Author: admin
ಬಾಷೆ, ಪ್ರೀತಿ, ಮೋಹ ತಿಳಿಸುವಲ್ಲಿ ಮೊದಲಾಗಿ ನಮ್ಮ ಮನೆಯೇ ಪಾಠಶಾಲೆ ಮತ್ತು ಮೊದಲ ಗುರುವೇ ತಾಯಿ. ಇದು ನಮ್ಮ ತುಳುನಾಡ ತಾಯಂದಿರು ತಿಳಿದುಕೊಳ್ಳಬೇಕು. ಇಂದಿನ ಮಕ್ಕಳು ಬೇರೆ ಎಲ್ಲಾ ಬಾಷೆಗಳನ್ನು ಶಾಲೆ ಅಥವಾ ಪರಿಸರದಲ್ಲಿ ಕಲಿತುಕೊಳ್ಳುತ್ತಾರೆ. ಆದರೆ ನಮ್ಮ ಮಾತೃ ಭಾಷೆ ಮನೆಯಿಂದಲೇ ಬರಬೇಕು. ಇದು ತಂದೆ ತಾಯಂದಿರ ಕರ್ತವ್ಯವಾಗಿದೆ. ಇದರಿಂದ ನಮ್ಮ ತುಳುನಾಡ ಸಂಸ್ಕ್ರತಿ ಸಂಸ್ಕಾರ ಮಕ್ಕಳಿಗೆ ತಿಳಿದುಕೊಳ್ಳಲು ಮತ್ತು ಉಳಿಯಲು ಸಾದ್ಯ. ತುಳುನಾಡ ಸಂಸ್ಕ್ರತಿ, ಆಚಾರ ವಿಚಾರಗಳ ಬಗ್ಗೆ ಅರಿತು ಜೀವನದಲ್ಲಿ ಮುನ್ನಡೆಯುವ ನಾವು ಗರ್ವದಿಂದ ಹೇಳಬಹುದು ನಾನೊಬ್ಬ ತುಳುವ ಎಂದು. ಅಂತಹ ಶಕ್ತಿ ತುಳು ಭಾಷೆಗಿದೆ. ನಮ್ಮ ತುಳುನಾಡ ಜಾನಪದ ಸಂಸ್ಕ್ರತಿ, ದೈವಾರಾಧನೆ, ನಾಗಾರಾಧನೆ ಆಚಾರ ವಿಚಾರ ಸಂಸ್ಕಾರ ಇವೆಲ್ಲವನ್ನು ಅರಿತವರು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗೂ ಮಕ್ಕಳಲ್ಲಿ ತಿಳಿದುಕೊಳ್ಳುವ ಮನಸ್ಸು ಮೂಡಿ ಬರಬೇಕು. ಇದು ಮಾತೃ ಹೃದಯದಿಂದ ಮಾತ್ರ ಸಾದ್ಯ ಎಂದು ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ನ ಸಿ.ಎಂ.ಡಿ ಸದಾನಂದ ಕೆ…
ಯಡಾಡಿ ಮತ್ಯಾಡಿ ವಿದ್ಯಾರಣ್ಯ (ಲಿಟ್ಲ್ ಸ್ಟಾರ್) ಆಂಗ್ಲ ಮಾಧ್ಯಮ ಶಾಲೆ ಮತ್ತು ಕುಂದಾಪುರ ಸುಜ್ಞಾನ ಎಜುಕೇಶನ್ ಟ್ರಸ್ಟ್ ಇವರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಂಭದಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು. ರಮೇಶ್ ಕಾರ್ಣಿಕ್ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಅವರು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡುತ್ತಾ, ‘ಬ್ರಿಟಿಷರ ಕರಾಳ ದಾಸ್ಯದಿಂದ ಮುಕ್ತರಾಗಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಒಂದು ದೇಶವಾಗಿ ನೋಡಿದಾಗ ಅದು ಸಾಗುತ್ತಿರುವ ಹಾದಿ ನೆಮ್ಮದಿಯನ್ನು ಕೊಡುತ್ತದೆ. ಸ್ವಾತಂತ್ರದ ನಂತರ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಶಿಕ್ಷಣ ಇನ್ನುಳಿದ ಕ್ಷೇತ್ರಗಳಲ್ಲಿ ಭಾರತ ಜಗತ್ತಿಗೆ ಸ್ಪರ್ಧಿಸಿ ಉಳಿದ ದೇಶಗಳಿಗೆ ಮಾದರಿಯಾಗಿದೆ. ಬಡವರ ಏಳಿಗೆ ಮತ್ತು ಇನ್ನುಳಿದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಿ, ತ್ಯಾಗ ಮನೋಭಾವನೆ ಆದರ್ಶಕತೆ, ಪ್ರೀತಿ ನಂಬಿಕೆ, ಪ್ರಾಮಾಣಿಕತೆ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ…
