Author: admin
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು : ವಿಟಿಯು ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ಸ್
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟ ಗಳಿಸಿದರು. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮದುಲಿಂಗ ಎಂ (60 ಕೆ.ಜಿ. ವಿಭಾಗ)- ಚಿನ್ನ, ವಸಂತ್ ಕುಮಾರ್ ಸಿ.ಜಿ. (79 ಕೆ.ಜಿ. ವಿಭಾಗ)- ಚಿನ್ನ, ಸಾಯಿ ಹಿತೇಶ್ (94 ಕೆ.ಜಿ. ವಿಭಾಗ)- ಚಿನ್ನ, ಹರ್ಷ ಸಿ.ಆರ್ (110+ ಕೆ.ಜಿ. ವಿಭಾಗ)-ಚಿನ್ನ ಹಾಗೂ ಹರ್ಷಿತಾ (69 ಕೆ.ಜಿ. ವಿಭಾಗ) ಕಂಚಿನ ಪದಕದೊಂದಿಗೆ ಒಟ್ಟು 4 ಚಿನ್ನ ಹಾಗೂ 1 ಕಂಚಿನ ಪದಕ ಗಳಿಸಿದರು. ವಿಟಿಯು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆಳ್ವಾಸ್‌ನ ನೈದಿಲ್ ಪೂಜಾರಿ (70 ಕೆ.ಜಿ. ವಿಭಾಗ) ಚಿನ್ನದ ಪದಕದೊಂದಿಗೆ ಮಿಸ್ಟರ್ ವಿಟಿಯು ‘ಮೋಸ್ಟ್ ಮಸ್ಕುಲರ್ ಮ್ಯಾನ್’ ಪಟ್ಟ ಪಡೆದರು. ಸೋಹಮ್ ಕುಡಚಿ (85 ಕೆ.ಜಿ. ವಿಭಾಗ) ಚಿನ್ನದ ಪದಕ ಪಡೆದರೆ, ಜಗದೀಶ್ ಗೌಡ (85 ಕೆಜಿ ವಿಭಾಗ)- ಬೆಳ್ಳಿಯ ಪದಕ, ವಸಂತ್…
ನಾಗರಾಜ್ ಬಿ ಶೆಟ್ಟಿ ಅವರು ತನ್ನ ವಿಚಕ್ಷಣ ಮತಿಯಿಂದ ಹಣಕಾಸು ಕ್ಷೇತ್ರದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದವರು. ಎಂ.ಬಿ.ಎ, ಎಲ್.ಎಲ್.ಬಿ ಹಾಗೂ ಡಿ.ಲಿಟ್ ಪಡೆದ ಅಪರೂಪರ ವ್ಯಕ್ತಿತ್ವ ಇವರದ್ದಾಗಿದೆ. ಬಹುಮುಖಿ ಸಾಧಕರಾಗಿ ಬಹು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮನುಷ್ಯ ಸಂಕಲ್ಪ ಮಾಡಿದರೆ ಏನೆಲ್ಲಾ ಸಾಧಿಸಬಹುದೆನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಖಿಲ ಭಾರತ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಕುರಿತ ಸಂಘಟನೆಯಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ. ಅವೆನ್ ಸ್ಪ್ರಿಂಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಓಪ್ಟಿನ್ ಬಿ2ಬಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕ್ಯಾರಿಯರ್ ಹಾಗೂ ಲೈಫ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕಿಂಗ್, ತಂತ್ರಜ್ಞಾನ, ಆಡಳಿತ ಕುರಿತು ವಿಸ್ತೃತ ಅಧ್ಯಯನ ಮಾಡಿರುವ ನಾಗರಾಜ್ ಶೆಟ್ಟಿ ಅವರು ತನ್ನ ಬಿಡುವಿಲ್ಲದ ಕಾಯಕದ ಕಾರ್ಯಕ್ಷೇತ್ರದಲ್ಲಿ ಯಶ ಸಾಧಿಸುವುದರ ಮೂಲಕ ಬಂಟ ಸಮುದಾಯದ ಕಣ್ಮಣಿಯಾಗಿ ಪ್ರತಿಯೊಬ್ಬರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ರಾಂಕ್ ವಿಜೇತರಾದ ಶೆಟ್ಟಿ ಅವರು ವಾಣಿಜ್ಯ,…
