Author: admin

ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೃಂಗಾರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಜೂನ್ 19ರಂದು ಶಿರ್ವ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಹರ್ಷವರ್ಧನ್ ಶೆಟ್ಟಿಯವರು ಸಂಜೀವಿನಿ ಒಕ್ಕೂಟದ ಸದಸ್ಯರು ನಡೆಸಬಹುದಾದ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ, ಉದ್ಯಮಶೀಲತೆಯ ಮನೋಭಾವವನ್ನು ಹೊಂದಿ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿ, ಉತ್ತಮ ವ್ಯಾಪಾರ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿ ಒಕ್ಕೂಟ ಸದಸ್ಯೆಯರೊಂದಿಗೆ ಸಂವಾದ ನಡೆಸಿದರು. ಶಿರ್ವ ಯೂನಿಯನ್ ಬ್ಯಾಂಕ್ ನ ಪ್ರಬಂಧಕ ರಾಘವೇಂದ್ರ, ನರೇಗಾ ಯೋಜನೆಯ ಮೇಲ್ವಿಚಾರಕ ಅಕ್ಷಯ್, ಸಂಜೀವಿನಿ ಒಕ್ಕೂಟದ ತಾಲೂಕು ಮೇಲ್ವಿಚಾರಕಿ ಪೂರ್ಣಿಮಾ ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಕಾರ್ಯದರ್ಶಿ ಚಂದ್ರಮಣಿ, ಶಿರ್ವ…

Read More

ಪುಣೆ ಬಂಟರ ಸಂಘದ ಸಮಾಜ ಕಲ್ಯಾಣ ಕಲ್ಪವೃಕ್ಷ ವಿನಯ ಕೆ.ಕೆ ಶೆಟ್ಟಿ ಕ್ರೀಡಾ ದಾತ ಯೋಜನೆಯ ಅಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂಗವಾಗಿ ಯೋಗ ದಿನಾಚರಣೆಯು ಜೂನ್ 21ರಂದು ಬೆಳಿಗ್ಗೆ ಗಂಟೆ 9.00 ರಿಂದ ಬಂಟರ ಭವನದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆಯಲಿದೆ. ಪುಣೆಯ ಶೆಟ್ಟಿ ಯೋಗ ಕ್ಲಾಸ್ ನ ನಿರ್ದೇಶಕಿ ಪ್ರಮಿಳಾ ಜೆ ಶೆಟ್ಟಿಯವರು ಈ ಯೋಗ ದಿನಾಚರಣೆಯನ್ನು ನಡೆಸಿ ಕೊಡಲಿದ್ದಾರೆ. ಬಂಟರ ಸಂಘ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಕೂಡುವಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜದ ಬಾಂಧವರು ಪಾಲ್ಗೊಳ್ಳುವಂತೆ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಅಧ್ಯಕ್ಷರಾದ ಕೆ ಅಜಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ಹಾಗೂ ಸಮಿತಿ…

Read More

ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಪುಣೆಯ ಧೋಲೆ ಪಾಟೀಲ್ ರೋಡ್ ನಲ್ಲಿಯ ಮಾಣಿಕ್ ಚಂದ್ ಐಕಾನ್ ಹತ್ತಿರದ, ಆಹಾರ್ ಉಡುಪಿ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಬೆಳಿಗ್ಗೆ ಗಂಟೆ 7.00 ರಿಂದ ಅಂತರರಾಷ್ಟ್ರೀಯ ಯೋಗ ಶಿಕ್ಷಕಿ, ಸ್ವಾಸ್ಥ್ಯ ಶಿಕ್ಷಕಿ, ಯೋಗ ಗುರು ಹೀರಾ ಹೆಗ್ಡೆಯವರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ. ಹೀರಾ ಹೆಗ್ಡೆ : ಅಂತರರಾಷ್ಟ್ರೀಯ ಯೋಗ ಮತ್ತು ಸ್ವಾಸ್ಥ್ಯ ಶಿಕ್ಷಕಿ ಹೀರಾ ಹೆಗ್ಡೆಯವರು ಕಣಂಜಾರು ಪಟ್ಟದ ಮನೆ ರತ್ನಾಕರ್ ಹೆಗ್ಡೆ ಮತ್ತು ಇನ್ನಾ ಬಗ್ಗರ ಗುತ್ತು ಉಷಾ ಹೆಗ್ಡೆ ಅವರ ಪುತ್ರಿ…

