ಭೂಮಂಡಲದಲ್ಲಿ ನಮ್ಮಮಾನವ ಜನ್ಮದ ಸೃಷ್ಟಿಯಲ್ಲಿ ನಮ್ಮ ಹಿರಿಯರು ಅಳವಡಿಸಿಕೊಂಡಿರುವ ಮೂಲ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು, ಭಕ್ತಿ ಭಾವ ಯುಗ ಯುಗಾಂತರಗಳಿಂದ ನಡೆದುಕೊಂಡು ಬಂದಿರುವಂತಹದ್ದು. ಇದು ಭಾರತದ ಸನಾತನ ಹಿಂದೂ ಸಂಸ್ಕ್ರತಿಯ ಪ್ರತೀಕ. ದುರ್ಗಾ ದೇವಿಯನ್ನು ಜಗನ್ಮಾತೆಯಾಗಿ ಪೂಜಿಸುವ ನಾವು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಅರಾದಿಸುವ ಜೊತೆಯಲ್ಲಿ ನಮಗೆ ಪ್ರಕೃತಿದತ್ತವಾಗಿ ಬಂದಂತಹ ಸಂಪ್ರದಾಯ ಆಚರಣೆಗಳ ತೆನೆಹಬ್ಬ ಆಚರಣೆ ಕೂಡಾ ನಡೆಯುತ್ತದೆ. ಇದು ಮನೆ ತುಂಬುವ ಕಾರ್ಯ ಎಂದು ಕೂಡಾ ಕರೆಯುತ್ತೇವೆ. ತುಳುನಾಡಿನಲ್ಲಿ ಮನೆ ಮನೆಯಲ್ಲೂ ನಡೆಯುವ ಈ ತೆನೆ ಹಬ್ಬ ಹೊರ ರಾಜ್ಯದಲ್ಲಿರುವ ನಾವು ಸಮಾಜದ ಎಲ್ಲರನ್ನೂ ಕೂಡಿಕೊಂಡು ಸಾರ್ವಜನಿಕವಾಗಿ ನಡೆಸುತಿದ್ದೇವೆ. ಬಂಟ್ಸ್ ಅಸೋಸಿಯೇಷನ್ ಇಂತಹ ಸಂಪ್ರದಾಯದ ಹಬ್ಬ ನವರಾತ್ರಿ ಉತ್ಸವ, ತೆನೆ ಹಬ್ಬವನ್ನು ಭಕ್ತಿ ಶ್ರದ್ದೆಯೊಂದಿಗೆ ಪೂಜನೀಯವಾಗಿ ನಡೆಸಿಕೊಂಡು ಬರುತ್ತಿದೆ. ಇದು ನಮ್ಮ ಏಕತೆ ಮತ್ತು ಸಂಘಟನೆಯ ಬಲವೃದ್ದಿಗೂ ಪೂರಕವಾಗಿದೆ. ಅಲ್ಲದೇ ನಮ್ಮ ಯುವ ಪೀಳಿಗೆಗೆ ತಿಳಿಸುವಲ್ಲಿ ಬಹು ಮುಖ್ಯ ಪಾತ್ರ ಹಾಗೂ ಸಕಾರತ್ಮಕ ಚಿಂತನೆಗೆ ಪ್ರೇರಣೆಯಾಗುತ್ತದೆ ಎಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ, ಖ್ಯಾತ ಉದ್ಯಮಿ ಪ್ರಭಾಕರ್ ವಿ ಶೆಟ್ಟಿ ನುಡಿದರು.

ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ನವರಾತ್ರಿಯ ಪ್ರಯುಕ್ತ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಸೆಪ್ಟೆಂಬರ್ 27 ರಂದು ಪುಣೆಯ ಕ್ಯಾಂಪ್ ನಲ್ಲಿಯ ಅಲ್ಪಾ ಭಚತ್ ಸಾಂಸ್ಕ್ರತಿಕ ಸಭಾಭವನದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಭಾಕರ್ ವಿ ಶೆಟ್ಟಿಯವರು, ಆಕಾಶ, ಭೂಮಿ, ಸ್ವರ್ಗ, ಸೃಷ್ಟಿಕರ್ತ ದೇವರ ಅನುಗ್ರಹದಂತೆ ಎಲ್ಲವೂ ಇಲ್ಲಿ ನಡೆಯುವುದು. ಇದನ್ನು ನಾವು ಅರಿತು ಸನ್ಮಾರ್ಗದಲ್ಲಿ ನಡೆದರೆ ಒಳಿತು. ನಾವು ಪ್ರತಿಯೊಬ್ಬನ ಮನದೊಳಗೂ ದೇವರನ್ನು ಕಾಣಬಹುದು. ಆದರೆ ಶಕ್ತಿ ದೇವತೆಯನ್ನು ಆರಾಧನೆ ಮೂಲಕ ಆಚರಿಸುವುದು ನಮ್ಮ ಸೃಷ್ಟಿಕರ್ತನ ನಿಯಮ. ಸ್ತ್ರೀ ಪ್ರಧಾನವಾದ ದುರ್ಗಾ ಪೂಜೆಯಲ್ಲಿ ಸೇರಿದಂತಹ ಎಲ್ಲರಿಗೂ ದುರ್ಗಾ ಮಾತೆಯ ಅನುಗ್ರಹ ದೊರಕಲಿ. ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿಯವರ ಮುಂದಾಳತ್ವದಲ್ಲಿ ಈ ಸಂಸ್ಥೆ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿ ಗುತ್ತುರವರ ಅಧ್ಯಕ್ಷತೆಯಲ್ಲಿ ಜರಗಿದ ನವರಾತ್ರಿ ಉತ್ಸವ, ತೆನೆ ಹಬ್ಬದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆಯಾದ ಶಮ್ಮಿ ಎ ಹೆಗ್ಡೆ, ಸಂಘದ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರುಗಳಾದ ಡಾ. ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿ.ಎ. ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾಆರ್ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಶರ್ಮಿಳಾ ಟಿ.ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿಯವರು ಉಪಸ್ಥಿತರಿದ್ದರು. ಅಧ್ಯಕ್ಷರು ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ನವರಾತ್ರಿ ಉತ್ಸವ ಪೂಜೆ ತೆನೆ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಶಾಲಿನಿ ಎಂ. ಶೆಟ್ಟಿ, ಲತಾ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಗಣೇಶ್ ಹೆಗ್ಡೆ ಪುಣ್ಚೂರುರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿ ಗಣ್ಯರನ್ನು ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಮಹಿಳಾಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿಯವರು ಶಾಲು, ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿದರು.ಅತಿಥಿ ಗಣ್ಯರ ಪರಿಚಯವನ್ನು ಕ್ರಮವಾಗಿ ಮಹೇಶ್ ಹೆಗ್ಡೆ ಪೊಳಲಿ ಮತ್ತು ಶಾಲಿನಿ ಎಂ. ಶೆಟ್ಟಿಯವರು ಓದಿದರು. ಧಾರ್ಮಿಕ ಕಾರ್ಯಕ್ರಮವಾಗಿ ರಾಘವೇಂದ್ರ ಭಟ್ ರವರ ಪೌರೋಹಿತ್ಯದಲ್ಲಿ ದುರ್ಗಾ ಪೂಜೆ ನೆರವೇರಿತು. ಸಂಘದ ಅಧ್ಯಕ್ಷರು, ಅತಿಥಿ ಗಣ್ಯರು, ಮಹಿಳಾ ವಿಭಾಗದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಶ್ರೀದೇವಿಯ ಅಲಂಕೃತ ಮೂರ್ತಿಗೆ ದೀಪ ಬೆಳಗಿಸಿ, ನವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರು ದೇವಿಗೆ ಮಂಗಳಾರತಿ ಬೆಳಗಿದರು. ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿ ಮತ್ತು ಸ್ನೇಹಲತಾ ಆರ್. ಶೆಟ್ಟಿ ದಂಪತಿಗಳು, ಪದಾಧಿಕಾರಿಗಳು ಭತ್ತದ ತೆನೆಗೆ ಹಾಲೆರೆದು ಪೂಜೆ ಸಲ್ಲಿಸಿ ಸಮಾಜ ಬಾಂಧವರಿಗೆ ತೆನೆ ವಿತರಿಸಿದರು. ಮಹಿಳಾ ವಿಭಾಗದ ಸದಸ್ಯರು ದೇವಿಯನ್ನು ಆರಾದಿಸುವ ಸ್ತುತಿಯೊಂದಿಗೆ ನೃತ್ಯಗೈದರು. ಸಂಘದ ಮಹಿಳೆಯರಿಂದ ಮತ್ತು ಯುವ ವಿಬಾಗದ ಸದಸ್ಯರಿಂದ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನಗೊಂಡಿತು. ನಂತರ ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಈ ದಸರಾ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಪಿಂಪ್ರಿ ಬಂಟರ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ ಕಾತ್ರಜ್ ನ ಅಧ್ಯಕ್ಷ ಸುಭಾಶ್ ಶೆಟ್ಟಿ, ಪಿಂಪ್ರಿ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಆಪತ್ಭಾಂದವ ಸಮಿತಿಯ ಕಾರ್ಯಾಧ್ಯಕ್ಷ ರಂಜಿತ್ ಶೆಟ್ಟಿ, ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಕಾರ್ಯಾಧ್ಯಕ್ಷೆಯಾದ ವಿನೋದಾ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮಾ ಶೆಟ್ಟಿ, ಪೂರ್ವ ಪ್ರಾದೇಶಿಕ ಮಹಿಳಾ ಕಾರ್ಯಾಧ್ಯಕ್ಷೆ ಶಾಲಿನಿ ಎಂ. ಶೆಟ್ಟಿ, ಪಶ್ಚಿಮ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷೆ ನಯನಾ ಶೆಟ್ಟಿ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಮಹನೀಯರನ್ನು ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.
