Author: admin
ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ 2024ನೇ ಸಾಲಿನ ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪುತ್ತೂರಿನ ಬಹುಮುಖ ಪ್ರತಿಭೆ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಜ್ಞಾನ ರೈ ಆಯ್ಕೆಯಾಗಿದ್ದಾರೆ. ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಯಾಗಿರುವ ಬಹುಮುಖ ಪ್ರತಿಭೆ ಜ್ಞಾನ ರೈಯವರು ಕುರಿಯ ಗ್ರಾಮದ ಉದ್ಯಮಿ ಜಯರಾಮ್ ರೈ ಹಾಗೂ ಸುದ್ದಿ ನ್ಯೂಸ್ ಚಾನಲ್ ನ ನಿರೂಪಕಿ ಹೇಮಾ ಜಯರಾಮ್ ರೈಯವರ ಪುತ್ರಿ.
ಬಂಟರ ಯಾನೆ ನಾಡವರ ಸಂಘ ಬೈಂದೂರು ಆಶ್ರಯದಲ್ಲಿ ಬಂಟರ ಪ್ರತಿಭಾ ಸಂಭ್ರಮ ಜನವರಿ 5 ರಂದು ಬೈಂದೂರಿನ ಬಂಟರ ಭವನದಲ್ಲಿ ನಡೆಯಲಿದೆ. 18 ವರ್ಷ ವಯೋಮಾನದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಭಾಷಣ, ಚಿತ್ರಕಲೆ, ಗಾಯನ, ರಸಪ್ರಶ್ನೆ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬಂಟರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಹೆಸರನ್ನು ನೋಂದಾಯಿಸಲು ಜನವರಿ 3 ಕೊನೆಯ ದಿನವಾಗಿತ್ತು ಎಂದು ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ ಮಾತೆರ್ಲಾ ಒಂಜೆ – ಕಲಾ ತಂಡದ 18 ನೇ ವಾರ್ಷಿಕೋತ್ಸವ ಸಮಾರಂಭ ಡಿಸೆಂಬರ್ 19ರಂದು ಇಲ್ಲಿನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಆಶಕ್ತರಿಗೆ ಆರ್ಥಿಕ ನೆರವು, ಯಕ್ಷಗಾನ ಬಯಲಾಟ ಸಹಿತ ವಿವಿಧ ಕಾರ್ಯಕ್ರಮಗಳು ನಡೆದವು. ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಲಿನಿಕ್ ನ ವೈದ್ಯರಾದ ಎನ್. ಎಂ. ತುಳುಪುಳೆ ವಹಿಸಿದ್ದರು. ವೇದಿಕೆಯಲ್ಲಿ, ಗಂಗಾಧರ ಮಿತ್ತಮಾರ್, ಸುಲ್ಕೇರಿಮೊಗ್ರು, ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು, ಸುಂದರ ಹೆಗ್ಡೆ, ಸದಾನಂದ ಪೂಜಾರಿ ಉಂಗಿಲಬೈಲು, ನಾಗಕುಮಾರ ಜೈನ್, ಸತೀಶ್ ಪೂಜಾರಿ, ಹಿಲರಿ ಫೆರ್ನಾಂಡಿಸ್, ಅಬ್ದುಲ್ ಹಮೀದ್ ಸುನ್ನತ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಚಿದಾನಂದ ಪೂಜಾರಿ ಎಲ್ದಕ್ಕ ಶಿರ್ಲಾಲ್ (ಸಾಮಾಜಿಕ, ಧಾರ್ಮಿಕ), ಪ್ರಕಾಶ್ ಶೆಟ್ಟಿ ನೊಚ್ಚ ಅಳೆದಂಗಡಿ (ಸಾಮಾಜಿಕ,ಧಾರ್ಮಿಕ) ಅಲೋಶಿಯಸ್ ಡಿಸೋಜಾ ದೈಲಾ ಅಳದಂಗಡಿ, (ಸಹಕಾರಿ ಕ್ಷೇತ್ರ), ರಾಕೇಶ್ ಹೆಗ್ಡೆ ಬಳೆಂಜ (ಕೃಷಿ,…
