“ನವ್ನೂಮೇಶ್-೨೦೨೫” ಐ.ಎಂ.ಜೆ ಇನ್ಸ್ಟಿಟ್ಯೂಷನ್ ಮೂಡ್ಲಕಟ್ಟೆ, ಕುಂದಾಪುರ ಇವರ ಆಶ್ರಯದಲ್ಲಿ ನಡೆದ ‘ಅಂತರ್ ಕಾಲೇಜು ಪೆಸ್ಟ್-೨೦೨೫’ ಉಡುಪಿ ಜಿಲ್ಲಾ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ೩೬ ಕಾಲೇಜುಗಳಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ತಂಡವು ಪ್ರಶಸ್ತಿಗಳ ಜೊತೆಗೆ ಪ್ರಶಸ್ತಿಗಳನ್ನು ಪಡೆದು, ಪ್ರಶಸ್ತಿಗಳ ಸರಮಾಲೆಯೊಂದಿಗೆ ಉಡುಪಿ ಜಿಲ್ಲೆಗೆ ಸಮಗ್ರ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರ ಜೊತೆಗೆ ಸೈನ್ಸ್ ಸ್ಟಿçಮ್ ಪ್ರಥಮ, ಕಲ್ಚರಲ್ ಸ್ಟಿçÃಮ್ ಪ್ರಥಮ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಈ ಸಾಧನೆಯನ್ನು ಮಾಡಿದ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು, ಪ್ರಾಂಶುಪಾಲರು ನಾಗರಾಜ್ ಶೆಟ್ಟಿ ಹಾಗೂ ಬೋಧಕ- ಬೋಧಕೇತರ ವರ್ಗದವರು ಶುಭಹಾರೈಸಿದ್ದಾರೆ.






































































