ಅಬ್ಬಕ್ಕ ಉತ್ಸವ ಸಮಿತಿಯಿಂದ ರಾಜ್ಯೋತ್ಸವ ಆಚರಣೆ : ವೀರ ರಾಣಿ ಅಬ್ಬಕ್ಕ ಹೆಸರು ಚಿರಸ್ಥಾಯಿ – ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ, ದಿ. ಮನೋಹರ ಪ್ರಸಾದ್ ಸಂಸ್ಕರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಕುತ್ತಾರಿನ ವೆಜಿನೇಷನ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿ, ಕಳೆದ 28 ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯು ಅಬ್ಬಕ್ಕನ ಹೆಸರಿನಲ್ಲಿ ನಿರಂತರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಳುನಾಡಿನ ವೀರ ರಾಣಿಯ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಪತ್ರಿಕಾರಂಗದಲ್ಲಿ ದಿ. ಮನೋಹರ್ ಪ್ರಸಾದ್ ಅವರ ಸಾಧನೆ ಅವಿಸ್ಮರಣೀಯ. ಅವರ ಪ್ರತಿಭೆ, ಶ್ರಮ ಮತ್ತು ಬರವಣಿಗೆಯ ಶೈಲಿ ಯುವ ಪತ್ರಕರ್ತರಿಗೆ ಪ್ರೇರಣೆ ಆಗಿದೆ ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ, ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಉಳ್ಳಾಲ ಘಟಕದ ಅಧ್ಯಕ್ಷ ರಾಜೇಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ…
ಪಾವಂಜೆ ಮೇಳದ ಕಲಾವಿದ, ಪ್ರಬಂಧಕ “ಯಕ್ಷ ರಾಮ” ಬಿರುದಾಂಕಿತ ಮಾಧವ ಕೊಳತ್ತಮಜಲು ಅವರಿಗೆ ಕದ್ರಿ ದೇವಸ್ಥಾನದಲ್ಲಿ ನಡೆದ ಕದ್ರಿ ಯಕ್ಷ ಬಳಗದ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಿರಿಯ ವೈದ್ಯ ಡಾ. ಜಯಶಂಕರ್ ಮಾರ್ಲ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ ಕುಮಾರ್ ಮೊಯ್ಲೊಟ್ಟು, ಸಂಜಯ್ ಕುಮಾರ್ ಗೋಣಿಬೀಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕದ್ರಿ ಯಕ್ಷ ಬಳಗದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣೆ ಮಾಡಿದರು. ಅರ್ಚಕ ಕದ್ರಿ ರವಿ ಅಡಿಗ ಅವರು ಶನೀಶ್ವರನ ಕಥೆಯ “ಛಾಯಾ ನಂದನ” ನೂತನ ಪ್ರಸಂಗದ ಮೊದಲ ಪ್ರದರ್ಶನ ಆಕರ್ಷಣೀಯವಾಗಿ ಮೂಡಿ ಬಂದಿದ್ದು ಸಾವಿರಾರು ಪ್ರದರ್ಶನಗಳನ್ನು ಕಾಣುವಂತಾಗಲಿ ಎಂದು ಹರಸಿದರು. ಪ್ರಸಂಗ ಕರ್ತ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ “ಛಾಯಾ ನಂದನ “ಕೃತಿ ಯ…
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರಿಗೆ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಖ್ಯಾತ ಲೇಖಕ ಹಾಗೂ ಸಾಹಿತಿ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರಿಗೆ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡಿ ಸಮ್ಮಾನಿಸಲಾಯಿತು. ವಿಜಯ ಬ್ಯಾಂಕ್ ನ ನಿವೃತ್ತ ಮುಖ್ಯ ಪ್ರಬಂಧಕರಾದ ಅವರು ಎಂಎ, ಎಲ್.ಎಲ್.ಬಿ, ಸಿಎ ಐಐಬಿ ಪದವೀಧರರು. ಅವರ 400ಕ್ಕೂ ಅಧಿಕ ಆರ್ಥಿಕತೆ, ಬ್ಯಾಂಕಿಂಗ್, ಶೈಕ್ಷಣಿಕ, ಪ್ರಜಾಪ್ರಭುತ್ವ, ಸಂವಿಧಾನ, ಪ್ರಕೃತಿ ಮತ್ತು ಪರಿಸರ ಹಾಗೂ ಇತರ ವೈಚಾರಿಕ ಕನ್ನಡ ಮತ್ತು ಆಂಗ್ಲ ಭಾಷೆಯ ಬರಹಗಳು ಪ್ರಮುಖ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಹಲವು ಸಂಘ ಸಂಸ್ಥೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಆಕಾಶವಾಣಿ, ದೂರದರ್ಶನಗಳಲ್ಲಿ ಆರ್ಥಿಕತೆ, ಪರಿಸರ, ಶಿಕ್ಷಣ, ಸಮಾಜ, ನೀತಿ ಸಂಬಂಧಿತ ವಿಚಾರಗೋಷ್ಠಿ ಉಪನ್ಯಾಸ ನೀಡಿದ್ದಾರೆ. ಸಂದರ್ಶಕ ಉಪನ್ಯಾಸಕರೂ ಆಗಿದ್ದಾರೆ. ಐದು ಪ್ರಮುಖ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಪ್ರಕೃತಿಯೇ ಮಹಾಮಾತೆ, ಬದುಕಿನ ಹಾದಿ, ನೋಬೆಲ್ ಪುರಸ್ಕೃತ ಟಾಗೋರರ ಆಂಗ್ಲ ಗೀತಾಂಜಲಿಯ ಕನ್ನಡಾನುವಾದ, ವ್ಯಾಲ್ಯೂಸ್ ಆ್ಯಂಡ್ ವಾಯ್ಸಸ್, ಲ್ಯಾಂಗ್ವೇಜ್ ಆಫ್ ದಿ ನೇಚರ್ ಎಂಬ ಐದು…
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ನೂತನ ಪಯಣಕ್ಕೆ ಚಾಲನೆಯ ರೂಪದಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ರಚಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆಗೆ ಆಗಮಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟರು ಮಾತನಾಡಿ, “ಕನ್ನಡವನ್ನು ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮ ಕರ್ತವ್ಯ. ಸಾಹಿತ್ಯದ ಓದುವಿಕೆ ಮತ್ತು ಬರೆಯುವಿಕೆ ನಮ್ಮ ಅನುಭವಗಳನ್ನು ಹೆಚ್ಚಿಸುವ ಪ್ರಕ್ರಿಯೆ. ಆದ್ದರಿಂದ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಿ. ಭಾಷೆಯ ಬಗೆಗೆ ಹೆಚ್ಚಿನ ಗಮನ ಕೊಡಿ. ವಾಕ್ಯಗಳ ರಚನೆಯಲ್ಲಿ ತೊಡಗಿ, ಬಳಿಕ ಸಾಹಿತ್ಯ ರಚನೆಗೂ ಮುಂದಾಗಬೇಕು ಎನ್ನುತ್ತಾ ಕನ್ನಡ ಸಾಹಿತ್ಯದ ಕಾಲಘಟ್ಟಗಳು, ನಿಘಂಟುಗಳು, ಗದ್ಯ ಪದ್ಯ ಕವಿಗಳ ವಿವರ, ಕವಿರಾಜಮಾರ್ಗ, ತಾಳೆಗರಿಗಳ ಉಲ್ಲೇಖದೊಂದಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುರಿತು ವಿವರಿಸಿದರು. ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘದ ಮೂಲಕ ಇನ್ನಷ್ಟು ಸೃಜನಾತ್ಮಕ ಸಾಹಿತ್ಯ ಕೃತಿಗಳು ಮೂಡಿ ಬರಲಿ” ಎಂದು ಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು “ಭಾಷೆ…
ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಉತ್ತಮ ಜೀವನ ನಿರ್ವಹಣೆ ಉದ್ದೇಶದಿಂದ ವಿದೇಶ ಸೇರಿಕೊಂಡು ಅಲ್ಲಿಯೆ ನೆಲೆಸಿಕೊಂಡು ತಮ್ಮ ಉದ್ಯೋಗ ವ್ಯಾಪಾರ ವಹಿವಾಟುಗಳು ಒಂದು ನಿರ್ಣಾಯಕ ಹಂತದಲ್ಲಿ ನೆಲೆ ಕಂಡಾದ ಮೇಲೆ ತಮ್ಮ ಸಂಸ್ಕೃತಿಯ ತಾಯಿ ಬೇರಿಗೆ ನೀರೆರೆದು ಪೋಷಿಸುತ್ತಾ, ಅದು ನಳ ನಳಿಸುವಂತೆ ಮಾಡುತ್ತಿರುವ ಕೆಲಸದಲ್ಲಿ ಸದಾ ತೊಡಗಿಸಿಕೊಂಡಿರುವುದನ್ನು ಕಂಡರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಮಂಗಳೂರು ಬಜಪೆ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಅನೇಕ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ನಾಯಕರಿಗೆ ಜನುಮ ನೀಡಿದ ರಮಣೀಯ ನೆಲ. ಇದು ಯದುನಾಥ ಆಳ್ವರ ಮೂಲನೆಲೆ ಮೂಲನೆಲ. ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಇವರ ಮಹತ್ವಾಕಾಂಕ್ಷೆ ಭವಿಷ್ಯ ಕುರಿತಂತೆ ಸ್ಪಷ್ಟ ಕಲ್ಪನೆ ತನ್ನ ಕನಸುಗಳಿಗೆ ಸಾಕಾರ ರೂಪ ನೀಡುವ ಛಲ ಅವರನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾದ ಕುವೈಟ್ ಕಡೆ ಆಕರ್ಷಿಸಿತು. ತನ್ನ ವಿಚಕ್ಷಣ ಪ್ರತಿಭಾ ಸಾಮರ್ಥ್ಯದಿಂದ ಅನತಿ ಕಾಲದಲ್ಲಿಯೇ ತನ್ನ ಅದ್ಭುತ ಟೀಮ್ ವರ್ಕ್ ಮೂಲಕ ಲೋಜಿಸ್ಟಿಕ್ ಎಂಡ್ ಫೈನಾನ್ಸ್ ವ್ಯವಹಾರ ಕ್ಷಿಪ್ರ ಪ್ರಗತಿ ಕಂಡ ಪರಿಣಾಮ ಅವರೊಬ್ಬ ಕುವೈಟ್…
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಡುಪಿ ಘಟಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರ್ಕಳ, ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಪರ್ಕಳ ಮತ್ತು ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇವರ ಸಹಯೋಗದಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಿ ಭಟ್ರು ಎಂದೇ ಖ್ಯಾತರಾದ ರಮೇಶ್ ಭಟ್ ಬಾಯಾರು ಇವರನ್ನು ಗೌರವಿಸಲಾಯಿತು. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ವತಿಯಿಂದ ಮೇಳದ ಸಂಚಾಲಕ, ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರ ಪಾವಂಜೆಯ ಆಡಳಿತ ಮೊಕ್ತೇಸರರಾದ ಶಶೀಂದ್ರ ಕುಮಾರ್, ಉಡುಪಿ ಘಟಕದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರುಪಮಾ ಶೆಟ್ಟಿ, ಎಚ್ ಪಿ ಆರ್ ವಿದ್ಯಾಸಂಸ್ಥೆಯ ಛೇರ್ಮನ್ ಲಯನ್ ಹರಿಪ್ರಸಾದ್ ರೈ, ಕರುಣಾಕರ ಶೆಟ್ಟಿ, ಸುಧಾಕರ ಆಚಾರ್ಯ ಮತ್ತಿತರ…
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದ ಆರನೇ ವರ್ಷದ ಯಾನಾರಂಭವು ಆದಿತ್ಯವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು, ಭಾಗವತರಿಗೆ ಜಾಗಟೆ, ಕಲಾವಿದರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಪೂಜೆಯ ಮೂಲಕ ಆರಂಭಗೊಂಡಿತು. ಬಳಿಕ ಮೇಳದ ಸುವಸ್ತುಗಳೊಂದಿಗೆ ಚೌಕಿ ಪ್ರವೇಶಿಸಿ ಚೌಕಿ ಪೂಜೆ ಜರಗಿತು. ಇದೇ ಸಂದರ್ಭದಲ್ಲಿ ಮೇಳಕ್ಕೆ ಪರಂಪರೆಯ ನೂತನ ವೇಷಭೂಷಣಗಳನ್ನು, ಬೆಳ್ಳಿಯ ಪೂಜಾ ಪರಿಕರಗಳನ್ನು ಸಮರ್ಪಿಸಲಾಯಿತು. ಮೇಳದ ಕಲಾವಿದರಿಗೆ ಈವರೆಗೆ ಇದ್ದ ಆರೋಗ್ಯ ವಿಮೆ, ಪಿಎಫ್ ಸೌಲಭ್ಯಗಳ ಜೊತೆಗೆ ಈ ಬಾರಿ ಇಎಸ್ಐ ಸೌಲಭ್ಯವನ್ನು ಜಾರಿ ಮಾಡಲಾಯಿತು. ಈ ಸಾಲಿನ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧ ಪ್ರಸಂಗವು ಶ್ರೀ ದೇವಳದ ಬಾಕಿಮಾರು ಗದ್ದೆಯಲ್ಲಿ ಹಾಕಲಾಗಿದ್ದ ಸಾಂಪ್ರದಾಯಿಕ ರಂಗಸ್ಥಳದಲ್ಲಿ ನಡೆಯಿತು. ಶ್ರೀ ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಡಾ. ಯಾಜಿ ಹೆಚ್ ನಿರಂಜನ ಭಟ್, ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್…
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು 3 ನವೆಂಬರ್ 2025 ರಂದು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮ ರವರು ಬೆಳಕಾಗಲಿ ಬಾಳು ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತುಗಳನ್ನಾಡುತ್ತಾ, ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ…















