Author: admin

ಕರ್ನಾಟಕ ಕರಾವಳಿಯ ಆಟಿ ತಿಂಗಳಿಗೆ ಕ್ಷಣಗಣನೆ ಆರಂಭವಾಗಿದೆ. ಜಡಿ ಮಳೆಯ ನಡುವೆ ಆಂಗ್ಲ ಕ್ಯಾಲೆಂಡರಿನ ಜುಲೈ- ಆಗಸ್ಟ್‌ ನಡುವೆ ಮತ್ತು ಸಾಂಪ್ರದಾಯಿಕ ತುಳುವಿನ ನಾಲ್ಕನೆಯ ತಿಂಗಳು. ಈ ಹಿಂದಿನ ಕಾಲಘಟ್ಟದಲ್ಲಿ ಪ್ರಚಲಿತ ಆಧುನಿಕ ಜೀವನ ಶೈಲಿಯ ಆಟಿ ಆಚರಣೆಗೂ ಬಹಳಷ್ಟು ವ್ಯತ್ಯಾಸಗಳು ಕಾಲ ಸಹಜವಾಗಿ ಉಂಟಾಗಿದೆ. ಇದು ಸಹಜ ಮತ್ತು ಅನಿವಾರ್ಯ ಕೂಡ. ಆದರೆ ಈ ಆಟಿ ಅನ್ನುವುದು ತುಳುನಾಡಿನ ಸಂಪ್ರದಾಯ ಮತ್ತು ಪರಂಪರೆಯ ಮಹತ್ವದ ಕೊಂಡಿ ಎಂಬ ಬಗ್ಗೆ ಎರಡು ಮಾತಿಲ್ಲ. ಈ ಬಗ್ಗೆ ಪುಟ್ಟ ಇಣುಕು ನೋಟ ಇಲ್ಲಿ ಪ್ರಸ್ತುತವಾಗಬಹುದು. ಸುಮಾರು ನಾಲ್ಕೈದು ದಶಕಗಳ ಹಿಂದಿನ ವರೆಗೂ ಈ ಆಟಿ ಅನ್ನುವುದು ದುಡಿಯುವ ಶ್ರಮಿಕ; ಬೇಸಾಯವೇ ಪ್ರಧಾನವಾಗಿದ್ದ, ಆರ್ಥಿಕವಾಗಿ ಸಶಕ್ತವಲ್ಲದ ಕುಟುಂಬಗಳಿಗೆ ಪ್ರಯಾಸಕರ ಆಗಿತ್ತು. ಆಗ ತಾನೇ ಏಣಿಲು ಭತ್ತದ ಉಳುಮೆ- ನಾಟಿ ಕಾರ್ಯ ಪೂರ್ಣಗೊಂಡು ನಿರ್ದಿಷ್ಟ ವರ್ಗಕ್ಕೆ ಆದಾಯ ಮೂಲವಿರಲಿಲ್ಲ. ನಿಜ ಅರ್ಥದ ಕಷ್ಟ ಕಾರ್ಪಣ್ಯದ ದಿನಗಳು. ಧೋ ಎಂದು ಸುರಿಯುವ ಮಳೆಯ ನಡುವೆ ಕೆಲಸ ಕಾರ್ಯಗಳಿಲ್ಲ;…

Read More

ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಹುಣ್ಸೆಮಕ್ಕಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹೊಂಬಾಡಿ ಮಂಡಾಡಿಯಲ್ಲಿ ಇತ್ತೀಚಿಗೆ ಜರುಗಿತು. ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಲಯನ್ ಎಸ್. ರತ್ನಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಲಯನ್ ದಯಾನಂದ, ಕೋಶಾಧಿಕಾರಿಯಾಗಿ ಲಯನ್ ಅನಿಲ್ ಕುಮಾರ್ ಶೆಟ್ಟಿ ಅವರಿಗೆ ಡಿಸ್ಟಿಕ್ಟ್ 317 ಸಿ ಇದರ ಚೀಫ್ ಕೋ ಆರ್ಡಿನೇಟರ್ ಆಗಿರುವ ಲಯನ್ ಸುನೀಲ್ ಕುಮಾರ್ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಬಿ. ಅರುಣ್ ಕುಮಾರ್ ಹೆಗ್ಡೆ, ಎಚ್. ದೀನ್ ಪಾಲ್ ಶೆಟ್ಟಿ, ಯು. ಮೋಹನ್ ದಾಸ್ ಶೆಟ್ಟಿ, ಇಂಜಿನಿಯರ್ ರತ್ನಾಕರ್ ಶೆಟ್ಟಿ, ಶಂಕರ ಶೆಟ್ಟಿ, ಎಚ್. ಬಾಲಕೃಷ್ಣ ಹೆಗ್ಡೆ, ಸುದೀರ್ ಕುಮಾರ್ ಶೆಟ್ಟಿ, ರಜತ್ ಹೆಗ್ಡೆ ಹಾಗೂ ಕ್ಲಬ್ಬಿನ ಸದಸ್ಯರು ಇದ್ದರು.

