ಕಾರ್ಕಳ ಕುಕ್ಕುಂದೂರು ವಿಜೇತ ವಿಶೇಷ ಶಾಲೆಗೆ ಕಾರ್ಕಳ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೊ. ಜನಾರ್ಧನ್ ಇಡ್ಯಾರವರಿಂದ ದೇಣಿಗೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ರೊ. ನವೀನ್ ಚಂದ್ರ ಶೆಟ್ಟಿ ಅವರು ರೋಟರಿಯ ಮುಖ್ಯ ಧ್ಯೇಯದಂತೆ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡ ಜನಾರ್ಧನ್ ಇಡ್ಯಾ ದಂಪತಿಗಳು ವಿಜೇತ ವಿಶೇಷ ಶಾಲೆಗೆ ನೀಡುತ್ತಿರುವ ಕೊಡುಗೆಯು ಇತರರಿಗೆ ಪ್ರೇರಣೆಯಾಗಲಿ ಎಂದರು. ರೂ. 50,000/-ದ ಚೆಕ್ಕನ್ನು ಸಂಸ್ಥೆಗೆ ಹಸ್ತಾಂತರಿಸಿ ಮಾತನಾಡಿದ ಜನಾರ್ಧನ್ ಇಡ್ಯಾರವರು ಈ ಸಂಸ್ಥೆಯ ಮಾನವೀಯ ಸೇವೆ, ಶಿಕ್ಷಕಿಯರ ತ್ಯಾಗ, ತಾಳ್ಮೆ ಮತ್ತು ಸೇವಾ ಮನೋಭಾವನೆ ಪ್ರಶಂಸನೀಯ ಇಂತಹ ಸಂಸ್ಥೆಗೆ ಎಲ್ಲರ ಸಹಕಾರ ದೊರೆಯಲಿ ಎಂದರು.

ದೇವರ ಮಕ್ಕಳಿಗೆ ರೋಟರಿ ವತಿಯಿಂದ ಸಿಹಿ ತಿಂಡಿ ಹಂಚಲಾಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿ ಚೇತನ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದ ರು. ಕ್ಲಬ್ಬಿನ ಸದಸ್ಯರಾದ ಜಗದೀಶ್ ಟಿ ಎ., ಸುರೇಶ್ ನಾಯಕ್, ವಸಂತ್ ಎಂ,ಅರುಣ್ ಕುಮಾರ್ ಶೆಟ್ಟಿ, ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಶೇಷ ಶಾಲೆಯ ಮುಖ್ಯಸ್ಥೆ ಡಾ| ಕಾಂತಿ ಹರೀಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.