Author: admin
ಬಂಟರ ಸಂಘ ಪಡುಬಿದ್ರಿ ಹಾಗೂ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಹಯೋಗದೊಂದಿಗೆ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ -2024 ಡಿಸೆಂಬರ್ 29ರಂದು ಪಡುಬಿದ್ರಿಯಲ್ಲಿ ದಿವಂಗತ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಜರಗಿತು. ಹಲವಾರು ವಿಶೇಷತೆಗಳ ವೈಭವದಿಂದ ನಡೆದ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ಜರಗಿತು. ಕಬಡ್ಡಿ ಪಂದ್ಯಾಟದಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಯುವ ಉದ್ಯಮಿ, ಕಲ್ಯಾ ಗುರ್ಮೆದಬೈಲು ಹಿರಿಯಣ್ಣ ಶೆಟ್ಟಿ ಮತ್ತು ಲೀಲಾ ಶೆಟ್ಟಿ ದಂಪತಿಗಳ ಪುತ್ರ ಗಣೇಶ್ ಶೆಟ್ಟಿ ಡೊಂಬಿವಲಿ ಮಾಲಕತ್ವದ ತನಿಷ್ಕಾ ಮುಂಬಯಿ ತಂಡವು ಗೆದ್ದು ಟ್ರೋಫಿ ಹಾಗೂ 1,00,001 ರೂಪಾಯಿಯನ್ನು ತನ್ನದಾಗಿಸಿಕೊಂಡಿತು. ಮುಂಬಯಿ ಬಂಟರ ಸಂಘದ ನಿಕಟಪೂರ್ವ ಮಹಿಳಾ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹಾಗೂ ಪಡುಬಿದ್ರಿ ಬಂಟರ ಸಂಘದ ಪದಾಧಿಕಾರಿಗಳು ವಿಜೇತ ತಂಡ ತನಿಷ್ಕಾ ಮುಂಬಯಿ ತಂಡಕ್ಕೆ ಬಹುಮಾನವನ್ನು…
ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ ಮೂಡುತ್ತದೆ. ಬಂಟ ಸಮಾಜಕ್ಕೆ ಸಮಾಜದ ನೇತೃತ್ವ ವಹಿಸುವ ವಿಶೇಷ ಶಕ್ತಿಯಿದೆ. ಇಂತಹ ಅವಕಾಶಗಳ ಮೂಲಕ ಮತ್ತಷ್ಟು ಕಾರ್ಯಗಳಾಗಲಿ ಎಂದು ಕರ್ನಾಟಕ ವಿಧಾನಸಭಾ ಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಪಡುಬಿದ್ರಿ ಬಂಟರ ಸಂಘದ ವತಿಯಿಂದ ಪಡುಬಿದ್ರಿ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ 66ರ ಬದಿಯಲ್ಲಿರುವ ದಿ. ರಮೇಶ್ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಜರಗಿದ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ -2024 ಇದರ ಪಥಸಂಚನಲದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಎಂ ಆರ್ ಜಿ ಗ್ರೂಪ್ ಬೆಂಗಳೂರು ಇದರ ಸಿ.ಎಂ.ಡಿ. ಡಾ| ಕೆ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಂಟರಿಗೆ ಗುರುಗಳ ಅವಶ್ಯಕತೆಯಿಲ್ಲ. ಅವರು ಏಕಲವ್ಯರಂತೆ ಗುರು ಇಲ್ಲದೆಯೂ ವಿದ್ಯೆ ಕಲಿಯುವ ತಾಕತ್ತು ಬಂಟ ಸಮಾಜಕ್ಕಿದೆ. ಭೂ ಸುಧಾರಣೆ ಕಾನೂನಿನ ಮೂಲಕ ಭೂಮಿ ಕಳೆದುಕೊಂಡರೂ ಪರ ಊರಿಗೆ ತೆರಳಿ ಆರ್ಥಿಕ ಸದೃಢತೆಯನ್ನು ಸಾಧಿಸಿದ…
ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಫೆಬ್ರವರಿ 7,8,9 ರಂದು ನಡೆಯಲಿರುವ ಯುವ ಬಂಟರ ಸಂಘ ಮಂಗಳೂರು ಇದರ ವತಿಯಿಂದ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ -2025 ಸೀಸನ್ 2 ಟಿ-10 ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬ್ರೋಷರನ್ನು ನಗರದ ವುಡ್ ಲ್ಯಾಂಡ್ ಸಭಾಂಗಣದಲ್ಲಿ ಇತ್ತೀಚೆಗೆ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಪಿಎಲ್ ಟೂರ್ನಿಯ ಸಲಹೆಗಾರರಾದ ರಾಜ್ ಗೋಪಾಲ ರೈ ಮಾತನಾಡುತ್ತಾ, ಬಂಟ್ಸ್ ಪ್ರೀಮಿಯರ್ ಲೀಗ್ ಮೂಲಕ ಯುವ ಬಂಟರ ಜೊತೆ ಬಂಟ ಸಮಾಜದ ಸಂಘಟನೆ ಕ್ರೀಡೆಗೆ ಸಹಕಾರಿಯಾಗಲಿ. ಬಂಟ ಸಮಾಜ ತಮ್ಮ ಸಮಾಜದ ಅಭಿವೃದ್ಧಿಯ ಜೊತೆ ಇತರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದ ಸಮಾಜ. ನಾವು ಬೆಳೆಯುತ್ತಾ ಇತರರನ್ನು ಬೆಳೆಸೋಣ ಎಂದರು. ಕಾವೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಕ್ರೀಡಾ ಪಟು ಆನಂದ ಶೆಟ್ಟಿಯವರು ಮಾತನಾಡುತ್ತಾ, ಕುಟುಂಬ ಬಾಂಧವ್ಯ ಸಂಬಂಧ ಶಿಥಿಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಕ್ರೀಡೆ ನಮ್ಮೆಲ್ಲರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮತ್ತು ದೈಹಿಕ,…
ಜ. 3ಕ್ಕೆ ಕ್ರಿಯೇಟಿವ್ ಪುಸ್ತಕಮನೆಯ ‘ಪರಸ್ಪರ’ದಲ್ಲಿ ಡಾ. ನಾ ಸೋಮೇಶ್ವರ ಮತ್ತು ಕನ್ನಡದ ಪ್ರೇಮಕವಿ ಬಿ. ಆರ್. ಲಕ್ಷ್ಮಣರಾವ್
ಜನವರಿ 03, 2025 ರಂದು ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಎರಡು ಪ್ರಮುಖ ದಿಗ್ಗಜರು ಆಗಮಿಸುತ್ತಿದ್ದಾರೆ. ಚಂದನವಾಹಿನಿಯಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂಬ ಖ್ಯಾತಿಯನ್ನು ಪಡೆದ ಡಾ. ನಾ ಸೋಮೇಶ್ವರ ಅವರು ಸಂಜೆ 4.00 ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕಮನೆಗೆ ಹಾಗೂ ಸಂಜೆ 5.00 ಗಂಟೆಗೆ ಕಾರ್ಕಳದ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕಮನೆಗೆ ಮತ್ತು ಕನ್ನಡದ ಪ್ರೇಮಕವಿ ಹಾಗು ತುಂಟಕವಿ ಎಂದೇ ಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ 5.30ಕ್ಕೆ ಕಾರ್ಕಳದ ಜೋಡುರಸ್ತೆಯ ಪುಸ್ತಕಮನೆಗೆ ಆಗಮಿಸುತ್ತಿದ್ದಾರೆ. ಈ ಇಬ್ಬರು ಖ್ಯಾತ ಲೇಖಕರ ಭೇಟಿ ಸಾಹಿತ್ಯಾಸಕ್ತರಿಗೆ ಒಂದು ಸುವರ್ಣಾವಕಾಶ. ಸಾಹಿತ್ಯಾಸಕ್ತರು ಈ ಅಪರೂಪದ ಸಂದರ್ಭದಲ್ಲಿ ಪಾಲ್ಗೊಂಡು, ಈ ಸಾಹಿತ್ಯ ದಿಗ್ಗಜರ ಭೇಟಿಯಿಂದ ಪ್ರೇರಣೆಯನ್ನು ಪಡೆಯುವಂತೆ ಆಹ್ವಾನಿಸಲಾಗಿದೆ. ಸ್ಥಳ: ಕ್ರಿಯೇಟಿವ್ ಪುಸ್ತಕಮನೆ, ಜೋಡುರಸ್ತೆ, ಕಾರ್ಕಳ
ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಆಳ್ವಾಸ್ ವಿದ್ಯಾರ್ಥಿಗಳಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ
ವಿದ್ಯಾಗಿರಿ: ಮಹಾರಾಷ್ಟçದ ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ 70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ವಿಜೇತ ತಂಡದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ಮಂದಿ ಆಟಗಾರರು ಭಾಗವಹಿಸಿದ್ದರು. ರಾಜ್ಯ ತಂಡದ ನಾಯಕಿ ಮೇಘನಾ ಎಚ್. ಎಂ., ಪಲ್ಲವಿ ಬಿ. ಎಸ್., ಸಹನಾ ಎಚ್. ವೈ, ಲಕ್ಷ್ಮಿ ದೇವಿ, ತನುಶ್ರೀ, ಗೀತಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್. ವೈ. ಅವರು ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ ‘ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ’ಗೆ ಭಾಜನರಾದರು. ಲೀಗ್ ಹಂತದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕರ್ನಾಟಕ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು. ಚಾಂಪಿಯನ್‌ಶಿಪ್‌ನಲ್ಲಿ 28 ರಾಜ್ಯ ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ಸ್ನಲ್ಲಿ ಕರ್ನಾಟಕ…
ಪಾರೊಂದು ಬತ್ತುಂಡ್ ಪೊಸ ವರ್ಷ ಸೇರಾವೊಂದ್ ತಿಗ ನೆಯಿತ್ತ ಚೀಪೆನ್ l ದೂರ ಮಲ್ತೊಂದ್ ಕೈಪೆ ನೆನೆಪುಲೆನ್ ಬೆರಿ ಪತ್ತೊಂದ್ ಕೋಡ್ಯೆತ್ತಾಯೆರೆ ಕನೊಕ್ಲೆನ್ll ಎಡ್ಡೆ ವಿಷಯೊನ್ ಮದಪಂದೆ ಒರಿಪೊಡ್ ಮೊಡೆತಿ ಕುರ್ಕಿಲ್ದಂಚಿತ್ತಿನ ದಿಂಜಿ ಮನಸ್ಸ್‌ಡ್ l ಉಡಲ್ಡ್ ಕಮ್ಮೆನೆದ ಪುರ್ಪ ಪಾರಾವೊಡ್ ಎಡ್ಡೆ ಬದ್ಕ್‌ಗಾದ್ ಮೋಕೆದ ಸೇಸೆ ಬಿರ್ಕೊಡ್ ll ಕೊಸಿತ್ತ ತುಡಾರ್ ಏಪಲಾ ಅರ್ಲೊಂದಿಪ್ಪೊಡ್ ಅರ್ತಿ ಪಿರ್ತಿಡ್ ಸಂಬಂದೊ ಬುಲೆವೊಡ್ l ದೈವೊಲ್ ಎಡ್ಡೆಪ್ಪುದ ಸಾದಿ ತೊದೆಪಾವಡ್ ಮಾತೆರ್ನಲಾ ಬದ್ಕ್‌ಡ್ ಸುಕೊ ನಲಿಪೊಡ್ ll ವರ್ಷ ಕರಿವುಂಡ್ ಆಯುಷ್ಯ ಕಲೆವುಂಡ್ ನಾಲು ದಿನತ್ತ ಬಾಳು ನಮ್ಮವು ತೆರಿವೊಡ್ l ಮಾತೆರ್ಲಾ ಪೊಡಮಿ ಅಪ್ಪೆನ ಮಟ್ಟೆಲ್‌ಡ್ ನೇಸರ ದೇಬೆರ್ಲಕ ಕಾಂತಿ ಪಸರಾವೊಡ್ ll ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು
ಇರಾ, ಮಂಚಿ, ಬೋಳಂತೂರು ಗ್ರಾಮದ ಭಕ್ತರಿಂದ ಆರಾಧಿಸಲ್ಪಡುತ್ತಿರುವ ಅರಸು ಕುರಿಯಾಡ್ದಾರ್ ಮೂವೆರ್ ದೈವಗಳಿಗೆ ಇರಾ ಪಾತ್ರಾಡಿಗುತ್ತುವಿನ ಸಾಮಾನಿ ನಾಮಾಂಕಿತ ಗಡಿ ಪ್ರದಾನವು ಇರಾ ಪಾತ್ರಾಡಿಗುತ್ತು ಕುಟುಂಬಿಕರಿಂದ ಆಯ್ಕೆಯಾಗಿರುವ ಪುಷ್ಪರಾಜ ಶೆಟ್ಟಿ ಅವರಿಗೆ ನಡೆಯಲಿದೆ. ಈ ಸಂಬಂಧ ಇರಾ ಪಾತ್ರಾಡಿಗುತ್ತು ಮನೆಯಲ್ಲಿ ಕುಟುಂಬಿಕರ ಸಮಾಲೋಚನ ಸಭೆಯಲ್ಲಿ ಕುಟುಂಬದ ದೇವತಾ ಕಾರ್ಯಗಳು ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಪಾತ್ರಾಡಿಗುತ್ತು ಚಾರಿಟೇಬಲ್ ಟ್ರಸ್ಟ್ ರಚಿಸಲಾಯಿತು. ಗಡಿ ಪ್ರಧಾನ ಕಾರ್ಯಕ್ರಮ ವಿಧಿವತ್ತಾಗಿ ಜನವರಿ 4 ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಶ್ರೀ ದೈವಗಳಿಗೆ ನಡೆಯುವ ಕುರಿಯಾಡಿ ಸಾರದ ಮಂಜಪಿಲ ನೇಮದ ಸಂದರ್ಭದಲ್ಲಿ ನಡೆಯಲಿದೆ. ಜನವರಿ 12 ರಂದು ಗಡಿಪ್ರದಾನ ಕೃತಜ್ಞತಾ ಸಮಾರಂಭವು ಇರಾ ಬಂಟರ ಭವನದಲ್ಲಿ ಜರಗಲಿದೆ. ಬಡಾಜೆಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಮಂಜುನಾಥ್ ಭಂಡಾರಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥ…
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ರತ್ನಾಕರ ಶೆಟ್ಟಿ ನಡಿಕೆರೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಅಧಿಕಾರಿ ಮತ್ತು ದತ್ತಿ ಇಲಾಖೆ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ರವಿ ಕಿರಣ್ ಉಪಸ್ಥಿತಿಯಲ್ಲಿ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ರತ್ನಾಕರ ಶೆಟ್ಟಿ ನಡಿಕೆರೆ ಅವರು ಹೊಸ ಮಾರಿಗುಡಿ ದೇವಸ್ಥಾನದ ಮೊಕ್ತೇಸರರಾಗಿ, ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಡಿಸೆಂಬರ್ 29 ರಂದು ಪಡುಬಿದ್ರಿಯಲ್ಲಿ ನಡೆದ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದಲ್ಲಿ ಬೆಂಗಳೂರು ಬಂಟರ ಸಂಘದ ಮಹಿಳಾ ತ್ರೋಬಾಲ್ ತಂಡ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿ ಎಂ.ಆರ್.ಜಿ ಟ್ರೋಫಿ ಹಾಗೂ ರೂಪಾಯಿ 40,001 ನಗದನ್ನು ತನ್ನದಾಗಿಸಿಕೊಂಡಿತು. ಟ್ರೋಫಿಯನ್ನು ಸುರೇಂದ್ರ ಶೆಟ್ಟಿ (ಛೇರ್ ಪರ್ಸನ್, ಕ್ರೀಡಾ ಸಮಿತಿ) ಸಬನ್ ಶೆಟ್ಟಿ (ಸಂಚಾಲಕರು, ಕ್ರೀಡಾ ಸಮಿತಿ) ಹಾಗೂ ಮಹಿಳಾ ತಂಡ ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಂದ ಸ್ವೀಕರಿಸಿದರು.
ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಮಾದರಿ, ಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆ.ಸಿ.ಐ.ನ ಸೆನೆಟರ್, ರಾಷ್ಟ್ರೀಯ ತರಬೇತುದಾರ ರಾಜೇಶ್ ಡಿ ಶೆಣೈ ಆಗಮಿಸಿದ್ದರು. ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ನೀವೆಲ್ಲರೂ ಇಂದು ವಿಜ್ಞಾನಿಗಳಾಗಿ ಕಾಣುತ್ತಿದ್ದೀರಿ. ತಾವೆಲ್ಲರೂ ವಿಜ್ಞಾನ ಮಾದರಿಗಳನ್ನು ತಯಾರಿಸಲು ಮೊದಲು ಪೂರ್ವ ಯೋಜನೆಗಳನ್ನು ಮಾಡಿ ವೈಜ್ಞಾನಿಕ ದೃಷ್ಟಿ ಕೋನದಲ್ಲಿ ವಸ್ತುಗಳನ್ನು ಸಂಗ್ರಹಿಸಿ, ಮಾದರಿಯನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದೀರಿ. ಇಲ್ಲಿ ಪಡೆದ ಅನುಭವದಿಂದ ಮುಂದಿನ ದಿನಗಳಲ್ಲಿ ಅತ್ಯದ್ಭುತವನ್ನು ಸೃಷ್ಟಿಸಲಿದ್ದೀರಿ. ಈಗ ನೀವು ಸಾಕಷ್ಟು ಕುತೂಹಲವನ್ನು ಹೊಂದಿದ್ದರೆ ಆವಿಷ್ಕಾರದ ಮೂಲ ಏನು ಎಂದು ಕಂಡುಹಿಡಿಯಬಹುದೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ಮೊದಲ ಹೆಜ್ಜೆ ಯಾವಾಗಲೂ ಅತ್ಯುತ್ತಮವಾಗಿರಬೇಕು. ಮಹತ್ತರ ಗುರಿಯೊಂದಿಗೆ ಇಟ್ಟ ಮೊದಲ ಹೆಜ್ಜೆಯಲ್ಲಿ ಸೋತರೂ ಅದರ ಬಗ್ಗೆ ಚಿಂತಿಸಬಾರದು. ನನ್ನಿಂದ ಎಲ್ಲವೂ ಸಾಧ್ಯವೆನ್ನುವ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಬೇಕೆಂದರು. ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ…