ಮುಂಬಯಿ ಮಹಾನಗರದಲ್ಲಿ ಮುಂಚೂಣಿಯಲ್ಲಿರುವ ಜಾತೀಯ ಸಂಘಟಣೆಗಳಲ್ಲೊಂದಾದ ಬೋಂಬೆ ಬಂಟ್ಸ್ ಅಸೋಸಿಯೇಷನ್, ಪ್ರತಿ ಬಾರಿ ಎರಡು ವರ್ಷಗಳಿಗೊಮ್ಮೆ ಬದಲಾವಣೆಗೊಳ್ಳುವ, ಆಡಳಿತ ಕಾರ್ಯಕಾರಿ ಸಮಿತಿ, ಆಡಳಿತ ಸಮಿತಿ ಸದಸ್ಯರ, ಮಾಜಿ ಅಧ್ಯಕ್ಷರುಗಳು, ವಿಶ್ವಸ್ಥರ ಹಾಗೂ ಮಹಿಳಾ ವಿಭಾಗ, ಯುವ ವಿಭಾಗ, ಕಾರ್ಯಕಾರಿ ಸಮಿತಿಗಳ ಗುಂಪು ಛಾಯಾಚಿತ್ರ ತೆಗೆಯುವ ರೂಢಿಯನ್ನು ಹಲವಾರು ವರ್ಷಗಳಿಂದ ಅನುಸರಿಸುತ್ತಾ ಬಂದಿದೆ. ಆ ಪರಿಕ್ರಮ, ಚುನಾಯಿತಗೊಂಡ ಪ್ರತಿಯೊಂದು ಆಡಳಿತ ಸಮಿತಿಯಿಂದ ನಡೆಯುವ ವಾರ್ಷಿಕ ಮಹಾಸಭೆಯ ಮುಂಚಿತವಾಗಿ ನಡೆಯುತ್ತದೆ. ಅದೇ ರೀತಿ ಈ ಬಾರಿಯ ಆಡಳಿತ ಸಮಿತಿಯ (2024 -2026) ವಾರ್ಷಿಕ ಮಹಾಸಭೆಯು ನವೆಂಬರ್ 16 ರಂದು ನಡೆಯಲಿರುವುದರಿಂದ, ಗುಂಪು ಛಾಯಾಚಿತ್ರದ ಕಾರ್ಯಕ್ರಮವನ್ನು ಅಕ್ಟೋಬರ್ 18 ರಂದು ಸಂಜೆ 4.00 ಗಂಟೆಗೆ ಸಯನ್ ನಿತ್ಯಾನಂದ ಸಭಾಗೃಹದಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಕಾರ್ಯಕಾರಿ ಸದಸ್ಯರು, ಮಾಜಿ ಅಧ್ಯಕ್ಷರು, ವಿಶ್ವಸ್ಥರು, ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದರು. ಒಟ್ಟಾರೆ, ಈ ಛಾಯಾಚಿತ್ರ ಕಾರ್ಯಕ್ರಮವು ಈ ತಿಂಗಳ ಮಾಸಿಕ ಸಭೆಯ ದಿನದಂದು ಮತ್ತು ದೀಪಾವಳಿ ಹಬ್ಬದ ಮುಂಚಿನ ದಿನದಂದು ನಡೆದಿದ್ದರಿಂದ ಒಂದು ವಿಶೇಷ ಕಾರ್ಯಕ್ರಮವಾಗಿ ಮೂಡಿ, ದೀಪಾವಳಿ ಹಬ್ಬದ ಮೆರುಗು ತಂದು ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದಂತಾಯಿತು.






































































