ಈ ಬಾರಿ ನವರಾತ್ರಿ ನವ ದುರ್ಗೆಯರ ಆರಾಧನೆಯ ದ್ಯೋತಕ ಎಂಬಂತೆ ನವ ಬಣ್ಣದ ಸೀರೆಗಳ ಲಕ್ಕಿ ಡ್ರಾ ಮೂಲಕ ಮಹಿಳೆಯರಿಗೆ ನೀಡಿ ಗೌರವಿಸಲಾಯಿತು. ಇದರ ಪ್ರಾಯೋಜಕತ್ವವನ್ನು ಸಂಘದ ಪದಾಧಿಕಾರಿಗಳು ವಹಿಸಿಕೊಂಡರು. ಅಸೋಸಿಯೇಷನ್ ಮಾಜಿ ಅಧ್ಯಕ್ಷರುಗಳಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ನಾರಾಯಣ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ಪ್ರದೀಪ್ ಶೆಟ್ಟಿ, ತಾರಾನಾಥ್ ರೈ ಸೂರಂಬೈಲ್, ರವೀಂದ್ರ ಶೆಟ್ಟಿ, ಸುರೇಶ ಶೆಟ್ಟಿ ಗಂಧರ್ವ, ಸುರೇಶ್ ಎಲ್ ಶೆಟ್ಟಿ, ಶ್ರೀನಿವಾಸ್ ರೈ, ಅಶೋಕ್ ಶೆಟ್ಟಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರುಗಳು, ಮಹಿಳಾ ವಿಭಾಗದ ಪ್ರಮುಖರಾದ ಸೌಮ್ಯ ಆರ್ ಶೆಟ್ಟಿ, ಪೂರ್ಣಿಮಾ ಎ. ಶೆಟ್ಟಿ, ಪ್ರೀತಿ ಬಿ ಶೆಟ್ಟಿ, ರೂಪಾ ಜೆ. ಶೆಟ್ಟಿ, ಶ್ರದ್ದಾ ವೈ ಶೆಟ್ಟಿ, ಭವ್ಯರಾಣಿ ಎಸ್ ಶೆಟ್ಟಿ, ಆಶಾಲತಾ ಆರ್ ಶೆಟ್ಟಿ, ಅಶ್ವಿನಿ ವಿ ಶೆಟ್ಟಿ, ಆಶಾ ಡಿ ಶೆಟ್ಟಿ, ಶೈಲಜಾ ಯು ಶೆಟ್ಟಿ, ಸ್ನೇಹಾ ಎಸ್ ಶೆಟ್ಟಿ, ವಸುಧಾ ಎಸ್. ಶೆಟ್ಟಿ ಮತ್ತು ಯುವ ವಿಭಾಗದ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಈ ದಸರಾ ಹಬ್ಬದ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಶ್ರೀ ದುರ್ಗಾ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು, ಅಸೋಸಿಯೇಷನ್ ನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಹೆಗ್ಡೆ ಪೊಳಲಿ ಮತ್ತು ಮಹಿಳಾ ವಿಭಾಗದ ಸಾಂಸ್ಕ್ರತಿಕ ಕಾರ್ಯಧ್ಯಕ್ಷೆ ಶಾಲಿನಿ ಎಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ ಧನ್ಯವಾದಗೈದರು.