Read More

ಸುರತ್ಕಲ್ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಜೂನ್ 4 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಮಹಾಸಭೆ, ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ) ನ ಸ್ಥಾಪಕಾಧ್ಯಕ್ಷ ಎ ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬೈ ಪೂರ್ವ ವಲಯದ ಸಮನ್ವಯಕ ಸುಬ್ಬಯ್ಯ ಎ ಶೆಟ್ಟಿ, ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ಸ್ ನ ಮಾಲಕ ರಾಜೇಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಶೈಕ್ಷಣಿಕ ಮತ್ತು ವಿವಿಧ…

Read More

ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್‌ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂತಹ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13ರಿಂದ 14 ವರ್ಷ ಆಗಿತ್ತು. ಅಲ್ಲಿ 18…

Read More

ಮಂಗಳೂರು: ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾ ಡಿಸೆಂಬರ್ 16 ರಂದು ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ಮಾಪಕರಾದ ಆಶಿಕಾ ಸುವರ್ಣ ಮತ್ತು ಸಹ ನಿರ್ಮಾಪಕ ಕಿರಣ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರು, ಉಡುಪಿ ಸಹಿತ ಬೇರೆ ಬೇರೆ ಪ್ರದೇಶಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಒಂದೇ ಹಂತದಲ್ಲಿ‌ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿತ್ರೀಕರಣ ನಡೆಸಲಾಗಿದೆ ಎಂದವರು ತಿಳಿಸಿದರು. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬಾರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್, ಅಥರ್ವ ಪ್ರಕಾಶ್ ಪಾಂಡೇಶ್ವರ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ರವಿ ರಾಮಕುಂಜ, ಪ್ರವೀಣ್ ಮರ್ಕಮೆ, ಆರಾಧ್ಯ ಶೆಟ್ಟಿ, ನಿರಿಕ್ಷಾ ಶೆಟ್ಟಿ ಪುತ್ತೂರು, ರೂಪ ವರ್ಕಾಡಿ, ಅನಿತಾ, ಐಸಿರಿ, ಪ್ರಾರ್ಥನಾ ಸುವರ್ಣ, ಮೊದಲಾದ ಬಹು ತಾರಾಗಣ ಈ ಸಿನಿಮಾದಲ್ಲಿದೆ. ಮುಖ್ಯವಾಗಿ ತುಳು ಸಿನಿಮಾರಂಗದ ಖ್ಯಾತ ನಾಮ ಕಲಾವಿದರಾದ ಪೃಥ್ವಿ ಅಂಬಾರ್,…