ಮಣಿಪುರ ಕುಂತಳನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಎರಡು ದಿನಗಳ ಅದ್ದೂರಿ ಸಮಾರಂಭಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಲೋಕಕಲ್ಯಾಣಕ್ಕೆ ತೆರೆದಿಟ್ಟ ಅರಿವಿನ ಹೆಬ್ಬಾಗಿಲು ಆಗಿರುವ ಭಾರತಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸುವುದು ಸಂಭ್ರಮದ ಸಾರ್ಥಕ ಕ್ಷಣ. ಸಮಾಜದ ಕಟ್ಟ ಕಡೆಯ ಮಗುವನ್ನೂ ಅಕ್ಷರ ಪ್ರಪಂಚಕ್ಕೆ ತೆರೆದುಕೊಳ್ಳುವಲ್ಲಿ ನೀಡಿರುವ ಸೇವೆಯು ಪ್ರಶಂಸನೀಯ ಎಂದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕನ್ನಡ ಶಾಲೆಯೊಂದರ 100 ವರ್ಷದ ಸಂಭ್ರಮ ನಿಜಕ್ಕೂ ಸ್ಥಾಪಕರ ಸೇವಾ ಮನೋಭಾವದ ನೈಜ ಪರಿಶ್ರಮಕ್ಕೆ ಸಂದ ಮೌಲ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದು ಶಾಲೆ ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಾಬನ್ ಬ್ಯಾರಿ, ಸಾಧಕರಾದ ರಾಘು ಪೂಜಾರಿ ಕಲ್ಮಂಜೆ, ಸಮಾಜ ಸೇವಕ ಅಶೋಕ್ ಶೆಟ್ಟಿ, ಸೆಲಿನ್…
ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಜರಗಿದ ಅಂತರ್ ರಾಜ್ಯ ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಹಾಗೂ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಾಲಿಬಾಲ್ ಪಂದ್ಯಾಟದಲ್ಲಿ ಗುರುಪುರ ಬಂಟರ ಮಾತೃ ಸಂಘದ ಅನೀಶ್ ರೈ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಮುನಿಯಾಲ್, ಚಂದ್ರಹಾಸ್ ಶೆಟ್ಟಿ ರಂಗೋಲಿ, ಮನೋಹರ್ ಎಸ್ ಶೆಟ್ಟಿ ಸಾಯಿರಾಧ ಹಾಗೂ ಪಡುಬಿದ್ರಿ ಬಂಟರ ಸಂಘದ ಪದಾಧಿಕಾರಿಗಳು ಗುರುಪುರ ಬಂಟರ ಮಾತೃ ಸಂಘಕ್ಕೆ ಟ್ರೋಫಿ ಹಾಗೂ ನಗದನ್ನು ವಿತರಿಸಿದರು. ಈ ಸಂಧರ್ಭ ಸಂಘದ ಆಟಗಾರರ ಜೊತೆಗೆ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಮಾಜಿ ಸಂಚಾಲಕ ಸುದರ್ಶನ್ ಶೆಟ್ಟಿ ಪೆರ್ಮಂಕಿ, ಯುವ ವಿಭಾಗದ ಅಧ್ಯಕ್ಷ ಸಂದೀಪ್ ಆಳ್ವ ಕೊಳವೂರು,…
ಡಾ. ಅವಿನ್ ಆಳ್ವರವರು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘದ (IMA) ಕಾರ್ಯದರ್ಶಿಯಾಗಿದ್ದು, 2023 -24ನೇ ಸಾಲಿನ ಕರ್ನಾಟಕ ರಾಜ್ಯದ ಅತ್ಯುತ್ತಮ ಕಾರ್ಯದರ್ಶಿ ಮತ್ತು ಭಾರತದ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಎಂಬ ಎರಡು ಪ್ರತಿಷ್ಠಿತ ಗೌರವಗಳನ್ನು ಗಳಿಸಿದ್ದಾರೆ. ಈ ಪ್ರಶಸ್ತಿಗಳು ಕ್ರಮವಾಗಿ ಕರ್ನಾಟಕ ರಾಜ್ಯ ಮಂಡಳಿ ಮತ್ತು ನವದೆಹಲಿಯ IMA ಕೇಂದ್ರ ಕಚೇರಿಯಿಂದ ಪ್ರದಾನ ಮಾಡಲ್ಪಟ್ಟಿವೆ. ಈ ಪ್ರಶಸ್ತಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಅವರ ಅಪರೂಪದ ಶ್ರೇಷ್ಠ ನಾಯಕತ್ವ, ಅಪಾರ ಸೇವಾ ಮನೋಭಾವ ಮತ್ತು ಉತ್ತಮ ಕೊಡುಗೆಗಳಿಗೆ ನೀಡಲಾದ ಗೌರವವಾಗಿದೆ. ಡಾ. ಅವಿನ್ ಆಳ್ವರವರು 11 ತಿಂಗಳ ಅವಧಿಯಲ್ಲಿ 123 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಮಂಗಳೂರನ್ನು ಕರ್ನಾಟಕದ 180 IMA ಶಾಖೆಗಳಲ್ಲಿಯೇ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಅವರು 28 ರಾಜ್ಯಗಳು ಮತ್ತು ಸುಮಾರು 3000 ಶಾಖೆಗಳ ನಡುವೆ ಅಗ್ರಸ್ಥಾನ ಪಡೆದು ವೈಶಿಷ್ಟತೆಯನ್ನು ಸಾಧಿಸಿದ್ದಾರೆ.
