ಪ್ರತಿಷ್ಠಿತ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಕೆಪಿಸಿಸಿ ಕೋ ಆರ್ಡಿನೇಟರ್, ಹೋಟೆಲು ಉದ್ಯಮಿ, ಮುಂಬೈ ಶಿವಾಯ ಫೌಂಡೇಶನ್ ನ ಗೌರವ ಸಲಹೆಗಾರ ನವೀನ್ ಚಂದ್ರ ಜೆ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳ ವಿವರ ಇಂತಿದೆ : ಅನಂತ ಪಟ್ಟಾಭಿ ರಾವ್ (ಗೌರವಾನ್ವಿತ ನಿರ್ದೇಶಕರು), ರಾಜೇಶ್ ಕೋಟ್ಯಾನ್, ಸವಿತಾ ಆಚಾರ್ಯ, ಸತೀಶ್ ಆಚಾರ್ಯ (ಉಪಾಧ್ಯಕ್ಷರು), ರಮಾಕಾಂತ ರಾವ್ (ಪ್ರಧಾನ ಕಾರ್ಯದರ್ಶಿ), ರಾಜೇಶ್ ಶೇರಿಗಾರ್, ಹಿಮಕರ (ಜತೆ ಕಾರ್ಯದರ್ಶಿಗಳು), ಕಸ್ತೂರಿ ರಾಮಚಂದ್ರ (ಖಜಾಂಚಿ), ಪೂರ್ಣಿಮಾ ಆಚಾರ್ಯ, ಮಕರಂದ ಸಾಲ್ಯಾನ್ (ಜತೆ ಕೋಶಾಧಿಕಾರಿ), ಶಶಿಧರ ಗುಜರಾನ್, ಹರೀಶ್ ಕುಮಾರ್ (ಸಾಂಸ್ಕೃತಿಕ ಕಾರ್ಯದರ್ಶಿಗಳು), ಶಮನ್ ಕೋಟ್ಯಾನ್, ಪ್ರಸಾದ್ ಪಿ. ಎಸ್ (ಕ್ರೀಡಾ ಕಾರ್ಯದರ್ಶಿಗಳು), ಸೂರಜ್ ಕುಮಾರ್, ಸ್ನೇಹಾ, ಪ್ರಜ್ವಲ್ ಕುಮಾರ್ ಸಹಿತ ಇತರರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.









































































