Read More

ಐತಿಹಾಸಿಕ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಪಟೇಲರ ಮನೆ ಕಂಬಳಗದ್ದೆ ಸಜ್ಜು…! 40ಕ್ಕೂ ಹೆಚ್ಚು ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ; ಹಗ್ಗ ಮತ್ತು ಹಲಿಗೆಯ ಭಾಗದಲ್ಲಿ ವಿವಿಧ ಸ್ಪರ್ಧೆ…..!”200 ವರ್ಷಗಳ ಇತಿಹಾಸದ ಕಂಬಳಕ್ಕೆ ಕ್ಷಣಗಣನೆ….! -ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)santhoshmolahalli@gmail.com ಸುದ್ದಿ @ ಮೊಳಹಳ್ಳಿ: ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸುಮಾರು 200 ವರ್ಷಗಳಕ್ಕಿಂತಲೂ ಹೆಚ್ಚು ಇತಿಹಾಸವನ್ನ ಹೊಂದಿರುವ ಕಂಬಳ ಮಹೋತ್ಸವ ಈ ಬಾರಿ ವಿಜ್ರಮಣೆಯಿಂದ ನಡೆಯಲು ಸಜ್ಜಾಗಿದೆ. ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮಗಳಲ್ಲಿ ಮೊಳಹಳ್ಳಿ ಎಂಬ ಊರು ಹೆಸರುವಾಸಿ. ಅಲ್ಲದೆ, ವಿಶಿಷ್ಟವಾದ ಅಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಯುಳ್ಳ ಗ್ರಾಮವಾಗಿ ಬೆಳೆದಿದೆ. ಮೊಳಹಳ್ಳಿ ಗ್ರಾಮ ‘ಸುವರ್ಣ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ ,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ವಿಶಿಷ್ಟತೆಯನ್ನ ಸಾರುವ ಮೊಳಹಳ್ಳಿ ಗ್ರಾಮ ಇಂದಿಗೂ ಭತ್ತ ,ತೆಂಗು, ಅಡಿಕೆ, ತರಕಾರಿ ಸಸ್ಯ,ಗಳನ್ನ ಬೆಳೆದು ಕೃಷಿಕರಾಗಿಯೇ…

Read More

ವಿಶೇಷ ಲೇಖನ: ಆರೂರು ಸುಕೇಶ್ ಶೆಟ್ಟಿ, ವಕೀಲರು, ಉಡುಪಿ ಸಮಾಜದಲ್ಲಿ ಜನರೊಂದಿಗೆ ಬೆರೆಯುವಲ್ಲಿ ಸುಲಭವಾಗಿ ಲಭ್ಯವಾಗಿರುವುದು ವಕೀಲರು. ಅವರು ಜನರೊಂದಿಗೆ ನಿರಂತರ ಒಡನಾಟವನ್ನು ಹೊಂದಿರುತ್ತಾರೆ. ಸಮಾಜವನ್ನು ತಿದ್ದುವಲ್ಲಿ ವಕೀಲರ ಸಲಹೆ ತುಂಬಾ ಉಪಯುಕ್ತವಾಗಿರುತ್ತದೆ. ಸಮಾಜವನ್ನು ಉತ್ತಮಗೊಳಿಸಲು, ತಿದ್ದುವಲ್ಲಿ ವಕೀಲರು ಮೊದಲಿಗರಾಗಿರುತ್ತಾರೆ. ಕಾನೂನಿನ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಿದರೆ ಸಮಾಜವು ಉತ್ತಮ ಸ್ವಾಸ್ಥ್ಯದಿಂದ ಕೂಡಿರುತ್ತದೆ. ವಕೀಲರು, ಜನಸಾಮಾನ್ಯರಿಗೆ ಇತ್ತೀಚಿನ ಹೊಸ ಕಾನೂನುಗಳಾದ ಸೈಬರ್ ಪ್ರಕರಣ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಕ್ಕಳ ಹಕ್ಕು ಮತ್ತು ರಕ್ಷಣೆ, ಮಹಿಳೆಯರ ಸಂರಕ್ಷಣೆಗಳ ಬಗ್ಗೆ ಹಾಗೂ ಇತರ ಪ್ರಕರಣಗಳ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿದಲ್ಲಿ ಸಮಾಜದಲ್ಲಿ ಅಪರಾಧಗಳನ್ನು ಕಡಿಮೆ ಮಾಡುವಲ್ಲಿ, ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ. ವಕೀಲರು ಕಾನೂನು ಸೇವೆಗಳ ಪ್ರಾಧೀಕಾರದ ವತಿಯಿಂದ ನಡೆಸುವ ಲೋಕ ಅದಲಾತ್‌ನ ಬಗ್ಗೆ ಜನರಿಗೆ ಅರಿವು ಮೂಡಿಸಿದಲ್ಲಿ ಅದರ ಉಪಯೋಗವನ್ನು ಜನರು ಪಡೆಯುವ ಬಗ್ಗೆ ತಿಳಿಸಿದಲ್ಲಿ ಹೆಚ್ಚಿನ ವಿವಿಧ ರೀತಿಯ ಪ್ರಕರಣಗಳು ರಾಜಿ ಸಂದಾನದಲ್ಲಿ ಮುಕ್ತಾಯವಾಗಿ ಸಮಾಜವು ನೆಮ್ಮದಿಯಿಂದ ಇರಲು…