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಹೇಮಂತ್ ರೈ ಮನವಳಿಕೆಗುತ್ತು
ಕುಕ್ಕೆ ಸುಬ್ರಹ್ಮಣ್ಯ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎರಡನೆ ಎ ದರ್ಜೆಯ ದೇವಸ್ಥಾನವಾದ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಹೇಮಂತ್ ರೈ ಮನವಳಿಕೆಗುತ್ತು ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ಹೇಮಂತ್ ರೈ ಅವರು ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ, ಉದ್ಯಮಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.
ಮೂಡುಬಿದಿರೆ: ಹಣ ಸಂಪಾದಿಸುವುದು, ಪದವಿ ಪಡೆದುಕೊಳ್ಳುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ. ನಮ್ಮನ್ನು ನಾವು ಸವ್ಯಸಾಚಿಯನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶ ಎಂದು ಕ್ವಿಜ್ ಮಾಸ್ಟರ್, ಲೇಖಕ ಡಾ| ನಾ. ಸೋಮೇಶ್ವರ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಮೂಡುಬಿದಿರೆಯ ಸೌಟ್ಸ್-ಗೈಡ್ಸ್ ಕನ್ನಡ ಭವನದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೊಬ್ಬರ ಕುಶಲ ಕ್ಷೇಮ ವಿಚಾರಿಸುವುದು ಭಾರತೀಯ ಸಂಸ್ಕೃತಿ. ಪೋಷಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಇಂತಹ ಮೂಲಭೂತ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ಪೋಷಕರ ಕರ್ತವ್ಯ ಮಾತ್ರವಲ್ಲ ಧರ್ಮವೂ ಆಗಿದೆ ಎಂದರು. ನಮ್ಮ ಮೆದುಳಿನ ರಚನೆಯಲ್ಲಿ ಅರೆಗೋಳ ಎಂಬ ಭಾಗವಿದೆ. ಎಡ ಅರೆಗೋಳವು ಸದಾ ಲೆಕ್ಕಾಚಾರಗಳಂತಹ ತಾರ್ಕೀಯ ವಿಚಾರಗಳ ಬಗ್ಗೆ ಯೋಚಿಸುತ್ತದೆ. ಅದು ಯಾವುದೇ ಭಾವನೆ, ಮಾತಿನ ವೈಖರಿಗೆ ಬಲಿಯಾಗುವುದಿಲ್ಲ. ಬಲ ಅರೆಗೋಳ ಭಾವನೆಗಳಿಗೆ…
ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ ಶಾಖೆಯ ನವೀಕೃತ, ಹವಾನಿಯಂತ್ರಿತ ಕಚೇರಿ ಉದ್ಘಾಟನೆಯು ಗುರುವಾರ ನೆರವೇರಿತು. ಕಲ್ಸಂಕ ವಿದ್ಯಾಸಮುದ್ರತೀರ್ಥ ರಸ್ತೆ ಬಳಿಯ ಸತೀಶ್ಚಂದ್ರ ಬಿಲ್ಡಿಂಗಿನ ನೆಲಮಹಡಿಯಲ್ಲಿ ಸೊಸೈಟಿಯ ನಿರ್ದೇಶಕ ಹಾಗೂ ಉಡುಪಿ ಶಾಖಾ ಉಸ್ತುವಾರಿ ನಿರ್ದೇಶಕ ರವೀಂದ್ರನಾಥ ಜಿ. ಹೆಗ್ಡೆ ನವೀಕೃತ ಕಚೇರಿ ಉದ್ಘಾಟಿಸಿ, ಕೆ.