Author: admin
ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ “ನಮ್ಮದು ಪರಶುರಾಮ ಸೃಷ್ಟಿ” ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ ಸೃಷ್ಠಿಸಿದ್ದು ಎಂಬ ಪೌರಾಣಿಕ ಕಥೆಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಆಧಾರಗಳಿಲ್ಲ. ಕೇರಳದ ತ್ರಿವೇಂದ್ರಂನಿಂದ ಹಿಡಿದು ಗುಜರಾತ್ನ ಉಮರ್ಗಾಮ್ವರೆಗಿನ ನಮ್ಮ ಪಶ್ಚಿಮ ಕರಾವಳಿ ಸೃಷ್ಠಿಯಾಗಿದ್ದು, ಸುಮಾರು ನಾಲ್ಕರಿಂದ ಆರು ಕೋಟಿ ವರ್ಷಗಳ ಹಿಂದೆ, ಅದೂ ಆಫ್ರಿಕಾ ಖಂಡದಿಂದ ತುಂಡಾಗಿ ಸರಿದು ಬಂದ ಭೂಭಾಗವಿದು. ಕೇರಳದಿಂದ ಮಹಾರಾಷ್ಟ್ರ ಗುಜರಾತ್ ಗಡಿಯವರೆಗೆ ಇರುವ ಸಹ್ಯಾದ್ರಿ ಪರ್ವತ ಶ್ರೇಣಿ ಹುಟ್ಟಿಕೊಂಡಿದ್ದೇ ಆಗ ನಡೆದ ಈ ಭೂಭಾಗಗಳ ಘರ್ಷಣೆಯಿಂದ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಟರ್ನೆಟ್ ಸರ್ಚ್ನಲ್ಲಿ ಗೋಂಡ್ವಾನಾ ಲ್ಯಾಂಡ್ ಅಥವಾ ಕಾಂಟಿನೆಂಟಲ್ ಡ್ರಿಫ್ಟ್ ಎಂದು ಬರೆದು ಹುಡುಕಿದರೆ ಇದರ ಪೂರ್ಣ ಮಾಹಿತಿ ವೀಡಿಯೋದೊಂದಿಗೆ ಸಿಗುತ್ತದೆ. ಭೂ ವಿಜ್ಞಾನಿಗಳಿಗೆ ನಮ್ಮ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿರುವ ಜುರಾಸಿಕ್ ಯುಗದ ಸಸ್ಯಗಳ ಕಲ್ಲಾಗಿರುವ ಪಳೆಯುಳಿಕೆಯ ಆಧಾರದಲ್ಲಿ…
ದಿ. ತಿಮ್ಮಪ್ಪ ಪಕ್ಕಳ ಪೆರ್ಮಂಕಿಗುತ್ತು ಅವರ ಸವಿನೆನಪಿಗಾಗಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ನಿವೇಶನ ನೀಡಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಚಾಲನೆ ನೀಡಿ ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಅನಿತಾ ಚೆರಿಯಾನ್, ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಮಾರ್, ವಸಂತಿ ತಿಮ್ಮಪ್ಪ ಪಕ್ಕಳ ಎಕ್ಕಾರು ಬೆಳ್ಳಿಮಾರುಗುತ್ತು, ಮೊಮ್ಮಗ ರಾಹುಲ್ ಅಶೋಕ್ ಪಕ್ಕಳ ಪೆರ್ಮಂಕಿಗುತ್ತು ಹಾಗೂ ಉದ್ಯಮಿ ಸುಧೀರ್ ಪಕ್ಕಳ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಗೆ ಮಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಭಿನಂದನಾ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಲಾಯಿತು. 2023 – 24 ರ ಸಾಲಿನ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ (ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ) ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯಲು ಡಾ. ದೀಪಕ್ ರೈ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸನ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಆರೋಗ್ಯಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.
ದೇಶಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಪಡುಕೂಡೂರು ಬೀಡು ಎಂ. ಡಿ ಅಧಿಕಾರಿ ಸಾಕ್ಷಿ. ಅವರು ದೇಹಕ್ಕೆ ಬೆಲೆ ಕೊಡದೇ ಜನಕ್ಕೆ ಬೆಲೆ ಕೊಟ್ಟು ದೊಡ್ಡವರಾದರು. ಒಕ್ಕಲಿನ ಸರ್ವರಿಗೂ ಭೂಮಿ ಬಿಟ್ಟುಕೊಟ್ಟು ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು. ಪಡುಕುಡೂರು ತ್ಯಾಗದ ಭೂಮಿ. ಅದೇ ಭೂಮಿಯ ಜನತೆಗೆ ಬಡವರು ಗೇಣಿದಾರರಿಗೆ ಭೂಮಿ ಕೊಟ್ಟು ಬದುಕು ಕೊಟ್ಟವರು. ಅವರು ಮರೆಯಲಾರದ ಅದ್ಭುತ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು. ಅವರು ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ ಸ್ವಾತಂತ್ರ್ಯೋತ್ಸವದಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿಯವರ ಬಗೆಗೆ ಇರುವ ಅಭಿಮಾನಕ್ಕೆ ಪಡುಕುಡೂರು ಸಾಕ್ಷಿಯಾಗಿದೆ. ಪುತ್ಥಳಿ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ನನ್ನ ಭಾಗ್ಯ. ಎಂ.ಡಿ ಅಧಿಕಾರಿ ದಂಪತಿಗಳ ಪ್ರತಿಮೆ ಒಟ್ಟಿಗೆ ಪ್ರತಿಷ್ಠೆ ಆಗಬೇಕು ಎಂಬುದು ನನ್ನ ಆಶಯ. ನಾನು ಈ ಎತ್ತರಕ್ಕೆ ಏರಲು ಕಾರಣರಾದವರಲ್ಲಿ ಎಂ. ಡಿ ಅಧಿಕಾರಿಯವರು ಕೂಡ ಒಬ್ಬರು ಎಂದು…
ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದ್ದು, ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಕಲಾವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ…
ತಾನೋರ್ವ ಇನ್ಫಾರ್ಮೇಶನ್ ಟೆಕ್ನಾಲಜಿ ಕ್ಷೇತ್ರದ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿರುವುದರೊಂದಿಗೆ ತನ್ನ ಸಮುದಾಯ ಬಾಂಧವರ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳೊಂದಿಗೆ ಕೈ ಜೋಡಿಸಿಕೊಂಡು ತನ್ನಿಂದಾಗುವ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಅವರ ಕೌಟುಂಬಿಕ ಸಮಸ್ಯೆಗಳಿಗೆ ಸ್ಫಂದಿಸುವ ಓರ್ವ ಉದಾರ ಹೃದಯದ ಉದಾತ್ತ ವ್ಯಕ್ತಿತ್ವ ಎಂಬಂತೆ ಅಮರನಾಥ ಲಕ್ಷ್ಮಣ್ ಶೆಟ್ಟಿಯವರು ಗುರುತಿಸಿಕೊಂಡಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಪದವೀಧರರಾಗಿರುವ ಜೊತೆಗೆ ಮ್ಯಾನೇಜ್ಮೆಂಟ್ ಪಿ.ಜಿ ಡಿಪ್ಲೊಮಾ ಹೊಂದಿರುವ ಇವರು ತನ್ನ ಶಿಕ್ಷಣ ಪೂರೈಸಿದ ಬಳಿಕ ತನ್ನದೇ ಆದ LDS Infotech Pvt Ltd ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಂಸ್ಥೆಯು ಮಾರುಕಟ್ಟೆಯ ಬಹು ಬೇಡಿಕೆಯ ತಂತ್ರವಿಜ್ಞಾನ ಸಂಸ್ಥೆ ಎಂಬಂತೆ ಗುರುತಿಸಲ್ಪಟ್ಟಿತು. ಕೇವಲ ನಾಲ್ಕು ಮಂದಿ ಸಹಾಯಕರೊಂದಿಗೆ ಆರಂಭಿಸಲ್ಪಟ್ಟ ಈ ಸಂಸ್ಥೆ ಇಂದು ನೂರೈವತ್ತು ಜನ ಉನ್ನತ ಶಿಕ್ಷಣ ಪಡೆದ ಸದಸ್ಯರ ತಂಡದೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತನ್ನ ಸಂಸ್ಥೆ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಮೇ ತಿಂಗಳಿನಲ್ಲಿ ಆಚರಿಸಿದೆ. ಟೆಕ್ನಾಲಜಿ ಸೊಲ್ಯೂಷನ್ಸ್ ಗ್ರೂಪ್…
77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಿಸುವ ಡಾ| ಹರ್ಷಕುಮಾರ್ ರೈ ಮಾಡಾವು ನಿರ್ಮಾಣದ ಭಾರತಾಂಬೆಯ ತೇರು ದೇಶಭಕ್ತಿ ಗೀತೆಯನ್ನು ಆಗಸ್ಟ್ 15 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿದರು. ಡಾ| ಹರ್ಷಕುಮಾರ್ ರೈ ಮಾಡಾವು, ಉದ್ಯಮಿ ಬ್ರಿಜೇಶ್ ರೈ ಮಾಡಾವು ಮತ್ತಿತರರು ಉಪಸ್ಥಿತರಿದ್ದರು. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶ ಭಕ್ತಿ ಸಾರುವ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ ಸೇರಿದಂತೆ ಹಲವು ಕಿರುಚಿತ್ರ ನಿರ್ಮಿಸಿರುವ ಜನ್ಮ ಕ್ರೀಯೆಷನ್ಸ್ ಈ ಬಾರಿ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ‘ಭಾರತಾಂಬೆಯ ತೇರು’ ಎನ್ನುವ ಭಕ್ತಿಗೀತೆ ಅಲ್ಬಂ ಸಾಂಗ್ ನಿರ್ಮಾಣ ಮಾಡಿದೆ. ಈ ಅಲ್ಬಂ ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಆಳ್ವಾಸ್ನಲ್ಲಿ ಸಂಭ್ರಮದಿಂದ ನಡೆದ ೭೮ನೇ ಸ್ವಾತಂತ್ರ್ಯೋತ್ಸವ ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಲಿ; ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ
ಮೂಡುಬಿದಿರೆ: ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಆಶಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆಳ್ವ ಆವರಣದ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡ ೭೮ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ದೇಶವನ್ನು ಆರ್ಥಿಕ, ಸಾಮಾಜಿಕ, ಸಾಮುದಾಯಿಕವಾಗಿ ಎಲ್ಲರೂ ಸೇರಿ ಕಟ್ಟೋಣ’ ಎಂದ ಅವರು, ‘ವೈಯಕ್ತಿಕ ಸ್ವಾತಂತ್ರ್ಯದ ಉಳಿವೂ ಇಂದಿನ ಅವಶ್ಯಕತೆ. ಸ್ವಾತಂತ್ರ್ಯ ವನ್ನು ಯಾರದೇ ಪಾದಕ್ಕೆ ಸಮರ್ಪಿಸಬೇಡಿ’ ಎಂದು ಯುವ ಸಮುದಾಯವನ್ನು ಎಚ್ಚರಿಸಿದರು. ಯಾವುದೂ ಅಸಾಧ್ಯ ಎಂಬುದು ಇಲ್ಲ. ಪ್ರಕೃತಿ ಪೂರಕ ಸಂಸ್ಕೃತಿ ಬೆಳೆಯಬೇಕು. ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಬೇಕು. ಅದಕ್ಕೆ ಪ್ರತಿ ವ್ಯಕ್ತಿಯೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ದೇಶದಲ್ಲಿ ಅನೇಕ ಜಾತಿ-ಧರ್ಮಗಳಿವೆ. ಆದರೆ ವೈವಿಧ್ಯತೆಯ ನಡುವೆ ಐಕ್ಯತೆ ಹಾಗೂ ಸಾಮರಸ್ಯ ಇದೆ. ದೇಶದಲ್ಲಿನ ನದಿಗಳು ಸಮುದ್ರ ಸೇರಿದಂತೆ, ಇಲ್ಲಿ ಯಾರ ಪಾಲು ಎಷ್ಟು ಎಂದು ಕೇಳಬಾರದು. ದೇಶ ನಿರ್ಮಾಣಕ್ಕೆ ಸಮರ್ಪಣ ಭಾವ…
ರಾರಾಜಿಸಿದ ತಿರಂಗ ಬ್ರಹ್ಮಾವರ: ಆ. ೧೫ ಇಲ್ಲಿನ ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಜಿ ಎಮ್ ಗ್ಲೋಬಲ್ ಸ್ಕೂಲ್ ಜೊತೆಯಾಗಿ ೭೮ನೇ ಸ್ವಾತಂತ್ರೊತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದವು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಸೇನೆಯ ಮಾಜಿ ಸೈನಿಕ ಸುರೇಶ್ ಸಿ ರಾವ್ ಆಗಮಿಸಿದ್ದರು. ಅವರು ಮಾತನಾಡಿ ಅನೇಕ ಮಹಾನಾಯಕರ ಸತ್ಯಾಗ್ರಹ , ಚಳುವಳಿ, ಹೋರಾಟದ ಫಲವಾಗಿ ನಾವು ಇಂದು ಸ್ವಾತಂತ್ರ್ಯ ವನ್ನು ಪಡೆದಿದ್ದೇವೆ. ಅವರ ತ್ಯಾಗ ಪರಿಶ್ರಮವನ್ನು ಸ್ಮರಿಸಬೇಕು. ನಾವು ಸಂವಿಧಾನದ ಅಡಿಯಲ್ಲಿ ಪಡೆದ ಹಕ್ಕುಗಳು, ಸ್ವತಂತ್ರ ಜೀವನ ಬೇರೆಯವರ ಸ್ವಾತಂತ್ರೊತ್ಸವದಕ್ಕೆ ಧಕ್ಕೆ ತರಬಾರದು. ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸದೃಢವಾದ ದೇಶವನ್ನು ಕಟ್ಟಲು ಸಾಧ್ಯ. ಇಂದಿನ ಯುವ ಸಮುದಾಯ ಸಾಧಕರಿಂದ ಸ್ಫೂರ್ತಿಯನ್ನು ಪಡೆದು ಉತ್ತಮ ದೇಶವನ್ನು ಕಟ್ಟಲು ಪ್ರಯತ್ನಿಸಬೇಕೆಂದರು. ಸಾವಿರಾರು ವಿದ್ಯಾರ್ಥಿಗಳ ಕರದಲ್ಲಿ ರಾರಾಜಿಸಿದ ತಿರಂಗ ರಾಷ್ಟ್ರಪ್ರೇಮದ…
ಮನೋರಂಜನೆ ಹೆಸರಿನಲ್ಲಿ ಯಕ್ಷಗಾನದ ವಿರೂಪ ಸಲ್ಲದು. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರದ ಸಾಂದರ್ಭಿಕತೆ, ಗಂಭೀರತೆಯನ್ನು ಅರಿತು ಕಲಾವಿದರು ಅಭಿನಯಿಸಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ರೈ ಹೇಳಿದರು. ಅವರು ಮೂಡಬಿದ್ರೆಯ ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದಲ್ಲಿ ಗಾಳಿಮನೆ ಅಮ್ನಾಯ ಯಕ್ಷ ಸಂಸ್ಕೃತಿ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಆಟ, ಕೂಟ, ನಾಟ್ಯ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಯಕ್ಷಗಾನ ಪರಂಪರೆಯಲ್ಲಿ ವಿಶಿಷ್ಟವಾಗಿ ಮೂಡಿ ಬರುತ್ತಿದ್ದ ಆಟ ಕೂಟಗಳಲ್ಲಿ ಅದೆಷ್ಟೋ ಪ್ರಕಾರ ಯಕ್ಷಗಾನ ವಿದ್ವಾಂಸರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿದ್ಯೆ ಇಲ್ಲದ ಕಲಾವಿದರು ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಅಂತಹ ಮಹಾನ್ ಪ್ರತಿಭೆಗಳು ಇಂದು ವಿರಳವಾಗುತ್ತಿವೆ. ಇಂದು ಯಕ್ಷಗಾನ ಕಾಲಮಿತಿಯೊಳಗೆ ಬಂಧಿಯಾಗಿ ಆಧುನಿಕತೆಯ ಸೋಗಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ಯಕ್ಷಗಾನ ರಂಗ ಪ್ರಭುದ್ದ ಕಲಾವಿದರಿಲ್ಲದೇ ಬಡವಾಗಬಾರದು. ಯಕ್ಷಗಾನ ಶಾಸ್ತ್ರೀಯವಾಗಿ ಮೂಡಿಬರಲು ನಾವೇನು ಮಾಡಬೇಕು ಎಂದು ಯಕ್ಷಗಾನ ಸಂಘಟಕರು, ಕಲಾವಿದರು, ಪ್ರೋತ್ಸಾಹಕರು, ಪ್ರೇಕ್ಷಕರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ ಎಂದು…