ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಪ್ರಜ್ಞೆಯನ್ನು ಬೆಳೆಸಿಕೊಂಡು ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿ, ತನ್ನ ವ್ಯಕ್ತಿತ್ವದ ವಿಕಸನದೊಂದಿಗೆ ಜೀವನವನ್ನು ಪ್ರಕಾಶಗೊಳಿಸುವ ಮೌಲ್ಯಯುತ ಯೋಜನೆ ರಾ.ಸೇ.ಯೋ ಆಗಿದೆ ಉಪನ್ಯಾಸಕ ಶ್ರೀ ಸಂತೋಷ್ ನೆಲ್ಲಿಕಾರು ಹೇಳಿದರು. ಮಡಿಬೆಟ್ಟು ಅನುದಾನಿತ ಹಿ.ಪ್ರಾ.ಶಾಲೆ ಕಣಜಾರಿನಲ್ಲಿ ನಡೆಯುತ್ತಿರುವ ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ರಾ.ಸೇ.ಯೋ.ಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರು ಮಾತನಾಡಿ, ಈ ಶಿಬಿರದಲ್ಲಿ ಕಳೆದ ಅನುಭವಗಳು ಜೀವಮಾನವಿಡಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು. ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟಿನ ಟ್ರಸ್ಟಿಯವರಾದ ಶ್ರೀ ವಿಕ್ರಂ ಹೆಗ್ಡೆಯವರು ಮಾತನಾಡಿ, ಶಿಬಿರವು ಮೌಲ್ಯಯುತ ಜೀವನಕ್ಕೆ ದಾರಿ ಮಾಡಿ ಕೊಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ತೆರೆದಿದೆ. ಇದರ ಸದುಪಯೋಗವನ್ನು ಶಿಬಿರಾರ್ಥಿ ಪಡೆದುಕೊಂಡಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ನೀರೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಪ್ರಭುಗಳು ಧ್ವಜಾರೋಹಣವನ್ನು ನೆರೆವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಿ.ಎ. ಚಂದನ್ ಹೆಗ್ಡೆ, ಶ್ರೀ ಬ್ರಹ್ಮ ಲಿಂಗೇಶ್ವರ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಶ್ರೀ ಕೆಂಜೂರು ಶಶಿಧರ್ ಶೆಟ್ಟಿ, ಕುಕ್ಕೂಂದೂರಿನ ಉದ್ಯಮಿಗಳಾದ ಶ್ರೀ ತ್ರಿವಿಕ್ರಮ ಕಿಣಿ, ಉದ್ಯಮಿಗಳಾದ ಶ್ರೀ ದೇವೇಂದ್ರ ನಾಯಕ್,ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಶ್ರೀ ರವಿ ಜಿ., ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶ್ರೀ ಶೈಲೇಶ್ ಶೆಟ್ಟಿಯವರು ಸ್ವಾಗತಿಸಿ, ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯರಾದ ಅಶ್ವತ್ಥ್ ಭಾರದ್ವಾಜ್ ಕೆ. ವಂದಿಸಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.





































































































