ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 45 ನೇ ಘಟಕ ಇತ್ತೀಚೆಗೆ ರಚನೆಗೊಂಡಿತು. ಗೌರವಾಧ್ಯಕ್ಷರಾಗಿ ನಕ್ರೆ ಸತೀಶ್ಚಂದ್ರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷರಾಗಿ ಯದುನಾಥ್ ಆಳ್ವ ನೇಮಕಗೊಂಡರು. ಸಂಚಾಲಕರಾಗಿ ಸನತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ವಿಲ್ಸನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಎಸ್ ಪೂಜಾರಿ, ಖಜಾಂಚಿಯಾಗಿ ಅಬ್ದುಲ್ ರಜಾಕ್ ನಿಟ್ಟೆ, ಜಂಟಿ ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಸಾಲಿಯಾನ್, ಕಲ್ಯಾಣ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಶ್ರೀನಾಥ್ ಪ್ರಭು ಆಯ್ಕೆಗೊಂಡರು.







































































