Read More

ಜೀವನವೆಂಬದು ವಿಚಿತ್ರ ಪಯಣ. ಕೆಲವರಿಗೆ ಯೋಗ್ಯತೆ ಇದ್ದರೂ ಯೋಗ ಇರೋಲ್ಲ. ಇನ್ನು ಕೆಲವರಿಗೆ ಯೋಗ್ಯತೆ ಇರುತ್ತದೆ. ಆದರೂ ಯೋಗ ಇರೋಲ್ಲ. ಅದಕ್ಕೆ ಹೇಳುವುದು. “ಎಲ್ಲದಕ್ಕೂ ಯೋಗ ಬೇಕು ಕಣೋ…..” ಅಂತ. ಯಾರೋ ಒಬ್ಬನಿಗೆ ಕೋಟಿ ರೂಪಾಯಿ ಲಾಟ್ರಿ ಹೊಡೆಯುತ್ತೆ. ಅಬ್ಬಾ…. ಅವನಿಗೆ ಏನು ಅದೃಷ್ಟವೋ ? ಯಾವುದೇ ಶ್ರಮ ಪಡದೇ ಕೋಟಿ ರೂಪಾಯಿ ಬಂತು. ನಾವು ಎಷ್ಟು ಶ್ರಮ ಪಟ್ಟರೂ ಲಕ್ಷ ರೂಪಾಯಿ ದುಡಿಯಲು ಆಗೋಲ್ಲ ಅಂತಹ ಬೇಸರ ಪಡುತ್ತೀವಿ. ಅದೇ ಕೋಟಿ ರೂಪಾಯಿ ಲಾಟ್ರಿ ಹೊಡೆದವನು ಶ್ರಮ ಪಡದೇ ಬಂದ ಆ ಕೋಟಿ ರೂಪಾಯಿಯನ್ನು ಉಳಿಸಿಕೊಳ್ಳಲಾಗದೇ ಎರಡೇ ವರ್ಷಗಳಲ್ಲಿ ಎಲ್ಲಾ ಕಳೆದು ಕೊಂಡು ದಿಪ್ಪಡ್ ದಿವಾಳಿಯಾಗಿ ರಸ್ತೆಗೆ ಬಿದ್ದಾಗ ಅದೇ ಜನ ಏನು ಹೇಳ್ತಾರೆ ಗೊತ್ತಾ? “ಆ ಬಡ್ಡಿ ಮಗ ಬಂದ ಯೋಗವನ್ನು ಕ್ಷೇಮವಾಗಿ ಇಟ್ಟು ಕೊಳ್ಳಲು ಯೋಗ್ಯತೆ ಇಲ್ಲದವನು. ಕೋಟಿ ಬಂತು ಅಂತ ಮಾಡುತ್ತಿದ್ದ ಕೆಲಸ ಬಿಟ್ಟು ಬಿಟ್ಟ. ತನ್ನ ಅದೃಷ್ಟ ಚೆನ್ನಾಗಿದೆ ಅಂತ ಅಂದುಕೊಂಡ. ಇವನ ಕಾಸಿನ…

Read More

ಮಂಗಳೂರಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ದಿನಾಂಕ 18.06.2025ರ ಬುಧವಾರ ಮಂಗಳೂರಿನ ಪಡೀಲ್‍ನಲ್ಲಿ ತನ್ನ 29ನೇ ಶಾಖೆಯನ್ನು ಸಿಟಡೆಲ್ ಪ್ಯಾರೆಡೈಸ್‍ನ ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈರವರು ಉದ್ಘಾಟಿಸುವುದರೊಂದಿಗೆ ಶುಭಾರಂಭಗೊಂಡಿತು. ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಶುಭ ಸಂದೇಶವನ್ನು ವಾಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ| ಕೆ. ಸುಭಾಶ್ಚಂದ್ರ ಶೆಟ್ಟಿ. ಶ್ರೀ ಎಂ. ರಾಮಯ ಶೆಟ್ಟಿ, ಶ್ರೀ ಕುಂಬ್ರ ದಯಾಕರ ಆಳ್ವ, ಶ್ರೀ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ| ಬಿ. ಸಂಜೀವ ರೈ ಹಾಗೂ ಸಂಘದ ಸದಸ್ಯ ಗ್ರಾಹಕರು ಉಪಸ್ಥಿತರಿದ್ದು ಶಾಖೆಗೆ ಶುಭ ಹಾರೈಸಿದರು. ಸಭೆಯ ಆರಂಭದಲ್ಲಿ ಸಿಬ್ಬಂದಿ ಶ್ರೀಮತಿ ಸನಿಹ ಶೆಟ್ಟಿ ಪ್ರಾರ್ಥಿಸಿದರು. ಮಹಾಪ್ರಬಂಧಕರಾದ ಶ್ರೀ ಗಣೇಶ್ ಜಿ.ಕೆ ರವರು ಸ್ವಾಗತಿಸಿ, ಶಾಖಾಧಿಕಾರಿ ಶ್ರೀಮತಿ ಅಶ್ವಿನಿ ಎಸ್. ಶೆಟ್ಟಿ ವಂದಿಸಿದರು. ಸಿಬ್ಬಂದಿ ಶ್ರೀ ಶಮಂತ್ ಟಿ. ರೈ…