ಬಿ. ಜಯಪಾಲ ಶೆಟ್ಟಿಯವರು ಶ್ರಮ ವಹಿಸಿ ಸ್ಥಾಪಿಸಿದ ಸೊಸೈಟಿಯು ಕೆ. ಜೈರಾಜ್ ಬಿ. ರೈ ಸಮರ್ಥ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು 1,050 ಕೋಟಿ ರೂ. ವ್ಯವಹಾರ ಹೊಂದಿದೆ. 13 ಜಿಲ್ಲಾ ಪ್ರಶಸ್ತಿ, ಆರು ರಾಜ್ಯ ಪ್ರಶಸ್ತಿ, ಸಹಕಾರ ಮಾಣಿಕ್ಯ ಪ್ರಶಸ್ತಿಯನ್ನು ಸೊಸೈಟಿ ಪಡೆದಿದ್ದು ಅಧ್ಯಕ್ಷ ಕೆ. ಜೈರಾಜ್ ಬಿ. ರೈ ದಕ್ಷ ನಾಯಕತ್ವ, 15 ನಿರ್ದೇಶಕರ ಮಾರ್ಗದರ್ಶನ, ಗ್ರಾಹಕರ ಸಹಕಾರ, ಸಿಬ್ಬಂದಿಗಳ ಶ್ರಮ ಸ್ಮರಣೀಯ ಎಂದರು. ಹವಾನಿಯಂತ್ರಿತ ವ್ಯವಸ್ಥೆಗೆ ಉಡುಪಿ ಶಾಖಾ ಕಟ್ಟಡ ಮಾಲೀಕರಾದ ಪ್ರೇಮಲತಾ ಎಸ್. ಹೆಗ್ಡೆ ಚಾಲನೆ ನೀಡಿದರು. ಸೊಸೈಟಿಯ ಉಡುಪಿ ಶಾಖಾ ಸಲಹಾ ಸಮಿತಿ ಸದಸ್ಯರಾದ…
ಬಂಟರ ಸಂಘ ಪುಣೆಯ ಸುವರ್ಣ ಮಹೋತ್ಸವ ಆಚರಣೆಗೆ ಪೂರಕವಾಗಿ ಕೆ.ಎಸ್.ಎಚ್ ಟ್ರೋಫಿ- 2025 ಅಂತರಾಷ್ಟ್ರೀಯ ಬಂಟರ ಕ್ರೀಡಾಕೂಟವು ಜನವರಿ 5ರಂದು ಬೆಳಿಗ್ಗೆ 8ರಿಂದ ಪುಣೆಯ ಅಂತಾರಾಷ್ಟ್ರೀಯ ಕ್ರೀಡಾ ಸಂಕುಲ ಬಾಲೆವಾಡಿಯ ಶ್ರೀ ಶಿವಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ ದೇಶ ವಿದೇಶದಲ್ಲಿರುವ ಬಂಟ ಕ್ರೀಡಾಪಟುಗಳಿಗೆ ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಅಂತಾರಾಷ್ಟ್ರೀಯ ಕ್ರೀಡಾ ಕೂಟದ ಆಯೋಜನೆಯಂತೆ ವಿಜೃಂಭಣೆಯಿಂದ ನಡೆಯಲಿದೆ. ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಗೌರವಾಧ್ಯಕ್ಷರಾದ ಕೆ.ಎಸ್.ಎಚ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಂ.ಡಿ ಕುಶಲ್ ಹೆಗ್ಡೆಯವರ ಪ್ರಾಯೋಜಕತ್ವದಲ್ಲಿ ಕ್ರೀಡಾಕೂಟವು ನಡೆಯುತ್ತಿದ್ದು, ವಿಜೇತರಾದವರಿಗೆ ಕೆ.ಎಸ್.ಎಚ್ ಟ್ರೋಫಿ ಹಾಗೂ ನಗದು ಬಹುಮಾನ ಪಡೆಯಲಿದ್ದಾರೆ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಸಭಾಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಕ್ರೀಡಾ ಕೂಟದ ಉದ್ಘಾಟನೆಯನ್ನು ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾಡಲಿದ್ದು, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ…