ಚಿಣ್ಣರ ಬಿಂಬ ಮುಂಬಯಿ ಇದರ ಮೀರಾರೋಡ್ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆ ಸ್ವರ್ಧೆ ಆ.13 ರಂದು ಮಧ್ಯಾಹ್ನ ಭಾಯಂದರ್ ಪೂರ್ವದ ನ್ಯೂ ಸೈಂಟ್ ಅಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಶಿಬಿರದ ಮಕ್ಕಳ ಭಜನೆಯೊಂದಿಗೆ ಪ್ರತಿಭಾ ಸ್ವರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮವೇಷ ಹಾಗೂ ಪಾಲಕರಿಗಾಗಿ ದೇಶ ಭಕ್ತಿಗೀತೆ ಸ್ವರ್ಧೆ ನಡೆಯಿತು. ಶಿಬಿರ ಮುಖ್ಯಸ್ಥೆ ವೀಣಾಕ್ಷಿ ಶೆಟ್ಟಿ ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ.ಶೆಟ್ಟಿ ಸಿದ್ಧಕಟ್ಟೆ ಮಾತನಾಡಿ, ಚಿಣ್ಣರ ಬಿಂಬ ಸಂಸ್ಥೆ ಮಕ್ಕಳ ಭವಿಷ್ಯಕ್ಕೆ ಉತ್ತಮ ಆಡಿಪಾಯ ಹಾಕಿ ಕೊಡುತ್ತಿದೆ. ಪಾಲಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಸಂಸ್ಥೆಗೆ ಚಿಣ್ಣರಿಗೆ ನನ್ನಿಂದಾಗುವ ಅಳಿಲ ಸೇವೆ ಸದಾ ಇದೆ ಎಂದರು.
ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ ಬಿಳಿಯೂರುಗುತ್ತು ಉದ್ಘಾಟಿಸಿ, ಹೆತ್ತವರು ಮಕ್ಕಳಿಗೆ ಅತೀ ಒತ್ತಡ ಹೇರಬಾರದು. ಈಗಿನ ಮಕ್ಕಳಲ್ಲಿ ಸಂಯಮ ಕಡಿಮೆ ಹಾಗಾಗಿ ಕೆಲವೊಮ್ಮೆ ಆತುರದಿಂದ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಹುದು. ಪಾಲಕರು ಮಕ್ಕಳ ಮನೋಬಲ ಹೆಚ್ಚಿಸುವಂತಹ ಉತ್ತಮ ವಾತಾವರಣ ಒದಗಿಸಬೇಕು ಎಂದರು. ವಲಯ ಮುಖ್ಯಸ್ಥೆ ಆಶಾಲತಾ ದಿನಕರ ಪ್ರಾಸ್ತಾವಿಸಿದರು. ಮುಖ್ಯ ಅತಿಥಿಗಳಾದ ಮೀರಾರೋಡ್ ಉದ್ಯಮಿ ಉದಯ್ ಎಂ. ಶೆಟ್ಟಿ ಮಲಾರಬೀಡು, ಸಾಯಿ ಬಾಲಾಜಿ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಯೋಗೇಂದ್ರ ಎಸ್. ಗಾಣಿಗ, ನಿತ್ಯಾನಂದ ಸೇವಾ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು.
ಚಿಣ್ಣರ ಬಿಂಬದ ರೂವಾರಿಗಳಲ್ಲೊಬ್ಬರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ ಚಿಣ್ಣರ ಬಿಂಬದ ಉದ್ದೇಶವನ್ನು ವಿವರಿಸಿದರು. ಕೇಂದ್ರ ಸಮಿತಿಯ ವಿಜಯ್ ಕೋಟ್ಯಾನ್, ಜಗದೀಶ್ ರಾವ್, ಪ್ರಾದೇಶಿಕ ಮುಖ್ಯಸ್ಥೆ ವಿನಯಾ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪಗಾರರಾಗಿ ಗಣೇಶ್ ಕುಮಾರ್, ವಾಣಿ ಶೆಟ್ಟಿ ಸಹಕರಿಸಿದರು. ಶಿಬಿರದ ಚಿಣ್ಣರು ಜನಪದ ನೃತ್ಯ ಪ್ರದರ್ಶನ ನೀಡಿದರು. ಕಳೆದ ಸಾಲಿನ ಎಸ್. ಎಸ್. ಸಿ ಮತ್ತು ಎಚ್. ಎಸ್. ಸಿ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಹಾಗೂ ಕಳೆದ ವರ್ಷದ ಶಿಬಿರ ಮುಖ್ಯಸ್ಥೆ ಅಮೃತಾ ಸಾಲ್ಯಾನ್, ಸಾಂಸ್ಕೃತಿಕ ಮುಖ್ಯಸ್ಥೆ ಶೈಲಜಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಚಿಣ್ಣರಾದ ಸಿಂಚನಾ ಸುವರ್ಣ, ಶ್ರೀಶಾ ಪೂಜಾರಿ, ಅನ್ವಿತಾ ಗಾಣಿಗ, ಅಹನಾ ಗಾಣಿಗ, ಆರ್ಯ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಚೈತಾಲಿ ಶೆಟ್ಟಿ, ಶರಣ್ಯಾ ಶೆಟ್ಟಿ, ಅನ್ವಿತ್ ಸಾಲ್ಯಾನ್, ಲಕ್ಷ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಶಿಕ್ಷಕಿಯರಾದ ಸುಲೋಚನಾ ಶೆಟ್ಟಿ ಮಲ್ಲಿಕಾ ಶೆಟ್ಟಿ ಭಜನೆ ಶಿಕ್ಷಕಿಯರಾದ ಶಾಂತಾ ಆಚಾರ್ಯ, ಸುಜಾತಾ ಶೆಟ್ಟಿ, ಪೂರ್ಣಿಮಾ ಪೂಜಾರಿ, ಸುನಿತಾ ಶೇಟ್, ಟಿ ಶರ್ಮಿಳಾ ಶೆಟ್ಟಿ, ಮೀರಾರೋಡ್ ಭಾಯಂಧರ್ ಶಿಬಿರದ ಸ್ವಯಂ ಸೇವಕರು, ಪಾಲಕರು, ಮಕ್ಕಳು, ಹಳೆ ವಿದ್ಯಾರ್ಥಿಗಳು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅನೇಕ ಸಂಘ – ಸಂಸ್ಥೆಗಳ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು.
ಬಹುಮಾನ ವಿತರಣ ಕಾರ್ಯಕ್ರಮವನ್ನು ಪೇಜಾವರ ಶಿಬಿರದ ಸುಮಿತ್ರಾ ದೇವಾಡಿಗ ಮತ್ತು ಕಾಂದಿವಲಿ ಶಿಬಿರದ ಜಯಲಕ್ಷ್ಮೀ ಶೆಟ್ಟಿ ನಡೆಸಿಕೊಟ್ಟರು. ಸಾಂಸ್ಕೃತಿಕ ಮುಖ್ಯಸ್ಥೆ ಶೈಲಾ ಹೆಗ್ಡೆ ವಂದಿಸಿದರು.