ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಮಕ್ಕಳ ಚಿಕಿತ್ಸಾ ವಿಭಾಗ ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರು ಆಯೋಜಿಸಿದ ಆರೋಗ್ಯಕರ ಶಿಶು ಸ್ಪರ್ಧೆ ಮತ್ತು ತಪಾಸಣಾ ಶಿಬಿರವು ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಡಾ. ಪ್ರಜ್ಞಾ ಮಲ್ಯರವರು ಪುಟ್ಟ ಮಗುವಿನ ಆರೋಗ್ಯದ ಬಗ್ಗೆ ವೈದ್ಯರ ಸೂಕ್ತ ಸಲಹೆ ಪಡೆದು ಜಾಗೃತಿ ವಹಿಸಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ಚಿಕ್ಕ ಮಗುವಿನ ಆರೋಗ್ಯದ ಬಗ್ಗೆ ಪೋಷಕರು ಜಾಗೃತಿ ವಹಿಸುವುದರಿಂದ ಮುಂದೆ ಸುದೃಢ ಮನಸ್ಸಿನ ಆರೋಗ್ಯವಂತ ಯುವ ಪೀಳಿಗೆಯನ್ನು ಕಾಣಬಹುದು ಎಂದರು.

ಡಾ. ಆಶಾ ಹೆಗ್ಡೆ ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸರ್ಟಿಫಿಕೇಟ್ ಮತ್ತು ಗಿಫ್ಟ್ ಹಾಂಪರ್ಸ್ ನೀಡಲಾಯಿತು. ವೇದಿಕೆಯಲ್ಲಿ ಡಾ. ಶ್ರೇಯಾ ಮಲ್ಯ, ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಆಶಾ ಡಿಮೆಲ್ಲೊ ಉಪಸ್ಥಿತರಿದ್ದು ಶುಭ ಹಾರೈಸಿದರು. ರೋಟರಿ ಕ್ಲಬ್ಬಿನ ಸದಸ್ಯರಾದ ಸುವರ್ಣ ನಾಯಕ್, ವಿಜೇಂದ್ರ ಕುಮಾರ್, ರೇಖಾ ಉಪಾಧ್ಯಾಯ, ಆನ್ಸ್ ಸದಸ್ಯರಾದ ವಿನಯ ಶೆಟ್ಟಿ, ನವ್ಯ ಶೆಟ್ಟಿ, ಸ್ವಾತಿ ಪ್ರಕಾಶ್, ಪ್ರೀತಿ ಶೆಟ್ಟಿ, ರಕ್ಷಾ ಬಲ್ಲಾಳ್, ದೀಪಾ ಅರುಣ್, ಸಹನಾ ಭಟ್, ಜ್ಯೋತಿ ನಾಯಕ್ ಉಪಸ್ಥಿತರಿದ್ದರು. ಗಾಯತ್ರಿ ವಿಜೇಂದ್ರ ಪ್ರಾರ್ಥಿಸಿದರು. ಅನ್ಸ್ ಅಧ್ಯಕ್ಷೆ ಜಯಂತಿ ಆನಂದ ನಾಯಕ್ ಸ್ವಾಗತಿಸಿದರು. ವಸಂತ್ ಎಂ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.





































































































