ಯುಎಇ ಬಂಟ್ಸ್ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಗರದ ಜೆ.ಎಸ್.ಎಸ್ ಶಾಲೆಯಲ್ಲಿ ಭಕ್ತಿ ಭಾವದೊಂದಿಗೆ ಅಕ್ಟೋಬರ್ 5 ರಂದು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಯುಎಇ ರಾಜ್ಯದ ಎಲ್ಲಾ ಬಂಟ ಬಾಂಧವರು ಹಾಗೂ ಯುಎಇಯ ಎಲ್ಲಾ ಸಮುದಾಯದ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು. ಶ್ರೀ ರಘು ಭಟ್ ಮತ್ತು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ವೈದಿಕ ವಿಧಿ ವಿಧಾನಗಳು ನೆರವೇರಿತು.

ಪೂಜೆಯ ಪ್ರತಿನಿಧಿಯಾಗಿ ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮತ್ತು ಶ್ರೀಮತಿ ರೂಪಾಲಿ ಶೆಟ್ಟಿ, ಸಾಯಿನಾಥ್ ವಿಠಲ ಶೆಟ್ಟಿ ಮತ್ತು ಪ್ರತಿಮಾ ಸಾಯಿನಾಥ್ ಶೆಟ್ಟಿ, ಪೆರ್ಲಗುತ್ತು ಗೋಕುಲ್ ದಾಸ್ ರೈ ಮತ್ತು ನಿಶ್ಮಿತಾ ಗೋಕುಲ್ ದಾಸ್ ರೈ ದಂಪತಿಗಳು ಕುಳಿತರು. ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪೂಜೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ಮಕ್ಕಳಿಂದ ವಿಷ್ಣು ಸಹಸ್ರನಾಮ ಹಾಗೂ ಯುಎಇ ಬಂಟ್ಸ್ ಮತ್ತು ವರಮಹಾಲಕ್ಷ್ಮಿ ಸಮಿತಿಯ ಸದಸ್ಯ ಸದಸ್ಯೆಯರಿಂದ ನೃತ್ಯ ಭಜನೆ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆಯಿತು.
ಪೂಜೆಯ ನೇತೃತ್ವವನ್ನು ವಹಿಸಿದ ರವಿರಾಜ್ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿ ಹಾಗೂ ವಾಸು ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಯಶಸ್ಸಿನ ಹಿಂದೆ ದುಡಿದ 2025 ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದಿನ್ ರಾಜ್ ಶೆಟ್ಟಿ ಮತ್ತು ದೀಪ್ತಿ ದಿನ್ ರಾಜ್ ಶೆಟ್ಟಿ, ಅನೂಪ್ ಶೆಟ್ಟಿ ಮತ್ತು ಚೈತ್ರ ಅನೂಪ್ ಶೆಟ್ಟಿ, ಸುಪ್ರಜ್ ಶೆಟ್ಟಿ ಮತ್ತು ಪೃಥ್ವಿ ಸುಪ್ರಜ್ ಶೆಟ್ಟಿ, ವಸಂತ ಶೆಟ್ಟಿ ಮತ್ತು ರಜಿತಾ ವಸಂತ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಅಶ್ವಿನಿ ಸೀತಾರಾಮ ಶೆಟ್ಟಿ, ಗೋಕುಲ್ ದಾಸ್ ರೈ ಮತ್ತು ನಿಶ್ಮಿತಾ ಗೋಕುಲ್ ದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ, ವಿದ್ಯಾಶ್ರಿ ಸತೀಶ್ ಹೆಗ್ಡೆ, ದೀಪಾ ಕಿರಣ್ ಶೆಟ್ಟಿ, ಲಾಸ್ಯ ಸಂಪತ್ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಪೊಳಲಿ, ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಧನ್ಯವಾದ ಸಮರ್ಪಿಸಿದರು.
ಚಿತ್ರ, ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)