ಪಡುಮರ್ನಾಡ್ ಯುವಕ ಮಂಡಲ 2026 -27 ರ ಸಾಲಿನ ಅಧ್ಯಕ್ಷರಾಗಿ ತಿರ್ತಂಗಡಿ ರಮೇಶ್ ಎಸ್ ಶೆಟ್ಟಿ ಹಾಗೂ ಪ್ರಜ್ಞಾ ಯುವತಿ ಮಂಡಲದ 2026 -27 ರ ಸಾಲಿನ ಅಧ್ಯಕ್ಷೆಯಾಗಿ ಅಮನೊಟ್ಟು ಸುನೀತಾ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಮೇಶ್ ಎಸ್ ಶೆಟ್ಟಿಯವರು ಊರಿನ ಜನರ ಅನೇಕ ತೊಂದರೆಗಳಿಗೆ ಸ್ಪಂದಿಸಿ, ಪರಿಹಾರಗಳನ್ನು ನೀಡುತ್ತಾ ಜನಸಾಮಾನ್ಯರ ಕೈಗೆಟಕುವ ರಾಜಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಾರ್ನಾಡ್ ಶಾಲೆಯ ಜೀರ್ಣೊದ್ದಾರಕ್ಕೆ ನಿರಂತರ ಶ್ರಮಿಸುತ್ತಿರುವ ಇವರು ಪ್ರಸ್ತುತ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸತ್ಕಾರ್ಯಗಳೆಲ್ಲ ಸಾಂಗವಾಗಿ ನೆರವೇರಲಿ ಎಂದು ಐಲೇಸಾದ ವಿ ಶಾಂತಾರಾಮ ಶೆಟ್ಟಿ, ಸುರೇಂದ್ರ ಶೆಟ್ಟಿ ಮಾರ್ನಾಡ್, ದೀಪಕ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.


















































































































