ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಪ್ರಾಂಶುಪಾಲರಿಗೆ “ಭವಿಷ್ಯದ ಶಾಲೆಗಳಲ್ಲಿ-ಮಕ್ಕಳಲ್ಲಿ ಮೌಲ್ಯಾಧಾರಿತ ಕೌಶಲ್ಯಗಳನ್ನು ಪೆÇೀಷಿಸುವುದು” ವಿಷಯದ ಕುರಿತು ಐಕ್ಸ್ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಬ್ರಹ್ಮಾವರದ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ನ ನಿರ್ದೇಶಕ ಫೆÇ್ರೀ. ಮ್ಯಾಥಿವ್ ಸಿ ನೈನನ್ ದೀಪ ಬೆಳಗಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಕೇವಲ ಬೋಧನೆಯ ಮೂಲಕ ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಇಂದಿನ ಮಕ್ಕಳು ಅರ್ಥ ರಹಿತವಾದ ಕೆಟ್ಟ ಪದಗಳ ಬಳಕೆಯನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಪ್ರಾಂಶುಪಾಲರು ನಿರ್ವಹಿಸಬೇಕು. ಎಲ್ಲರೂ ಮಕ್ಕಳಲ್ಲಿ ಸಹಾನುಭೂತಿಯ ಪ್ರಜ್ಞೆಯನ್ನು ಸೃಷ್ಟಿಸಬೇಕೆಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಕಲಿಕಾ ವಾತಾವರಣವು ಅತ್ಯುತ್ತಮ ಶಿಕ್ಷಣದ ಜೊತೆಗೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು. ಉತ್ತಮ ಮೌಲ್ಯಗಳನ್ನು ನೀಡಿ ಮಕ್ಕಳ ಭವಿಷ್ಯವನ್ನು ಕಟ್ಟಬೇಕೆಂದರು. ಐಕ್ಸ್ ಅಧ್ಯಕ್ಷೆ ಅಭಿಲಾಷ ಎಸ್ ಮಾತನಾಡಿ ಸುಖದ ಐಷಾರಾಮದ ಜೀವನವನ್ನು ಅಪೇಕ್ಷಿಸುವ ಇಂದಿನ ಮಕ್ಕಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ, ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ನೀತಿ, ಮೌಲ್ಯಗಳಿಂದ ಮಾತ್ರ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಸಾಧ್ಯವೆಂದರು. ಸಿಬಿಎಸ್ಇ ಮಾಜಿ ನಿರ್ದೇಶಕ ಜಿ ಬಾಲಸುಬ್ರಮಣಿಯನ್ ಸಮ್ಮೇಳನದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ತಿರುಪತಿ ಆದಿಶಂಕರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಟಿ ಪಿ ಸಸಿಕುಮಾರ್ ‘ಎಜ್ಯುಕೇಟ್ ಟು ಎಲಿವೇಟ್’ (ಸಾಮರ್ಥ್ಯವುಳ್ಳ ಮನಸ್ಸುಗಳು ಮತ್ತು ಕರುಣಾಳು ಹೃದಯಗಳನ್ನು ಪೋಷಿಸುವುದು), ಗ್ರೇ ಕ್ಯಾಪ್ಸ್ನ ಸಂಸ್ಥಾಪಕ ಶ್ರೀ ಗಿರಿ ಬಾಲಸುಬ್ರಮಣಿಯಮ್ ಪಿಕ್ಬ್ರೈನ್ “ಫ್ಯೂಚರ್ ಸ್ಕೂಲ್ಸ್” (ಪಠ್ಯಕ್ರಮದ ಹೊರತಾಗಿ ಜ್ಞಾನದ ಮಹತ್ವ) ಕುರಿತು ವಿಷಯ ಮಂಡಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲರನ್ನು ಸ್ವಾಗತಿಸಿದರು. ಸಮ್ಮೇಳನದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ, ರೆ. ಫಾ. ಜಾನ್ಸನ್ ಎಲ್ ಸಿಕ್ವೇರಿಯಾ, ಸುರೇಶ್ ಮಹಾಲಿಂಗಪುರ, ರೆ. ಫಾ. ರಾಲ್ವಿನ್ ಜಾಯ್ ಅರನ್ಹ, ಐಕ್ಸ್ನ ಸದಸ್ಯರು ಉಡುಪಿ ಹಾಗೂ ಮಂಗಳೂರಿನ ವಿವಿಧ ಶಾಲೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕರು ಪಾಲ್ಗೊಂಡಿದ್ದರು.











































































