Read More

ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಕಾತ್ರಜ್ ಇದರ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂಗವಾಗಿ ಯೋಗ ದಿನಾಚರಣೆಯು ಜೂನ್ 21ರಂದು ಬೆಳಿಗ್ಗೆ ಗಂಟೆ 7.00 ರಿಂದ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಪುಣೆಯ ಯೋಗ ಶಿಕ್ಷಕಿ ಶಾಲಿನಿ ವಿಶ್ವನಾಥ್ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ತುಳು ಕನ್ನಡ ಬಾಂಧವರು ಪಾಲ್ಗೊಳ್ಳುವಂತೆ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಹಿಳಾ ಭಕ್ತ ವೃಂದದವರು ವಿನಂತಿಸಿಕೊಂಡಿರುತ್ತಾರೆ. ವರದಿ : ಹರೀಶ್ ಮೂಡಬಿದಿರೆ, ಪುಣೆ

Read More

ಮಿಜಾರು: ಯೋಗದಲ್ಲಿ ಮುಖ್ಯವಾಗಿ ಎರಡು ಅಂಶಗಳು. ಒಂದು ತತ್ವಶಾಸ್ತ್ರ ಇನ್ನೊಂದು ಅಭ್ಯಾಸ. ಆದರೆ ಈ ಎರಡು ಅಂಶಗಳು ಒಟ್ಟಿಗೆ ಮೇಳೈಸಬೇಕಾದಾಗ, ಮೊದಲು ತತ್ತ್ವಶಾಸ್ತ್ರಕ್ಕೆ  ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅಭ್ಯಾಸ ಮಾಡಲು ಮೊದಲು ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು ಎಂದು ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ಡೀನ್  ಡಾ. ಸುಜಾತ ದಿನೇಶ್ ಹೇಳಿದರು. ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಪರಿಷತ್ತು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಇವುಗಳ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 16 ರಿಂದ 19ರವರೆಗೆ `ಯೂತ್ ಯೋಗ ಫೆಸ್ಟಿವಲ್’ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,  ನ್ಯಾಚುರೋಪಥಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬರುವ ಅಡೆತಡೆಗಳನ್ನು ಯೋಗತತ್ವಶಾಸ್ತ ಸಿದ್ಧಾಂತಗಳ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು.   ನಮ್ಮ ಭವಿಷ್ಯವನ್ನು ನಮ್ಮ ವರ್ತಮಾನ  ನಿರ್ಧರಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರ…

Read More

ಬಂಟ ಸಮಾಜದಲ್ಲಿ ಸಮಸ್ಯೆಯಲ್ಲಿರುವವರು ಬಂಟರ ಸಂಘದಿಂದ ಸಹಾಯ ಕೇಳುವುದರಲ್ಲಿ ತಪ್ಪಿಲ್ಲ. ಬಂಟರಿಗೆ ಸಿಗುವ ಸವಲತ್ತುಗಳನ್ನು ಪಡೆಯಬೇಕು. ಎಲ್ಲಿಯವರೆಗೆ ಪಡೆದುಕೊಳ್ಳುವವರು ಇದ್ದಾರೆಯೋ ಅಲ್ಲಿಯವರೆಗೆ ಕೊಡುವವರಿಗೆ ಅಸ್ತಿತ್ವ. ಬಂಟರ ಸಂಘದಲ್ಲಿ ಯಾವುದೇ ಸಹಾಯ ಪಡೆಯಲು ಅಂಜಿಕೆ ಬೇಡ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು. ಮೀರಾರೋಡ್ ಪೂರ್ವದ ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ಜೂನ್ 15 ರಂದು ಜರಗಿದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಸಹಾಯಧನ ಮತ್ತು ಡಾ| ಆರ್.ಕೆ ಶೆಟ್ಟಿ ಪ್ರಾಯೋಜಿತ ಟಾಟಾ ಐಐಎಸ್ ಸಂಜೀವಿನಿ ಲೋಕಾರ್ಪಣೆ ಕಾರ್ಯಕ್ರಮವನ್ನು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಆರ್.ಕೆ ಶೆಟ್ಟಿಯಂತಹ ವ್ಯಕ್ತಿತ್ವದವರು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಸಮಾಜದಲ್ಲಿ ಹುಟ್ಟಬೇಕು. ಸದಾ ಸಮಾಜಕ್ಕಾಗಿ ಸೇವೆ ಮಾಡುವ ಅವರು ಇಂದು ನಾಲ್ಕು ಜನ ಬಂಟ ಬಂಧುಗಳಿಗೆ ದೊಡ್ಡ ಪ್ರಮಾಣದ ನೆರವು ನೀಡಿದ್ದಾರೆ. ಬಂಟರ ಸಂಘದಿಂದ ಮೀರಾ ಭಾಯಂದರ್ ಪ್ರಾದೇಶಿಕ…

