Author: admin
ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ‘ಪ್ರೇರಣಾ ದಿವಸ್ 2025’ : ಡಾ. ಎಚ್ ಎಸ್ ಬಲ್ಲಾಳ್ ಹಾಗೂ ಡಾ. ಶಾಂತಾರಾಮ್ ರೈ ಅವರಿಗೆ ಗೌರವ
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆಯೇ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ…
ತುಳುನಾಡ್ ದ ಜನೊಕುಲೆಗ್, ಅಂಚನೇ ರೈತೆರೆಗ್ ಈ ಅಮಾವಾಸ್ಯೆ ಪನ್ಪಿನವೇ ನಿಜವಾಯಿನ ರಜೆತ ದಿನ. ಅಮವಾಸ್ಯೆದಾನಿ ಪ್ರಕೃತಿದ ಮಿತ್ತ್ ಸುಮಾರು ಬದಲಾವಣೆ ಆಪುಂಡ್. ಕಡಲ್ ಸಮೇತ ಆ ದಿನೊತಾನಿ ಪನಿ ಜೋರಾದೇ ಶಬ್ದ ಮಲ್ಪುಂಡ್ ಇಂಚಪುರಾ ಇಪ್ಪುನಗಾ ಅಮಾವಾಸ್ಯೆಲಾ ಒಂಜಿ ಎಡ್ಡೆ ದಿನನೇಂದ್ ತುಳುನಾಡ್ ದ ದೈವೋರಾಧನೆ ಬೊಕ್ಕ ಸಂಸ್ಕೃತಿ ವಿಮರ್ಶೆಕೆರಾಯಿನ ತಮ್ಮಣ್ಣ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಯೆರ್. ಅಂತಾರಾಷ್ಟ್ರೀಯ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೆಸಿಐ ಪುತ್ತೂರು ಘಟಕದ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು. ತುಳುನಾಡ್ ದ ಪ್ರತಿಯೊಂಜಿ ಇಲ್ಲ್ ಲ ಒಂಜಿ ಯುನಿವರ್ಸಿಟಿ ದ ಲೆಕ್ಕೋನೆ. ಮುಲ್ಪದ ಪ್ರತಿಯೊರಿಲ ಒಂಜಿ ಲೈಬ್ರರಿ ಎಂದು ಹೇಳಿದ ಅವರು ಇಂದಿನವರ ಆಹಾರಕ್ರಮ ಆರೋಗ್ಯ ರಕ್ಷಣೆಗಾಗಿದ್ದರೆ, ಯುವ ಪೀಳಿಗೆಯು ಬ್ರೆಡ್- ಬನ್ ಕಡೆಗೆ ಮುಖ ಮಾಡಿದ್ದಾರೆ. ಆದಷ್ಟೂ ಬೇಗನೆ ನಾವೆಲ್ಲರೂ, ನಮ್ಮ ಮಕ್ಕಳ ಸಹಿತ ಮೂಲ ಸಂಸ್ಕೃತಿಯಡೆಗೆ…
ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಆವರೆಗೆ ನಮ್ಮಲ್ಲಿ ಕಾಣಿಸಿಲ್ಲದ ದೃಶ್ಯಗಳನ್ನು ಎಲ್ಲರೂ ನೋಡಲಾರಂಭಿಸಿದರು. ಕೇಳಬಾರದ ಮಾತುಗಳನ್ನು ಕೇಳಲಾರಂಭಿಸಿದರು. ಅಗೋಚರ ಸತ್ಯಗಳು ಗೋಚರವಾಗತೊಡಗಿದವು. ಗಂಡು ಹೆಣ್ಣಿನ ಪಿಸು ಮಾತುಗಳು, ದಂಪತಿಗಳ ಜಗಳಗಳು, ರಾಜಕಾರಣಿಗಳ ಬೈದಾಟಗಳು, ಬೇಕಾದುದು ಬೇಡವಾದುದು, ಒಂದಾ ಎರಡಾ? ಅಂಗೈಯಗಲದ ಯಂತ್ರ ಬಿಚ್ಚಿದರೆ ಸಾಕು, ಈಗಂತೂ ಭೂಗತ ಹೆಣಗಳೆಲ್ಲ ಒಂದೊಂದೇ ಎದ್ದು ಬರುತ್ತವೆ. ನೋಡಿದ ನೋಡಬಾರದ ಕೇಳದ ಕೇಳಬಾರದ ದೃಶ್ಯಗಳೆಲ್ಲ ಬೇಡವೆಂದರೂ ಮನಸ್ಸಿನ ಒಳಗಡೆ ತೂರಿಕೊಂಡು ಎಲ್ಲೆಂದರಲ್ಲಿ ಲಾಗ ಹೊಡೆದು ತಲೆ ಕೆಡಿಸುತ್ತವೆ. ಅಪರಾಧಿಗಳಿಗೆ ಶಿಕ್ಷೆ ಆಗುತ್ತೋ ಇಲ್ಲವೋ.. ಅದಕ್ಕಿಂತ ಮುಂಚೆಯೇ ಮಾಧ್ಯಮ ಕೊಡುವ ಈ ಲೋಕಶಿಕ್ಷೆ ಜೈಲಿಗಿಂತ ದೊಡ್ಡ ಅವಮಾನ ಸಂಕಟವಾಗಿರುತ್ತದೆ. ನಮ್ಮ ಪೂರ್ವಜ ಪ್ರಾಚೀನ ಮಾನವ ಗವಿಮನೆಯ ಗೋಡೆ ಮೇಲೆ ಚಿತ್ರ ಬಿಡಿಸುತ್ತಿದ್ದ. ಸಮ್ಮುಖ ಚಿತ್ರ, ದೇಹ ಭಾಷೆ ಮಾತ್ರ ಸಂವಹನಕ್ಕೆ ಒಗ್ಗುತ್ತಿದ್ದ ಸಮಯವದು. ನಂತರ ಶಿಲೆ, ಗೋಡೆ, ತಾಮ್ರಪಟ, ತಾಳೆಗರಿ, ಕಾಗದ, ರೇಡಿಯೋ, ಟಿವಿ ಮತ್ತು ಈಗ ಸೋಶಿಯಲ್ ಮೀಡಿಯಾ ಎಂಬಂತೆ ಮಾಧ್ಯಮಗಳು ಬದಲಾಗುತ್ತಾ ಬಂದಿವೆ. ಪ್ರತಿ…
ಗಣಿತನಗರ: ನಾವು ಬದುಕಿನಲ್ಲಿ ಸಾಧನೆ ಮಾಡಿದರೂ ಸಹ ಬದುಕು ದೇಶಕ್ಕೆ ಸಮಪಿತವಾಗಿರಲಿ ಎಂದು ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ ೩೮ರಲ್ಲಿ ಕಾರ್ಗಿಲ್ ವಿಜಯ ದಿವಸದ ಶುಭಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ‘ಬಹುರತ್ನ ಪ್ರಸವೀ ಭಾರತೀ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನಮ್ಮ ಬದುಕು ಸಮಾಜಕ್ಕೆ ಸಮರ್ಪಿತವಾಗಿರಲಿ. ಒಳ್ಳೆಯ ಆದರ್ಶದ ಅಡಿಗಲ್ಲಿನ ಮೇಲೆ ನಮ್ಮ ಭವಿಷ್ಯವನ್ನು ನಾವು ಕಟ್ಟಿಕೊಳ್ಳಬೇಕು. ಭಾರತವನ್ನು ಬೆಳಗಿಸುವಂತಹ ಮುತ್ತು ರತ್ನಗಳು ನಾವಾಗಬೇಕು. ಅದ್ಭುತ ಸೈನಿಕ ಪರಂಪರೆ ನಮ್ಮದು. ನಮ್ಮ ಸೈನಿಕರೇ ನಮಗೆ ಸ್ಫೂರ್ತಿ ಎಂದು ನುಡಿಯುತ್ತಾ, ಕಾರ್ಗಿಲ್ ವಿಜಯದಲ್ಲಿ ಬಲಿದಾನಗೈದ ವೀರ ಯೋಧರ ಯಶೋಗಾಥೆಯನ್ನು ತೆರೆದಿಟ್ಟರು. ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್…
‘ಸು ಫ್ರಮ್ ಸೋ’ ಚಿತ್ರದ ಮೂಲಕ ಯಶಸ್ವಿ ಉದ್ಯಮಿ ಬರೋಡ ಶಶಿಧರ್ ಶೆಟ್ಟಿಯವರು ನಿರ್ಮಾಪಕರ ಪಾಲಿಗೆ ಬಂದು ಕುಳಿತಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರ ಕೂಡಾ ಹೌದು. ತಮ್ಮ ನೂರೆಂಟು ವ್ಯವಹಾರಗಳ ಮಧ್ಯೆಯು ಶಶಿಧರ ಶೆಟ್ಟಿಯವರು ಸಾರ್ವಜನಿಕ ವ್ಯಕ್ತಿತ್ವ ರೂಪಿಸಿಕೊಂಡವರು. ಇವತ್ತಿಗೂ ಅವರು ಸಾವಿರಾರು ಜನಕ್ಕೆ ಬೇಕಾದ ವ್ಯಕ್ತಿ. ಅನೇಕರಿಗೆ ಕಷ್ಟಕಾಲದಲ್ಲಿ ನೆನಪಾಗುವ ಮನುಷ್ಯ. ಹಾಗಾಗಿಯೂ ಏನೋ ಕೊಡುವ ವಿಷಯದಲ್ಲಿ ಬದುಕು ಇವರಿಗೆ ಯಾವತ್ತೂ ಮೋಸ ಮಾಡಿಲ್ಲ. ಇಂಡಸ್ಟ್ರಿಯಲ್ ಕ್ಯಾಂಟೀನ್, ಹೋಟೆಲ್ ಉದ್ಯಮ, ವಿವಿಧ ಕಂಪನಿಗಳ ಡೀಲರ್ ಶಿಪ್, ಗುತ್ತಿಗೆ ವ್ಯವಹಾರ, ಡಿಜಿಟಲ್ ಮಾರ್ಕೆಟಿಂಗ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇವರು ಬಂಡವಾಳ ಹೂಡಿದ್ದಾರೆ. ಉದ್ಯಮದ ಲಾಭಾಂಶದ ಬಹುಪಾಲನ್ನು ಸಮಾಜ ಸೇವೆಗೆ ವಿನಯೋಗಿಸುತ್ತಿದ್ದಾರೆ. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೀಗ ಕಳಸ ರವಿ ರೈ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಸ್ನೇಹಕ್ಕಾಗಿ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಜೆಪಿ ತೂಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಕನ್ನಡ ಚಲನಚಿತ್ರವು ಜುಲೈ 25 ರಂದು ಬಿಡುಗಡೆಯಾಗುತ್ತಿದೆ.…
ಜುಲೈ 26 ಶನಿವಾರ ಹಾಗೂ ಜುಲೈ 27 ಭಾನುವಾರ ಬೆಂಗಳೂರಿನ ಹೊಸಕೆರೆಹಳ್ಳಿ ನಂದಿ ಲಿಂಕ್ ಗ್ರೌಂಡ್ ನಲ್ಲಿ ಕುಂದಾಪ್ರ ಕನ್ನಡ ಹಬ್ಬ – 2025 ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿ ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲರೂ ಬಂದು ಸಡಗರ, ಸಂಭ್ರಮವನ್ನು ಹೆಚ್ಚಿಸಬೇಕು. ಬದುಕು ಕಟ್ಟಿ ಕೊಟ್ಟ ಕರ್ಮ ಭೂಮಿ ಬೆಂಗಳೂರಿನಲ್ಲಿ ಕುಂದಾಪುರದವರು ಎಲ್ಲರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮವಾಗಿದ್ದು ನಿಮ್ಮದೊಂದು ಶುಭ ಹಾರೈಕೆ ಕನ್ನಡ ತಾಯಿಯ ಕುಂದಾಪ್ರದ ಮಗಳ ಮೇಲೆ ಇರಲಿ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ| ದೀಪಕ್ ಶೆಟ್ಟಿ ಬಾರ್ಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏನುಂಟು, ಏನಿಲ್ಲ ಹೇಳುವ ಹಾಗಿಲ್ಲ. ಆಟ, ಊಟ, ಸಂತಿ, ಪುಸ್ತಕ, ಜಾತ್ರೆ, ಮೆರವಣಿಗೆ, ರಾಜಕೀಯದವರು, ಪಿಕ್ಚರ್ ಆಕ್ಟರ್, ಒಟ್ಟಾರೆ ಊರ್ ಬದಿಯ ಹಬ್ಬ, ಎಲ್ಲರೂ ಬನ್ನಿ, ಮಸ್ತ್ ಮಜಾ ಮಾಡುವ.
ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ವೈದ್ಯರ ಸಮಾಲೋಚನಾ ಕಾರ್ಯಕ್ರಮ ಜುಲೈ 26ರಂದು ಶನಿವಾರ ಸಂಜೆ 5:00 ಗಂಟೆಗೆ ನವಿ ಮುಂಬಯಿ ಜೂಯಿ ನಗರದ ಬಂಟ್ಸ್ ಸೆಂಟರ್ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದ ಭಾರತಿ ಡಾ. ವೈ ಶಿವಾನಂದ ಶೆಟ್ಟಿ ವೇದಿಕೆಯಲ್ಲಿ (ಪ್ರಾಯೋಜಕರು, ಡಾ. ವೈ ಶಿವಾನಂದ ಶೆಟ್ಟಿ) ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ. ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಆರೋಗ್ಯ ಕಾಳಜಿಗಳ ಕುರಿತು ಪ್ರಸಿದ್ಧ ವೈದ್ಯಕೀಯ ವೃತ್ತಿಪರರಿಂದ, ತಜ್ಞರಿಂದ ಭಾಷಣಗಳೊಂದಿಗೆ ಮಾಹಿತಿಯುಕ್ತ ವಿಚಾರ ಸಂಕೀರ್ಣವು ಜಾಗೃತಿ ಮೂಡಿಸುವುದು, ತಡೆಗಟ್ಟುವ ಆರೈಕೆಯನ್ನು ಪ್ರೋತ್ಸಾಹಿಸುವುದು ಮತ್ತು ಆರೋಗ್ಯಕರ ಭವಿಷ್ಯದತ್ತ ಆರೋಗ್ಯ ರಕ್ಷಣೆ, ಜೀವನ ಶೈಲಿ ರೋಗಗಳು, ಸಾಮಾನ್ಯ ಕ್ಯಾನ್ಸರ್ ಮತ್ತು ಮೂಳೆ ಚಿಕಿತ್ಸಾ ಆರೋಗ್ಯ ಪೂರ್ಣ ಮಾಹಿತಿಗಳನ್ನು ತಜ್ಞ ವೈದ್ಯರು ನೀಡಲಿದ್ದಾರೆ.ಮುಂಬಯಿಯ ಪ್ರಸಿದ್ಧ ವೈದ್ಯರುಗಳಾದ ಡಾ. ಸತ್ಯಪ್ರಕಾಶ ಶೆಟ್ಟಿ ಎಂಬಿ, ಡಿಸಿಎಚ್ (ಮುಂಬಯಿ), ಡಾ. ಸಂಗೀತಾ ಎಸ್. ಶೆಟ್ಟಿ…
ಬಂಟರ ಸಂಘ ಕಾವೂರು ಇದರ 24ನೇ ವಾರ್ಷಿಕ ಮಹಾಸಭೆಯು ಮಾಲಾಡಿ ಕೋರ್ಟ್ ನ ಬಂಟರ ಭವನ ಕಾವೂರು ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಯಾಗಿದ್ದರು. ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಮಾಲಾಡಿ ಕೋರ್ಟ್ ನಲ್ಲಿ ಕಾವೂರು ಬಂಟರ ಭವನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಹಲವು ಮಂದಿ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರದ ಅಗತ್ಯವಿದ್ದು, ತಾನು ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು. 25ನೇ ವರ್ಷದ ಮಹಾಸಭೆಯೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವಂತಾಗಲಿ. ಪ್ರತಿಯೊಬ್ಬರೂ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದರು. ಹುಬ್ಬಳ್ಳಿ ದಾರವಾಡ ಬಂಟರ ಸಂಘದ ಕಾರ್ಯದರ್ಶಿ ಪ್ರದೀಪ್ ಟಿ ಪಕ್ಕಳ, ಬಂಟರ ಸಂಘ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆ, ಬಂಟರ ಸಂಘ ಬಂಟ್ವಾಳ ಅಧ್ಯಕ್ಷ ಜಗನ್ನಾಥ…
ವಿದ್ಯಾವಂತರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡ ಮಕ್ಕಳು ಉದ್ಯೋಗದಿಂದಾಗಿ ಎಷ್ಟು ದೂರ ಹೋದರೂ ನಮ್ಮೂರಿನ ಸಂಸ್ಕೃತಿಯನ್ನು ಮರೆಯಬಾರದು. ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ಉತ್ತಮ ಹೆಜ್ಜೆಯೊಂದಿಗೆ ಮುನ್ನಡೆಯಬೇಕು ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ಹೇಳಿದರು. ಮಾಣಿ ವಲಯ ಬಂಟರ ಸಂಘದ ವತಿಯಿಂದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರುಗಿದ ಆಟಿಡೊಂಜಿ ಕೂಟ- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ, ಶಿಕ್ಷಕಿ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಆಟಿ ತಿಂಗಳ ವೈಶಿಷ್ಟ್ಯತೆಗಳ ಬಗ್ಗೆ ತಿಳಿಸಿದರು. ಮಾಣಿ ವಲಯ ಬಂಟರ ಸಂಘದ ಅಧ್ಯಕ್ಷ ಮಾಧವ ರೈ ಅಮೈ ಭಂಡಸಾಲೆ ಸಭಾಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರಹ್ಲಾದ ಶೆಟ್ಟಿ ಜಡ್ತಿಲ, ಬಂಟ್ವಾಳ ತಾಲೂಕು ಬಂಟರ ಸಂಘದ ಮಾಜಿ ಉಪಾಧ್ಯಕ್ಷೆ ಪ್ರಫುಲ್ಲ…
ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-೩೮ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಜುಲೈ ೨೬ರ ಶನಿವಾರದಂದು ಅಪರಾಹ್ನ ೩.೩೦ಕ್ಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ “ಬಹುರತ್ನ ಪ್ರಸವೀ ಭಾರತೀ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.















