ ಸಮ್ಮುಖದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಪ್ರಯುಕ್ತ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನದ ನಿರ್ದೇಶಕರಾದ ಬೇಲೂರು ಸಂತೋಷ ಕುಮಾರ ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಈ ಅದ್ದೂರಿಯ ವಿಜೃಂಭಣೆಯಿಂದ ನಡೆಯುತ್ತಿರುವ ಭವ್ಯ ದಿವ್ಯ ವೇದಿಕೆಯಲ್ಲಿ ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಭಾಜನರಾದ ಯಕ್ಷ ಸಂಪತ್ತು ಎಂಟು ದಶಕಗಳಿಂದ ಯಕ್ಷ ಸೇವೆಯನ್ನು ಯಾವುದೇ ಸ್ವಾರ್ಥವಿಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕಂದಾವರ ರಘುರಾಮ ಶೆಟ್ಟಿ…
ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣಿಕೆ ತಡೆ ದಿನ’ದಂದು ಆಳ್ವಾಸ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ ಪೋಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಮಾತನಾಡಿ, ಮಾದಕ ದ್ರವ್ಯಗಳ ವ್ಯಸನಕ್ಕೆ ಹೆಚ್ಚಾಗಿ ಯುವಕರು ಮತ್ತು ಯುವತಿಯರು ಬಲಿಯಾಗುತ್ತಿದ್ದಾರೆ. ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಇದರಿಂದ ಕೇವಲ ಸೇವಿಸುವವನಿಗೆ ಮಾತ್ರವಲ್ಲ, ಸಮಾಜಕ್ಕೂ ತೊಂದರೆಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಾದ ಕಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿಗಳಿಗೆ ತೊಡಗಿರುವ ೭೦% ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪುನರ್ಜನ್ಮ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಆಳ್ವ, ‘೨೦೧೯ರಲ್ಲಿ ಭಾರತದಲ್ಲಿ ನಡೆದ ಸಮೀಕ್ಷೆಯ ಪ್ರಕಾರ ೧೭ ಕೋಟಿ ಮದ್ಯಪಾನ, ೫.೧ ಕೋಟಿ ಓಪಿಯಂ, ೩.೨ ಕೋಟಿ ಗಾಂಜಾ ಸೇವಿಸುವವರಿದ್ದು, ಆದರೆ ಕೇವಲ ೬೧೨ ನೋಂದಾಯಿಸಲ್ಪಟ್ಟ ದುಶ್ಚಟ ನಿವಾರಣಾ ಕೇಂದ್ರಗಳಿವೆ.…
ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ ಜರುಗುತ್ತಾ ಬರುತ್ತಿದೆ. ಜೂನ್ ತಿಂಗಳ ಮೌಲ್ಯಸುಧಾ ಮಾಲಿಕೆ-37 ತಾರೀಕು 28, ಶನಿವಾರದಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ರಾಮಕೃಷ್ಣ – ವಿವೇಕಾನಂದ ಆಶ್ರಮ, ರಾಮಕೃಷ್ಣ ನಗರ, ತುಮಕೂರಿನ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು ಆಗಮಿಸಲಿದ್ದು, ‘ಸ್ವನಿಯಂತ್ರಣ : ಬಂಧನವೋ? ಸ್ವಾತಂತ್ರ್ಯವೋ?’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸ ಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.














