Author: admin
ಮುಂಬಯಿಯ ಹೆಸರಾಂತ ನ್ಯಾಯವಾದಿ, ಬೋಂಬೆ ಬಂಟ್ಸ್ ಎಸೋಸಿಯೇಷನ್ನಿನ ಮಾಜಿ ಅಧ್ಯಕ್ಷ ಸುಭಾಷ್ ಬಾಲಕೃಷ್ಣ ಶೆಟ್ಟಿ (70) ಅವರು ಆಗಸ್ಟ್ 9ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ಮನೆಯ ಪಕ್ಕದಲ್ಲಿ ಶಿರ್ಡಿ ಸಾಯಿಬಾಬಾರ ಮಂದಿರವೊಂದನ್ನು ಕಟ್ಟಿಸಿ ಪರಿಸರದ ಭಕ್ತಾದಿಗಳನ್ನು ಒಗ್ಗೂಡಿಸಿ ಉತ್ಸವವನ್ನು ಆಚರಿಸುತ್ತಾ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದರು. ಬೋಂಬೆ ಬಂಟ್ಸ್ ಎಸೋಸಿಯೇಶನ್ ನಲ್ಲಿ ಹಲವಾರು ವರ್ಷಗಳಿಂದ ಪದಾಧಿಕಾರಿಯಾಗಿದ್ದು, ಅಧ್ಯಕ್ಷರಾಗಿದ್ದು, ಸಾಮಾಜಿಕ ಚಿಂತಕರಾಗಿದ್ದರು. ನ್ಯಾಯವಾದಿಯಾಗಿ ತನ್ನಲ್ಲಿ ಬಂದವರಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದರು. ಅವರು ಯಕ್ಷಗಾನದ ವೇಷಧಾರಿಯಾಗಿ, ಅರ್ಥದಾರಿಯಾಗಿದ್ದರು. ಅಡ್ವಕೇಟ್ ಸುಭಾಷ್ ಶೆಟ್ಟಿಯವರು ಬಂಟ್ಸ್ ಲಾ ಫೋರಮ್ ನ ಸಲಹೆಗಾರರಾಗಿದ್ದರು. ಮೃತರು ಪತ್ನಿ ಉಳೆಪಾಡಿ ಮಂಜಲಗುತ್ತು ಭಾರತಿ ಶೆಟ್ಟಿ, ಪುತ್ರ ಶಶಾಂಕ್ ಶೆಟ್ಟಿ, ಪುತ್ರಿ ಶ್ರೇಯಾ ಶೆಟ್ಟಿ, ಅಳಿಯ, ಸೊಸೆ, ಮೊಮ್ಮಕ್ಕಳು, ಕುಟುಂಬಿಕರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬೋಂಬೆ ಬಂಟ್ಸ್ ಎಸೋಸಿಯೇಷನ್ ನ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಮಾಜಿ ಅಧ್ಯಕ್ಷರುಗಳು ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು ಸಂತಾಪ…
‘ಭಾರತೀಯ ಸೇನೆ ಇಂದು ಸಶಕ್ತವಾಗಿದ್ದು ಯಾವುದೇ ಶತ್ರು ರಾಷ್ಟ್ರವನ್ನು ಬಗ್ಗು ಬಡಿಯಲು ಸಮರ್ಥವಾಗಿದೆ. ಸೇನಾ ಸಾಧನಗಳ ತಯಾರಿಯ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ದೇಶ ಶೇ.75 ರಷ್ಟು ಸ್ವಾವಲಂಬಿಯಾಗಿದೆ’ ಎಂದು ಮೇಜರ್ ಜನರಲ್ ಸತೀಶ್ ಭಂಡಾರಿ ಹೇಳಿದರು. ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 28 ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅವರು ‘ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸಹಜವಾಗಿಯೇ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆದರೆ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನುಭವ ಸದಾ ಸ್ಮರಣೀಯ’ ಎಂದರು. ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಉದ್ಯಮಿ ಎಂ.ಆರ್.ಜಿ.ಗ್ರೂಪಿನ ಡಾ| ಕೆ ಪ್ರಕಾಶ್ ಶೆಟ್ಟಿ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಡಾ| ಕೆ ಪ್ರಕಾಶ್ ಶೆಟ್ಟಿ ‘ಹಿರಿಯರ ಸಾಧನೆಯಿಂದ ಪ್ರೇರಿತನಾಗಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಬಯಸಿದ್ದೆ. ಹಾದಿ ಕಠಿಣವಾಗಿತ್ತು. ಆದರೆ ಇಂದು ಕನಸು…
ಕೇಶಿ ಕುದುರೆ ರೂಪದ ರಾಕ್ಷಸ. ಈತ ವಿಷ್ಣುವಿನ ಅವತಾರವಾದ ಕೃಷ್ಣನಿಂದ ಕೊಲ್ಲಲ್ಪಟ್ಟಿರುತ್ತಾನೆ. ಕೇಶಿಯ ವಧೆಯ ಕಥೆಯನ್ನು ಭಾಗವತ ಪುರಾಣ, ವಿಷ್ಣು ಪುರಾಣ ಮತ್ತು ಹರಿವಂಶದಲ್ಲಿ ಹೇಳಲಾಗಿದೆ. ಕೃಷ್ಣನ ಮಾವ ಕಂಸ, ಕೃಷ್ಣ, ಬಲರಾಮನನ್ನು ಕೊಲ್ಲಲು ಈ ರಾಕ್ಷಸನನ್ನು ಕಳುಹಿಸಿರುತ್ತಾನೆ. ಮಥುರೆಯ ರಾಜನಾದ ಕಂಸನಿಗೆ ಕೃಷ್ಣನಿಂದ ಮರಣ ಅಂತ ಶರೀರವಾಣಿ ಆದಂದಿನಿಂದ ಕಂಸನು ತನ್ನ ಮರಣವನ್ನು ತಪ್ಪಿಸುವ ಪ್ರಯತ್ನದಲ್ಲಿ, ಅನೇಕ ರಾಕ್ಷಸರನ್ನು, ಕೃಷ್ಣನನ್ನು ಕೊಲ್ಲಲು ಗೋಕುಲಕ್ಕೆ ಕಳುಹಿಸುತ್ತಾನೆ. ಅಲ್ಲಿ ಕೃಷ್ಣನು ತನ್ನ ಸಾಕು ತಂದೆ ತಾಯಿಯರಾದ ನಂದಗೋಪ ರೋಹಿಣಿಯರೊಂದಿಗೆ ವಾಸಿಸುತ್ತಿರುತ್ತಾನೆ. ದೇವಕಿಯ ಮಗು ಎಂದು ತಪ್ಪಾಗಿ ಭಾವಿಸಿ ಕಂಸ ಕೊಲ್ಲಲು ಯತ್ನಿಸಿದ ಹೆಣ್ಣು ಮಗು ವಾಸ್ತವವಾಗಿ ಕೃಷ್ಣನ ಸಾಕು ತಾಯಿಯಾದ ಯಶೋದೆಯ ಮಗಳು ಎಂದು ತಿಳಿಯುತ್ತದೆ. ಇದನ್ನು ಕೇಳಿ ಕೋಪಗೊಂಡ ಕಂಸ ರಾಕ್ಷಸ ಕೇಶಿಯನ್ನು ಕರೆದು ಕೃಷ್ಣ ಮತ್ತು ಅವನ ಸಹೋದರ ಬಲರಾಮನನ್ನು ಕೊಲ್ಲುವಂತೆ ಆದೇಶಿಸುತ್ತಾನೆ. ಕೇಶಿಯು ಬೃಹತ್ ಕುದುರೆಯ ರೂಪವನ್ನು ತಾಳುತ್ತಾನೆ. ಕುದುರೆಯು ಗೋಕುಲದ ಸುತ್ತಲೂ ವಿಧ್ವಂಸಕತೆಯನ್ನು ಸೃಷ್ಟಿಸುತ್ತಿದ್ದಂತೆ ಕೃಷ್ಣ, ಕೇಶಿಯನ್ನು…
ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗುತ್ತಿಗೆದಾರರು, ಯುವ ಸಂಘಟಕ, ಉದ್ಯಮಿ ನಿತೀಶ್ ಶೆಟ್ಟಿ ಬಸ್ರೂರುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಶ್ ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ರಸಿಕ ಎಸ್ ಶೆಟ್ಟಿ ದಂಪತಿಯ ಸುಪುತ್ರರಾಗಿದ್ದಾರೆ.
ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿ ಒಂದಲ್ಲ ಒಂದು ಆಘಾತ ಸಂಭವಿಸುತ್ತಲೇ ಇರುತ್ತದೆ. ಅದು ಮಳೆ, ಬರಗಾಲ, ಸ್ಫೋಟ, ಯುದ್ಧ, ಸಾವು-ನೋವು ಏನೇ ಆಗಿರಬಹುದು. ಇವುಗಳೆಲ್ಲ ಬುದ್ದಿವಂತರೆನಿಸಿಕೊಂಡ ನಮ್ಮದೇ ಭಾವನೆಗಳಿಂದ, ಸ್ವಾರ್ಥ, ಅಧಿಕಾರ ದಾಹಗಳಿಂದಾಗಿರಬಹುದು. ಏಪ್ರಿಲ್, ಮೇ, ಜೂನ್ ನಲ್ಲಿ 45+, 50+ ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ನಲುಗಿದ ನಾವು ವಿಶೇಷವಾಗಿ ಇಂದು ದೇಶದಾದ್ಯಂತ ಕುಂಭದ್ರೋಣ ಮಳೆ, ಭೂಕುಸಿತ, ಊರಿಗೆ ಊರೇ ಕೊಚ್ಚಿಹೋಗುವ ಆತಂಕಕಾರಿ ಘಟನೆಗಳಿಂದ ಆಘಾತಗೊಂಡಿದ್ದೇವೆ. ಇವುಗಳಿಗೇನು ಕಾರಣ ಎಂದು ಆಲೋಚಿದರೆ ನಮ್ಮ ಅತೀ ಬುದ್ದಿವಂತಿಕೆ, ಆವೈಜ್ಞಾನಿಕ ಯೋಚನೆ ಯೋಜನೆಗಳೇ ಕಾರಣ ಎಂಬುದನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಬೇರೆ ಯಾರನ್ನೋ ಬೊಟ್ಟು ಮಾಡಿ ತೋರಿಸುತ್ತೇವೆ. ಭೂಗರ್ಭ ಶಾಂತವಾಗಿರಬೇಕು. ತುಸು ಅಲ್ಲಾಡಿದರೂ ಸಾಕು ಭೂಕಂಪ, ಅಗ್ನಿಸ್ಫೋಟ, ನಮ್ಮ ದಕ್ಷಿಣ ಕನ್ನಡ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಸಕಲೇಶಪುರದ ಎತ್ತಿನ ಹೊಳೆ ಯೋಜನೆಯ ಪರಿಣಾಮವನ್ನೀಗ ಅನುಭವಿಸುತ್ತಿದ್ದೇವೆ. ಕೆಲವು ತಿಂಗಳ ಹಿಂದೆ ಕುಡಿಯಲು ನೀರಿಲ್ಲ. ನದಿ ಕಾಲುವೆಗಳಲ್ಲಿ ನೀರಿನ ಪಟ್ಟೆ ಪಸೆಯಿರಲಿಲ್ಲ. ಈಗ ಕುಂಭದ್ರೋಣ ಮಳೆ, ಪ್ರವಾಹ,…
ಕುಂದಾಪ್ರ ಭಾಷೆ, ಸಂಸ್ಕೃತಿಯ ಉಳಿವು ಅಭಿವೃದ್ಧಿಯ ದೃಷ್ಟಿಯಿಂದ ‘ಕುಂದಾಪ್ರ ಕನ್ನಡ ವೇದಿಕೆ’ ಕುಂದಾಪುರದಲ್ಲಿ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬಂಟರ ಯಾನೆ ನಾಡವರ ಸಂಘದ ಸಭಾಂಗಣದಲ್ಲಿ ಕುಂದಾಪ್ರ ಕನ್ನಡಿಗರ ಪ್ರತಿನಿಧಿಗಳ ಸಭೆ ಏರ್ಪಡಿಸಲಾಗಿತ್ತು. ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಹಾಗೂ ಬಿದ್ಕಲ್ ಕಟ್ಟೆ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಾಗ್ಮಿ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಸಂಘದ ಕುಂದಾಪುರ ತಾಲೂಕು ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಸ್ವಾಗತಿಸಿದರು. ‘ಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪ್ರ ಕನ್ನಡದ ಕಾರ್ಯಕ್ರಮ ಎಲ್ಲಾ ಕಡೆ ಆಗುತ್ತಿರುವುದು ಸಂತೋಷದ ವಿಷಯ. ಆದರೆ ಕುಂದಾಪ್ರ…
ನಾಗಬನ ಅಂದರೆ ಒಂದಷ್ಟು ದಟ್ಟ ಮರಗಿಡಗಳ, ಬಳ್ಳಿಗಳ ಮಧ್ಯೆ ಇರುವಂತದ್ದು. ಅಲ್ಲಿ ಮರಗಳ ದಟ್ಟತೆ ನೆಲಕ್ಕೆ ಸೂರ್ಯನ ಬೆಳಕು ಬೀಳದಷ್ಟು ಇರುತ್ತದೆ. ಅದು ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಇಂತಹ ಬನದ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯುವುದು ನಿಷಿದ್ಧ! ಅದೆಲ್ಲೋ ಗದ್ದೆಗೆ ಬಾಗಿಕೊಂಡಿರುವ ಉಳುಮೆಗೆ ತೊಂದರೆ ಕೊಡುವ ಬನದ ಮರದ ಗೆಲ್ಲುಗಳನ್ನು ಕಡಿಯುತ್ತಾರೆ ಬಿಟ್ರೆ ಬುಡದಿಂದ ಮರಗಳನ್ನು ಕಡಿಯುವುದಾಗಲಿ, ಹಾರೆ ಪಿಕ್ಕಾಸು ಹಿಡಿದು ಬನದಲ್ಲಿ ಮಣ್ಣು ಅಗೆಯುವ ಕೆಲಸ ಮಾದುವುದಾಗಲಿ ಮಾಡುವುದಿಲ್ಲ. ಹೆಚ್ಚಾಗಿ ಎಲ್ಲಾ ಸಾಂಪ್ರದಾಯಿಕವಾದ ನಾಗ ಬನದಲ್ಲಿ ನೆಲದ ಮೇಲೆಯೇ ಕಲ್ಲುಗಳು ಇರುತ್ತದೆ. ಅದು ನೋಡಲೂ ಚಂದ ಅಲ್ಲಿರುವ ನಾಗಗಳಿಗೂ ಅದರಿಂದ ಒಳ್ಳೆಯದು. ಆದರೆ ಇತ್ತೀಚಿಗೆ ಜನರು ನಾಗ ಬನದಲ್ಲಿರುವ ಮರಗಳನ್ನು ಎಲ್ಲಾ ಕಡಿದು ನೆಲದ ಮೇಲಿದ್ದ ನಾಗನ ಕಲ್ಲುಗಳನ್ನು ಸಿಮೆಂಟಿನ ಕಟ್ಟೆ ಮಾಡಿ ಅದರ ಮೇಲೆ ಪ್ರತಿಷ್ಠಾಪನೆ ಮಾಡುತ್ತಾ ಇದ್ದಾರೆ. ಇದು ತಿಳುವಳಿಕೆ ಇದ್ದೋ ಅಥವಾ ತಿಳುವಳಿಕೆ ಇಲ್ಲದೆಯೋ ಗೊತ್ತಿಲ್ಲ. ಸಿಮೆಂಟಿನ ಕಟ್ಟೆಯ ಮೇಲೆ ನಾಗ ಬರುತ್ತದೆಯೇ ಎಂದು ಕೇಳಿದರೆ…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಆಗಸ್ಟ್ 10ರಂದು ಕೊಂಬೆಟ್ಟು ಎಂ.ಸುಂದರ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಧ್ಯಾಹ್ನ ಆರಂಭಗೊಂಡು ಸಂಜೆಯ ತನಕ ನಡೆಯಲಿದೆ. ಪ್ರತಿಕಾಗೋಷ್ಠಿಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾಯಕತ್ವದಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಂಟ ಸಮಾಜಕ್ಕೆ ಅದರದ್ದೇ ಆದ ಪರಂಪರೆಯಿದೆ. ಸಮಾಜಮುಖಿ ಕೆಲಸ ಕಾರ್ಯಗಳನ್ನು ಜೊತೆಯಾಗಿ ಮಾಡಿಕೊಂಡು ಹೋಗಲು ಈ ವರ್ಷ ಆಟಿಡೊಂಜಿ ಬಂಟೆರೆ ಸೇರಿಗೆ ಎಂಬ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಈ ಸಮಾಜದ ವಿಶೇಷತೆ, ಆಚರಣೆ ಮುಂದೆ ಸಮಾಜದಿಂದ ಆಗುವ ಯೋಜನೆಗಳೇನು ಎಂಬುದನ್ನು ಪ್ರಸ್ತಾಪ ಮಾಡಲಿದ್ದೇವೆ. ಸಂಜೆ ಗಂಟೆ…
ಹುಬ್ಬಳ್ಳಿ ಧಾರವಾಡ ಬಂಟರ ಸಂಘ : ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿ
ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜಸೇವಕ, ರಾಜಕೀಯ ಧುರೀಣ ವಿಜಯಾನಂದ ಶೆಟ್ಟಿಯವರು ಧಾರವಾಡದಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ಸಮಾಜಸೇವೆಯೇ ಸರ್ವಸ್ವ ಎಂದು ನಂಬಿರುವ ರಾಜೇಂದ್ರ ವಿ ಶೆಟ್ಟಿಯವರು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಕೊಡಲ್ಪಡುವ 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ತುಳುನಾಡು ಅದೆಷ್ಟೋ ಪವಿತ್ರ ದೈವ ದೇವಾಲಯಗಳ ಪುಣ್ಯಭೂಮಿ. ಅವುಗಳಲ್ಲಿ ಎರಡು ಅವಿಸ್ಮರಣೀಯ ದೇವಾಲಯಗಳನ್ನು ಇಲ್ಲಿ ಪ್ರಸ್ತಾವಿಸಲೇಬೇಕು. ಹಿರಿಯರ ನುಡಿಯಂತೆ ಹಿತ್ತಿಲಗಿಡ ಮದ್ದಲ್ಲ ಎಂಬಂತೆ, ಮೇಲೆ ಸೂಚಿಸಿದ ಪುಣ್ಯ ಸ್ಥಳಗಳನ್ನು ಯಾಕೋ ಜಾಣ ಮರೆವಿನಂತೆ ಮರೆತಂತಿದೆ. ಪ್ರತಿನಿತ್ಯ ಭಕ್ತರ ಕೋಟಿಗಟ್ಟಲೆ ಕಾಣಿಕೆ ಹಣ ಹರಿದು ಬರುವ ಶ್ರೀಮಂತ ದೇವಾಲಯಗಳಿಗೆ ಪ್ರತಿವರ್ಷ ಹೋಗಿ ಹಣ ಸುರಿದು ಅಲ್ಲಿನ ಅನ್ನಪ್ರಸಾದಕ್ಕೆ ತಾಸುಗಟ್ಟಲೆ ಕ್ಯೂ ನಿಂತು ಉಂಡವರಾಗಿದ್ದೇವೆ. ಆದರೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕಮಲಶಿಲೆ ಎಂಬ ಪುರಾತನ ದೇವಾಲಯವಿದೆ. ಇಲ್ಲಿ ಪ್ರತಿದಿನ ಮಧ್ಯಾಹ್ನ 12.30 ರಿಂದ 3ರ ವರೆಗೆ ಹಾಗೂ ರಾತ್ರಿ 8ರಿಂದ 10 ಗಂಟೆಯ ವರೆಗೆ ಬರುವ ಭಕ್ತರೆಲ್ಲರಿಗೂ ಮೃಷ್ಟಾನ್ನ ಭೋಜನ ಬಡಿಸುತ್ತಾರೆ. ಮೃಷ್ಟಾನ್ನ ಭೋಜನ ಎನ್ನುವುದಕ್ಕಿಂತಲೂ ಷಡ್ರಸ ಭೋಜನ ಎನ್ನುವುದು ಉತ್ತಮ. ಆರೋಗ್ಯ ಶಾಸ್ತ್ರ ವಿಧಿಯಂತೆ ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಚೊಗರುಗಳೆಂಬ ಆರು ಬಗೆಯೂ ಇಲ್ಲಿನ ಊಟದಲ್ಲಿದೆ. ಆ ಕಮಲಶಿಲೆಯ ತಾಯಿ ತನ್ನಲ್ಲಿಗೆ…