ಮುಂಬಯಿಯ ಪ್ರತಿಷ್ಠಿತ ಪಯ್ಯಡೆ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ಪಾಲುದಾರ, ಬಂಟ್ವಾಳದ ಪ್ರಗತಿಪರ ಕೃಷಿಕ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಪದ್ಮನಾಭ ಪಯ್ಯಡೆ ಹಾಗೂ ಉದ್ಯಮಿ ಸಮಾಜ ಸೇವಕ ಮುಂಡಪ್ಪ ಪಯ್ಯಡೆ ಅವರ ಸೋದರ ರಘುನಾಥ ಪಯ್ಯಡೆ ಕೂರಿಯಾಳಗುತ್ತು ಅವರು ಆಗಸ್ಟ್ 20ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ದೊಡ್ಡ ಮಟ್ಟಿದ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಅಮ್ಟಾಡಿ ಮಂಡಲ ಪಂಚಾಯತ್ ಪ್ರಧಾನರಾಗಿ, ಬಂಟ್ವಾಳ ತಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಂಟವಾಳದ ಬಂಟರ ಭವನ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಪ್ರಸ್ತುತ ಬಂಟರ ಸಂಘ ಬೆಳ್ಳೂರು ವಲಯದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ,…
ಕುಂದಾಪುರ ತಾಲೂಕು ಯುವ ಬಂಟರ ಸಂಘ ಇವರ ವತಿಯಿಂದ ವೈಯಕ್ತಿಕ ನೆಲೆಯಿಂದ ಸಂಘಟನೆಯ ನೆಲೆಗೆ ಆಸರೆ ಯೋಜನೆಯಡಿ ತಂದೆ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ನವಚೇತನ ಯೋಜನೆಯಡಿ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಯುವ ಸಾಧಕರಿಗೆ ಸನ್ಮಾನ, ಡಾ. ಮಧುಕರ ಶೆಟ್ಟಿ ಐ.ಪಿ.ಎಸ್ ಸಂಸ್ಮರಣ ಪ್ರಶಸ್ತಿ 2024 ಹಾಗೂ ದಿ. ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿ ಹಾಗೂ 2024-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ ಇದರ ಕುಲಪತಿ ಡಾ. ಎಚ್.ಎಸ್ ಬಲ್ಲಾಳ್ ಅವರು ಆಗಸ್ಟ್ 18ರಂದು ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಹಾಲ್ ನಲ್ಲಿ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಯುವ ಸಾಧಕರನ್ನು ಗೌರವಿಸಿದರು. ಎಚ್.ಪಿ.ಆರ್ ಗ್ರೂಪ್…
ಯಕ್ಷಗಾನ ಎಂದರೆ ನನಗೆ ಅಪಾರ ಪ್ರೀತಿ. ತಾಳಮದ್ದಳೆಯಲ್ಲಿ ನಾನು ಕಲಾವಿದನಾಗಿಯೂ ಭಾಗವಹಿಸಿದ್ದೇನೆ. ಊರಿನಲ್ಲಿ ವರ್ಷಂಪ್ರತಿ ನಾವು ಯಕ್ಷಗಾನವನ್ನು ಹಮ್ಮಿಕೊಂಡು ಬಂದಿರುತ್ತೇವೆ. ಯಕ್ಷಗಾನ ಕ್ಷೇತ್ರವನ್ನು ನಾವು ಗಟ್ಟಿಗೊಳಿಸುವ ಅಗತ್ಯವಿದೆ. ಯಕ್ಷಗಾನದಿಂದ ವ್ಯಕ್ತಿತ್ವ ವಿಕಸನ ಹಾಗೂ ಮನಶಾಂತಿ ನಮಗೆ ದೊರೆಯುತ್ತದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ನಮ್ಮ ಕಲೆ ಸಂಸ್ಕೃತಿಯ ಅರಿವು ಮೂಡಿಸಿ ಉತ್ತಮ ಸಂಸ್ಕಾರವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ. ತಂದೆ ತಾಯಂದಿರ ಸೇವೆಯನ್ನು ಮಾಡುವುದೇ ಮಕ್ಕಳು ತಮ್ಮ ಜೀವನದಲ್ಲಿ ಮಾಡುವ ದೊಡ್ಡ ಸಾಧನೆ ಆಗುತ್ತದೆ ಎಂದು ಉದ್ಯಮಿ, ಸಮಾಜಸೇವಕ ಮುಂಡಪ್ಪ ಪಯ್ಯಡೆ ನುಡಿದರು. ಅವರು ಆಗಸ್ಟ್ 7 ರ ಬುಧವಾರದಂದು ಭಾಯಂದರ್ ಪೂರ್ವದ ಕ್ರೌನ್ ಬಿಸಿನೆಸ್ ಹೋಟೆಲ್ ನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ಆಯೋಜಿಸಿದ್ದ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿಯ ತವರೂರ ಕಲಾವಿದರ ಕೂಡುವಿಕೆಯಲ್ಲಿ ಸಾದರ ಪಡಿಸಲಾದ ‘ಭೀಷ್ಮ- ವಿಜಯ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದ ಮಧ್ಯೆ ಜರಗಿದ ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ದೀಪವನ್ನು ಪ್ರಜ್ವಲಿಸಿ…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇವರ ಆಶ್ರಯದಲ್ಲಿ ‘ಸೋಣಡೊಂಜಿ ಬಂಟರೆ ಸೇರಿಗೆ’, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರವು ಆಗಸ್ಟ್ 18ರಂದು ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು. ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು, ನೆಲ್ಯಾಡಿ ವಲಯ ಬಂಟರ ಸಂಘದ ಮೇಲೆ ಅಭಿಮಾನ, ನಂಬಿಕೆ, ಪ್ರೀತಿ, ವಿಶ್ವಾಸವಿದೆ. ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಬಂಟ ಬಾಂಧವರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಲಯದಲ್ಲಿ ಬಡವರಿಗೆ ಮನೆ ನಿರ್ಮಾಣ, ಮದುವೆ, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ನೆಲ್ಯಾಡಿ ವಲಯ ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ. ಈ ರೀತಿಯ ಕಾರ್ಯಕ್ರಮ ಎಲ್ಲಾ ವಲಯಗಳಲ್ಲೂ ಆಗಬೇಕು ಎಂದು ಹೇಳಿದರು. ಏಳು ಜನ್ಮದ ಪುಣ್ಯದ ಫಲವಾಗಿ…
ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ (ರಿ) ಮಂಗಳೂರು ವತಿಯಿಂದ ಕದ್ರಿ ಪಾರ್ಕ್ ಸಮೀಪದ ಬಾಲ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಗೌರವ ಸನ್ಮಾನ ಸಮಾರಂಭ ನಡೆಯಿತು. ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸಾಧಕ ರೇಮಂಡ್ ಡಿ ಸೋಜಾ ಅವರನ್ನು ಸ್ವಾತಂತ್ರ್ಯೋತ್ಸವ ಗೌರವ ಸನ್ಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಮೃತ ಔಷಧಾಲಯ ತೊಕ್ಕೊಟ್ಟು ಇದರ ಮಾಲೀಕ ಡಾ.ಲಯನ್ ಗಣೇಶ್ ಕುಮಾರ್, ಮಲ್ಲಿಕಟ್ಟೆ ಸುಮಸಾಧನ ಸಭಾಭವನದ ಮಾಲೀಕರಾದ ಸುಮತಿ ಹೆಗ್ಡೆ, ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಗೌರವಾಧ್ಯಕ್ಷ ಸೂರಜ್ ಶೆಟ್ಟಿ ಬಜ್ಪೆ, ಉಪಾಧ್ಯಕ್ಷರಾದ ಪ್ರಕಾಶ್ ಸಿಂಪೋಣಿ ಹಾಗೂ ಪ್ರಮೋದ್ ಆಳ್ವ ಉಪಸ್ಥಿತರಿದ್ದರು. ರಾಜೇಶ್ ಭಟ್ ಮೂಡಬಿದ್ರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕರ್ನಾಟಕ ರಾಜ್ಯ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಆಳ್ವಾಸ್ನ ಪುರುಷರ ಹಾಗೂ ಮಹಿಳೆಯರ ತಂಡ ಒಟ್ಟು ೬ ವಿಭಾಗದಲ್ಲೂ ಸಮಗ್ರ ತಂಡ ಪ್ರಶಸ್ತಿಗೆ ಪಾತ್ರ ಸತತ ಮೂರನೇ ವರ್ಷ ಆಳ್ವಾಸ್ ಸಮಗ್ರ ಚಾಂಪಿಯನ್ಸ್
ಮೂಡುಬಿದಿರೆ: ಕರ್ನಾಟಕ ರಾಜ್ಯ ವೇಟ್ ಲಿಫ್ರ್ಸ್ ಸಂಸ್ಥೆ (ರಿ.) ಹಾಗೂ ಮೈಸೂರು ಜಿಲ್ಲಾ ವೇಟ್ ಲಿಫ್ರ್ಸ್ ಸಂಸ್ಥೆ (ರಿ.) ಇವರ ಜಂಟಿ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ- ಯೂತ್, ಜೂನಿಯರ್, ಸೀನಿಯರ್ ಸೇರಿದಂತೆ ಇರುವ ಒಟ್ಟು ಆರು ವಿಭಾಗಳಲ್ಲೂ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಒಟ್ಟು ೯ ಚಿನ್ನ, ೧೦ ಬೆಳ್ಳಿ, ೬ ಕಂಚಿನೊಂದಿಗೆ ೨೫ ಪದಕ ಪಡೆದರೆ, ಮಹಿಳೆಯರ ವಿಭಾಗದಲ್ಲಿ ೯ ಚಿನ್ನ ೧೪ ಬೆಳ್ಳಿ ಹಾಗೂ ೫ ಕಂಚು ಸೇರಿದಂತೆ ಒಟ್ಟು ೨೮ ಪದಕ ಪಡದು, ಎರಡು ವಿಭಾಗದಲ್ಲಿ ಭರ್ಜರಿ ೫೩ ಪದಕ ಪಡೆದು ಪಾರಮ್ಯ ಮೆರೆದರು. ಪುರುಷರ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು -೨ ಚಿನ್ನ, ೧ ಬೆಳ್ಳಿ, ೩ ಕಂಚು, ಜೂನಿಯರ್ ವಿಭಾಗದಲ್ಲಿ- ೩ ಚಿನ್ನ, ೪…
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ತಂಡದ ತುಳು ಚಲನಚಿತ್ರ “ಜೈ” ಇದರ ಟೈಟಲ್ ಅನಾವರಣ ಕಾರ್ಯಕ್ರಮ ಸಿಟಿ ಸೆಂಟರ್ ಮಾಲ್ ನಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಳಿಕ ಮಾತಾಡಿದ ಸ್ಪೀಕರ್ ಯು.ಟಿ ಖಾದರ್ ಅವರು, “ಹಿಂದೆ ತುಳು ಭಾಷೆ ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ ಇಂದು ತುಳು ರಂಗಭೂಮಿ ಮತ್ತು ಸಿನಿಮಾ ರಂಗದಿಂದಾಗಿ ವಿದೇಶಗಳಲ್ಲೂ ತುಳು ಭಾಷೆ ಪ್ರಚಾರವಾಗುತ್ತಿದೆ. ರೂಪೇಶ್ ಶೆಟ್ಟಿ ಅವರಂತಹ ಯುವಕರು ಇಂದು ತುಳು ಭಾಷೆಯ ಬೆಳವಣಿಗೆಗೆ ಶ್ರಮ ಪಡುತ್ತಿದ್ದಾರೆ. ಅವರಿಗೆ ಶುಭಾಶಯಗಳು. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿ ಬಂದು ಜನರ ಮನ ಗೆಲ್ಲಲಿ” ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಂಸದ ಬೃಜೇಶ್ ಚೌಟ ಮಾತನಾಡಿ, “ತುಳು ಭಾಷೆಯ ಮೇಲೆ ಮಮತೆ ಇಟ್ಟು ಸಿನಿಮಾ ಮಾಡಿದ್ದಾರೆ. ಇಂದು…
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) : ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಟ್ರಸ್ಟಿನ ಕಾರ್ಯವೈಖರಿ ಸರ್ವರಿಗೂ ಮಾದರಿಯಾದದ್ದು ಹಾಗೂ ಇದನ್ನು ಫಲಾನುಭವಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೊಳಹಳ್ಳಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುರೇಂದ್ರ ಶೆಟ್ಟಿ ಹೇಳಿದರು. ಅವರು ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಮೊಳಹಳ್ಳಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣ ವಿಭಾಗ) ಉಡುಪಿ ಇವುಗಳ ಜಂಟಿ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜಯರತ್ನ ಟ್ರಸ್ಟ್ ನ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಮಾತನಾಡಿ, ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ನಿಯಮಿತವಾಗಿ…