Read More

ಪುಣೆ ಬಂಟರ ಸಂಘದ ಟ್ರಸ್ಟಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಪುಣೆ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ತಮನ್ನಾ ಗ್ರೂಪ್ ಆಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕ ಪ್ರಭಾಕರ್ ವಿ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಇವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದಯೆ ಇವರ ಮತ್ತು ಇವರ ಕುಟುಂಬದ ಮೇಲೆ ಸದಾ ಇರಲಿ ಎಂದು ಹಾರೈಸಿ, ಒಕ್ಕೂಟದ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಬೈಂದೂರು ಬಂಟರ ಯಾನೆ ನಾಡವರ ಸಂಘ (ರಿ) ಇದರ 30ರ ಸಂಭ್ರಮದ ಅಂಗವಾಗಿ ನೀಡಲ್ಪಡುವ ವಿವಿಧ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ಇಂಜಿನೀಯರಿಂಗ್ ವಿದ್ಯಾರ್ಥಿ, ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿ, ಅತ್ಯುತ್ತಮ ವಾಣಿಜ್ಯ ವಿದ್ಯಾರ್ಥಿ, ಅತ್ಯುತ್ತಮ ಸರ್ವತೋಮುಖ ಪ್ರತಿಭಾನ್ವಿತ ವಿದ್ಯಾರ್ಥಿನಿ, ಅತ್ಯುತ್ತಮ ಕಾನೂನು ವಿದ್ಯಾರ್ಥಿ, ಅತ್ಯುತ್ತಮ ದಂತ ವೈದ್ಯಕೀಯ ವಿದ್ಯಾರ್ಥಿ, ಅತ್ಯುತ್ತಮ ಬಿ.ಎಸ್ಸಿ (ಕೃಷಿ)/ಪಿ.ಯು.ಸಿ (ವಿಜ್ಞಾನ) ವಿದ್ಯಾರ್ಥಿ, ಅತ್ಯುತ್ತಮ ಕ್ರೀಡಾ ವಿದ್ಯಾರ್ಥಿ, ಯಾವುದೇ ಕ್ಷೇತ್ರದಲ್ಲಿನ ಉನ್ನತ ಸಾಧನೆಗಾಗಿ, ವಿವಿಧ ಕ್ಷೇತ್ರದಲ್ಲಿನ ಸರ್ವತೋಮುಖ ಪ್ರತಿಭೆಗಾಗಿ (ವಿದ್ಯಾರ್ಥಿನಿ) ಅತ್ಯುತ್ತಮ ಬಿ.ಇ. (ಎಲೆಕ್ಟ್ರಾನಿಕ್ಸ್) ಅಥವಾ ಇತರೆ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ, “ಶಾಸ್ತ್ರೀಯ ಸಂಗೀತ” ದಲ್ಲಿ ವಿಶೇಷ ಸಾಧನೆಗಾಗಿ, ಅತ್ಯುತ್ತಮ ಪಶು ವಿಜ್ಞಾನ ವಿದ್ಯಾರ್ಥಿ ಅಥವಾ ಪಶು ವಿಜ್ಞಾನ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ, ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿನಿ, ಅತ್ಯುತ್ತಮ ನೇತ್ರ ವೈದ್ಯ ಅಥವಾ ಯಾವುದೇ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, “ಶಾಸ್ತ್ರೀಯ ನೃತ್ಯ”ದಲ್ಲಿನ ವಿಶೇಷ ಸಾಧನೆಗಾಗಿ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿನಿ, ವಾಣಿಜ್ಯ ವಿಷಯದಲ್ಲಿ ಪದವಿ…

Read More