Read More

ಮುಂಬಯಿ (ಆರ್‌ಬಿಐ), ನ.28: ಮುಂಬಯಿಯ ಹೇರಂಬ ಇಂಡಸ್ಟ್ರೀಸ್‌ನ ಸಿಎಸ್‌ಆರ್ ನಿಧಿಯಡಿಯಲ್ಲಿ ಉಪ್ಪಳ ಕೊಂಡೆವೂರು ಇಲ್ಲಿನ ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠಕ್ಕೆ ಶಾಲಾ ಬಸ್ ಅನ್ನು ಇಂದು ಹೇರಂಬ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ.ಕುಳೂರು, ಕನ್ಯಾನ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುರಾಮ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದರು.                    ಶಾಲಾ ಸಮಿತಿ ಅಧ್ಯಕ್ಷ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದಾನಿಗಳನ್ನು ಸನ್ಮಾನಿಸಿ, ಅವರ ಕುಟುಂಬದವರನ್ನು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳ ಕುಟುಂಬದವರು, ಆಶ್ರಮದ ಭಕ್ತರು ಹಾಗೂ ಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಮಚಂದ್ರ ಚೆರುಗೋಳಿ ಅತಿಥಿಗಳು ಮತ್ತು ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Read More

ಅಕ್ಟೋಬರ್ 31ರಂದು ಪುರಭವನದಲ್ಲಿ ಜರಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ನಗರ ಘಟಕದ ಪದಗ್ರಹಣ ಮತ್ತು 4ನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನಗರದ ಅಟ್ಟಣೆ ಹೋಟೇಲಿನಲ್ಲಿ ಜರಗಿದ್ದು, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ HMS ನ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಸುರೇಶ್ಚಂದ್ರ ಶೆಟ್ಟಿಯವರು ಪಟ್ಲ ಫೌಂಡೇಶನಿನ ಕಾರ್ಯಸಾಧನೆಯ ಬಗ್ಗೆ ಜಗತ್ತೇ ಕೊಂಡಾಡುವಂತೆ ಮಾಡಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಕಟೀಲು ದುರ್ಗಾಮಾತೆಯ ಸಂಪೂರ್ಣ ಆಶೀರ್ವಾದವಿದೆ. ಸರಸ್ವತಿ ಮಾತೆಯ ಅನುಗ್ರಹದಿಂದ ನಾವೆಲ್ಲರೂ ಯಕ್ಷಗಾನದ ಮಧುರ ಗಾನವನ್ನು ಅವರಿಂದ ಕೇಳುವಂತಾಗಿದೆ. ಫೌಂಡೇಶನಿನ ಪ್ರತಿಯೊಂದು ಘಟಕಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಶಕ್ತ ಕಲಾವಿದರ ನೆರವಾಗುವುದರೊಂದಿಗೆ ಟ್ರಸ್ಟ್ ಇನ್ನಷ್ಟು ಹೆಮ್ಮರವಾಗಿ ಬೆಳೆಯಲೆಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಮಹೇಶ್ ಮೋಟಾರ್ಸ್ ಮಾಲಕರಾದ ಶ್ರೀ ಜಯರಾಮ ಶೇಖ ದೀಪ ಬೆಳಗಿಸಿ, ಪಟ್ಲ ಫೌಂಡೇಶನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಲಿಯೆಂದು ಶುಭ ಹಾರೈಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ Ln ಅನಿಲ್ ದಾಸ್ mjf…

Read More

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರೆ ಪ್ರಯುಕ್ತ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಶ್ರೀ ಪಾವಂಜೆ ಮೇಳದ ಸಂಚಾಲಕರು ಹಾಗೂ ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ತೀರ್ಥಹಳ್ಳಿ ಘಟಕದ ಪದಾಧಿಕಾರಿಗಳು, ಯಕ್ಷಗಾನ ಕಲಾಭಿಮಾನಿಗಳು ಬಹು ಸಂಖ್ಯೆಯಲ್ಲಿ ನೆರೆದಿದ್ದರು.

Read More